ಓಹ್ ...ಹವ ಹವಾಯ್...... ಹವ ಹವಾಯ್....[೨].. !
![ಓಹ್ ...ಹವ ಹವಾಯ್...... ಹವ ಹವಾಯ್....[೨].. ! ಓಹ್ ...ಹವ ಹವಾಯ್...... ಹವ ಹವಾಯ್....[೨].. !](http://sampada.net/files/images/5.preview.jpg)
ಓಹ್ ...ಹವ ಹವಾಯ್...... ಹವ ಹವಾಯ್...... ಹಾಡಿದೆಯಲ್ಲ !
ಹವಾಯ್ ದ್ವೀಪಗಳ ಸೊಬಗೇ ಹಾಗೆ. ಅದೆಂತಹ ಪುಷ್ಪರಾಶಿ ; ಎಲೆ, ಗಿಡ, ಮರ, ಬಳ್ಳಿ, ಮೊಗ್ಗು, ಹೂ, ಹೀಚು, ಕಾಯಿ, ಹಣ್ಣುಗಳು, ಅವನ್ನೆಲ್ಲಾ ಸಂಭ್ರಮದಿಂದ ಮುತ್ತಿ ಪರಿಚಯಿಸುವ, ಬಗೆ- ಬಗೆಯ ಬಣ್ಣದ ಚಿಟ್ಟೆಗಳು, ಕ್ರಿಮಿಗಳು, ಮಿಡತೆಗಳು, ಹುಳುಗಳು, ಗೊದ್ದಗಳ ಸಾಲುಗಳು, ಹಲ್ಲಿಗಳು, ಹೋತೀಕ್ಯಾತಗಳು, ಬಣ್ಣಬಣ್ಣದ ವಿಚಿತ್ರ ಕಪ್ಪೆಗಳು, ಅವುಗಳ ಹಿತವಾದ ವಟಗುಟ್ಟುವಿಕೆಯ ನಾದ, ಜೀರುಂಡೆಗಳು ಅವುಗಳ ಝೇಂಕಾರ. ಅವುಗಳೆಲ್ಲಾ ಇಲ್ಲಿನ ಪರಿಸರಕ್ಕೆ ಸೇರಿದ್ದೇ ! ಅವನ್ನು ಬೇರೆ ಯೆಲ್ಲೂ ಕಾಣಲು ಅಸಾಧ್ಯ. ಹವಾಯಿನ ಪರ್ಯಟನೆ, ಕಣ್ಣಿಗೆ ಒಂದು ಹಬ್ಬವಿದ್ದಂತೆ. ಮನಸ್ಸಿಗೆ ಉಲ್ಲಾಸಮಯ ; ಅದೇನೋ ಅವರ್ಣನೀಯ ಆನಂದ, ವಿಚಿತ್ರಾನುಭವಗಳು ನಿಮಗೆ ಅಲ್ಲಿ ದೊರೆಯುತ್ತದೆ. - ಇದನ್ನು ಹೇಳಿದವಳು ನನ್ನ ಮಗಳು, ಅವಳಮಗಳು- ಅದೇ, ... ನಮ್ಮ ಮೊಮ್ಮಗಳು ! ದೂರದಲ್ಲಿ ನಮ್ಮ ಅಳಿಯಂದಿರು ಹೂಗುಗುಟ್ಟುತ್ತಿದ್ದಾರೆ ! ಅದೊಂದು ಕಾಶಿ-ಪುಷ್ಪಕಾಶಿ !
-ನಮ್ಮ ಹರ್ಷಮ್ಮನ ಮನೆಯ ಆಲ್ಬಮ್ ನಿಂದ.
--ಮನೆಯ ಆಲ್ಬಮ್ ನಿಂದ.

- Login or register to post comments
- 489 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: