June 23, 2007 - 1:59pm
ಅಟ್ಲಾಂಟಿಸ್ ಸ್ಪೆಸ್ ಶಟಲ್ , ಭಾರತೀಯ-ಅಮೆರಿಕನ್ ಆಸ್ಟ್ರೊನಾಟ್ ಸುನಿತಾ ವಿಲಿಯಮ್ಸ್ ಮತ್ತು ಅವರ ೬ ಜನ ಜೊತೆಗಾರರ ಸಮೇತ, ಎಡ್ವರ್ಡ್ಸ್ ಏರ್ಫೋರ್ಸ್ ಬೇಸ್, ಕ್ಯಾಲಿಫೋರ್ನಿಯ ದಲ್ಲಿ ಶನಿವಾರ, ಪ್ರಾತಃಕಾಲ (ಭಾರತೀಯ ಕಾಲಮಾನದ ಪ್ರಕಾರ) ಸುಖವಾಗಿ ಬಂದು ಸೇರಿದರು. ಈ ಅದ್ಭುತ ಯಾನದ ಅಂತ್ಯದ ಕೊನೆಯ ಕ್ಷಣಗಳನ್ನು ನೋಡಿ ಹರಸಲು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಗುರುವಾರವೇ ಫ್ಲಾರಿಡಾದಲ್ಲಿ ಕೆಳಗಿಳಿಸಬೇಕಾಗಿದ್ದ "ಅಟ್ಲಾಂಟಿಸ್ ಶಟಲ್ಲ" ನ್ನು ಹವಾಮಾನದಲ್ಲಿ ತೀವ್ರ ಏರುಪೇರಾಗಿದ್ದರಿಂದ ತಡೆಹಿಡಿದು ೨ ದಿನ ಮುಂದುವರೆಸಬೇಕಾಯಿತು. "ನ್ಯಾಸಾ ಸಿಬ್ಬಂದಿವರ್ಗಕ್ಕೆ" ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೆ ! ೨೦೦೩ ರ ವೈಫಲ್ಯದ ನಂತರ, ’ನ್ಯಾಸ” ಅತ್ಯಂತ ಜಾಗರೂಕತೆವಹಿಸಿ ತನ್ನ ಕಾರ್ಯಾಚರಣೆಗಳಲ್ಲಿ ಹಲವಾರು ಬದಲಾವಣೆಯನ್ನು ಮಾಡಿಕೊಂಡಿದೆ.
ಒಟ್ಟಿನಲ್ಲಿ ಅಂತರಿಕ್ಷ ವೈಜ್ಞಾನಿಕರಿಗೆ ಇದೊಂದು ಭರವಸೆಯನ್ನು ಕೊಟ್ಟಿದ್ದು, ಮುಂದಿನ ಯಾತ್ರೆಗಳಲ್ಲಿ ಇನ್ನೂ ಹೆಚ್ಚಿನ ತಯಾರಿಯನ್ನು ಮಾಡಿಕೊಳ್ಳಲು ಸಹಾಯ ಮಾಡಿದೆ. " ಸುನಿ," ಮತ್ತು ಅವಳ ಸಂಗಡಿಗರಿಗೆ ಮತ್ತೊಮ್ಮೆ ನಮ್ಮೆಲ್ಲ "ಸಂಪದಿಗರ" ಪರವಾಗಿ ಧನ್ಯವಾದಗಳು !
ಕೃಪೆ : "Rediff.com"
Taxonomy upgrade extras:
