ಕುಮಾರಿ. ವರ್ಷಗೋಪಿನಾಥ್, ಮತ್ತು ರೇನ ಸಾಲ್ವಿ, ಮನಿಲದ ವಿಮಾನಪೈಲೆಟ್ ಪ್ರಶಿಕ್ಷಣದಲ್ಲಿ ಅಸುನೀಗಿದರು !

ಕುಮಾರಿ. ವರ್ಷಗೋಪಿನಾಥ್, ಮತ್ತು ರೇನ ಸಾಲ್ವಿ, ಮನಿಲದ ವಿಮಾನಪೈಲೆಟ್ ಪ್ರಶಿಕ್ಷಣದಲ್ಲಿ ಅಸುನೀಗಿದರು.
೧೮ ವರ್ಷದ ವರ್ಷಗೋಪಿನಾಥ್, ಕೇರಳದ ತಿರುವನಂತಪುರದವರು. ತಂದೆ ಗೋಪಿನಾಥ್ , ಈ ಅಸ್ತಿರ ದಿನಗಳಲ್ಲಿ ರಸ್ತೆಯಲ್ಲಿ ಹೋಗುವ ಜನರೇ ಒಮ್ಮೊಮ್ಮೆ, ಗಾಡಿ ಬಂದು ಡಿಕ್ಕಿ-ಹೊಡೆದು ಸಾಯುತ್ತಾರೆ. ಇದನ್ನು ನಾವು ಕಂಡಿದ್ದೇವೆ. " ಆದರೆ ನಮ್ಮ ಮಗಳು ವಿದೇಶಕ್ಕೆ ಹೋಗಿ ಒಂದು ದಾಖಲೆಯನ್ನೇ ನಿರ್ಮಿಸಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾಳೆ, " ಎಂದು ವರ್ಷಳ ತಂದೆ-ತಾಯಿಗಳು ಹೆಮ್ಮೆಯಿಂದ ನುಡಿದು, ಸಮಾಧಾನ ಪಟ್ಟುಕೊಂಡರು.
೨೪ ವರ್ಷ ಪ್ರಾಯದ, ರೀನ ಸಾಲ್ವಿಯವರು, ಮುಂಬೈನ ಡೊಂಬಿವಲಿಯವರು. ತಂದೆ ಕೇಟರಿಂಗ್ ವಿಭಾಗದಲ್ಲಿದ್ದಾರೆ. ಆದರೆ, ಅವರು ಮಗಳಿಗಾಗಿ ಲಕ್ಷಾಂತರ ರೂಪಾಯಿಗಳ ಸಾಲಮಾಡಿಕೊಂಡಿದ್ದಾರೆ. ಮತ್ತೆ ೪ ಜನ ಹೆಣ್ಣುಮಕ್ಕಳು, ಮತ್ತು ಒಬ್ಬ ಮಗನನ್ನು ಓದಿಸಿಮುಂದೆ ತರುವ ಗುರುತರ ಜವಾಬ್ದಾರಿ ಬೇರೆ ಇದೆ.
ನಮ್ಮ ದೇಶದ ಮೃತ ಪೈಲೆಟ್ ಹುಡುಗಿಯರಿಗೆ, ನಮ್ಮ ಗೌರವಪೂರ್ಣ ಶ್ರದ್ದಾಂಜಲಿಗಳು.

- Login or register to post comments
- 448 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: