ಇಂದು ರವಿವಾರ, ಜುಲೈ, ೨೯, ೨೦೦೭, ಗುರುಪೂರ್ಣಿಮೆ !

* ಇಂದು ರವಿವಾರ, ಜುಲೈ, ೨೯, ೨೦೦೭, ಗುರುಪೂರ್ಣಿಮೆ !
| ಸದ್ಗುರು ಅನುಗ್ರಹದಿಂದ ಆತ್ಮಜ್ಞಾನಪ್ರಾಪ್ತಿ |
| ವಿಶುದ್ಧಾಂತಃಕರಣಾಯ ಶಂಕರಾಯ ನಮಃ |
ಸದ್ಗುರೂಣಾಂಕೃಪಾದೇವ ಜ್ಞಾನಂ ಭವತಿ ನಾನ್ಯಥಾ |
ಆಷಾಢೇ ಶಂಕರಂ ವಂದೇ ಮಾಸೇ ಜ್ಞಾನಪ್ರಸಿದ್ಧಯೇ |
ಯೇ ಸಮ್ಯಗ್ದರ್ಶಿನಃ ತೈರುಪದಿಷ್ಟಂ ಜ್ಞಾನಂ ಕಾರ್ಯಕ್ಷಮಂ ಭವತಿ |
ಯಾರು ಸಮ್ಯಗ್ದರ್ಶಿಗಳಾದ ಸದ್ಗುರುಗಳೋ ಅಂತಹವರ ಉಪದೇಶದಶ್ರವಣದಿಂದ ಶಿಷ್ಯರಿಗೆ ಆತ್ಮಜ್ಞಾನವುಂಟಾಗುತ್ತದೆ. ಆ ಜ್ಞಾನವೇ ಸರಿಯಾದ, ಹಾಗೂ ಸಮರ್ಥವಾದ ಆತ್ಮಜ್ಞಾನವು.
ಇಂದು, ರವಿವಾರ, ಜುಲೈ, ೨೯, ಆಷಾಢಮಾಸದ ಶುಕ್ಲಪಕ್ಷದ ಪೂರ್ಣಿಮೆ. ಈದಿನ " ಗುರುಪೂರ್ಣಿಮೆ,’ ಯೆಂದು ಪ್ರಸಿದ್ಧವಾಗಿದೆ. ಇದನ್ನು " ವ್ಯಾಸಪೂರ್ಣಿಮೆ "ಯೆಂದೂ ಕರೆಯುತ್ತಾರೆ. ಈದಿನದಂದು ಸನ್ಯಾಸಿಗಳು ಚಾತುರ್ಮಾಸ್ಯವ್ರತ ಸಂಕಲ್ಪವನ್ನು ಮಾಡುತ್ತಾರೆ. ಭಗವಾನ್ ವೇದವ್ಯಾಸರನ್ನು ಸಕಲ ಸಾಧಕರೂ ಇಂದು ಸ್ಮರಿಸಿ, ಭಜಿಸಿ, ಪೂಜಿಸಿ, ಗೌರವಿಸಿ, ಆರಾಧಿಸುತ್ತಾರೆ. ಈ ಮಾಸದಲ್ಲಿನ ಶ್ರೀ ಶಂಕರರ ಸಂದೇಶವನ್ನು ನೋಡೋಣ.
ಸದ್ಗುರುಗಳನ್ನು ಆರಾಧಿಸುತ್ತಾ ಅವರಿಂದ ಆತ್ಮಜ್ಞಾನೋಪದೇಶವನ್ನು ಪಡೆದು ಧನ್ಯರಾಗಬೇಕು. ಸದ್ಗುರುಗಳೇ ನಿಜವಾದ ಆಚಾರ್ಯರು. ಇವರೇ ಸರಿಯಾಗಿ ಉಪದೇಶಮಾಡಲು ಅರ್ಹರಾದವರು. ಮತ್ತು ಸಮರ್ಥರು. ಇಂತಹ ಸದ್ಗುರುಗಳ ಉಪದೇಶದಿಂದಲೇ ಮುಮುಕ್ಷುಗಳ ಅಜ್ಞಾನವು ದೂರವಾಗುತ್ತದೆ ಎಂದು ಬಲ್ಲವರು ಹೇಳುತ್ತಾರೆ. ಕಂಡಕಂಡವರೆಲ್ಲ ವೇದಾಂತ ಸಂದೇಶಗಳನ್ನು ಉಪದೇಶಮಾಡುವಂತಿಲ್ಲ. ಮಾಡಿದರೂ ಅದರಿಂದ ಶಿಷ್ಯರಿಗೆ ಅಜ್ಞಾನವು ತೊಲಗಲಾರದು. ಆದ್ದರಿಂದ ಬ್ರಹ್ಮನಿಷ್ಠರಾದ ಸದ್ಗುರುಗಳ ಉಪದೇಶವೇ ನಿಜವಾದ ಉಪದೇಶವೆನ್ನಿಸುತ್ತದೆ. ಸ್ವತಃ ಬ್ರಹ್ಮನಿಷ್ಠರಾಗಿರುವ ಸಮ್ಯಗ್ದರ್ಶಿಗಳಾದ ಸದ್ಗುರುಗಳೇ ಉಪದೇಶವನ್ನು ಮಾಡುತ್ತಾರೆ. ಸದ್ಗುರುಗಳನ್ನು ನಾವು ಭಕ್ತಿಯಿಂದ ಆರಾಧಿಸಿ, ಅವರ ಉಪದೇಶಗಳನ್ನು ಮನನಮಾಡಿದರೆ ಮುಕ್ತರಾಗುತ್ತೇವೆ.
| ಓಂ ಶಾಂತಿಃ ಶಾಂತಿಃ ಶಾಂತಿಃ |
*
ಶ್ರಿಂಗೇರಿ ಪೀಠದ ಜಗದ್ಗುರುಗಳಾದ, ಶ್ರೀ. ಶ್ರೀ. ಭಾರತೀತೀರ್ಥ ಮಹಾಸ್ವಾಮಿಗಳು, ಮುಂಬೈ ಮಹಾನಗರದ ಭಕ್ತವೃಂದವನ್ನು ಹರಸಲು ಈಗಾಗಲೇ ಆಗಮಿಸಿರುತ್ತಾರೆ. ಶ್ರೀಗಳು ಚೆಂಬೂರಿನ ಶ್ರೀ. ಶಾರದಾ ಸೇವಾಸಂಘದಲ್ಲಿ ವಾಸ್ತವ್ಯ ಹೂಡಿದ್ದು, ತಮ್ಮ ಪೂಜಾ-ಪಾಠಗಳಲ್ಲಿ ಮಗ್ನರಾಗಿದ್ದಾರೆ. ಇಂದಿನ " ವ್ಯಾಸಪೂರ್ಣಿಮೆ " ಯ ಶುಭದಿನದಂದು, ಗುರುಗಳಿಗೆ ನಮಿಸಿ, ಅವರ ಆಶೀರ್ವಾದವನ್ನು ಪಡೆದು ನಿಮ್ಮ ಜೀವಿತವನ್ನು ಕೃತಾರ್ಥಗೊಳಿಸಿಕೊಳ್ಳಿ.
-ಶ್ರೀಶಾರದಾಸಂಘ, ಚೆಂಬೂರಿನ ಸದಸ್ಯರಿಂದ.

- Login or register to post comments
- 382 hits
- Email this image



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- " ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !
- ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :
- ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :
- ಸಿದ್ಧಗಂಗಾ ಕ್ಷೇತ್ರದ ಶ್ರೀ. ಶ್ರೀ. ಶಿವಕುಮಾರ ಸ್ವಾಮಿಗಳ ವರ್ಧಂತಿಯ ಸಮಯದಲ್ಲಿ ಅವರಿಂದ ಆಶೀರ್ವದಿಸಲ್ಪಟ್ಟ ಸನ್ಯಾಸಿಗಳು !
- ಮುಂಬೈನ, ಮೈಸೂರ್ ಅಸೋಸಿಯೇಶನ್ ಸ್ವರ್ಣಗೌರಿ, ಹಾಗೂ ಮಹಾಗಣಪತಿಯ ವಿಸರ್ಜನೆ, ರವಿವಾರದಂದು, ವಿಜೃಂಭಣೆಯಿಂದ, ನೆರೆವೇರಿತು !


RSS: