ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಪರಿಧಿಯಿಂದ ಹೊರಗೆ ಹೋದ ವ್ಯಾಸ

July 25, 2008 - 12:19am — narendra
ಎಂ.ವ್ಯಾಸ

"ನಿಮ್ಮನ್ನು ಸುರಿಯುತ್ತಿರುವ ಮಳೆಯಲ್ಲಿ ಕಾಣಬೇಕೆಂದಿದೆ ನನಗೆ" ಎಂದಿದ್ದರು ಜಯಂತ್ ಕಾಯ್ಕಿಣಿ, ಎಂ. ವ್ಯಾಸರಿಗೆ. ನೀಲಿ ಮಳೆ, ಬೊಗಸೆಯಲ್ಲಿ ಮಳೆ ಮತ್ತು ಮುಂಗಾರು ಮಳೆಯ ಜಯಂತ ವ್ಯಾಸರನ್ನು ಕಾಣಲೆಂದೇ ಮಂಗಳೂರಿಗೆ ಬಂದು, ಇಲ್ಲಿಂದ ಕಾಸರಗೋಡಿಗೆ ಹೋಗಿ, ಆ ವರೆಗೆ ಎಂದೂ ಕಾಣದಿದ್ದ ವ್ಯಾಸರನ್ನು, ಅವರ ಫಾರೆಸ್ಟ್ ಗ್ರೀನ್ ಕಾರನ್ನು ಕಾಯುತ್ತ ನಿಂತ ಘಳಿಗೆ ನೆನಪಾಗುತ್ತದೆ.

ವ್ಯಾಸರು ಬಂದರು. ತಣ್ಣಗಿನ ಏರಿಳಿತಗಳಿಲ್ಲದ ದನಿ, ಕೃಶ ಕಾಯ, ಭಾವನೆಗಳ ಸುಳಿವುಗೊಡದ ಮುಖ. ಇದು ಕಣ್ಣಿಗೆ ಕಾಣುವ ವ್ಯಾಸರಾದರೆ ಅವರ ಅಂತರಂಗ ಬಲ್ಲವರೇ ಬಲ್ಲರು.

ವ್ಯಾಸರ ಮನೆಯಲ್ಲಿ ಒಂದಿಡೀ ಹಗಲು, ರಾತ್ರಿ ತಂಗಿದ್ದು ಹರಟಿ ಹರಟಿ ಸುಸ್ತಾಗಿ ಮಲಗಿ ಮತ್ತೆ ಮುಂಜಾನೆ ಇನ್ನೂ ಮಂಜು ಬೀಳುತ್ತಿರುವ ಹೊತ್ತಲ್ಲೇ ಎದ್ದು ಬಿಸಿ ಬಿಸಿ ಕಾಫಿ ಕುಡಿದು ಫಸ್ಟ್ ಬಸ್ಸಿಗೇ ಹೊರಟು ನಿಂತಿದ್ದು, ಕಾಸರಗೋಡಿನ ಪೇಟೆ ತನಕ ವ್ಯಾಸರು ಬಂದು ಬೀಳ್ಕೊಟ್ಟಿದ್ದು, ಅವರ ಪತ್ನಿ ನಮಗಾಗಿ ಮಾಡಿ ಉಣಿಸಿದ ವಿಶೇಷ ಭೋಜನ, ಮೊದಲಿಂದ ಜೊತೆಗಿದ್ದ ಮುರಳಿಕೃಷ್ಣ ಮತ್ತು ಮೋಹನ, ಇವರ ತಾತನವರಾದ ಶೇಣಿಯವರನ್ನು ಕಂಡಿದ್ದು.... ಜಯಂತರ ತಂದೆ ಗೌರೀಶರು ಈಗಿಲ್ಲ ಎಂದು ತಿಳಿದಾಗ ಮಂಕಾದ ಶೇಣಿಯವರು ಮುಂದೆ ಒಂದೇ ವಾರದಲ್ಲಿ ಮರೆಯಾಗಿ ಹೋಗಿದ್ದು, ಆಸುಪಾಸು ಎಂದು ಹೋಗಿ ಭೇಟಿ ಮಾಡಿದ ಕವಯಿತ್ರಿ ವಿಜಯಲಕ್ಷ್ಮಿ..  ಮುಂದೆ ಓದಿ »

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • 4 ಪ್ರತಿಕ್ರಿಯೆಗಳು
  • 131 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!

July 23, 2008 - 3:42pm — harshavardhan v...
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಳಿ ಇರುವ ತಂಪು ಪಾನೀಯ ಕಂಪನಿ ಹಾಗು ತಡೆ ಗೋಡೆ. ಆ ಗೋಡೆಗೆ ‘ಸೂಚನಾ’ ಫಲಕ! ಚಿತ್ರ: ಹರ್ಷವರ್ಧನ ಶೀಲವಂತ

ನಮ್ಮ ಧಾರವಾಡ ಎರಡು ಸಂಗತಿಗಳಿಗಾಗಿ ತುಂಬ ಪ್ರಸಿದ್ಧ. ಒಂದು ಧಾರವಾಡದ ಲೈನ್ ಬಜಾರದ ಬಾಬುಸಿಂಗ ಠಾಕೂರ್ ಅವರ ಪೇಢ ರುಚಿಗಾಗಿ. ಮತ್ತೊಂದು ಬೆಳಗಾವಿ ರಸ್ತೆಯ..ಹುಚ್ಚರ ಆಸ್ಪತ್ರೆಗಾಗಿ!

ಆಕಾಶವಾಣಿಯ ಅಧಿಕಾರಿಯಾಗಿದ್ದ ಹಿರಿಯ ಸಾಹಿತಿ, ಹರಟೆಗಾರ ಹಾಗು ಬೇಂದ್ರೆ ಅವರ ‘ಗೆಳೆಯರ ಗುಂಪಿ’ನ ಪ್ರಮುಖ ಸದಸ್ಯರಾಗಿದ್ದ ದಿವಂಗತ ಎನ್ಕೆ ಒಂದು ಮಾತನ್ನು ಸದಾ ಹೇಳುತ್ತಿದ್ದರು. ಅದು ವರಕವಿ ಬೇಂದ್ರೆ ಅವರ ಹಾಸ್ಯಪ್ರಜ್ನೆ ಬಿಂಬಿಸುತ್ತಿತ್ತು.

‘ಧಾರವಾಡದಾಗ ಯಾರರೆ ನಿಂತು ಕಲ್ಲು ಒಗದರ(ಹೂವಿನ ಬದಲಾಗಿ!) ಅದು, ಕವಿ ಮನೆ (ಅಥವಾ ತಲೆ!), ಸಾಹಿತಿ, ನಾಟಕಕಾರ ಮತ್ತು ಸಂಗೀತಗಾರನ ಮೇಲೆ ಬೀಳುವುದು ಗ್ಯಾರಂಟಿ’ ..ಕವಿ ಮಾತಿಗೆ ವಿರಾಮ ಕೊಡುವ ಮೊದಲೇ ಯಾರು ಅಡ್ಡ ಪ್ರಶ್ನೆ ಕೇಳಿದರು. ‘ಸರ್..ಹುಚ್ಚರ ಮ್ಯಾಲೂ..?’  ಮುಂದೆ ಓದಿ »

  • ಪ್ರಚಲಿತ
~.~
  • 2 ಪ್ರತಿಕ್ರಿಯೆಗಳು
  • 187 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಸಿಟಿಯ ಮೇಲಣ ಗುಳ್ಳೆ

July 23, 2008 - 2:25pm — anivaasi

ಸಿಡ್ನಿಯಲ್ಲಿ ಹಾಡುತ್ತಲೋ, ಯಾವುದಾದರೂ ವಾದ್ಯ ನುಡಿಸುತ್ತಲೋ, ಅಥವಾ ವೇಷ ಹಾಕಿಕೊಂಡೋ, ಸರ್ಕಸ್ ಮಾಡುತ್ತಲೋ ಬಸ್ಕ್ ಮಾಡುವುದು ಸದಾ ನೋಡುತ್ತೇವೆ.  ಮುಂದೆ ಓದಿ »

~.~
  • anivaasi ರವರ ಬ್ಲಾಗ್
  • 10 ಪ್ರತಿಕ್ರಿಯೆಗಳು
  • 252 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಜಯಂತ್ ಕಾಯ್ಕಿಣಿಯವರ ಕಥಾಲೋಕ - ಬಣ್ಣದ ಕಾಲು

July 22, 2008 - 10:53pm — narendra
Bannada Kaalu.jpg

`ಚಂದ್ರಶಾಲೆ' ಕತೆ ಈ ಸಂಕಲನದ ಮೊದಲ ಕತೆ. ತೇರಿನ ದಿನ ಬಳೆಯಂಗಡಿಯ ಬಸವಣ್ಣಿಯ ಜತೆಗೆ ಕುಂಕುಮದಂಗಡಿಯ ವಿಶ್ವೇಶ್ವರಯ್ಯ ನಡೆಸುವ ಪ್ರೇಮ, ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಾಬಲನ ಮನಸ್ಸು ತುಂಬಿಕೊಂಡ ಸರಸ್ವತಿ, ತೇರು ಎಳೆಯುವ ಸಂಭ್ರಮದ ಗದ್ದಲ, ಗಡಿಬಿಡಿಗಳು, ತೇರನ್ನೆ ಮನೆ, ಗಂಡ ಎಲ್ಲವೂ ಮಾಡಿಕೊಂಡಿರುವ ಕಾಯಕ್ಕನ ವಿಪರೀತಗಳು ಎಲ್ಲ ಸೇರಿ ನೀಡುವ ಚಿತ್ರ ಗಾಢವಾಗಿ ಕಾಡುವಂತಿದ್ದರೂ ಕತೆಯಾಗಿ ಈ ಎಲ್ಲ ನೋಟಗಳು ಕೂಡಿಕೊಳ್ಳುವ ಏಕಸೂತ್ರದ ಪ್ರತಿಮೆ ತೇರು. ತೇರು ಹಬ್ಬದ ಸಂಭ್ರಮವನ್ನು ತರುವುದರ ಜೊತೆಗೇ, ಊರಿನ ಜನರ ಸುಪ್ತ ಅಥವಾ ಅದುಮಿ ಹಿಡಿಯಲ್ಪಟ್ಟ ಉನ್ಮಾದ, ಹುಚ್ಚು, ಸುಖದ, ಸಂಭ್ರಮದ ಅಪೇಕ್ಷೆ, ಕಳ್ಳ ಪ್ರೇಮದ ನಿರೀಕ್ಷೆ ಎಲ್ಲಕ್ಕೂ ಕಾರಣವಾಗುತ್ತಿರುತ್ತದೆ. ಕರ್ತವ್ಯದ ನೊಗವನ್ನು ಸ್ವಲ್ಪ ಸಡಿಲಿಸಿ ನಗಲು ಕಾರಣ ಹುಡುಕುತ್ತಿರುವ ಮನುಷ್ಯನಿಗೆ ತೇರು ಒದಗಿಬರುವುದು ಹೀಗೆ. ಚಂದ್ರಶಾಲೆಯ ಚಿತ್ರ ಮತ್ತು ತೇರಿನೊಂದಿಗಿನ ಕಾಯಕ್ಕನ ಸಂಬಂಧ ಸೂಕ್ಷ್ಮವಾಗಿ ಇಣುಕಿ ನೋಡುವ ಅಂಶಗಳು ಅಮೂರ್ತವಾಗಿಯೇ ಉಳಿಯುವುದು ಈ ಕತೆಯ ವಿಶೇಷ.  ಮುಂದೆ ಓದಿ »

  • ಪುಸ್ತಕ ವಿಮರ್ಶೆ
~.~
  • ೧ ಪ್ರತಿಕ್ರಿಯೆ
  • 137 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?

July 22, 2008 - 2:57pm — hpn

ರಾಜ್ಯ ಸರಕಾರ ಈ ಸಾಲಿನ ಬಜೆಟ್ಟಿನಲ್ಲಿ ರೈತರಿಗೆ ಉಚಿತ ವಿದ್ಯುತ್ ಘೋಷಿಸಿದೆ. ರೈತರಿಗೆ ಇದು ಸರಕಾರದ ಬಹುದೊಡ್ಡ ಬಳುವಳಿ ಎನ್ನಲಾಗುತ್ತಿದೆ. ಎಷ್ಟು ದೂರದೃಷ್ಟಿಯುಳ್ಳ ಬಳುವಳಿ ಇದು? ನಿಜವಾಗಲೂ ಕಾಳಜಿಯ ಬಳುವಳಿಯೇ? ಎಂದು ಈ ಲೇಖನದಲ್ಲಿ ಪ್ರಶ್ನಿಸುತ್ತಾರೆ ಸುಗ್ಗಿ.  ಮುಂದೆ ಓದಿ »

  • ಪ್ರಚಲಿತ
~.~
  • 4 ಪ್ರತಿಕ್ರಿಯೆಗಳು
  • 200 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
123456789…ಮುಂದಿನ ›ಕೊನೆಯ »
Syndicate content Syndicate content

ಲೇಖಕರು

Anonymous User's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಹಸಿವಾದಾಗ

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:30pm
  • vikashegde
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 25, 2008 - 3:28pm
  • vikashegde
    ಉ: ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
    July 25, 2008 - 3:26pm
  • mahesha
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:25pm
  • mahesha
    ಉ: ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
    July 25, 2008 - 3:23pm
  • rashmi_pai
    ಉ: ಮೌನ
    July 25, 2008 - 3:13pm
  • roshan_netla
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 3:08pm
  • kannadakanda
    ಉ: ಕನಸು, ಕಣಸು
    July 25, 2008 - 2:57pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
ಇನ್ನಷ್ಟು


ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator