ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
July 4, 2008 - 10:29pm — omshivaprakash
ತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ಪ್ರತಿನಿತ್ಯ ಕಂಪ್ಯೂಟರ್ ಅನ್ನ ಅವಲಂಬಿಸಿ ಕೊಂಡು ಬರಲಿಕ್ಕೆ ಸರ್ಕಾರಿ ಇಲಾಖೆಗಳು ಪ್ರಾರಂಭಿಸಿ ವರ್ಷಗಳು ಕಳೆದಿರಬಹುದು. ಅಂದಿನಿಂದ ಇಂದಿನವರೆಗೆ ಪತ್ರಗಳನ್ನ, ಇತರೆ ಕಡತಗಳನ್ನ ಸಂಪಾದಿಸಲಿಕ್ಕೆ ಸಮಾನ್ಯವಾಗಿ ಉಪಯೋಗಿಸಿ ಕೊಂಡು ಬಂದಿರುವ ತಂತ್ರಾಂಶ ಮೈಕ್ರೋ ಸಾಫ್ಟ್ ಆಫೀಸ್ ಅಲ್ವೇ? ಇದನ್ನ ಮೈಕ್ರೋಸಾಫ್ಟ್ ನಿಂದ ಕೊಂಡು ಉಪಯೋಗಿಸಿದವರನ್ನ ನಾನು ಕಂಡದ್ದೇ ಇಲ್ಲ. ಸರ್ಕಾರ ಇದನ್ನ ಉಪಯೋಗಿಸಲಿಕ್ಕೆ ಪ್ರತಿಯೊಂದು ಕಂಪ್ಯೂಟರ್ಗೆ ಲೈಸೆನ್ಸ್ ಕೊಂಡುಕೊಳ್ಳ ಬೇಕಾಗುತ್ತದೆ. ಸ್ವಲ್ಪ ಲೆಕ್ಕ ಹಾಕಿ, ಒಂದೊಂದು ಸರ್ಕಾರಿ ಆಫೀಸಿಗೆ ಈ ತಂತ್ರಾಂಶ ಕೊಳ್ಳಬೇಕೆಂದರೆ ಲಕ್ಷಗಟ್ಟಲೆ ಹಣ ಸುರಿಯ ಬೇಕಾಗುತ್ತದೆ. ಹಣ ಎಲ್ಲಿಂದ ಬರತ್ತೆ? ಇದೆಯಲ್ಲ ನಾನು, ನೀವು ಕೊಟ್ಟ ಟ್ಯಾಕ್ಸ್ ಹಣ.
ಈ ರೀತಿ ಹೊರ ದೇಶದ ಒಂದು ಕಂಪೆನಿಗೆ ಹರಿದು ಹೋಗೋ ಹಣವನ್ನ ತಡೆಯೋದ್ ಹ್ಯಾಗೆ? ಟ್ಯಾಕ್ಸ್ ಹಣ ಉಳಿಸಿ ಅದನ್ನ ಅಭಿವೃದ್ದಿ ಕಾರ್ಯಗಳಿಗೆ ಬಳಸೋದ್ ಸಾಧ್ಯಾನಾ? ಕೆಲ ತಿಂಗಳುಗಳ ಹಿಂದೆ ಕರ್ನಾಟಕ ಸರ್ಕಾರ ಮೈಕ್ರೋಸಾಫ್ಟ್ ನೊಂದಿಗೆ ಅದರ ತಂತ್ರಾಂಶಗಳನ್ನ ಉಪಯೋಗಿಸುವುದಕ್ಕೆ ಒಪ್ಪಂದವನ್ನ ಮಾಡಿಕೊಳ್ಳ ಹೊರಟಾಗ ಅದನ್ನ ವಿರೋಧಿಸಿ ಒಂದು ಹೋರಾಟವನ್ನ ಪ್ರಾರಂಭಿಸಿದ್ದೆವು. ವಿದೇಶಿ ತಂತ್ರಾಂಶದಿಂದಾಗ ಎದುರಾಗ ಬಹುದಾದ ತೊಂದರೆಗಳನ್ನ ಎಲ್ಲರ ಮುಂದಿಟ್ಟಿದ್ದೆವು. ಸೆಕ್ಯೂರಿಟಿಯ ಮಟ್ಟಿಗೆ ಕೂಡ ಹಿಂದೆ ನೆಡೆದ ಲಾಜಿಕ್ ಬಾಂಬ್ ಘಟನೆಗಳನ್ನ ವಿವರಿಸಿದ್ದೆವು. ಮುಂದೆ ಓದಿ »

- Login or register to post comments
- 54 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
July 4, 2008 - 10:11pm — aprಮೈಸೂರಿನ ೨೫೪೩೭೫೯ ಸಂಕ್ಯೆಗೆ ದೂರವಾಣಿ ಕರೆ ಮಾಡಿದರೆ, ನೀವಿನ್ನು ಎಂದಿನ ಗಂಭೀರ ಧ್ವನಿ "ನಮಸ್ಕಾರ, ಜಿ.ಟಿ.ನಾರಾಯಣರಾವ್" ಎಂದಿಗೂ ಕೆಳದು. ಸರಸ್ವತೀಪುರಂನಲ್ಲಿರುವ "ಅತ್ರೀ" ಮನೆಯ ಗೇಟನ್ನು ಮೆಲ್ಲಗೆ ತೆರೆದರೂ ಸಾಕು, ಮನೆಯೊಳಗಿಂದ ಹೊರ ಬಂದು, ಎರಡೂ ಕೈ ಜೋಡಿಸಿ ನಮಸ್ಕಾರ ಮಾಡುತ್ತ "ಸುಖ ಪ್ರಯಾಣವಾಯಿತೇ" ಎಂದು ಕೇಳಿ ಸ್ವಾಗತಿಸುತ್ತಿದ್ದ ಜಿ.ಟಿ.ನಾರಾಯಣ ರಾವ್, ಹೃಸ್ವವಾಗಿ ಜಿಟಿಎನ್ ಇನ್ನಿಲ್ಲ. "ಮುಗಿಯದ ಪಯಣ" ಕೃತಿಯ ಕರ್ತೃ ಇಹದ ಬಾಳಿನ ಪಯಣ ಮುಗಿಸಿ ವಿಶ್ವ ರಹಸ್ಯದಲ್ಲಿ ಲೀನವಾಗಿದ್ದಾರೆ.
ಜಿಟಿಎನ್ ಗುರುವಾರ (೨೬.೬.೨೦೦೮) ಸಂಜೆ ಸ್ನೇಹಿತರ ಮನೆಯಲ್ಲಿ ಸಂಗೀತಕ್ಕೆ ಸಂಬಂಧಿಸಿದ ಲೇಖನವನ್ನು ಕಂಪ್ಯೂಟರ್ ಪರದೆ ಮೇಲೆ ಓದುತ್ತ ಇದ್ದಾಗ "ಎಲ್ಲ ಮಂಜಾಗುತ್ತಿದೆ" ಎಂದರಂತೆ. ಮನೆಯವರು ಶರಬತ್ತು ಕೊಟ್ಟರು. ಕುಡಿದು ಮತ್ತೆ ಓದಲು ತೊಡಗುತ್ತಿದ್ದಂತೆ ನಿದ್ದೆಗೆ ಜಾರಿದರು. ಆ ನಿದ್ದೆ ಮಾತ್ರ ದೀರ್ಘ ನಿದ್ರೆಯಾಯಿತು. ಮತ್ತೆಂದೂ ಏಳದ ನಿದ್ರೆಯಾಯಿತು. ಈ ಭುವಿಯ ಯಾವ ಶಕ್ತಿಯೂ ಅವರನ್ನು ನಿದ್ದೆಯಿಂದ ಎಚ್ಚರಿಸಲು ಸಾಧ್ಯವಾಗದ ನಿದ್ದೆಯದು.
ಅವರಿಗೆ ಎಂಬತ್ತಮೂರರ ವಯಸ್ಸು. ವಯಸ್ಸಿಗೆ ಅನುಗುಣವಾಗಿ ದೇಹ ಕೃಷವಾಗಿತ್ತು - ಹಕ್ಕಿಯಂತಾಗಿತ್ತು. ಆದರೆ ಜೀವನೋತ್ಸಾಹ ಅದೇ ಇತ್ತು. ಜಿಟಿಎನ್ ಸ್ಮೃತಿ ಕಳೆದುಕೊಂಡ ಸುದ್ದಿ ಬಂದಾಗ ಅವರು ಮತ್ತೆ ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆ ಇತ್ತು. ಏಕೆಂದರೆ ನಾಲ್ಕೈದು ವರ್ಷಗಳ ಹಿಂದೆ ಅವರ ದೇಹ ಸ್ಥಿತಿ ತೀರ ಹದಗೆಟ್ಟಿತ್ತು. ಆ ಸಂದರ್ಭದಲ್ಲಿ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದಾಗ ಅವರು ಹೇಳುತ್ತಿದ್ದರು "ಸೋರುತಿಹುದು ಮನೆಯ ಮಾಳಿಗೀ" ಅವರಿಗೆ ತಮಾಷೆ. ನಮಗೆ?ಮ್ಮ "ಮುಗಿಯದ ಪಯಣ" ದಲ್ಲಿ "ಯಮ ಸದನ ನೋಡಿ ಬಂದೆ" ಎಂಬ ಅಧ್ಯಾಯದಲಿ ಈ ಬಗ್ಗೆ ಬರೆದಿದ್ದಾರೆ. ಸಾವು ಬದುಕಿನ ಹೋರಾಟದಲ್ಲಿ ಜಯಶಾಲಿಯಾಗಿ ಮರಳಿದ ಜಿಟಿಎನ್ ಅವರಿಗೆ ನಾನು ಬರೆದೆ "ಜವರಾಯ ಬಂದರೂ ನಿಮ್ಮನ್ನು ಕರೆದೊಯ್ಯಲಿಲ್ಲ, ನಮಗಾಗಿ" ಆದರೆ ಈ ಬಾರಿ ಹಾಗಾಗಲೇ ಇಲ್ಲ. ಜವರಾಯ ತಣ್ಣಗೆ ಬಂದ ಯಾರಿಗೂ ಹೇಳದೇ - ಅವರನ್ನು ಓಯ್ದೇ ಬಿಟ್ಟ.
ಮೈಸೂರಿಗೆ ಧಾವಿಸಿ, ಅತ್ರಿ ಮನೆ ತಲುಪುವಾಗ ನಡು ಮಧ್ಯಾಹ್ನ. ಹೊರಗಡೆ ಜನರೋ ಜನರು. ಒಳಗೆ ಹಜಾರದಲ್ಲಿ ಜಿಟಿಎನ್ ಮಲಗಿದ್ದರು ಹೂವಿನ ರಾಶಿಯನ್ನೇ ಹೊದ್ದು. ಮೂಕದಲ್ಲೊಂದು ನಗುವಿನ ಸೆಳೆ. ಪಕ್ಕದ ಅವರ ಆಧ್ಯಯನ ಕೊಠಡಿಯಲ್ಲಿ ಪುಸ್ತಕಗಳ ರಾಶಿ. ಬಿಳಿ ಹಾಳೆಯ ಮೇಲೆ ಬರೆಡಿಟ್ಟ ಟಿಪ್ಪಣಿ, ಅತ್ರಿಸೂನು ಕವನದ ಸಾಲುಗಳು. ಎಲ್ಲವೂ ಇದ್ದುವು. ಆದರೆ ಇವೆಲ್ಲವುಗಳಿಗೆ ಅರ್ಥ ಕೊಡುವ, ಮಾತು ನೀಡುವ, ಚಿತ್ರವಾಗುವ, ರೂಪಕವಾಗುವ ಆ ಚೇತನ ಮಾತ್ರ ಅಲ್ಲಿರಲಿಲ್ಲ. ಅನಿಕೇತನ ಹುಡುಕುತ್ತ ಹೊರಟಿತ್ತೇ? ಗೊತ್ತಿಲ್ಲ. ಮುಂದೆ ಓದಿ »

- Login or register to post comments
- 32 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
July 4, 2008 - 3:58pm — harshavardhan v...ಗಿಡಗಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತ್ರಾಸು ಕೊಡಬೇಕು!?
ನನ್ನಲ್ಲಿ ಗಿಡಗಳಿಗೆ ತ್ರಾಸು ಕೊಡಬೇಕು ಎಂಬ ಚಿಂತನೆ ಮೂಡಲು ವಿಶೇಷ ಕಾರಣವಿದೆ. ಇತ್ತೀಚೆಗೆ ನಮ್ಮ ಮನೆಯ ಅಂಗಳದಲ್ಲಿ ಕೆಂಪು ದಾಸವಾಳ ಗಿಡದ ದಪ್ಪ ಪೊಟರೆಗಳಲ್ಲಿ ಒಂದಲ್ಲ..ಎರಡಲ್ಲ..ಮೂರು ಬುಲ್-ಬುಲ್ ಜೋಡಿ ಹಕ್ಕಿಗಳು ಮೂರು ಗೂಡು ಕಟ್ಟಿದ್ದವು. ನಮ್ಮ ಮನೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.
ಬೆಕ್ಕು, ನಾಯಿ ಗಿಡದ ಪಕ್ಕ ಸುಳಿದರೆ ಮನೆ ಮಂದಿ ಓಡಿ ಬಂದು ತಮ್ಮ ಮೊಟ್ಟೆ ಉಳಿಸಿಕೊಡುವಂತೆ, ಅಪಾಯದ ಮುನ್ಸೂಚನೆ ಎಂಬಂತೆ ಬುಲ್-ಬುಲ್ ದಂಪತಿಗಳು ಕೂಗುತ್ತಿದ್ದವು. ಆ ಧಾವಂತದಲ್ಲಿ ನಮ್ಮ ಮನೆಯಲ್ಲಿ ಎಲ್ಲರೂ ಪಕ್ಷಿ ತಜ್ನರು, ಪ್ರಿಯರು ಹಾಗು ರಕ್ಷಕರು ಹೀಗೆ ನಾನಾ ಅವತಾರ ತಾಳಿದ್ದರು. ಪಾಪ ಅವುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ದವಳು ನನ್ನ ತಂಗಿ ದಿವ್ಯಾ.
೬-೭ ದಿನ ಹೀಗೆಯೇ ಕಳೆಯುತ್ತಿದ್ದಂತೆ ಪ್ರತಿಯೊಂದು ಗೂಡಿನಲ್ಲಿ ೩ ಮೊಟ್ಟೆಗಳು ಮಿನುಗತೊಡಗಿದವು. ಬಿಳಿ ಮೊಟ್ಟೆಯ ಮೇಲೆ ಕಂದು, ಕೆಂಪು ಬಣ್ಣದ ಚುಕ್ಕೆಗಳು. ಮನೆಯ ಚಿಕ್ಕಮಕ್ಕಳನ್ನು ದಂಡಿಸಿದ್ದಾಯಿತು. ಮೊಟ್ಟೆ ಬಾಚಲು ಯತ್ನಿಸುವ ಬೆಕ್ಕು, ನಾಯಿ, ಕಾಗೆ ಹಾಗು ಗಿಡುಗಗಳ ಕಾವಲು ಕಾಯ್ದಿದ್ದಾಯಿತು. ಆದರೆ ೧೦ನೇ ದಿನ ಮೊಟ್ಟೆಯೊಡೆದು ಪುಟ್ಟ-ಪುಟ್ಟ ಬುಲ್-ಬುಲ್ ಮರಿಗಳು ಬರಬಹುದು ಎಂದು ಕಾಯ್ದಿದ್ದ ನಮಗೆಲ್ಲ ಆಘಾತ ಕಾಯ್ದಿತ್ತು. ಮುಂದೆ ಓದಿ »

- Login or register to post comments
- 73 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
July 4, 2008 - 1:05am — anilkumarದೆವ್ವದ ಬಗ್ಗೆ ಮಾತನಾಡುತ್ತ, ‘ಫಿಶ್ ಅ೦ಡ್ ಚಿಪ್ಸ್’ ಹೋಟೆಲಿನಲ್ಲಿ ತರ್ಕಕ್ಕೆ ನಿಲುಕದ ಹೋಮ್ಸ್‍ನ ನಡುವಳಿಕೆಯ ನ೦ತರ, ಹೊರಗೆ ನಡೆದಾಡಲು ಅಥವ ಅಲೆದಾಡಲು ಪ್ರಾರ೦ಭಿಸಿದೆವು—ನಾನು ಮತ್ತು ಹೋಮ್ಸ್. ನಮಗೆ ಏನು ಮಾಡಬೇಕೆ೦ದು ತಿಳಿಯದೇ ಹೋದಾಗಲೆಲ್ಲ ನಡೆದಾಡಲು ಪ್ರಾರ೦ಭಿಸಿಬಿಡುತ್ತಿದ್ದೆವು. ಲ೦ಡನ್ನಿನ ಬೀದಿಗಳಿರುವುದಾದರೂ ಮತ್ತ್ಯಾಕೆ? ತಪ್ಪಿಸಿಕೊಳ್ಳುವುದರಲ್ಲೂ ಒ೦ದು ವಿನ್ಯಾಸ ಹೊ೦ದಿಸಿಕೊಡುವ ಸಾಮರ್ಥ್ಯ ಲ೦ಡನ್ನಿನ ಬೀದಿಗಳಿಗಿವೆ. ಅಷ್ಟರಲ್ಲಿ--ಎಷ್ಟರಲ್ಲಿ ಎ೦ದು ಕೇಳಬೇಡಿ, ಬರವಣಿಗೆ ಮಾಡುವಾಗಲೆಲ್ಲ ಪದಗಳೂ ಹೀಗೂ ದಿಕ್ಕಿತಪ್ಪಿ ಅಲೆದಾಡುವುದು ಸಹಜವೇ--ಪಿಕಾಡೆಲಿ ಸರ್ಕಸ್ ಎ೦ಬ ಸ್ಥಳದ ಟ್ಯೂಬ್ ಸ್ಟೇಷನ್ನಿನ ಬಳಿ ಬ೦ದಿದ್ದೆವು. ರೋಮನ್ನರು ಲ೦ಡೇನಿಯಮ್ ಎ೦ಬ ಲ೦ಡನ್ ನಗರಕ್ಕೆ ೫೦ ಕ್ರಿ.ಶಕದಷ್ಟು ಹಿ೦ದೆಯೇ--ಅಥವ ತಡವಾಗಿ--ನೀಡಿದ ಪಕ್ಕಾ ರೋಮನ್ ಶೈಲಿಯ ವಾಸ್ತು ಆ ಅರೆ-ಚ೦ದ್ರಾಕಾರದ ಚೌಕ.
“ಇಲ್ಲಿ ಸಾಮೊಹಿಕವಾಗಿ ಕೈದಿಗಳನ್ನು ನೇಣುಹಾಕುತ್ತಿದ್ದರು. ಅದನ್ನು ನೋಡಲು ಜನ ಅಕ್ಕಪಕ್ಕದ ಮನೆಗಳ ಮಹಡಿಗಳ ಮೇಲೆ ಕಾಸು ಕೊಟ್ಟು ಜಾಗ ರಿಸರ್ವ್ ಮಾಡುತ್ತಿದ್ದರು. ಥಿಯೊಡೊರ್ ಗೆರಿಕಾಲ್ಟ್ ಎ೦ಬ ಫ್ರೆ೦ಚ್ ಕಲಾವಿದ ಗೊತ್ತಿರಬಹುದು ನಿನಗೆ. ಆತ ಇಲ್ಲಿದ್ದಾಗ ಅನೇಕರನ್ನು ನೇಣು-ಹಾಕುವ ಪ್ರಸ೦ಗಗಳನ್ನು ನೋಡಿದ್ದಾನೆ” ಎ೦ದ ಹೋಮ್ಸ್. ಮುಂದೆ ಓದಿ »

ಕಾಶ್ಮೀರದ ಹುಡುಗಿಯ ಕತೆ
July 3, 2008 - 5:49pm — muralihrಮೊನ್ನೆ ಹೈದರಾಬಾದಿನಲ್ಲಿ ಪ೦ಜಗುಟ್ಟ ಬಳಿ ಅವಸರದಲ್ಲಿ ಆಟೋ ಕೂಗುತ್ತಾ ನಡೆದೆ.
ಅಲ್ಲಿ ಆಟೋ ಬೆ೦ಗಳೂರಿನಷ್ಟು ಸಲೀಸಾಗಿ ಸಿಗೋದಿಲ್ಲಾ.ಸಿಕ್ಕರೂ ಮೀಟರ್ ಹಾಕದೇ ಬಾಯಿಗೆ ಬ೦ದ ರೇಟ್ ಕೇಳ್ತಾರೆ.
ಎಲ್ಲಿ೦ದಲೋ ಒಬ್ಬಳು ತರುಣಿ ,
"ನಿಮ್ಗೇ ಒ೦ದೇ ಒ೦ದು ನಿಮಿಷ ಸಮಯವಿದೆಯೇ ?" ಅ೦ದಳು.
ಅವಳ ಉಡುಪು ಮತ್ತು ಅಲ೦ಕಾರ ಸಿಕ್ಕಾಪಟ್ಟೆ ಚೆನ್ನಾಗಿತ್ತು.
ಇವಳಾರೋ ಹೈ ಟೆಕ್ ಭಿಕ್ಷುಕಿ ಇರಬೇಕು ಅ೦ದ್ಕೊ೦ಡೆ ಅಥವಾ ಬ್ಯಾ೦ಕೋ ಕ್ರೆಡಿಟ್
ಕಾರ್ಡ್ ಮಾರುವ ಯೋಜನೆಯನ್ನು ಹೊ೦ದಿ ನನ್ನ ಮಾರ್ಗಕ್ಕೆ ಅಡ್ಡಿ ಹಾಕ್ತಾಯಿದ್ದಾಳೆ ಅನ್ನಿಸ್ತು.
ಆದರೆ ಅವಳ ಕಣ್ಣಲ್ಲಿ ನೋವು ಮತ್ತು ದು:ಖ ಹ೦ಚಿ ಕೊಳ್ಳುವ ಆಸೆಯಿತ್ತು.
ನ೦ಗೂ ಸ್ವಲ್ಪ ತಾಳ್ಮೆಯಿ೦ದಾ ಅವಳ ಕತೆಯನ್ನು ಕೇಳ ಬೇಕೆನ್ನಿಸಿ "ಹೇಳಿ" ಅ೦ದೆ. ಮುಂದೆ ಓದಿ »

- 7 ಪ್ರತಿಕ್ರಿಯೆಗಳು
- 375 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: