ಯಾವುದೀ ಎಲೆ? ಹೇಳಿ ನೋಡೋಣ...

ಮಲೆನಾಡಿನಲ್ಲಿ ಎಲ್ಲಂದರಲ್ಲಿ ಬೆಳೆದಿರುತ್ತದೆ ಇದು... ಗಿಡಗಳ ಬುಡದಲ್ಲಿ ಉದ್ದಕ್ಕೂ ಬೆಳೆದುಕೊಂಡು ಹೋಗುವ ಈ ಗಿಡದ ವೈಜ್ಞಾನಿಕ ನಾಮಧೇಯ - Bacopa monnieri. Centella Asiatica.
ಕನ್ನಡದ ಹೆಸರು ಹೇಳಬೇಕು!
update:Aug 1, 2007
ಉತ್ತರ ಕೆಳಗೆ ಕಾಮೆಂಟಿನಲ್ಲಿದೆ. ![]()

- Login or register to post comments
- 806 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail





RSS:
ಪ್ರತಿಕ್ರಿಯೆಗಳು
ಉ: ಯಾವುದೀ ಎಲೆ? ಹೇಳಿ ನೋಡೋಣ...
ಒಂದೆಲಗವಲ್ಲವೇ
ಉ: ಯಾವುದೀ ಎಲೆ? ಹೇಳಿ ನೋಡೋಣ...
ಒಂದೆಲಗ...
ಗದ್ದೇ ಏರಿ ಮೇಲೆ ಬಳೆಯೋದು!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಯಾವುದೀ ಎಲೆ? ಹೇಳಿ ನೋಡೋಣ...
ಉರಗೆ
_______________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬ
ಉ: ಯಾವುದೀ ಎಲೆ? ಹೇಳಿ ನೋಡೋಣ...
ಒಂದೆಲಗವನ್ನೇ ಉರಗೆ ಎಂದೂ ಕರೆಯುತ್ತಾರೆಂದು ಸ್ನೇಹಿತ ಹೇಳಿದ. ಉರಗೆ ಅಂದರೆ ಒಂದೆಲವೇ ತಾನೆ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಯಾವುದೀ ಎಲೆ? ಹೇಳಿ ನೋಡೋಣ...
ದೊಡ್ಡಪತ್ರೆನಾ ಅಂತ ಅನುಮಾನ ಶುರುವಾಗಿದೆ ನನಗೆ.
ಉ: ಯಾವುದೀ ಎಲೆ? ಹೇಳಿ ನೋಡೋಣ...
ಸುನಿಲ
ಒಂದೆಲಗ ಹೀಗೆ ನೆಲಮ್ಯಾಲೆ ಹುಟ್ಟಿ, ನೆಲಮ್ಯಾಲೆ ಹರಡಿಕೊಂಡು, ಚಾಚಿಕೊಂಡಿರುತ್ತದೆ
ಉಪ್ಪೆಲೆ( ಉಪ್ಪುಪ್ಪಾಗಿರುವ ಎಲೆ ಇರುವ ಚಿಕ್ಕ ಸಸಿ ) ಅಂತೆ ಇದು.
ದೊಡ್ಡಪತ್ರೆ ಇದು ಒಂದು ಗಿಡ. ತೊಳಿಸಿ ತರ! ಅಲ್ವಾ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಯಾವುದೀ ಎಲೆ? ಹೇಳಿ ನೋಡೋಣ...
ಇದು ಸಿಕ್ಕಿದರೆ ನಾವು ಸುಮ್ಮನೆ ಬಿಡುವುದಿಲ್ಲ, ತಂಬುಳಿ ಮಾಡಿ ತಿಂದು ತೇಗಿಯೇ ತೀರುತ್ತೇವೆ!
_______________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು
ಉ: ಯಾವುದೀ ಎಲೆ? ಹೇಳಿ ನೋಡೋಣ...
ಬೊಂಳುಬು ಅಣ್ಣ
ತಂಬುಳಿ, ಮಜ್ಜಿಗೆವುಳಿ, ಕೂಟು ಇವುಗಳ ಹೆಸರ ಎತ್ತಬೇಡಣ್ಣ, ನನಗೆ ಹೊಟ್ಟೆ ಚುರ ಅನ್ನತ್ತೇ, ನಾಲಗೇ ವಿಲಗುಟ್ಟತ್ತೆ.....
ಮುಂದಿನ ಸರತಿ ಮನೆಗೆ ಹೋದಾಗ ಈ ಮೆನು ಮಾಡಿಸಿ, ಮುಕ್ಕಲೇ ಬೇಕು!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಯಾವುದೀ ಎಲೆ? ಹೇಳಿ ನೋಡೋಣ...
ಇಲ್ಲ ಮಹೇಶ.
ದೊಡ್ಡಪತ್ರೆ ಕೂಡ ಬಳ್ಳಿನೇ. ಇದು ಎತ್ತರಕ್ಕೆ ಹೋಗೋದಿಲ್ಲ. ನೆಲದ ಮೇಲೆ ಹಬ್ಬಿಕೊಳ್ಳುತ್ತೆ.
@hpn
ಮಾರಾಯ - Bacopa monnieri ಬ್ರಾಹ್ಮಿ ಅಲ್ವಾ? ನೀನು ಹಾಕಿರೋ ಚಿತ್ರ ದೊಡ್ಡಪತ್ರೆ ಇದ್ದಂಗೆ ಇದೆ!!!
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಯಾವುದೀ ಎಲೆ? ಹೇಳಿ ನೋಡೋಣ...
ಇಲ್ಲ ರೀ, ಈ ಚಿತ್ರದಲ್ಲಿರುವುದು ದೊಡ್ಡಪತ್ರೆ ಅಲ್ಲ.
ಅಂದಹಾಗೆ, ದೊಡ್ಡಪತ್ರೆ (ದೊಡ್ಡೀಪತ್ರೆ ಅನ್ನುವುದೂ ಉಂಟೂ) ತಂಬುಳಿಯೂ ಬಹಳ ರುಚಿ :೦)
ಒಂದೆಲಗ, ಬ್ರಾಹ್ಮೀ ಅನ್ನೋದು ಎರಡೂ ನನಗೆ ತಿಳಿದ ಮಟ್ಟಿಗೆ ಒಂದೇ ಬಳ್ಳಿ - ಆದರೆ ನಾನು ನೋಡದ್ದರಿಂದ, ಇದೇ ಅದೇನೋ ಅಲ್ಲವೋ ನಾನರಿಯೆ
-ಹಂಸಾನಂದಿ
ಉ: ಯಾವುದೀ ಎಲೆ? ಹೇಳಿ ನೋಡೋಣ...
ನಾವ್ ದೊಡ್ಡೀಪತ್ರೆ ಅಂತೀವಿ
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಯಾವುದೀ ಎಲೆ? ಹೇಳಿ ನೋಡೋಣ...
ಕರೆಕ್ಟ್
ಉ: ಯಾವುದೀ ಎಲೆ? ಹೇಳಿ ನೋಡೋಣ...
ಶ್ರೀನಿಧಿ, ನೀನು ದೊಡ್ಡಪತ್ರೆಯನ್ನ ಸರಿಯಾಗಿ ಗಮನವಿಟ್ಟು ನೋಡಿರಲಿಕ್ಕಿಲ್ಲ. ದೊಡ್ಡಪತ್ರೆಯ ಎಲೆಗಳು ದಪ್ಪಗಿರುತ್ತವೆ, ಜೊತೆಗೆ ಎರಡೆರಡು ಎಲೆಗಳಂತೆ ಸುತ್ತಲೂ ಉದ್ದುದ್ದ ಬೆಳೆದುಕೊಂಡಿರುತ್ತದೆ. ಒಂದೆಲಗ ಹಾಗಲ್ಲ, ಅದು perennial - ನೆಲಕ್ಕೆ ಅಂಟಿಕೊಂಡಂತೆ ಒಂದೊಂದೇ ಎಲೆಯಾಗಿ ಹಬ್ಬಿರುತ್ತದೆ.
(ಗಿಡಗಳ ಬೇರೆ ಬೇರೆ ರೀತಿಯ ಬೆಳವಣಿಗೆಗಳಿಗೆ ಕನ್ನಡದಲ್ಲಿ ಪದಗಳಿವೆ - ಬಿ ಜಿ ಎಲ್ ಸ್ವಾಮಿಯವರ "ಹಸುರು ಹೊನ್ನು" ಪುಸ್ತಕದಲ್ಲಿ ಅಂತಹ ಹಲವಾರು ಪದಗಳ ಪ್ರಯೋಗವಾಗಿದೆ. ಸದ್ಯಕ್ಕೆ ನನಗೆ ನೆನಪಿಗೆ ಬರುತ್ತಿಲ್ಲ)
ದೊಡ್ಡ ಪತ್ರೆ ಅಥವ Coleus aromaticus ಚಿತ್ರ ಇಲ್ಲಿದೆ. ದೊಡ್ಡಪತ್ರೆಯನ್ನು ಗುರುತಿಸುವುದು ಬಹಳ ಸುಲಭ. ಕೆಮ್ಮು, ನೆಗಡಿಗಳಿಗೆ ಔಷಧವಾಗಿ ಬಹಳ ಉಪಯೋಗಿಸುತ್ತಾರೆ ಅದನ್ನ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಯಾವುದೀ ಎಲೆ? ಹೇಳಿ ನೋಡೋಣ...
veena.
ಇದು ಖಂಡಿತವಾಗಿಯೂ ಒಂದೆಲಗ, ದೊಡ್ಡಪತ್ರೆಯಲ್ಲ. ಆದರೆ ಬ್ರಾಹ್ಮಿ ಹಾಗೂ ಒಂದೆಲಗ ಎರಡೂ ಬೇರೆ ಬೇರೆ ಸಸ್ಯಗಳು ಎಂದು ನಾನು ಹಿಂದೊಮ್ಮೆ ಓದಿದ ನೆನಪು.
ಉ: ಯಾವುದೀ ಎಲೆ? ಹೇಳಿ ನೋಡೋಣ...
ಸರಿಯಾದ ಉತ್ತರ: ಒಂದೆಲಗ
ಒಂದೆಲಗ ಅಥವ (ಸಂಸ್ಕೃತದಲ್ಲಿ) ಬ್ರಾಹ್ಮಿ - ಇದರ ವೈಜ್ಞಾನಿಕ ನಾಮಧೇಯ Bacopa monnieri.
ಇದೊಂದು ಔಷಧ ಸಸ್ಯವಂತೆ - ನಿತ್ಯ ತಿಂದರೆ ಬುದ್ಧಿ ಚುರುಕಾಗುತ್ತದೆ ಅಂತ ಅಮ್ಮ ಹೇಳುತ್ತಿರುತ್ತಾರೆ. ನಮ್ಮ ಮನೆಯಲ್ಲಿ ಪಾಟಿನಲ್ಲೇ ಬೆಳೆಸಿದ್ದಾರೆ ಇದನ್ನ. ಶಿವಮೊಗ್ಗದಲ್ಲಿದ್ದಾಗ ಮನೆಯೆದುರಿನ ಚಿಕ್ಕ ತೋಟದಲ್ಲಿ ಹೇರಳವಾಗಿ ಬೆಳೆದಿರುತ್ತಿತ್ತು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಯಾವುದೀ ಎಲೆ? ಹೇಳಿ ನೋಡೋಣ...
ಉರಗೆ....ತಿಮರೆ...ಒಂದೆಲಗ... centella asiatica...hydrocotyl asiatica..
ಉ: ಯಾವುದೀ ಎಲೆ? ಹೇಳಿ ನೋಡೋಣ...
ಓಹ್, ಹಲವೆಡೆ Centella Asiatica ಎಂದೇ ಇದೆ. ಆದರೂ ಇದನ್ನು ಬ್ರಾಹ್ಮಿ ಎಂದು ಕರೆದಿರುವುದುಂಟು.
(NIAM)
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಯಾವುದೀ ಎಲೆ? ಹೇಳಿ ನೋಡೋಣ...
ಒನ್ದೆಲಗ (ಕನ್ನದ),
ತಿಮರೆ (ತುಲು),
ಎಕ್ಪಾನಿ (ಕೊ೦ಕನಿ)
ಉ: ಯಾವುದೀ ಎಲೆ? ಹೇಳಿ ನೋಡೋಣ...
ಇದನ್ನು ನಾನು ಸ್ವಲ್ಪ ಬಗೆಹರಿಸಬೇಕು:
ಇಲ್ಲಿರುವ ಚಿತ್ರ Centella ದ್ದೇ.
ಇದು Bacopa ಅಲ್ಲ. ಎರಡೂ ಬೇರೆ ಬೇರೆ ಪ್ರಭೇದಗಳು.
ಇನ್ನು ಎರಡನ್ನೂ ಬ್ರಾಹ್ಮೀ ಅನ್ನುತ್ತಾರೆ. Bacopa ವನ್ನು ಜಲ ಬ್ರಾಹ್ಮೀ ಅಂತಲೂ ಹೇಳುತ್ತಾರೆ.
ಉತ್ತರ ಭಾರತದಲ್ಲಿ ಬ್ರಾಹ್ಮೀ ಅಂದರೆ Bacopa. ದಕ್ಷಿಣದಲ್ಲಿ ಬ್ರಾಹ್ಮೀ ಎಂದರೆ Centella.
ತುಳು ಭಾಷೆಯಲ್ಲಿ ಇದು (Centella) ತಿಮರೆ. ಕನ್ನಡದಲ್ಲಿ ಒಂದೆಲಗ.