ಪ್ರತಿಭಕ್ಕ, ಈಗ ನಮ್ಮ ಭಾರತದೇಶದ ರಾಷ್ಟ್ರಾಧ್ಯಕ್ಷೆ !

ಪ್ರತಿಭಕ್ಕ, ಈಗ ನಮ್ಮ ಭಾರತದೇಶದ ರಾಷ್ಟ್ರಾಧ್ಯಕ್ಷೆ !
ಅಕ್ಕನವರು, ಸುಮಾರು ೩ ಲಕ್ಷ ಓಟುಗಳ ಭರ್ಜರಿ ಅಂತರದ ಗೆಲುವಿನಿಂದ ನಮ್ಮ ದೇಶದ ೧೩ ನೆಯ ರಾಷ್ಟ್ರಪತಿಯಾಗಿ [ರಾಷ್ಟ್ರಾಧ್ಯಕ್ಷೆಯಾಗಿ], ಚುನಾಯಿಸಲ್ಪಟ್ಟರು. ಚುನಾವಣೆಯ ಫಲಿತಾಂಷದ ಬಂದನಂತರ, ಸೋಲನ್ನೊಪ್ಪಿಕೊಂಡ ಉಪರಾಷ್ಟ್ರಾಧ್ಯಕ್ಷ, ಶ್ರೀ ಭೈರವ ಸಿಂಗ್ ಶಿಖಾವತ್ ರವರು, ಕೂಡಲೇ ತಮ್ಮ ಪದವಿಗೆ ತ್ಯಾಗಪತ್ರವನ್ನು ಮಂಡಿಸಿದ್ದಾರೆ. ಬುಧವಾರದಂದು ಶ್ರೀಮತಿ ಪಾಟೀಲರು ತಮ್ಮ ಹೊಸಪದವಿಯನ್ನು ಸ್ವೀಕರಿಸುವರು.
ರಾಷ್ಟ್ರದ ಎಲ್ಲಾ ಜನತೆಯ ಪರವಾಗಿ, ಮತ್ತು ನಮ್ಮ ಎಲ್ಲಾ ಸಂಪದಿಗರ ಪರವಾಗಿ, ನಾವೆಲ್ಲಾ ನಮ್ಮ ಪ್ರತಿಭಕ್ಕನವರನ್ನು ಪ್ರೀತಿಯಿಂದ, ಗೌರವಾದರಗಳಿಂದ ಸ್ವಾಗತಿಸುತ್ತಿದ್ದೇವೆ. ಅವರ ೫ ವರ್ಷಗಳ ರಾಷ್ಟ್ರಪತಿಯ ಕಾರ್ಯಾವಧಿಯಲ್ಲಿ, ಭಾರತದೇಶದ ಗೌರವ, ಘನತೆಗಳು ಮುಗಿಲನ್ನು ಮುಟ್ಟಲಿ !
ಆವರಿಗೆ ಆಯುರಾರೋಗ್ಯಗಳನ್ನು, ದಯಾಮಯನಾದ ಭಗವಂತನು, ಕರುಣಿಸಲೆಂದು ಹಾರೈಸುತ್ತೇವೆ.
ಪ್ರತಿಭಕ್ಕನವರ ಪೂರ್ವವೃತ್ತಾಂತ :
ಹಿಂದಿನ ರಾಷ್ಟ್ರಾಧ್ಯಕ್ಷ, ಡಾ. ಅಬ್ದುಲ್ ಕಲಾಂರು ವಿಜ್ಞಾನಿಯಾದರೆ, ಪ್ರತಿಭಾಪಾಟೀಲ್ ರವರು ಒಬ್ಬ ಪಕ್ಕಾ ರಾಜಕೀಯ ಧುರೀಣರು. ರಾಜಕೀಯದಲ್ಲಿ ಚೆನ್ನಾಗಿ ನುರಿತಿದ್ದಾರೆ. ಮಹಾರಾಷ್ಟ್ರದಂತಹ ಪ್ರಗತಿಪರ ರಾಜ್ಯದ ಮುಂಬೈನಗರದಲ್ಲಿ ಅವರು ಹಲವಾರು ವರ್ಷಗಳಿಂದ ಅನೇಕ ಜನಕಲ್ಯಾಣ ಮಂತ್ರಿಪದವಿಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದನ್ನು ಅವರ 'ಬಯೋಡೇಟ', ನೋಡಿದರೆ ಅರ್ಥವಾಗುತ್ತದೆ.
ಮಹಿಳೆಯಾದ್ದರಿಂದ ದೇಶದ ಆಗುಹೋಗುಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಸ್ಪಂದಿಸುವಾಗ ಒಂದು ಮಾತೃತ್ವದಪ್ರೀತಿ, ವಾತ್ಸಲ್ಯ, ಮಮತೆಗಳ ಛಾಯೆಯನ್ನು ನಾವು ಅವರ ಕಾರ್ಯವಿಧಾನಗಳಲ್ಲಿ ನಿರೀಕ್ಷಿಸಬಹುದೆನ್ನಿಸುತ್ತದೆ ! ಇವೆಲ್ಲವನ್ನು ನಾವು ಭರತವರ್ಷದ ಮೊಟ್ಟ ಮೊದಲ ಮಹಿಳಾರಾಷ್ಟ್ರಾಧ್ಯಕ್ಷೆಯವರ ಸ್ಥಾನಗ್ರಹಣದ ನಂತರವೇ, ತಿಳಿಯುತ್ತೇವೆ ! ಜಲಗಾವ್ ನಂತಹ ಚಿಕ್ಕ ಹಳ್ಳಿಯಿಂದ ದೆಹಲಿಯ ರಾಷ್ಟ್ರಪತಿ ಭವನವನ್ನು ಮುಟ್ಟುವವರೆಗಿನ ಜೀವನ ಸಂಘರ್ಷ ಅತ್ಯಂತ ರೋಚಕವಾಗಿದೆ ! ಎಲ್ಲೂ ಹೆಚ್ಚಿನ ವಿವಾದಗಳಿಗೆ ಎಡೆಮಾಡಿಕೊಡದೆ, ಸದ್ದು -ಗದ್ದಲವಿಲ್ಲದೆ, ತಮ್ಮ ಕಾರ್ಯಗಳನ್ನು ನಿಭಾಯಿಸಿಕೊಂಡು ಬಂದ ಪ್ರತಿಭಕ್ಕನವರು, ಯಾವುದೇ ಜವಾಬ್ದಾರಿಯುತ ಹುದ್ದೆಯಲ್ಲಿರಲಿ, ನಮ್ಮ ಬೀ. ಡಿ. ಜತ್ತಿ, ವಸಂತರಾವ್ ನಾಯಿಕ್, ವೈ. ಬಿ. ಚವ್ಹಾನ್ ರಂತಹ ಹೆಸರಾಂತ ರಾಜಕಾರಣಿಗಳನ್ನು ನೆನೆಪಿಗೆ ತರುತ್ತಾರೆ.
ಪ್ರತಿಭಕ್ಕ, (ಅವರ ಬಾಲ್ಯದ ಹೆಸರು, ಪ್ರತಿಭಾ ಕುಮಾರಿ ಪಟೀಲ್) ಜನಿಸಿದ್ದು ೧೯, ಡಿಸೆಂಬರ್, ೧೯೩೪, ಮಹಾರಾಷ್ಟ್ರದ ಜಲಗಾಂ, ಹತ್ತಿರದ ನಾದ್ ಗಾಂ, ಎಂಬ ಹಳ್ಳಿಯ ಒಂದು ಸಾಹುಕಾರ ಪರಿವಾರದಲ್ಲಿ. ಅವರ ತಂದೆಯವರ ಹೆಸರು, ನಾರಾಯಣ ಪಗ್ಲು ರಾವ್. ಮೂಲತಃ ಅವರ ಮನೆತನದವರು ರಾಜಾಸ್ತಾನನಿಂದ ಬಂದು ಮಹಾರಾಷ್ಟ್ರದ ಜಲಗಾವ್ ನಲ್ಲಿ ವಾಸ್ತವ್ಯ ಹೂಡಿ, ಹತ್ತಿರ ಹತ್ತಿರ ಒಂದು ಶತಮಾನವೇ ಆಗಿರಬಹುದು. ಪ್ರಾಥಮಿಕ ಮಾಧ್ಯಮಿಕ ಶಾಲಾಶಿಕ್ಷಣಗಳನ್ನು ಜಲಗಾಂ ನ, ಆರ್. ಆರ್. ಸ್ಕೂಲಿನಲಿ ಮಾಡಿದರು. ತಮ್ಮ ಎಮ್. ಎ. ಡಿಗ್ರಿಯನ್ನು ಮೂಲ್ಜಿ ಜೈತ ಕಾಲೇಜ್ (ಎಮ್. ಜೆ) ನಲ್ಲಿ ಓದಿಮುಗಿಸಿದರು. "ಇಂಟರ್ ಕಾಲೇಜಿಯೇಟ್ ಭಾಷಣ ಸ್ಪರ್ಧೆ," ಗಳಲ್ಲಿ ಭಾಗವಹಿಸಿ, ಅನೇಕ ಪಾರಿತೋಷಕಗಳನ್ನು ಮೆಡಲ್ ಗಳನ್ನೂ ಗೆದ್ದಿದ್ದಾರೆ. ಇವರೊಬ್ಬ ಪ್ರಮುಖ ಟೇಬಲ್ ಟೆನ್ನಿಸ್ ಆಟಗಾರರಾಗಿ ತಮ್ಮ ಕಾಲೇಜನ್ನು ಪ್ರತಿನಿಧಿಸಿದ್ದರಂತೆ. ೧೯೬೨ ರಲ್ಲಿ ಅವರ ಕಾಲೇಜಿನಿಂದ, " ಎಮ್. ಜೆ. ಕಾಲೇಜ್ ಕ್ವೀನ್," ಎಂಬುದಾಗಿ ಚುನಾಯಿಸಲ್ಪಟ್ಟಿದರು ! ಅದೇ ವರ್ಷದಲ್ಲಿ ಅಡಿಲಾಬಾದ್ ನಲ್ಲಿ, "ಇಂಡಿಯನ್ ನ್ಯಾಷನಲ್ ಕಾಂಗ್ರೆಸ್," ಟಿಕೆಟ್ ಪಡೆದು ಅಸೆಂಬ್ಲಿ ಎಲೆಕ್ಷನಲ್ಲಿ ನಿಂತು, ಜಯಶೀಲರಾದರು. ಪ್ರತಿಭಾಪಾಟೀಲ್ ಮದುವೆಯಾದದ್ದು ಶ್ರೀ. ದೇವಿಸಿಂಗ್, ರನ್ ಸಿಂಗ್ ಶಿಖಾವತ್ ರವರ ಜೊತೆಗೆ- ೪೨ ವರ್ಷಗಳ ಹಿಂದೆ, ಜುಲೈ, ೭, ೧೯೬೫ ರಲ್ಲಿ. ಶಿಖಾವತ್ ಒಬ್ಬ ಸಂಘಟಕ, ಹಾಗೂ ಶಿಕ್ಷಣ ಪ್ರಸಾರಕ. ಕೆಲವು ವೈಯಕ್ತಿಕ ಕಾರಣಗಳಿಂದ ತಮ್ಮ ಪರಿವಾರದ ಪಾಟೀಲ್ ಉಪನಾಮವನ್ನೆ, ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಂಡಿದ್ದಾರೆ. ಈ ದಂಪತಿಗಳಿಗೆ, ಒಬ್ಬ ಮಗ ಮತ್ತು ಒಬ್ಬ ಮಗಳಿದ್ದಾರೆ.
ಪ್ರತಿಭಕ್ಕನವರು ಮೊದಲು ಸೋಶಿಯಲ್ ವರ್ಕರ್, ಆಗಿ ತಮ್ಮ ವೃತ್ತಿಯನ್ನು ಶುರುಮಾಡಿದರು. ಶ್ರೀಮತಿ ಪ್ರತಿಭಾ ದೇವಿಸಿಂಗ್ ಪಾಟೀಲ್ , ಎಮ್. ಎ ; ಎಲ್. ಎಲ್. ಬಿ ; ಎಮ್. ಜೆ. ಕಾಲೇಜ್, ಜಲಗಾಂನಲ್ಲಿ [ಮಹಾರಾಷ್ಟ್ರ] ಮತ್ತು ಗವರ್ನಮೆಂಟ್ ಲಾ ಕಾಲೇಜ್, ಬೊಂಬಾಯಿ. ಲಾ ಪದವೀಧರೆಯಾದಮೇಲೆ ಜಲಗಾವ್ ನಲ್ಲಿ ಅಡ್ವೊಕೇಟಾಗಿ ಕೆಲಸಮಯ ದುಡಿದರು.
ರಾಜಕೀಯಕ್ಷೇತ್ರದಲ್ಲಿ ಶ್ರೀಮತಿ ಪ್ರತಿಭಾ ಪಾಟೀಲರು ನಿರ್ಮಿಸಿದ ಹೆಜ್ಜೆಗುರುತುಗಳು :
ನವೆಂಬರ್, ೮, ೨೦೦೪ ರಿಂದ ರಾಜಾಸ್ಥಾನರಾಜ್ಯದ ೧೬ ನೆಯ ಗವರ್ನರ್ ಆಗಿ, ಇದುವರೆವಿಗೂ ಅಂದರೆ, ರಾಷ್ಟ್ರಪತಿಸ್ಥಾನಕ್ಕೆ ಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲುವವರೆಗೆ, ಸೇವೆಸಲ್ಲಿಸುತ್ತಿದ್ದರು. ಅವರು ರಾಜಾಸ್ಥಾನದ ಪ್ರಥಮ ಮಹಿಳಾಗವರ್ನರ್ ಕೂಡ.
1. Member of Parliament(Lok Sabha and Rajya Sabha): 1985 – 1996
Constituency: AmarAvati
2. Member of Maharashtra Legislative Assembly: 1962 – 1985
3. Deputy Minister, Public Health, Prohibition, Tourism, Housing and
Parliamentary Affairs, Govt. of Maharasthra: 1967-72
4. Cabinet Minister, Social Welfare, Govt. of Maharashtra: 1972-74
5. Cabinet Minister, Public Health and Social Welfare, Maharasthra:
1974-75
6. Cabinet Minister, Prohibition, Rehabilitation and Cultural Affairs,
Govt. of Maharashtra: 1975-76
7. Cabinet Minister, Education, Govt. of Maharashtra: 1977-78
8. Leader of Opposition, CLP(I), Govt. of Maharashtra: 1979-1980
9. Cabinet Minister, Urban Development and Housing,
Govt. of Maharashtra: 1982-85
10. Cabinet Minister, Civil Supplies and Social Welfare,
Govt. of Maharashtra : 1983-85
11. Elected to Rajya Sabha: June, 1985-90
12. Deputy Chairman, Rajya Sabha: 1986-1988
13. Chairman, Committee on Privileges, Rajya Sabha Member, Business
Advisory Committee, Rajya Sabha: 1986-88
14. Elected to 10th Lok Sabha Chairperson, House Committee, Lok
Sabha: 1991
15. Governor of Rajasthan: 8 November 2004
16. Served as the deputy chairperson of Rajya Sabha
17. Currently, the only female state governor in India, and only Woman
President of the Nation, as on now.

- Login or register to post comments
- 521 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಕಾಲು ಕೆರೆಯೋದು ಅಂದ್ರೆ ಹೀಗೆ
- marathi to be made compulsory in ICSE/CBSE schools in Maharashtra
- ಭಾರತದ ಪ್ರಥಮ ಮಹಿಳಾರಾಷ್ಟ್ರಾಧ್ಯಕ್ಷೆ- ಶ್ರೀಮತಿ ಪ್ರತಿಭಾಪಾಟೀಲ್ !
- ವಿಖ್ಯಾತ ಉದ್ಯಮಿ, ಡಾ. ನಾರಾಯಣ ಮೂರ್ತಿಗಳಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಶ್ರೀಮತಿ. ಪ್ರತಿಭಾ ಪಾಟೀಲ್, ಸೋಮವಾರ ಪ್ರದಾನಮಾಡಿದರು !
- ಬಾಬಿ ಜಿಂದಾಲ್, ಭಾರತೀಯ ಮೂಲದ ಪ್ರಪ್ರಥಮ ಗವರ್ನರ್- ಅಮೆರಿಕದ ಲ್ಯೂಸಿಯಾನದಲ್ಲಿ !



RSS: