ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › ವ್ಯಂಗಚಿತ್ರಗಳು

ಎಸ್. ಕೆ. ನಾಡಿಗರ ಮತ್ತೊಂದು ಉತ್ತಮ ಕರ್ಟೂನ್

May 19, 2007 - 2:28pm — venkatesh
ಎಸ್.  ಕೆ.  ನಾಡಿಗರ  ಮತ್ತೊಂದು  ಉತ್ತಮ ಕರ್ಟೂನ್

ಎಸ್ . ಕೆ. ನಾಡಿಗ್ ಮತ್ತೊಂದು ಉತ್ತಮ ಕಾರ್ಟೂನ್ ನನ್ನು ಕೊಟ್ಟಿದ್ದಾರೆ. ಶಿವಮೊಗ್ಗೆಯ ಪ್ರತಿಭೆಗಳಿಗೆ ಕೊನೆಯಿಲ್ಲ, ಮೊದಲಿಲ್ಲ ! ನಮ್ಮ ಹರಿ ಪ್ರಸಾದ್ ನಾಡಿಗರೇನು ಕಡಿಮೆಯೇ ? ಅವರ ರೇಖೆಗಳು ಜೀವಂತ, ತೀಕ್ಷ್ಣ, ಮತ್ತು ಅದರಲ್ಲಿನ ಸಂದೇಶ ಸ್ಪಷ್ಟ. ಹೆಚ್ಚಿಗೆ ಮನಸ್ಸಿಗೆ ಕಸ್ರತ್ ಕೊಡದೆ Enjoy ಮಾಡಬಹುದು. ಆದರೆ ಎಲ್ಲಾ ಕಾರ್ಟೂನ್ಗಳೂ ಖಡ್ಡಾಯವಾಗಿ ನಗುವನ್ನು ಪ್ರತಿನಿಧಿಸಲೇ ಬೇಕೆಂಬ ನಿಯಮವಿಲ್ಲ. ಕೆಲವು ಒಂದು ಅತ್ಯುತ್ತಮ ಅಂದಿಗೆ ಬೇಕಾಗುವ ಅಗತ್ಯವನ್ನು ಮನಸ್ಸಿಗೆ ನಾಟುವಂತೆ ಹೇಳಬಹುದು. ಅದರಲ್ಲಿ ನಗು ತರುವಂತಿದ್ದರೆ ಒಳ್ಳೆಯದು. ವ್ಯಂಗ್ಯ ಚಿತ್ರವೆಂದರೆ, ಅಥವಾ ಚಿತ್ರಕಾರರೆಂದರೆ, ಹೆಚ್ಚು- ಕಡಿಮೆ, ನಗುವಿನ ಪ್ರಚೋದಕರು ಎಂದರ್ಥ !

ಹೇಗಪ್ಪಾ ಅಂದರೆ, ಕೋತಿಯನ್ನು ನೋಡಿದರೆ ಸಾಕು, ನಗು ಒತ್ತರಿಸಿ ಬರುತ್ತದೆ. ಅದು ತನ್ನ ಮರ್ಕಟ ವಿದ್ಯೆ ಪ್ರದರ್ಶಿಸದರಂತೂ ಕೇಳಲೇ ಬೇಡಿ. ಉದಾ : ಬೆನ್ನು, ಪಕ್ಕೆ ಕೆರೆದುಕೊಳ್ಳುವ ಮಾಮೂಲಿ ದೃಷ್ಯವನ್ನು ನೋಡಿ ನಗದೆ ಇರುವವರು ಹಾಸ್ಯಪ್ರವೃತ್ತಿಇಲ್ಲದ ತೀರ ಪಾಪದ ಜನ ! ಮುಖವನ್ನು ಮಾಡುವ ರೀತಿ, ಕೇಕೆಹಾಕುವುದು, ಎಲ್ಲವನ್ನೂ ಎತ್ತಿಕೊಂಡು ಓಡಿಗೋಗುವ ಪ್ರವೃತ್ತಿ, ಬಾಯಿನ ಕೆಳಗೆ, ದವಡೆಯಲ್ಲಿ ಶೇಖರಿಟ್ಟುಕೊಂಡಿರುವ ಆಹಾರ, ಇತ್ಯಾದಿ.

ನಮ್ಮನ್ನು ನಗದೆ ಇರಲು ಆಗದಂತೆ ಮಾಡುತ್ತವೆ. ಆದರೆ, ಒಬ್ಬ ಒಳ್ಳೆಯ ವ್ಯಂಗ್ಯ ಚಿತ್ರಕಾರ ತಾನು ಹೇಳುವುದನ್ನು ಒಂದು ಸೊಗಸಾದ ರೀತಿಯಲ್ಲಿ ಹೇಳುವುದರಿಂದ ಮಾತ್ರ ಹಾಸ್ಯ ಚಿಮ್ಮುತ್ತದೆ. ಆ ವಾಕ್ಯಗಳಲ್ಲದೆ ಬೇರೆ ತರಹ ಹೇಳಿದರೆ ನಗು ಬರಲ್ಲ. ಅಲ್ಲಿ ನಡೆಯುವ ಕ್ರಿಯೆಗೂ ಹೇಳುವ ಪದ ಮಾಲೆಗೂ ಸಂಬಂಧ ಕಲ್ಪಿಸುವ ಅದ್ಭುತ ಗುಟ್ಟನ್ನು ಆ ಜಾದೂಗಾರ ಮಾತ್ರ ಬಲ್ಲ. ಭಿಕ್ಷುಕರಿಬ್ಬರ ಮಾತು ಕತೆಗಳನ್ನು ಗಮನಿಸಿದಾಗ, ತಿಳಿಯುವ, ನಮಗೆ ಗೋಚರಿಸದ ಸಂಗತಿಗಳು, ಅವರ ಸಂವಾದದಲ್ಲಿ ತಿಳಿಯುತ್ತವೆ. ಅಲ್ಲಿ ಆ ಜಾದೂಗಾರ ಮತ್ತೆ ನಮ್ಮ ಮುಂದೆ ಪ್ರತ್ಯಕ್ಷನಾಗುವನು. ಆತ ಈ ಎಲ್ಲಾ ದಿಕ್ಕುಗಳನ್ನೂ ಗಮನಿಸಿ, ತಾನು ಕೊಡಬೆಕೆಂದಿರುವ ವಸ್ತುಗಳನ್ನು ಹಲವು ದಿಶೆಗಳಲ್ಲಿ ಹೆಣೆದು, ಹೊಸೆದು, ತಿಕ್ಕಿ, ಉಜ್ಜಿ, ಮೆತ್ತಿ, ಬೆರೆಸಿ, ಬಿಡಿಸಿ, ಕೊಚ್ಚಿ, ಖಾರ ಹಚ್ಚಿ, ಹಿಂಡಿ, ಅಚ್ಚುಕಟ್ಟಾಗಿ ಅದನ್ನು ಪ್ರದರ್ಶಿಸುವ ಕಲೆಯನ್ನು ಕರಗತ ಮಾಡಿಕೊಂಡಾಗ ಮಾತ್ರ ಅವನನ್ನು ಪರಿಣಾಮಕಾರಿ ಕಲಾಕಾರ ಎಂದು ಜನ ಕರೆಯುವುದು. ಜನ ನಮ್ಮನ್ನು ಸ್ವೀಕರಿಸುವುದಿಲ್ಲ ಅನ್ನುವುದನ್ನು ಹೇಳಿದರೆ ಯಾರೂ ನಂಬುವುದಿಲ್ಲ. ವಾಣೀ ಜಯರಾಮ್ ಹೇಳಿದ ’ಪಪಿಹರಾ” ಹಾಡು, ಒಂದು ಚಮತ್ಕಾರವನೇ ಮಾಡಲಿಲ್ಲವೇ ? ಇನ್ನೂ ಏನೇನೋ.

-ಕೃಪೆ : http://www.cartoonistsindia.com/htm/pr_nadig.htm

* [given by Ashok kumar]

  • ವ್ಯಂಗಚಿತ್ರಗಳು
~.~
  • Login or register to post comments
  • 604 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 19, 2007 - 4:45pm — ASHOKKUMAR

ಉ: ಎಸ್. ಕೆ. ನಾಡಿಗರ ಮತ್ತೊಂದು ಉತ್ತಮ ಕರ್ಟೂನ್

ASHOKKUMAR's picture

ನಾಡಿಗ್‍ರ ಕಾರ್ಟೂನ್ ಬ್ಲಾಗ್ ಇರುವುದು ಗೊತ್ತಿರಲಿಲ್ಲ. ವಿಳಾಸ ಕೊಡಬಹುದೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 19, 2007 - 10:17pm — venkatesh

ಉ: ಎಸ್. ಕೆ. ನಾಡಿಗರ ಮತ್ತೊಂದು ಉತ್ತಮ ಕರ್ಟೂನ್

venkatesh's picture

ಅಶೋಕ್,

ಇಲ್ಲಪ್ಪ. ನೀವು ಕೊಟ್ಟಿದ್ದೆ ರೆಫರೆನ್ಸ್. ಚಿತ್ರವನ್ನು ಅದರಿಂದ ಪ್ರಕಟಿಸಿದ್ದೇನೆ.

ನಾಡಿಗರ ಬ್ಲಾಗ್ ಗೊತ್ತಿಲ್ಲ.

ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2007 - 10:58am — venkatesh

ಉ: ಎಸ್. ಕೆ. ನಾಡಿಗರ ಮತ್ತೊಂದು ಉತ್ತಮ ಕರ್ಟೂನ್

venkatesh's picture

ಅಶೋಕ್

ದಯವಿಟ್ಟು ನೀವು ನನಗೆ ’ಅನುಭವಾಮೃತ’ ದ ಪುಸ್ತಕವನ್ನು ಡಿಗಿಟಲ್ ಲೈಬ್ರರಿಯಲ್ಲಿ, ಕಾಣಿಸಲು ಸಹಾಯ ಮಾಡುತ್ತೀರ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2007 - 11:23am — ASHOKKUMAR

ಉ: ಎಸ್. ಕೆ. ನಾಡಿಗರ ಮತ್ತೊಂದು ಉತ್ತಮ ಕರ್ಟೂನ್

ASHOKKUMAR's picture

ಕನ್ನಡ ಪುಸ್ತಕಗಳು
http://dli.iiit.ac.in/cgi-bin/Browse/scripts/use_scripts/advnew/aui/book...

ಮೇಲಿನ ಕೊಂಡಿಯನ್ನುಕ್ಲಿಕ್ಕಿಸಿ. ಇನ್ನೊಂದು ಪುಟ ತೆರೆದುಕೊಳ್ಳುತ್ತೆ. ಪುಟದ ಕೆಳಬದಿಯಲ್ಲಿ ಪುಟ ಸಂಖ್ಯೆಯ ಪಕ್ಕ ಇರುವ ಬಾಣದ ಗುರುತನ್ನು ಕ್ಲಿಕ್ಕಿಸಿದರೆ ಪುಟಗಳು ಕಾಣಿಸಿಕೊಳ್ಳುತ್ತವೆ. ಆನ್‍ಲೈನ್‍ನಲ್ಲಿ ಓದಲು ಸಾಧ್ಯ.

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2007 - 1:05pm — shreekant.mishrikoti

ಉ: ಎಸ್. ಕೆ. ನಾಡಿಗರ ಮತ್ತೊಂದು ಉತ್ತಮ ಕರ್ಟೂನ್

shreekant.mishrikoti's picture

ಶ್ರೀ ಎಸ್.ಕೆ.ನಾಡಿಗ್ ಅವರು ಕನ್ನಡನಾಡಿನ ಹಿರಿಯ ವ್ಯಂಗ್ಯಚಿತ್ರಕಾರರು .
೨೫ ವರ್ಷದ ಹಿಂದೆ ವ್ಯಂಗ್ಯಚಿತ್ರಗಳ ಸಮೃದ್ಧಿ ಇತ್ತು . ಆಗ ಎಲ್ಲ ಪತ್ರಿಕೆಗಳಲ್ಲೂ , ಶ್ರೀ ಎಸ್.ಕೆ.ನಾಡಿಗ್ , ಕೆ.ಆರ್. ಸ್ವಾಮಿ , ಶ್ರೀಧರ್ , ಪ್ರಭಾಕರ್ ರಾವ್ ಬೈಲ್ , ಮುಂತಾದವರ ರಾಶಿ ರಾಶಿ ಉತ್ತಮ ವ್ಯಂಗ್ಯಚಿತ್ರಗಳು ಬರುತ್ತಿದವು.

ಆಗ ಪ್ರಜಾವಾಣಿ ಬಳಗದ ಪತ್ರಿಕೆಗಳಲ್ಲಿ ಆರ್.ಕೆ.ಮೂರ್ತಿ ಯವರ ರಾಜಕೀಯ ವ್ಯಂಗ್ಯಚಿತ್ರಗಳು ಮುಖಪುಟದಲ್ಲಿ ದೊಡ್ಡದಾಗಿ ಬರುತ್ತಿದ್ದವು.

ಶ್ರೀ ಎಸ್.ಕೆ.ನಾಡಿಗರ ವ್ಯಂಗ್ಯಚಿತ್ರಗಳ ಸಣ್ಣ ಸಂಕಲನ ಹುಡುಕಿದರೆ ಪೇಟೆಯಲ್ಲಿ ಸಿಕ್ಕೀತು . ಕಂಡರೆ ಕೊಂಡು ಎಂಜಾಯ್ ಮಾಡಿ! ತುಂಬ ಚೆನ್ನಾಗಿದೆ . ಬೆಲೆಯೂ ಬಹಳ ಕಡಿಮೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆರ್. ಕೆ. ಲಕ್ಷ್ಮಣ್ ರ 'ವ್ಯಂಗ್ಯಚಿತ್ರಾಂಕಣ' ಈಗ ಸಪ್ಪೆಯಾಗಿದೆ !
  • ಪಾಂಡುರಂಗರಾಯರ ವ್ಯಂಗ್ಯ ಚಿತ್ರಗಳು- ಅತ್ಯಂತ ರಸಮಯವಾಗಿವೆ !
  • ಪಲ್ಲಕ್ಕಿ ಚಿತ್ರದಲ್ಲಿ ಇರುವ ಉತ್ತಮ ಅಂಶಗಳು..
  • ವ್ಯಂಗ್ಯಚಿತ್ರಕಾರನ ಪೇಚಾಟ !
  • ನಾನೂ ಕಾರ್ಟೂನ್ ಬರೆದೆ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಆಲ್ನೋಡು ; ಅಣ್ಣನ್ನ, ಏನ್ಮಾಡ್ತಿದಾನೆ...!

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator