ಭಾರತದ ಮಾಜಿಪ್ರಧಾನಿ , ಶ್ರೀ. ಚಂದ್ರಶೇಖರ್ ನಿಧನ !

ಜುಲೈ, ೮, ೨೦೦೭ ರಂದು ರವಿವಾರ ಬೆಳಿಗ್ಯೆ ಮರಣಹೊಂದಿದ, ಭಾರತದ ಮಾಜಿ ಪ್ರಧಾನಮಂತ್ರಿ, ಶ್ರೀ. ಚಂದ್ರಶೇಖರ್, ಒಬ್ಬ ಸಮಾಜವಾದಿ, ಜಾತ್ಯಾತೀತ ರಾಷ್ಟ್ರವಾದಿ, ವ್ಯಕ್ತಿಗತರಾಜಕಾರಣದ ಪ್ರಬಲ ವಿರೋಧಿ, ಉದಾರೀಕರಣ ನೀತಿಯ ವಿರೋಧಿ; ಹೀಗೆ, ರಾಷ್ತ್ರಹಿತಕ್ಕೆ ಧಕ್ಕೆ ಬರುವ ಎಲ್ಲ ನೀತಿಗಳನ್ನೂ ದಿಢೀರನೆ ಖಂಡಿಸಿ ತಮ್ಮ ಅಭಿಪ್ರಾಯವನ್ನು ಕೊಡುವ, ಸಾಧ್ಯವಾದರೆ, ಅದಕ್ಕೆ ಸ್ಪಂದಿಸುವ ಜನರನ್ನು ತಯಾರಿಸುವ ರುವಾರಿ, ಶ್ರೀ. ಚಂದ್ರಶೇಖರ್ ! ಅವರಿಗೆ ೮೦ ವರ್ಷವಾಗಿ, ಒಂದು ವಾರವೂ ಕಳೆದಿಲ್ಲ. ಸುಮಾರು ೩ ತಿಂಗಳ ಹಿಂದೆಯೇ ಆಸ್ಪತ್ರೆಗೆ ದಾಖಲಾಗಿದ್ದ ಅವರು, " ಕ್ಯಾನ್ಸರ್ " ಕಾಯಿಲೆಯಿಂದ ಬಳಲುತ್ತಿದ್ದರು. 'ಮಲ್ಟಿಪಲ್ ಮೈಲೋಮ,' [ರಕ್ತರೋಗದಿಂದ] ಉಲ್ಬಣಗೊಂಡು, ಕೊಯುಸಿರೆಳೆದರು. ಮೃತರಿಗೆ, ಇಬ್ಬರು ಮಕ್ಕಳಿದ್ದಾರೆ.
ಜುಲೈ ೧, ೧೯೨೭ ರಲ್ಲಿ ಹುಟ್ಟಿದ, ಚಂದ್ರಶೇಖರ್ ಬಲ್ಲಿಯಾ ಜಿಲ್ಲೆ, ಪೂ. ಉತ್ತರ ಪ್ರದೇಶದ 'ಇಬ್ರಾಹಿಮ್ ಪತ್ತಿ,'ಗೆ ಸೇರಿದವರು. ಇಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗಲೇ, ೧೯೫೦ ರಲ್ಲಿ, 'ಸೋಷಲಿಸ್ಟ್ ಪಾರ್ಟಿ ಆಫ್ ಇಂಡಿಯದ,' ಸದಸ್ಯರಾದರು. [೨೦೦೪]ನೆಯ ಇಸವಿಯೂ ಸೇರಿದಂತೆ, ಒಟ್ಟು ೮ ಬಾರಿ ಮಹಾಚುನಾವಣೆಯಲ್ಲಿ ಗೆದ್ದಿದ್ದರು.
೧೯೯೦ ರಲ್ಲಿ ನವೆಂಬರ್ ೧೦ ರಿಂದ, ೧೯೯೧ ರ ಮಾರ್ಚ್ ೬ ರ ತನಕದ, ಅಲ್ಪ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಸಹಾಯದಿಂದ ಭಾರತದ ಪ್ರಧಾನಿಯಾಗಿದ್ದರು. ಕಾಂಗ್ರೆಸ್, ಬಜೆಟ್ ಅಧಿವೇಶನದ ಸಮಯದಲ್ಲಿ ತನ್ನ ಸಹಾಯವನ್ನು ವಾಪಸ್ ತೆಗೆದುಕೊಂಡಿತ್ತು. ಸರ್ಕಾರದ ಯಾವ ಹುದ್ದೆಯಲ್ಲಿಯೂ ಕೆಲಸಮಾಡದೆ ದಿಢೀರನೆ, ಒಮ್ಮೆಲೇ, ರಾಷ್ಟ್ರದ ಪ್ರಧಾನಿಯ ಪದವಿಗೇರಿದ ಪ್ರಥಮ ವ್ಯಕ್ತಿಯೆಂಬ ಹೆಗ್ಗಳಿಕೆ, ಅವರದು !
೧೯೫೦, ರ ದಶಕದಲ್ಲಿ, ಆಚಾರ್ಯ ನರೇಂದ್ರ ದೇವ್ ಅವರನ್ನು ರಾಜಕೀಯಕ್ಕೆ ತಂದರು. " ಪ್ರಜಾಸೋಸಿಲಿಷ್ಟ್ ಪಾರ್ಟಿ, " ಸೇರಿದರು. ಅಲ್ಲಿಂದ ೧೯೬೫ ರಲ್ಲಿ ಕಾಂಗ್ರೆಸ್ಸಿಗೆ, ಸೇರಿದರು. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಹಿತ, ಮೋಹನ್ ಧಾರಿಯ, ರಾಮ್ ಧನ್, ರಂತಹವರ ಜೊತೆ ಕೂಡಿ, ಸಮಾಲೋಚಿಸಿ, ಸಮಾಜವಾದದ ಕೆಲವು ಕಾರ್ಯಕ್ರಮಗಳನ್ನು ಅಳವಡಿಸುವಂತೆ ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. ಶೋಷಿತರ ಒಳತಿಗಾಗಿ ಲೋಕಸಭೆಯಲ್ಲಿ ಕ್ರಮ ತೆಗೆದುಕೊಳ್ಳಲು ಒತ್ತಾಯಮಾಡಿದರು. 'ಯಂಗ್ ಟರ್ಕ್', ಎಂಬ ಗುಂಪಿಗೆ ನಾಯರಾಗಿ ಸೇರಿದ ಅವರು, " ಏಕ ಸ್ವಾಮ್ಯಕೈಗಾರಿಕಾ ಗುಂಪಿನ, " ವಿರೋಧಿ. ೧೯೭೫ ರಲ್ಲಿ ಕಾಂಗ್ರೆಸ್ ಪಾರ್ಟಿಯಲ್ಲಿದ್ದಾಗಲೇ, ಚಂದ್ರಶೇಖರ್ ರವರ ಕೆಲವು ಕಾರ್ಯವಿಧಾನಗಳನ್ನು ಗಮನಿಸಿ, ಶ್ರೀಮತಿ ಇಂದಿರಾಜಿಯವರು ಅವರನ್ನು ಜೈಲಿಗೆ ಕಳಿಸಿದರು. ಇವರ ಜೊತೆಗೆ ಶ್ರೀ. ಜಯಪ್ರಕಾಶ್ ನಾರಾಯಣ್, ಶ್ರೀ . ಮೊರಾರ್ಜಿ ದೇಸಾಯ್, ಶ್ರೀ. ಅತುಲ್ ಬಿಹಾರಿ ವಾಜ್ ಪಾಯ್, ಶ್ರೀ. ಎಲ್, ಕೆ ಅದ್ವಾನಿ,ಯವರೂ ಇದ್ದರು. ಕಾಂಗ್ರೆಸ್ ನ ಈ ನೀತಿ, ಹೊಸರಾಜಕೀಯ ಸನ್ನಿವೇಷಕ್ಕೆ ನಾಂದಿಯಾಯಿತು.
೧೯೭೭ ರ ಮಹಾಚುನಾವಣೆಯಲ್ಲಿ ಕಾಂಗ್ರೆಸ್ಸಿನ ಇತಿಹಾಸದಲ್ಲೆ ಪ್ರಥಮ ಬಾರಿ, ಅದು ಅಪಜಯವನ್ನು ಕಂಡಿತು. " ಜನತಾಪಕ್ಷ", ಪ್ರಚಂಡ ವಿಜಯವನ್ನು ಕಂಡಿತು. ಚಂದ್ರಶೇಖರ್ ಆಗ ಯಾವ ಮಂತ್ರಿಪದವಿಗೂ ಆಶಿಸದೆ, ಪಕ್ಷದ ಅಧ್ಯಕ್ಷರಾದರು ಅಷ್ಟೆ. ಗ್ರಾಮೀಣ ಭಾರತದ ಜಟಿಲ ಸಮಸ್ಯೆಗಳ ಗಮನಸೆಳೆಯಲು, ೧೯೮೩ ರಲ್ಲಿ, ದೆಹಲಿಯಿಂದ ಕನ್ಯಾಕುಮಾರಿಯವರೆಗೆ 'ಪಾದಯಾತ್ರೆ,' ಮಾಡಿದ್ದರು. ೧೯೮೪ ರಲ್ಲಿ, ಶ್ರೀಮತಿ ಇಂದಿರಾಜಿಯವರ ಹತ್ಯೆಯ ನಂತರ ತೆರವಾದ ಸ್ಥಳಕ್ಕೆ, ಅಭ್ಯರ್ಥಿಯನ್ನಾಗಿ ರಾಜೀವ್ ಗಾಂಧಿಯವರನ್ನು ನಿಲ್ಲಿಸಲಾಯಿತು. ಇಂದಿರಾಜಿಯವರ ಹತ್ಯೆಯಿಂದ ರಾಷ್ಟ್ರದ ಜನತೆ ರೋಸಿಹೋಗಿತ್ತು. ತಾಯಿಯ ಅಕಾಲ ಮರಣದ ಅನುಕಂಪದ ಮತಗಳ ಸಹಾಯದಿಂದ, ರಾಜೀವ್ ಗಾಂಧಿಯವರು ಗೆದ್ದರು.
೧೯೮೯ ರಲ್ಲಿ , ಅವರ ಪಾರ್ಟಿ, ಜನತಾದಳದೊಡನೆ ವಿಲೀನಗೊಂಡಾಗಲೂ, ಅವರು ಅಧ್ಯಕ್ಷರಾಗಿಯೇ ಇದ್ದರು. ೧೯೮೯ ರಲ್ಲಿ ದೆಹಲಿಯಲ್ಲಿ ಸಂಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ, ಶ್ರೀ. ವೀ. ಪಿ. ಸಿಂಗ್ ಪ್ರಧಾನ ಮಂತ್ರಿಗಳಾಗಿ ಆಯ್ಕೆಯಾದರು. ಆ ಸಮಯದಲ್ಲಿ ಮಾತ್ರ, ಚಂದ್ರಶೇಖರ್ ತಾವೇ ಪ್ರಧಾನಿಯಾಗಲು ಇಚ್ಛಿಸಿದ್ದರು. ನಂತರ, ಮೀಸಲಾತಿಯ ಕೆಲವು ಅಂಶಗಳ ಬಗ್ಗೆ ವಿರೋಧ ವ್ಯಕ್ತಪಡಿಸಿ, ಆಗ ದೇಶದಾದ್ಯಂತದ ನಡೆಯುತ್ತಿದ್ದ ಅಖಿಲಭಾರತೀಯ ಮೀಸಲಾತಿ-ವಿರೋಧ ಪ್ರದರ್ಶನವನ್ನು ಸಮರ್ಥಿಸಿದಾಗ, ವೀ. ಪಿ. ಸಿಂಗ್ ಪಾರ್ಟಿಯಜೊತೆ, ಘಟಬಂಧನವಾಯಿತು.
ತಮ್ಮ ಅನಿಸಿಕೆಗಳನ್ನು ಸ್ಪಷ್ಟವಾಗಿ, ನಿರ್ದಾಕ್ಷಿಣ್ಯವಾಗಿ, ವಿವರಿಸುವ, ಖಂಡಿತವಾದಿಯಾದ ಶ್ರೀ ಚಂದ್ರಶೇಖರ್, ಜನತೆಯನ್ನುದ್ದೇಶಿಸಿ ಮಾತನಾಡಿದಾಗ, ಪ್ರಂಚಂಡ ಜನಸ್ತೋಮ ಅವರ ಭಾಷಣಕ್ಕಾಗಿ ಕಾದಿರುತಿತ್ತು. ಭಾರತ ದೇಶದಾದ್ಯಂತ ಜನಪ್ರಿಯತೆಯನ್ನು ಸಾಧಿಸಿದ್ದರು. ಅನವರತ ಹೋರಾಟಗಳಲ್ಲಿ ತಮ್ಮನ್ನು ದುಡಿಸಿಕೊಂಡು ದೇಹಕ್ಕೆ ಆಲಸ್ಯಮಾಡಿಕೊಂಡಿದ್ದರು. ಇತ್ತೀಚೆಗೆ, ಹಾಸಿಗೆ ಹಿಡಿದಿದ್ದರು. ದೇಶಕ್ಕಾಗಿ, ಅದರ ಏಳಿಗೆಗಾಗಿ, ತಮ್ಮ ನಿಸ್ವಾರ್ಥ ಬದುಕನ್ನು ಸಾಹಿಸಿ, ಎಲ್ಲರಿಗೂ ಮಾದರಿಯಾಗಿ, ನಮ್ಮನ್ನು ಅಗಲಿದ, ಚಂದ್ರಶೇಖರ್ ಎಂದೆಂದಿಗೂ ಜನಮನದಲಿ ಸ್ಥಾಪಿತರಾಗಿರುತ್ತಾರೆ ! ಅವರ ಆತ್ಮಕ್ಕೆ ಶಾಂತಿಯಾಗಲಿ.
ಭಾರತ ಸರ್ಕಾರ, ಶ್ರೀ ಚಂದ್ರಶೇಖರ್ ರವರ ಗೌರವಾರ್ಥವಾಗಿ, ರಾಷ್ಟ್ರದಾದ್ಯಂತ, ೭ ದಿನಗಳ ಶೋಕವನ್ನು ಘೋಷಿಸಿದೆ. ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು. ಇಂದು ಸೋಮವಾರ, ಸಾಯಂಕಾಲ ೪ ಗಂಟೆಗೆ, ಅವರ ಪಾರ್ಥಿವ ಶರೀರವನ್ನು ಸಕಲ ಗೌರವಗಳೊಂದಿಗೆ ದೆಹಲಿಯ ಬಳಿಯ ಘಾಟಿನಲ್ಲಿ ಸಮಾಧಿಮಾಡಲಾಗುವುದು.

- Login or register to post comments
- 458 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಶಂಕರ್ಸ್ ವೀಕ್ಲಿಯ ಶ್ರೀ. ಶಂಕರ್ ಕೇಶವ್ ಪಿಳ್ಳೆ !
- 'ಕರ್ಣಾಟಕ ಭಾಗವತ’ ಗ್ರಂಥದ ಬಿಡುಗಡೆ ಸಮಾರಂಭ -ಮೊದಲು ಮೈಸೂರು, ಬೆಂಗಳೂರು, ಧಾರವಾಡ, ಕೊನೆಗೆ ಶಿವಮೊಗ್ಗೆಯಲ್ಲಿ !
- ಚರಿತ್ರೆಯ ಕಾರ್ಮೋಡಗಳಲ್ಲಿ ಮರೆಯಾದ "ಚಂದ್ರ" - ಚಂದ್ರಶೇಖರ್
- ಪುರಂದರದಾಸರ ೪೪೩ ನೆಯ ಜಯಂತಿಯನ್ನು ಮುಂಬೈನ 'ಕನ್ನಡ ಸಂಘ,' ಇಂದು, ಆಚರಿಸುತ್ತಿದೆ !
- 'ಕರ್ಣಾಟಕ ಭಾಗವತ’ ದ ’ವಿಶ್ವಾರ್ಪಣಾ ಸಮಾರಂಭ,” ಮೈಸೂರು ನಗರದಲ್ಲಿ. ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ !


RSS: