20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

"ನಮ್ಮ ಸುನಿ," ಗುರುವಾರ, (ಭಾರತೀಯ ಕಾಲಮಾನದ ರೀತಿ ) ಭೂಮಿಗೆ ಮರಳುತ್ತಿದ್ದಾಳೆ !

June 20, 2007 - 4:38pm
venkatesh
ಶುಭಾಗಮನ, ಸುನಿ ! ನಮ್ಮ "ಸುನಿ" ಗುರುವಾರ, ತನ್ನ ೭ ಜನ ಸಹಪಾಠಿಗಳೊಂದಿಗೆ ( ಅವಳೂ ಸೇರಿದಂತೆ ) ಭೂಮಿಗೆ ಮರಳುತ್ತಿದ್ದಾರೆ ! ಅವಳಿಗೆ, ಮತ್ತು ವೃಂದದವರಿಗೆ ನಮ್ಮೆಲ್ಲರ ಪರವಾಗಿ ಶುಭಹಾರೈಕೆಗಳು ಮತ್ತು ಪೃಥ್ವಿಗೆ ಕಾಲಿಡುವುದಕ್ಕೆ, ಹಾರ್ದಿಕ ಸ್ವಾಗತಗಳು ! "ನಮ್ಮ "ಸುನಿತ ವಿಲಿಯಮ್ಸ್ ," ಈದಿನ ಅಂದರೆ, ಗುರುವಾರ, ೨೧, ಜೂನ್ ೨೦೦೭ ರಂದು ತನ್ನ ೬ ತಿಂಗಳ ಅಂತರಿಕ್ಷಯಾನವನ್ನು "ಅಟ್ಲಾಂಟಿಸ್ ಸ್ಪೇಸ್ ಶಟಲ್" ನಲ್ಲಿ, ಯಶಸ್ವಿಯಾಗಿ ಮುಗಿಸಿ, ಸುಖವಾಗಿ ಭೂಮಿಗಿಳಿಯುವವಳಿದ್ದಾಳೆ ! ದಿ. ಕಲ್ಪನ ಚಾವ್ಲಾ, ನಂತರ ಮತ್ತೊಬ್ಬ ಭಾರತೀಯ ಸಂಜಾತೆ, ಮಾಡಿದ ಎರಡನೆಯ ಸಾಹಸ ಕಾರ್ಯ. ಇದಕ್ಕೆ ಹಿಂದೆ ಇನ್ನೊಬ್ಬ ಅಮೆರಿಕನ್ ೧೮೮ ದಿನ ೪ ಗಂಟೆಗಳಕಾಲ ಸ್ಪೇಸ್ ನಲ್ಲಿದ್ದರು. ಅವರೇ ಆಸ್ಟ್ರೊನಾಟ್ ಶನೋನ್ ಲ್ಯುಸಿಡ್. ಸುನೀತಾಳ ತಂದೆ, ಗುಜರಾತ್ ಮೂಲದ ದೀಪಕ್ ಪಾಂಡ್ಯ, ಒಬ್ಬ ಸಮರ್ಥ neuroanatomist ಆಗಿ ಕೆಲಸಮಾಡುತ್ತಿದ್ದಾರೆ. ತಾಯಿ, ಸ್ಲೊವಾಕಿಯನ್ ಮೂಲದ, ಬಾನಿ ಪಾಂಡೆ. ಸುನೀತಾ, ಮೈಕೆಲ್ ಜಿ. ವಿಲಿಯಮ್ಸ್ ರನ್ನು ಲಗ್ನವಾದರು. ತಮ್ಮ ಸುದೀರ್ಘ ಅಂತರಿಕ್ಷಯಾನದ ನಂತರ, ಮಂಗಳವಾರ, ೧೯ ಜೂನ್, ೨೦೦೭ ರಂದು ಅವಳ ಫೆಡಾರ್ ಯೂರ್ಚಿಖಿನ್, ಒಲೆಗ್ ಕೊಟೋವ್, ಕ್ಲೆ ಆಂಡರ್ಸನ್ ಗೆಳೆಯರಿಗೆ ವಿದಾಯ ಹೇಳಿದರು. ಪೂರ್ವ ಯೋಜನೆಗಳಂತೆ, ಸುನಿತಾ ವಿಲಿಯಮ್ಸ್, ಉಲೈ ೯, ೨೦೦೭ ರ ವರೆಗೆ ಸ್ಪೇಸ್ ಶಟಲ್ ನಲ್ಲಿ ಇರಬೇಕಾಗಿತ್ತು. ಆದರೆ ಏಪ್ರಿಲ್ ೨೬, ೨೦೦೭ ರಂದು "ನಾಸಾಕೇಂದ್ರ " ದಲ್ಲಿ ಸುನೀತಾ ಅವರನ್ನು ಅಟ್ಲಾಂಟಿಸ್ ಎಸ್. ಟಿ. ಎಸ್ -೧೧೭ ಮಿಶನ್ ನಲ್ಲಿ ಭೂಮಿಗೆ ಮರಳಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಅದರ ಪ್ರಕಾರ, ಜೂನ್ ೮, ರಂದು ಹೊರಟ ಅಟ್ಲಂಟಿಸ್ ಸ್ಪೆಸ್ ಶಟಲ್ ೨ ದಿನಗಳ ತರುವಾಯ ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೆಶನ್ ಗೆ ಸೇರಿಕೊಂಡಿದೆ. ಜೂನ್ ೧೭, ರಂದು ಅದು ಸುನೀತಾ ಅವರನ್ನು ಹೊತ್ತುಕೊಂಡು ಸ್ಪೇಸ್ ಸ್ಟೆಶನ್ ಗೆ ವಿದಾಯ ಹೇಳಿ, ಭೂಮಿಯತ್ತ ತನ್ನ ಮಹಾ-ಪ್ರಯಾಣವನ್ನು ಬೆಳೆಸಿದೆ. ಈಗ, ಸುನಿತಾ ವಿಲಿಯಮ್ಸ್, ತಮ್ಮ ಸ್ಪೇಸ್ ಶಟಲ್ ಅಟ್ಲಾಂಟಿಸ್ ನಲ್ಲಿ ಕುಳಿತು, ಭೂಮಿಗೆ ಮರಳುತ್ತಿದ್ದಾರೆ. ಫ್ಲಾರಿಡಾದ ಕೇಪ್ ಕನವೆರಾಲ್ ನಲ್ಲಿ ಇಂದು ಭೂಮಿಗೆ ಇಳಿಯುವ ಸಾಧ್ಯತೆ ಇದೆ. ಜಾಮ್ಸ್ ಬ್ಲನ್ಟ್ ರ "ಗೂಡ್ ಬ್ಯೆ ಮ್ಯ್ ಲವರ್'," ಹಾಡನ್ನು ಸುನೀತಾ, ತಮ್ಮ ರೆಕಾಡ್ ಪ್ಲೇಯರ್ ನಲ್ಲಿ ಹಚ್ಚಿದರು. ಎರಡನೆಯ ಹಾಡನ್ನು 'ಆಂಡರ್ ಸನ್' ರಿಗೆ ಸಮರ್ಪಿಸಿದರು. ದ ಬೀ ಗಿಸ್ 'ಸ್ಟೇಯಿನ್ ಅಲೈವ್' " ಹಾಡು ಕೇಳಿದಾಗ, ಕ್ಷಣಕಾಲ ಅವರು ಗದ್ಗದರಾಗುತ್ತಾರೆ. ಭಾವುಕತೆ ಅವರನ್ನು ಮೂಕರನ್ನಾಗಿ ಮಾಡುವ ಕ್ಷಣಗಳವು ! ಸುನೀತಾ ಹುಟ್ಟಿದ್ದು, ಒಹೈ ನ ಯೂಲಿಡ್ ನಲ್ಲಿ. ಸೆಪ್ಟೆಂಬರ್ , ೧೯, ೧೯೬೫. ಮುಂದಿನ ವಿಧ್ಯಾಭ್ಯಾಸ, Needham High School, Needham, Massachusetts, 1983. B.S., Physical Science, U.S. Naval Academy, 1987. M.S., Engineering Management, ನ್ನು, Florida Institute of Technology, 1995 ರಲ್ಲಿ ಮಾಡಿ ಮುಗಿಸಿದರು. ಮುಂದೆ ನಡೆದದ್ದೆಲ್ಲಾ ರೋಲರ್ ಕೋಸ್ಟರ್ ತರಹ, ಶೀಘ್ರವಾಗಿ ಆಯಿತು. ಕೆಲವುಸಲ ಕೆಲಸಗಳು ಸುಲಭವಾಗಿ, ಮತ್ತೆ ಕೆಲವೊಮ್ಮೆ ಬಹಳ ಕಠಿಣವಾಗಿ ನಡೆದುಹೋದವು. ಡಿಸೆಂಬರ್ ೧೦, ೨೦೦೬ ರಲ್ಲಿ ಸ್ಪೇಸ್ ಸ್ಟೇಶನ್ ಕಾರ್ಯಕ್ರಮಕ್ಕೆ (ಐ. ಸ್. ಸ್) ಮೊದಲು ಪಾದಾರ್ಪಣೆ ಮಾಡಿದರು. ಆಮೇಲೆ ಅಂತರಿಕ್ಷದಲ್ಲಿ ಪ್ರಪ್ರಥಮವಾಗಿ ನಡೆದದ್ದು, ಡಿಸೆಂಬರ್ ೧೭ ರಂದು. ಸುನೀತ ವಿಲಿಯಮ್ಸ್ ರವರನ್ನು ಎಸ್. ಟಿ. ಎಸ್-೧೧೬ ಡಿಸ್ಕವರಿ ಮಿಶನ್, ರೀಟರ್ ರ ಜಾಗದಲ್ಲಿ, ಎಕ್ಸ್ ಪೆಡಿಶನ್ ೧೪ ರ ೩ ನೆಯ ಕ್ರ್ಯೂ ಸದಸ್ಯರನ್ನಾಗಿ. ಮೊದಲು ಅಲ್ಲಿನ ಸೌರಪಟವೊಂದು ಸರಿಯಾಗಿ ಮುಚ್ಚಿಕೊಳ್ಳುತ್ತಿರಲಿಲ್ಲ. ಅದನ್ನು ಸರಿಪಡಿಸಲು, ಅನುಭವಿ ತಜ್ಞ, ಗಗನ ಯಾತ್ರಿ, ರಾಬರ್ಟ್ ಕರ್ ಬೀಮ್ ರ ಜೊತೆಗಾತಿಯಾಗಿ ತಮ್ಮ ಜೀವಿತದ ಮೊದಲನೆಯ ಗಗನ ನಡಿಗೆಯನ್ನು ಪ್ರಾರಂಭಿಸಿದರು. ಅಂತರಿಕ್ಷದಲ್ಲಿ ಮಾಡಿದ ನಡಿಗೆಯಲ್ಲಿ ಇವರು ೯ ನೆ ಯವರು. ೭ ಜನ ಅಮೆರಿಕನ್ನರು. ಒಬ್ಬಳು ರಶಿಯನ್ ಮಹಿಳೆ. ಈಗಾಗಲೇ ಸ್ಪೇಸ್ ನಲ್ಲಿ, ೧೯೬೫ ರಿಂದ ಒಟ್ಟು ೨೮೧ ಅಂತರಿಕ್ಷ ನಡಿಗೆಗಳಾಗಿವೆ. ತಮ್ಮ ಮುಂದಿನ ೩ ನಡಿಗೆಗಳನ್ನು ಕೇವಲ ೧೦ ದಿನಗಳ ಅಂತರದಲ್ಲಿ ಮಾಡಿದರು. ಜನವರಿ, ೨೧, ೨೦೦೭, ಫೆಬ್ರವರಿ, ೪ ಮತ್ತು ಫೆಬ್ರವರಿ ೯, ೨೦೦೭. ೩ ನೆಯ ನಡಿಗೆಯಲಿ ೬ ಗಂ. ೪೦ ನಿಮಿಷ. ಒಟ್ಟಾರೆ ತಮ್ಮ ಈ ೪ ನಡಿಗೆಯೂ ಸೇರಿ, ೨೯ ಗಂ. ೧೭ ನಿಮಿಷ, ಅಂತರಿಕ್ಷದಲ್ಲಿ ಕಳೆದ ದಾಖಲೆ ಪಡೆದರು. ಅಮೆರಿಕದ ಅಂತರಿಕ್ಷ ಯಾತ್ರೆಯ ಚರಿತ್ರೆಯಲ್ಲಿ ಅತಿ ದೀರ್ಘಕಾಲ ಅಂತರಿಕ್ಷ ನಡಿಗೆಗೆ ದಾಖಲೆ ಸೃಷ್ಟಿಸಿದ್ದ ಕಮಾಂಡರ್ ಮೈಕೆಲ್ ಲೋಪೆಜ್ ಅಲೆಗ್ರಿಯ ರವರು ಎಕ್ಸ್ ಪೆಡಿಶನ್ ೧೪ ರಲ್ಲಿ ಕಮಾಂಡರ್ ಆಗಿ ಸುನಿತಾರವರ ಸಂಗಾತಿಯಾಗಿದ್ದರು. ಸುನೀತ ಮತ್ತೊಂದು ದಾಖಲೆ ಮಾಡಿದರು. ಅಸಾಧ್ಯ ವೇಗದಲ್ಲಿ ತಿರುಗುತ್ತಿರುವ( ೧೮ ಸಾವಿರ ಮೈಲಿ/ಗಂ) ಸ್ಪೇಸ್ ಸ್ಟೇಶನ್ ನಲ್ಲೆ ಇದ್ದು. ಪೃಥ್ವಿಯಿಂದ ೨೧೦ ಮೈಲಿ ದೂರದ ಸ್ಪೇಸ್ ಸ್ಟೇಶನ್ ನಲ್ಲಿ, ಇದ್ದೇ, ಬಾಸ್ಟನ್ ನ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದರು. ಅವರಿಗೆ ಕೊಟ್ಟ ಓಟಗಾರರ ಸಂಖ್ಯೆ; '೧೪೦೦೦'. ಸುನೀತಾ ತಮ್ಮ ಓಟವನ್ನು ಟ್ರೇಡ್ ಮಿಲ್ ನಲ್ಲಿ ಆರಂಭಿಸಿದರು. ೪ ಗ, ೨೩ ನಿ. ೧೦ ಸೆ. ದಲ್ಲಿ ಮುಗಿಸಿದರು. ಅಂದರೆ, ಸೆಕೆಂಡಿಗೆ ೫ ಮೈಲಿ ದೂರವನ್ನು ಮುಟ್ಟುವುದು. ಅದೇ ಸಮಯದಲ್ಲಿ ಅವರು ಭೂಮಿಯನ್ನು ೨ ಬಾರಿ ಸುತ್ತಿ ಮುಗಿಸಿದ್ದರು. 'ಟ್ರೇಡ್ ಮಿಲ್,' ನಲ್ಲಿ ಅವರ ಕಾಲುಗಳಿಗೆ, ’ ಬಂಗೀ” ಹಗ್ಗಗಳನ್ನು ಬಿಗಿಯಲಾಗಿತ್ತು. ಎಕೆಂದರೆ ಓಡುವ ಸಂದರ್ಭದಲ್ಲಿ ಛಂಗನೆ ಗಾಳಿಯಲ್ಲಿ ತೇಲಿಹೋಗಬಹುದಾದ ಸಾಧ್ಯತೆಗಳಿಂದಾಗಿ. ಸುನೀತಾ ವಿಲಿಯಮ್ಸ್, ಹುಟ್ಟಿದ್ದು, ಒಹೈ ನ ಯೂಲಿಡ್ ನಲ್ಲಿ . ಆದರೂ ಅವರು, ಮ್ಯಸ್ಯಾಚು ಸೆಟ್ಸ್ ನ "ನೀಧಾಮ್" ತನ್ನ ಊರೆಂದು ಪರಿಗಣಿಸುತ್ತಾರೆ. ಶ್ರೀ. ದೀಪಕ್ ಪಾಂಡ್ಯ, ಶ್ರೀಮತಿ ಬಾನಿಪಾಂಡ್ಯ, ಅವಳ ತಂಗಿ ದೀನ, ಎಲ್ಲರೂ ಸುನಿತಾಳ ಆಗಮನಕ್ಕೆ ಅಮೆರಿಕದ ಫ್ಲಾರಿಡಾದಲ್ಲಿ ಕಾಯುತ್ತಿದ್ದಾರೆ. ಅದೇ ತರಹ ಭಾರತದಲ್ಲಿ ಗುಜರಾತ್ ರಾಜ್ಯದಲ್ಲಿರುವ "ಝಲಸನ್ ಹಳ್ಳಿ" ಯಲ್ಲಿ ಸಾವಿರಾರು ಜನರು ಈ ಸಂತಸದ ಕ್ಷಣಗಳಿಗಾಗಿ ಎದುರುನೋಡುತ್ತಿದ್ದಾರೆ. ಈ ಹಳ್ಳಿಯಲ್ಲೇ ದೀಪಕ್ ತಮ್ಮ ಬಾಲ್ಯವನ್ನು ಕಳೆದದ್ದು. ಸುನೀತಾ ಮತ್ತು ಅವಳ ಸಂಗಡಿಗರಿಗೆ ’ ನಮ್ಮೆಲ್ಲ ಸಂಪದಿಗರ” ಪರವಾಗಿ ಸುಸ್ವಾಗತ ! ಕೃಪೆ : ಟೈಮ್ಸ್ ಆಫ್ ಇಂಡಿಯ, ಮತ್ತು ಇಂಟರ್ ನೆಟ್ ನಿಂದ.

ಪ್ರತಿಕ್ರಿಯೆಗಳು

Submitted by ASHOKKUMAR on
ನನ್ನ ತಾಯಿಗಂತೂ ಸುನೀತಾಳದ್ದೇ ಧಾನ್ಯ. ಅವಳು ಕ್ಷೇಮವಾಗಿ ಬರಬೇಕು ಎನ್ನುವ ಹಾರೈಕೆ. ಇಲ್ಲಿ ಜೋರು ಮಳೆ ಬಿದ್ದರೂ ಶಟಲ್‍ ಯಾತ್ರೆಗೆ ಹಾನಿಯಾಗಬಹುದೋ ಎಂಬ ಭಯ! *ಅಶೋಕ್

Submitted by venkatesh on
ನೀವೊಬ್ಬರು ಸಕ್ರಿಯವಾಗಿ ದೇಶದ ಅಗುಹೋಗುಗಳಿಗೆ ಸ್ಪಂದಿಸುತ್ತಿದ್ದೀರಿ. ಇದು ಉತ್ತಮ ಲಕ್ಷಣಗಳಲ್ಲೊಂದು !

Submitted by venkatesh on

"ಸುನೀತಾಳದೇ ಧಾನ್ಯ " ! ಸೊಗಸಾಗಿದೆ. ಅವಳ ಬಳಿ ಅದೇನು ಧಾನ್ಯವನ್ನು ಕಂಡರೋ ನಿಮ್ಮಮ್ಮ. ಒಟ್ಟಿನಲ್ಲಿ ಹಿರಿಯ ಜೀವ. ಖಂಡಿತಾ ಏನನ್ನಾದರೂ ಕಂಡಿರಲೇ ಬೇಕು !