ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚಿತ್ರ ಪುಟಗಳು › ಪ್ರಚಲಿತ ಲೇಖನ ವರ್ಗದ ಚಿತ್ರಗಳು

ಚಿಕಾಗೋ ದಲ್ಲಿ "ವಸಂತ ಸಾಹಿತ್ಯೋತ್ಸವ" - ಹಾಸ್ಯಹೊನಲಿನ ಕಾರ್ಯಕ್ರಮ.

May 21, 2007 - 7:46pm — venkatesh
ಚಿಕಾಗೋ ದಲ್ಲಿ "ವಸಂತ ಸಾಹಿತ್ಯೋತ್ಸವ" - ಹಾಸ್ಯಹೊನಲಿನ  ಕಾರ್ಯಕ್ರಮ.

ಚಿಕಾಗೋ ದಲ್ಲಿ ಮೊನ್ನೆ ನಡೆದ "ವಸಂತ ಸಾಹಿತ್ಯೋತ್ಸವ" ವನ್ನು ನಮ್ಮ ಸಂಪದಿಗರೇ ಆದ, ಶ್ರೀವತ್ಸ ಜೋಷಿಯವರು " ದಟ್ಸ್ ಕನ್ನಡಕ್ಕೆ", ಸಮರ್ಥವಾಗಿ ವರದಿಮಾಡಿದ್ದರ ಮರು-ವರದಿ.

ನಗೆಗನ್ನಡಂ ಗೆಲ್ಗೆ, ಅಮೆರಿಕದ ಕನ್ನಡ ಸಾಹಿತ್ಯ ರಂಗವು ಇದೇ ಮೇ, ೧೯ ಮತ್ತು ೨೦ ರಂದು [ಶನಿವಾರ ರವಿವಾರ], ಶಿಕ್ಯಾಗೊ ನಗರದ 'ಅರೋರ ದೇಗುಲ'ದ ಭವ್ಯ ಸಭಾಂಗಣದಲ್ಲಿ, ಅಮೆರಿಕದಲ್ಲಿ ವಾಸಿಸುತ್ತಿರುವ ಕನ್ನಡ ಅಭಿಮಾನಿಗಳಿಂದ ನಡೆಸಿಕೊಟ್ಟ ಕಾರ್ಯಕ್ರಮಗಳು, ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿ ಧನ್ಯತಾಭಾವಕ್ಕೆ ಎಡೆಮಾಡಿಕೊಟ್ಟವು !

ಕನ್ನಡ ಸಾಹಿತ್ಯ ರಂಗದ ಆಶ್ರಯದಲ್ಲಿ, ಮೂರನೇ ಸಮ್ಮೆಳನವೆಂಬ ಹೆಗ್ಗಳಿಕೆಗೆ ಪಾತ್ರವಾದ ಇದು, ಈ ಬಾರಿ ಹಾಸ್ಯರಸಕ್ಕೆ ಹೆಚ್ಚು ಒತ್ತು ಕೊಟ್ಟು, ಇಂದಿನ ಮಾನಸಿಕ ಒತ್ತಡದ ಜೀವನದಲ್ಲಿ ಅದರ ಆವಶ್ಯಕತೆಯನ್ನು ಬಿಚ್ಚಿ ಹೇಳಿದ್ದು ಶ್ಲಾಘನೀಯ.

೧. ಮೊದಲನೆಯ ಸಮ್ಮೇಳನ ೨೦೦೪ ರಲ್ಲಿ ಫಿಲಡೆಲ್ಫಿಯ ನಗರದಲ್ಲಿ ನಡೆಸಿದ್ದರು.

೨. ಎರಡನೆಯದು, ೨೦೦೫ ರಲ್ಲಿ ಲಾಸ್ ಎಂಜಲೀಸ್ ನಲ್ಲಿ,

೩. ಮೂರನೆಯದು, ಶಿಕ್ಯಾಗೊ ನಲ್ಲಿ, ಮೇ, ೧೯ ಮತ್ತು ೨೦,

೨೦೦೭ ರಲ್ಲಿ, ಈಗ ನಡೆದದ್ದು.

ಈ ಕಾರ್ಯಕ್ರಮಕ್ಕೆ ಆಹ್ವಾನಿಸಿರುವ ಅತಿಥಿಗಳಿಂದಲೇ ಅದರ ಯಶಸ್ಸನ್ನು ಸುಲಭವಾಗಿ ಮನಗಾಣಬಹುದು.
ಹಿರಿಯ ಖ್ಯಾತ ನಗೆ ಸಾಹಿತಿ, ಮಹಾರಥಿ, ಪ್ರೊ. ಅ. ರಾ. ಮಿತ್ರ. ಇವರು ಈ ಸಮ್ಮೇಳನದ ಅಧ್ಯಕ್ಷರು. ಇನ್ನೊಬ್ಬ ಅತಿರಥಿ, ಡಾ. ಶ್ರೀ. ರಾಘವೇಂದ್ರ ರಾಯರು. [ರಾರಾ] ಅತಿಥಿ ಉಪನ್ಯಾಸಕರು.

ಶಿಕ್ಯಾಗೊ ನಲ್ಲಿ ಹಮ್ಮಿಕೊಂಡ ರಸ ಕಾರ್ಯಕ್ರಮಗಳು ೩. ಪುಸ್ತಕಗಳ ವಿಮೋಚನಾ ಕಾರ್ಯ. ಸಾಹಿತ್ಯಗೋಷ್ಟಿ, ನಾಟಕ ಪ್ರದರ್ಶನ, ಪ್ರಸಿದ್ಧ ಸಾಹಿತಿ ಜೀ. ಎಸ್. ಎಸ್ ರವರಿಗೆ ಅಭಿನಂದನಾ ಸಲ್ಲಿಕೆ. ಡಾ. ಪೂರ್ಣಚಂದ್ರ ತೇಜಸ್ವಿಯವರಿಗೆ, ಭಾವಪೂರ್ಣ ಶ್ರದ್ಧಾಂಜಲಿ, ಕೊನೆಗೆ, ಊಟದ ನಂತರ, ವಿಚಾರ ಸಂಕಿರಣ.

೧. 'ನೆನೆಗನ್ನಡಂ ಗೆಲ್ಗೆ' ಪುಸ್ತಕದ [ಸಂಪಾದಕರು : ಡಾ. ಎಚ್. ಕೆ. ನಂಜುಂಡಸ್ವಾಮಿ, ಮತ್ತು ಎಚ್. ವೈ. ರಾಜಗೋಪಾಲ್ ] ವಿಮೋಚನೆ. ಈ ಕಾರ್ಯ ಕ್ರಮಕ್ಕೆ ಹೊಂದಿಕೊಂಡಂತೆ, ಅಮೆರಿಕನ್ನಡದ, 'ನಮ್ಮ ಬರಹಗಾರರು,' ಎಂಬ ಶೀರ್ಷಿಕೆಯಡಿಯಲ್ಲಿ, ಅಲ್ಲಿನ ಕವಿ ಪರಿಚಯ ಮಾಡಿಕೊಟ್ಟರು.

೨. 'ಕನ್ನಡದಮರ ಚೇತನ ಮಾಸ್ತಿ' ಪುಸ್ತಕವನ್ನು [ಸಂಪಾದಕರು ಶ್ರೀ. ನಾಗ ಐತಾಳ], ಅತಿಥಿ ಉಪನ್ಯಾಸಕ,
ಡಾ. ರಾಘವೇಂದ್ರ ರಾಯರು ಬಿಡುಗಡೆಮಾಡಿದರು.

೩. 'ತುಳಸೀವನ' ಪುಸ್ತಕ ಸಂಕಲನದ ಬಿಡುಗಡೆ. ತ್ರಿವೇಣಿ ಎಸ್. ರಾವ್, ತಮ್ಮ ಬರಹಗಳ
ಸಂಕಲನ 'ತುಳಸಿವನವನ್ನು, ಪ್ರೊ. ಅ. ರಾ. ಮಿತ್ರರ ಹಸ್ತದಿಂದ ಬಿಡುಗಡೆ ಮಾಡಲಾಯಿತು. ಇದು ೨ ನೆ
ದಿನಂದು ನೆರೆವೇರಿತು.

ಡಾ. ಜಿ. ಎಸ್. ಎಸ್, ರವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಮತ್ತೆ ಡಾ. ಪೂರ್ಣಚಂದ್ರ ತೇಜಸ್ವಿಯವರಿಗೆ, ಶ್ರದ್ಧಾಂಜಲಿ ಯನ್ನು ಕೋರಲಾಯಿತು.

ಅತಿಥಿ ಭಾಷಣಕಾರ, ಶ್ರೀ. ಡಾ. ರಾರಾ ರವರಿಂದ ವಿಚಾರ ಪೂರ್ಣ ಭಾಷಣ ವಿತ್ತು.

ಎರಡನೆಯ ದಿನ ಆಯೋಜಿಸಿದ್ದ, ಸಾಹಿತ್ಯಗೋಷ್ಟಿಯಲ್ಲಿ, ೧೦ ಕ್ಕಿಂತ ಹೆಚ್ಚು ಕವಿ-ಕವಯತ್ರಿಯರು ತಮ್ಮ ತಮ್ಮ ಕೃತಿವಾಚನ ಮಾಡಿ ಎಲ್ಲರನ್ನೂ ರಂಜಿಸಿದರು.

ಸಂವಾದ, ಕಾರ್ಯಕ್ರಮವನ್ನು, ಭೋಜನಾನಂತರ ಆಯೋಜಿಸಲಾಗಿತ್ತು. ಅದನ್ನು ವಲ್ಲೀಶಾಸ್ತ್ರಿಯವರು ನಡೆಸಿಕೊಟ್ಟರು.

"ಖರೋ ಖರ," ನಾಟಕದ ಪ್ರದರ್ಶನ- ಡಾ. ಚಂದ್ರಶೇಖರ ಕಂಬಾರ ವಿರಚಿತ ನಾಟಕವನ್ನು, ಅಲ್ಲಿನ ಸ್ಥಳೀಯ ತಂಡ, 'ಶಿಕರ,' ಆಡಿ ಎಲ್ಲರ ಮೆಚ್ಚುಗೆ ಗಳಿಸಿತು. ಇದು ಕೊನೆಯ ಕಾರ್ಯಕ್ರಮ. ಕಾರ್ಯಕ್ರಮಗಳೆಲ್ಲಾ ಎಲ್ಲರ ಪ್ರಶಂಸೆಗೆ ಪತ್ರವಾದವು. ದೂರದ ಅಮೆರಿಕಾ ದಲ್ಲಿದ್ದರೂ ತಮ್ಮ ನಾಡಿನ ನಡೆ ನುಡಿಯ ಬಗ್ಗೆ ಹಮ್ಮಿಕೊಂಡ ೨ ದಿನಗಳ ಅತ್ಯಪಯುಕ್ತ ಕಾರ್ಯಕ್ರಮಗಳು ಸರ್ವರಿಗೂ ಮುದನೀಡಿದವು.

ಎನೋ ಧನ್ಯತಾಭಾವ ಎಲ್ಲರ ಮುಖದಲ್ಲೂ ಎದ್ದು ಕಾಣುತ್ತಿತ್ತು.

  • ಪ್ರಚಲಿತ ಲೇಖನ ವರ್ಗದ ಚಿತ್ರಗಳು
~.~
  • Login or register to post comments
  • 548 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡತಿ, ಪ್ರೊ. ಮಾಲತಿರಾವ್ ರವರಿಗೆ ಅಭಿನಂದನೆಗಳು.
  • ಆಸ್ತಿಕ ವಾದ ಮತ್ತು ನಾಸ್ತಿಕ ವಾದ
  • ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ
  • ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ
  • "ಮೈಸೂರ್ ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ," ಮೈಸೂರ್ ಅಸೋಸಿಯೇಷನ್ ಮುಂಬೈನಲ್ಲಿ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಅಲೆಗ್ಸಾಂಡರ್  ದಿ ಗ್ರೇಟ್

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: IT - ಸಿಂಪ್ಟಮ್ಸ
    September 5, 2008 - 5:15pm
  • savithru
    ಉ: IT - ಸಿಂಪ್ಟಮ್ಸ
    September 5, 2008 - 5:13pm
  • JAYADEV
    ಉ: IT - ಸಿಂಪ್ಟಮ್ಸ
    September 5, 2008 - 5:09pm
  • savithru
    ಉ: IT - ಸಿಂಪ್ಟಮ್ಸ
    September 5, 2008 - 5:00pm
  • srinivasps
    ಉ: IT - ಸಿಂಪ್ಟಮ್ಸ
    September 5, 2008 - 4:56pm
  • savithru
    ಉ: IT - ಸಿಂಪ್ಟಮ್ಸ
    September 5, 2008 - 4:51pm
  • savithru
    ಉ: IT - ಸಿಂಪ್ಟಮ್ಸ
    September 5, 2008 - 4:44pm
  • Sunil Jayaprakash
    ಉ: IT - ಸಿಂಪ್ಟಮ್ಸ
    September 5, 2008 - 4:36pm
  • savithasr
    ಉ: IT - ಸಿಂಪ್ಟಮ್ಸ
    September 5, 2008 - 4:16pm
  • savithasr
    ಉ: ನೀರವತೆ!
    September 5, 2008 - 3:57pm
ಇನ್ನಷ್ಟು


ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator