ಇದಪ್ಪಾ ಕನ್ನಡ ಪ್ರೇಮ..!!!
ನಿನ್ನೆ ಟ್ರಾಫಿಕ್‍ನಲ್ಲಿ ನೋಡಿದ್ದು... ಕರ್ನಾಟಕದವರಾದ ನಾವೇ ಆಂಗ್ಲ ಭಾಷೆಯಲ್ಲಿ ನಾಮಫಲಕಗಳನ್ನು ತೂಗುಹಾಕಿಕೊಂಡು ಹೋಗುವಾಗ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದ ಬಸ್ಸೊಂದರ ಈ ನಾಮಫಲಕ ವಿಶೇಷವೆನಿಸಿತು. ಕೂಡಲೇ ಮೊಬೈಲ್‍ನಲ್ಲಿ ಸೆರೆಹಿಡಿದೆವು.. ಇದಪ್ಪಾ ನಿಜವಾದ ಕನ್ನಡ ಪ್ರೇಮ.. ಏನಂತೀರಿ?

- Login or register to post comments
- 644 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail





RSS:
ಪ್ರತಿಕ್ರಿಯೆಗಳು
ಉ: ಇದಪ್ಪಾ ಕನ್ನಡ ಪ್ರೇಮ..!!!
ಅವರ ಕನ್ನಡದೊಲವು ಇರಲಿ, ನಿಮ್ಮ ಕನ್ನಡದ ಹೆಮ್ಮೆ ಮೆಚ್ಚಬೇಕಾದುದು. ನನ್ನಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಇದಪ್ಪಾ ಕನ್ನಡ ಪ್ರೇಮ..!!!
ಬೆಂಗಳೂರಲ್ಲಿ ನಾನು, ಕರ್ನಾಟಕದ ಪಾಸ್ಸಿಂಗ್ ಇದ್ದೂ ತಮಿಳು,ತೆಲುಗು ಬರಹಗಳನ್ನು ಬರೆದುಕೊಂಡು ಓಡಾಡುವ ಬಸ್ಸುಗಳನ್ನೂ ನೋಡಿದ್ದೇನೆ
ಉ: ಇದಪ್ಪಾ ಕನ್ನಡ ಪ್ರೇಮ..!!!
ಪ್ರೇಮಾನೂ ಅಲ್ಲ.... ಕಾವೇರಿನೂ ಅಲ್ಲ. ಶುದ್ಧ ನರಿ ತಲೆ ಅಷ್ಟೇಯ. ಕನ್ನಡದಲ್ಲಿ ಬೋರ್ಡು ಬರೆದುಕೊಂಡ್ರೆ ಪೋಲಿಸ್ರಿಗೆ ಓದೋಕ್ ಕಷ್ಟ.
ಉ: ಇದಪ್ಪಾ ಕನ್ನಡ ಪ್ರೇಮ..!!!
ಅಯ್ಯೋ ಅರುಣ್ ಹೆಗ್ಡೆ, ಇದು ಕನ್ನಡ ಪ್ರೇಮಾ ಎಂಬುದರ ಬಗ್ಗೆ ನನಗೆ ತೀವ್ರವಾದ ಅನುಮಾನವಿದೆ. ಇಂತಹ ನಂಬರ್ ಪ್ಲೇಟಿರುವ ಬಸ್ಸುಗಳು ಕೋರಮಂಗಳ ಆಸುಪಾಸಿನಲ್ಲಿ ಈಚೀಚೆಗೆ ಕಾಣಬರುತ್ತಿವೆ. ಒಳ್ಳೆಯ ಬೆಳವಣಿಗೆಯೇ. ಆ ಮಾರ್ಗದ ಪರಿಚಯ ಸುಮಾರು ಅಷ್ಟು ಇಷ್ಟು ಗೊತ್ತಿರುವುದರಿಂದ ಹೇಳುತ್ತಿದ್ದೇನೆ. ಈ ನಂಬರ್ ಪ್ಲೇಟುಗಳು ಹೀಗಿರಲಿಲ್ಲ. ಇಂಗ್ಲೀಷಿನಲ್ಲಿದ್ದವು. ಈಗ್ಗೆ ಕೆಲವು ತಿಂಗಳ ಸುಪ್ರೀಂ ಕೋರ್ಟಿನ ತೀರ್ಪು ಬಂದ ಮೇಲೆ ಕೆಲವು ಮನಸ್ತಾಪಗಳಾಗಲಿಲ್ಲವೇ. ಆಗಿನಿಂದ ಇಂತಹ ಬೋರ್ಡುಗಳು ಕಾಣಿಸುತ್ತಿವೆ. ಅದರೂ ಕೆಲವೊಂದು ಬಸ್ಸುಗಳಿವೆ, TN registration ಇದ್ದರೂ ಕೂಡ ಬೇರೆ ಎಲ್ಲ ಫಲಕಗಳು ಕನ್ನಡದಲ್ಲಿರುವತ್ತವೆ. "ಶ್ರೀಲಕ್ಷ್ಮೀನರಸಿಂಹ" ಟ್ರಾವಲ್ಸ್ ಅಂತ ಕನ್ನಡದಲ್ಲಿ ಬರೆದಿರುವ ಅಂತ ದೊಡ್ಡ ಹೆಡ್ಲೈನ್ ಕಾಣಿಸುತ್ತದೆ. ಆದರೆ ಇಂತಹವು ಬೆರಳೆಣಿಕೆಯಷ್ಟು ಮಾತ್ರ.