ಲಂಡನ್ನಿನ ಮಹಾ ವಸ್ತು ಪ್ರದರ್ಶನ- ೧೮೫೧ ರಲ್ಲಿ !

ಈ ವಸ್ತು ಪ್ರದರ್ಶನ ನಡೆದದ್ದು ಲಂಡನ್ನಿನ ಕ್ರಿಸ್ಟಲ್ ಅರಮನೆಯ ಭವ್ಯ ಹಾಲಿನಲ್ಲಿ. ಆದ ಕಾಲ- ೧೮೫೧ !
ಅದೊಂದು ಪ್ರಪ್ರಥಮ ಹಾಗೂ ಅತಿ ಮಹತ್ತರ ಪ್ರದರ್ಶನವೆಂದು ವಿಶ್ವದ ಚರಿತ್ರೆಗಳ ಪುಟಗಳಲ್ಲಿ ವರ್ಣಿಸಲ್ಪಟ್ಟಿದೆ. ಬ್ರಿಟಿನ್ ತಾನು ಗೆದ್ದ ದೇಶಗಳ ಸಂಪತ್ತನ್ನು ಇಂಗ್ಲೆಂಡಿಗೆ ತಂದು ತನ್ನ ಜಾಣ್ಮೆಯನ್ನು ಪ್ರಪಂಚಕ್ಕೆ ತೋರಿಸಲು ಮಾಡಿದ ಪ್ರಪ್ರಥಮ ಪ್ರಯತ್ನ. ಇಲ್ಲಿ ಬ್ರಿಟನ್ನಿನ ಯೋಧರ, ರಾಜಕಾರಣಿಗಳ, ಪಂಡಿತರ, ಕುಶಲಕರ್ಮಿಗಳ ಪ್ರೌಢಿಮೆ, ಚಾಣಾಕ್ಷತನ, ಧರ್ಯ, ಸಾಹಸ, ಒಗ್ಗಟ್ಟು, ಸಂಯಮ, ತಮ್ಮ ಚಕ್ರಾಧಿಪತ್ಯಕ್ಕೆ ಅವರು ತೋರಿಸುತ್ತಿದ್ದ, ಪ್ರೀತಿ ಹಾಗು ಗೌರವಗಳು ಘನೀಭೂತವಾಗಿ, ಲಂಡನ್ನಿನಜನರ ಮನಸ್ಸಿನ ಮೇಲೆ ಅಚ್ಚೊತ್ತಿವೆ.
ನಮ್ಮ ಬೆಂಗಳೂರಿನ "ಲಾಲ್ ಬಾಗ್ " ನಲ್ಲಿರುವ 'Glass House' ಆ ಕ್ರಿಸ್ಟಲ್ ಪ್ಯಾಲೇಸಿನ ಒಂದು ನಮೂನೆ ಎನ್ನಬಹುದು. ನಮ್ಮ ರಾಜರು ಆ ಅರಮನೆಯ ಸೌಂದರ್ಯವನ್ನು ನೋಡಿ, ದಂಗಾಗಿ ಅದೇ ತರಹದ ಒಂದು ಭವ್ಯ 'Glass House' ನ್ನು ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಕಟ್ಟಿಸಿದ್ದಾರೆ.
ಪ್ರದರ್ಶನದಲ್ಲಿ ನಮ್ಮದೇಶದ ಡಾಕಾ ಮಸ್ಲಿನ ಬಟ್ಟೆಗಳು, ಕ್ಯಾಲಿಕೊಗಳು, ರೇಷ್ಮೆ ವಸ್ತ್ರಗಳು, ಬೆಳ್ಳಿ- ಬಂಗಾರ, ವಜ್ರದ ಕೆತ್ತನೆಕೆಲಸದ ವಸ್ತುಗಳು, ಮರ, ದಂತದ ಚಿತ್ತಾರದ ವಸ್ತುಗಳು ಯೂರೋಪಿಯನ್ನರ ನಿದ್ರೆ ಕೆಡೆಸಿದವು. ಕಲ್ಲಿನಲ್ಲಿ ಕಡೆದ ಕಲಾತ್ಮಕ ವಿಗ್ರಹಗಳು, ಸಮಗ್ರ ಪುಸ್ತಕ ಭಂಡಾರ- ತಾಳೆಗರಿಯಲ್ಲಿ ಬರೆದದ್ದು, ಶತಮಾನಗಳಹಿಂದೆ. ಭಾರತದಲ್ಲಿ ಇವೆಲ್ಲಾ ಸಿಗುವುದೆಂದು ಅಲ್ಲಿನ ಅನೇಕರು ಕನಸು ಮನಸಿನಲ್ಲೂ ನೆನೆಸಿರಲಿಲ್ಲ. ಅವರು ಕೇಳಿದ್ದು- ರಾಜರು, ಭಿಕ್ಷುಕರು, ಹಾವಾಡಿಸುವವರು ಇರುವ ದೇಶ; ಅಲ್ಲಿ ಆನೆ, ಹುಲಿ, ಚಿರತೆ, ಸಿಂಹ ಜಿಂಕೆ, ಜಿರಾಫೆ, ಒಂಟೆ, ಮುಂತಾದ ಕಾಡು ಪ್ರಾಣಿಗಳಿವೆ ಎಂದು ತಿಳಿದಿದ್ದರು. ಆಫ್ರಿಕಾ ಖಂಡದ ತರಹ ಬಹಳ ಹಿಂದುಳಿದ ಪ್ರದೇಶವೆಂದು ಕೇಳಿದ್ದ ಅವರಿಗೆ, ಭಾರತದ ಕಲಾಕೌಶಲ್ಯ, ಸಂಸ್ಕೃತಿಯನ್ನು ವೀಕ್ಷಿಸಿದ ಬಳಿಕ ಒಂದು ಅಪೂರ್ವ ಅನುಭವವನ್ನು ಪಡೆದರು.
-ನನ್ನ ಸಂಗ್ರಹದಿಂದ.

- Login or register to post comments
- 457 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: