ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › misc (Uncategorized) pictures

ಕವಿಸಮಯ

August 13, 2007 - 2:02pm — sindhu
ಕವಿಸಮಯ

ಫೋಟೋ ಕೃಪೆ - ಪ್ರಭು - floatingcreeper@gmail.com

ಕಣ್ಣಲ್ಲಿ
ಬೊಗಸೆಯಲ್ಲಿ
ಬೆರಳ ತುದಿಯ ಹಿಡಿತದಲ್ಲಿ,
ಅದುರು ತುಟಿಯ ಕೊಂಕಿನಲ್ಲಿ
ಮುಡಿಯ ತಬ್ಬಿದ ಸೆರಗಿನಲ್ಲಿ
ಹೊದ್ದ ಬಳುಕಿನಲ್ಲಿ
ಸೂಸಿ ಬಂದ ಭಾವದಲ್ಲಿ
ಹಿಡಿದು ನಿಂತ ಪಾತ್ರೆಯಲ್ಲಿ..
ಈಗಷ್ಟೇ ಕರೆದ
ಕವಿತೆಯ ನೊರೆಹಾಲು...

ಹಾಲ್ನೊರೆಯ ಸೂಸಿದ್ದು
ಅವಳಾ?!
ಬಿಟ್ಟರೆ ಹರಿವ ಅವಳ
ಹಿಡಿದಿಟ್ಟ
ಪ್ರಬಾಕರನ ಕ್ಯಾಮೆರ ಕಣ್ಣಾ?!

ನೋಡುಗಳು ನಾನು
ಬೆರಗಲಿ ನೋಡುವುದೆ ಸೊಬಗು
ಕವಿಕಣ್ಣು
ಕಂಡು ಚಿತ್ರಿಸಿಹ ಕವಿತೆಯ
ಬೆಡಗಿಗೆ
ಮಾತಿಲ್ಲದ ತಲೆಬಾಗು.

  • misc (Uncategorized) pictures
~.~
  • Login or register to post comments
  • 739 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 13, 2007 - 8:07pm — Khavi

ಉ: ಕವಿಸಮಯ

Khavi's picture

ಸಿಂಧು ಅವರೆ,
ತುಂಬಾ ದಿನಗಳಾದ ಮೇಲೆ ನಿಮ್ಮ ಕವನ ಹೊರಬಂದಿದೆ.
ಕವನ ಸಕತ್ತಾಗಿದೆರಿ. ಫೋಟೊ ಕೂಡ Smiling
ಬರೀತಾ ಇರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 4:10pm — sindhu

ಉ: ಕವಿಸಮಯ

sindhu's picture

ಧನ್ಯವಾದಗಳು ಖಾವಿ,

ತುಂಬ ಕೆಲಸದ ನಿಮಿತ್ತ ಬರೆಯಲಾಗಿರಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 13, 2007 - 8:25pm — mahesha

ಉ: ಕವಿಸಮಯ

mahesha's picture

ಕಣ್ಣಲ್ಲಿ
ಬೊಗಸೆಯಲ್ಲಿ
ಬೆರಳ ತುದಿಯ ಹಿಡಿತದಲ್ಲಿ,
ಅದುರು ತುಟಿಯ ಕೊಂಕಿನಲ್ಲಿ
ಮುಡಿಯ ತಬ್ಬಿದ ಸೆರಗಿನಲ್ಲಿ
ಹೊದ್ದ ಬಳುಕಿನಲ್ಲಿ
ಸೂಸಿ ಬಂದ ಭಾವದಲ್ಲಿ
ಹಿಡಿದು ನಿಂತ ಪಾತ್ರೆಯಲ್ಲಿ..
ಈಗಷ್ಟೇ ಕರೆದ
ಕವಿತೆಯ ನೊರೆಹಾಲು...

ಬೊಂಬಾಟ್.. ಚಂನಾಗಿದೆ..

ನಂನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 4:13pm — sindhu

ಉ: ಕವಿಸಮಯ

sindhu's picture

ಮಾಯ್ಸ,

ನಿಮಗೆ ಖುಷಿಯಾಗುವ ಒಂದು ತಿಳಿಕವಿತೆ, ಅದಕ್ಕೇ ಇಲ್ಲಿ ಹಾಕಿದೆ.. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 7:28pm — mahesha

ಉ: ಕವಿಸಮಯ

mahesha's picture

Smiling

ನಂನಿ! ಮಾಯ್ಸಂಗೆ ನಲಿವಾಯ್ತು!! Laughing out loud

ಹಿಂಗೇ ಬರೇತಾ ಇರಿರಿ. ಒಳ್ಳೇದಾಗಲಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 2:14pm — benaka

ಉ: ಕವಿಸಮಯ

benaka's picture

ಬೊಗಸೆ ಕಂಗಳ ಬೆದರು ಚೆಲುವೆಗೊಪ್ಪುವ ಕವನ... ಚೆನ್ನಾಗಿದೆ!

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 3:06pm — muralihr

ಉ: ಕವಿಸಮಯ

muralihr's picture

ಚ೦ಬು ಹಿಡಿದಿರುವ ಚ೦ಬುಲ್ - ಬುಲ್ ರಾಣಿ ಯಾರು ??

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 4:15pm — sindhu

ಉ: ಕವಿಸಮಯ

sindhu's picture

ಮುರಳಿ,

ಚಂಬುಲ್ ಬುಲ್ ರಾಣಿ - ಹಾಲಮ್ಮ.. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 3:37pm — muralihr

ಉ: ಕವಿಸಮಯ

muralihr's picture

ಸಿ೦ಧು,

ನಿಮ್ಮ ಕವಿತೆ ಯಲ್ಲಿ "ತಲೆಬಾಗು" ಅ೦ತಾ ವಿಶೇಷವಾಗಿ ಕೇಳುವುದು ನ್ಯಾಯವೇ ??
ಈ ಗೀಳು ಡಿ.ವಿ.ಜಿ ಯವರನ್ನು ಬಿಡಲಿಲ್ಲಾ , ತಮ್ಮ ಒ೦ದು ಕವಿತೆಯಲ್ಲಿ ,

ಜೀವ ಜಡರೂಪ ಪ್ರಪಂಚವನದಾವುದೋ ಆವರಿಸಿಕೊಂಡುಂ ಒಳನೆರೆದುಮಿಹುದಂತೆ
ಭಾವಕೊಳಪಡದಂತೆ ಅಳತೆಗಳವಡದಂತೆ ಆ ವಿಶೇಷಕೆ ಮಣಿಯೋ - ಮಂಕುತಿಮ್ಮ

ಸೌಂದರ್ಯವನ್ನು ಗುರುತಿಸದ ವಿವೇಕ, ನಗಲು ತಿಳಿಯದ ಸಿದ್ಧಾಂತ ಜ್ಞಾನ, ಮಕ್ಕಳ ಎದುರಿಗೆ ತಲೆ ಬಾಗಲು ತಿಳಿಯದ ನಡತೆ ಇವುಗಳಿಂದ ನನ್ನನ್ನು ಕಾಪಾಡು- ಖಲೀಲ್‌ ಗಿಬ್ರಾನ್‌

ಇವರೇನೋ ಓ.ಕೆ. ಆದರೆ ನಿಮ್ಮ "ತಲೆ ಬಾಗು" ಕಮಾ೦ಡ್ ಯಾರಿಗೆ ?

ಕವಿತೆ ಚೆನ್ನಾಗಿದ್ರೇ ತನ್ನಷ್ಟಕ್ಕೇ ತಾನೇ ತಲೆ ಅಲ್ಲಾಡೋದಿಲ್ವೇನು ??
ಸಧ್ಯ ತಲೆ ಮೇಲಿನ ಕೂದಲು ಕಿತ್ತು ಕೊಳ್ಳಿ ಅನ್ನಲಿಲ್ಲಾ.

"ಕವಿಕಣ್ಣು ಕಂಡು ಚಿತ್ರಿಸಿಹ ಕವಿತೆಯ ಬೆಡಗಿಗೆ ಮಾತಿಲ್ಲದ .."
ಎನ್ರೀ ನಿಮ್ಮನ್ನೇ ನೀವು ಕವಿತ್ರಿ ಅ೦ತಾ ಕರ್ಕೊ೦ಡು , ನಿಮ್ಮ ಕಣ್ಣಿಗೆ "ಕವಿಕಣ್ಣು " ಬಿರುದುನೂ ಕೊಟ್ಟ್ ಕೊ೦ಡು -
"ತಲೆ ಬಾಗು ಮಾತಿಲ್ಲದೇ " ಅ೦ತಾ ಆದೇಶ ಬೇರೆ ಕೊಡ್ತಾಯಿದ್ದೀರಾ . ಇದು ನ್ಯಾಯವೇ ??
ಈ ಆದೇಶವನ್ನು ಕವಿತೆ ಅನ್ನುವುದು ಹೇಗೆ ?
ಮೊದಲನೇ ಪ್ಯಾರ ಪರಿವಾಗಿಲ್ಲಾ...ಮಿಕ್ಕ ಪ್ಯಾರ ಅರ್ಥ ಮಾಡ್ಕೋಳೋಕ್ಕೆ ಸ೦ಪದಕ್ಕೇ ಬರಬೇಕು.
ಅದೇನು ಬೊ೦ಬಾಟ್ , ಸಕತ್ ಅನ್ನುವವರು ಈ ಪ್ರಶ್ನೆ ಉತ್ತರಿಸಲಿ.

ಈ ಕವಿತೆ ತೀರಾ ವ್ಯಕ್ತಿತ್ತ್ವದ ಮೇಲೆ ನಿ೦ತಿಲ್ವೇನು ??
ತಮ್ಮನ್ನು ತಾವೇ ಹೊಗಳಿ ಕೊಳ್ಳುವುದು ("ಕವಿತೆಯ ಬೆಡಗಿಗೆ" ) ಕವಿತೆ ಅನ್ನುವುದಾದರೆ - ನಮ್ಮ ರಾಜಕಾರಣಿಗಳೆಲ್ಲಾ ಕವಿಗಳೇ.
ಕವಿತೆ ಅ೦ದರೆ ಏನು ??
ಬೇ೦ದ್ರೆ ಯವರು ಹಲವಾರು ವ್ಯಕ್ತಿಗಳ ಮೇಲೆ ಕಾವ್ಯ ಬರೆದಿದ್ದಾರೆ, ಆದರೆ ಅಲ್ಲಿ ಕಾಣುವುದು ವ್ಯಕ್ತಿ ಯನ್ನು ಮೀರಿ ಬಣ್ಣಿಸುವ ಕವಿತೆ.

"ಹಾಲ್ನೊರೆಯ ಸೂಸಿದ್ದು ಅವಳಾ?!
ಬಿಟ್ಟರೆ ಹರಿವ ಅವಳ ಹಿಡಿದಿಟ್ಟ
ಪ್ರಬಾಕರನ ಕ್ಯಾಮೆರ ಕಣ್ಣಾ?!"

"ನೋಡುಗಳು ನಾನು
ಬೆರಗಲಿ ನೋಡುವುದೆ ಸೊಬಗು
ಕವಿಕಣ್ಣು ಕಂಡು ಚಿತ್ರಿಸಿಹ ಕವಿತೆಯ
ಬೆಡಗಿಗೆ, ಮಾತಿಲ್ಲದ ತಲೆಬಾಗು."

"ನೋಡುಗಳು ನಾನು ಬೆರಗಲಿ ನೋಡುವುದೆ ಸೊಬಗು".
ಈ ವಾಕ್ಯದಲ್ಲಿ ವ್ಯಾಕರಣ ಸರಿಯಾಗಿದೆಯೇ ಅನ್ನುವ ಅನುಮಾನ.

ಫೋಟೋ ಚೆನ್ನಾಗೈತೀ. ಅಲ್ಲಾ ಅಷ್ಟು ಚೆನ್ನಾಗಿ ಬರಿತ್ತಿದ್ದವರು, ಹೀಗೆ ಬರೆದರಲ್ಲಾ ಅದಕ್ಕೆ ಬೇಜಾರು.
ಕೋಪಿಸ್ಕೋಬೇಡಿ ತಲೆ ಬಾಗದಿದ್ದಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 4:07pm — sindhu

ಉ: ಕವಿಸಮಯ

sindhu's picture

ಮುರಳಿ,

ನನ್ನ ಸರಳ ಕನ್ನಡ ಕೊಂಚ ಕಾಂಪ್ಲೆಕ್ಸಾಗಿ ವ್ಯಕ್ತವಾಗಿರೋದ್ರಿಂದ ಹೀಗಾಗಿದೆ ಅಂತ ನನ್ನ ಅನಿಸಿಕೆ. ಕೋಪ ಖಂಡಿತಾ ಇಲ್ಲ.

ಮೊದಲಿಗೆ ಕೊನೆಯ ವಾಕ್ಯದ ಬಗ್ಗೆ ಬರೆಯುತ್ತೇನೆ.
'ಕವಿಕಣ್ಣು ಕಂಡು ಚಿತ್ರಿಸಿಹ ಕವಿತೆಯ ಬೆಡಗಿಗೆ ಮಾತಿಲ್ಲದ ತಲೆಬಾಗು.."
ಇಲ್ಲಿ ಕವಿಕಣ್ಣು ಶ್ರೀಯುತ ಪ್ರಭು ಅವರ ಕ್ಯಾಮೆರಾ, ನೋಡುವ ನನ್ನದಲ್ಲ. ಚಿತ್ರಿಸಿಹ ಕವಿತೆ ಎಂದರೆ ದೃಶ್ಯಕಾವ್ಯ, ನಾನು ಬರೆದ ಸಾಲುಗಳಲ್ಲ.
ಇಂತಹ ಕವಿಕಣ್ಣು ಚಿತ್ರಿಸಿಹ ದೃಶ್ಯಕಾವ್ಯಕ್ಕೆ -- ನನ್ನ ಮಾತಿಲ್ಲದ 'ತಲೆಬಾಗು' ವಿನ ಗೌರವ. ಅಷ್ಟೇ ವಿನಹ ಇದು ಓದುವವರಿಗೆ ನನ್ನ ಆದೇಶ ಸಲಹೆ ಯಾವುದೂ ಅಲ್ಲ. ಎಂದಿಗೂ ಇಲ್ಲ.

ನೋಡುಗಳು ನಾನು, ಬೆರಗಲಿ ನೋಡುವುದೆ ಸೊಬಗು..
ಇದರರ್ಥ - ನೋಡುವ ನಾನು ಮಾತಾಡುವುದು ಬೇಡಾ, ಬೆರಗಿನಲ್ಲಿ ನೋಡಿದರಷ್ಟೇ ಚೆನ್ನ ಎಂಬುದು. ವ್ಯಾಕರಣ ನನಗೆ ಭೂಮಿತಾಯಾಣೆ. ಗೊತ್ತಿಲ್ಲ. ಮನೆಯಲ್ಲಿ ಮಾತಾಡುವ ಕನ್ನಡ, ಪ್ರೀತಿಯಿಂದ ಓದಿದ ಪುಸ್ತಕಗಳ ಕನ್ನಡ ಅಷ್ಟೇ ಬರುವುದು. ತಪ್ಪಾಗಿದ್ದರೆ ತಿದ್ದಿ, ಕ್ಷಮಿಸಿ.

ಹಾಲ್ನೊರೆಯ ಸೂಸಿದ್ದು ಅವಳಾ
ಬಿಟ್ಟರೆ ಹರಿವ ಅವಳ ಹಿಡಿದಿಟ್ಟ ಪ್ರಬಾಕರನ ಕ್ಯಾಮೆರಾ ಕಣ್ಣಾ?

ಇದರ ಅರ್ಥ - ಫೋಟೊ ಎಷ್ಟು ಸುಂದರವಾಗಿ ಬಂದಿದೆ. ಕಾರಣ ಸಬ್ಜೆಕ್ಟಾ ಅಥವಾ ಫೋಟೊ ತೆಗೆದವರ ಫ್ರೇಮಿಂಗ್, ಲೈಟಿಂಗ್, ಕ್ಯಾಪ್ಚರಿಂಗಾ ಅಂತ..
ಇಲ್ಲಿ ಎರಡು ಅರ್ಥ ಯಾರಿಗಾದ್ರೂ ಅನ್ನಿಸಬಹುದಾದರೆ ಅದು ಬಹುಶಃ ಬರೆದ ನನಗೆ ಅವಳು ಮತ್ತು ಅವನು ಇಬ್ಬರೂ ತುಂಬ ಹತ್ತಿರದ ಪರಿಚಯ. ಅವರ ವ್ಯಕ್ತಿತ್ವ ಮತ್ತು ಪ್ರತಿಭೆ, ಎರಡೇ ಸಾಲಿನಲ್ಲಿ ಅಡಗಿ ಹೋಗಿದೆ.

ಫೋಟೋ ಚೆನ್ನಾಗಿರುವ ಎಲ್ಲ ಕ್ರೆಡಿಟ್ ಆ poeticvision ಸೃಷ್ಟಿಸಿದ ಪ್ರಭು ಅವರಿಗೆ ಹೋಗುತ್ತದೆ. (ಅವಳು ಎಷ್ಟೇ ಅದ್ಭುತವಾಗಿ ಆ ಫ್ರೇಮಿನಲ್ಲಿ ಅರಳಿದ್ದರೂ)
ನಿಮಗೆ ಅರ್ಥವಾಗಿದೆ ಅನ್ನಿಸಿದ ಮೊದಲಿನ ಪ್ಯಾರಾ ಏನಾದರೂ ಚೆನ್ನಾಗಿದೆ ಅನ್ನಿಸಿದರೆ ಅದರ ಪೂರ್ಣ ಕ್ರೆಡಿಟ್ ಫೋಟೋಕ್ಕೇ.
ನಿಮ್ಮ ಗೋಜಲು ತಿಳಿಯಾಗಿದ್ದರೆ ಸಂತೋಷ. ಇಲ್ಲವಾದರೆ ತಿಳಿಸಿ..ಮಾತಾಡೋಣ.

ಒಂದು ನೇರರೇಖೆಯನ್ನ ರೇಖೆಯನ್ನಾಗಿಯೂ ನೋಡಬಹುದು. ಅಸಂಖ್ಯಾತ ಬಿಂದುಗಳ ಸಮೂಹವಾಗಿಯೂ ನೋಡಬಹುದು. ಅದು ನೋಡುಗರ ವೈಶಿಷ್ಟ್ಯ.

ಧನ್ಯವಾದಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 5:12pm — Khavi

ಉ: ಕವಿಸಮಯ

Khavi's picture

ಸಿಂಧುರವರೆ,
ಚಿಕ್ಕ ಮಗುವಿಗೆ ಹೇಳಿದ ಹಾಗೆ ತಿಳಿಸಿರುವಿರಿ...
ತುಂಬಾ ನನ್ನಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 5:20pm — Khavi

ಉ: ಕವಿಸಮಯ

Khavi's picture

ಮುರುಳಿ... ಕವಿಮನ ಇಲ್ಲದಿದ್ದರೆ ಇದೂ ಕೂಡ ತಿಳಿಯಲ್ಲ ...
ಇದೂ ತಿಳಿಯದಿದ್ದರೆ ಓದುವ ಹಂಗು ಬೇಡವೇ ಬೇಡ.. ಮತ್ತೊಮ್ಮೆ ಆದೇಶ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 7:33pm — mahesha

ಉ: ಕವಿಸಮಯ

mahesha's picture

ಸಿಂದು

ಸರಿಯಾಗಿ ಹೇಳಿದ್ರಿ, ನಂಮ ಮುರಳೀ ದೇವರಿಗೆ.....

ರೀ ಮುರುಳಿ,
http://sampada.net/blog/mahesha/10/08/2007/5322 ಈ ಪದ್ಯ ಬರೆಯುವಾಗ ನಾನು ನಿಂಮಂನು ಹಲವು ಸರತಿ ನೆನೆಸಿಕೊಂಡೆನು.

ಅದು ನಿಮಗಾಗೇ ಬರೆದುದೆಂದುಕೊಳ್ಳಿರಿ. Smiling

ಆದ್ರೂ ನಂಮ ಮುರುಳೀ ದೇವರು ಸ್ಯಾನೆ ಓದವ್ರೆ!! ಬಲ್ ತಲೆ ಇವರ್ದು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2008 - 6:37am — venkatesh

ಉ: ಕವಿಸಮಯ

venkatesh's picture

ಹರೆಯದ ಹೆಣ್ಣಿನ ಯಾವಭಂಗಿಯಾದರು ಅದರಲ್ಲಿ ಸೊಗಸು ಇದ್ದೇ ಇರುತ್ತೆ. ಚಿತ್ರ ಚೆನ್ನಾಗಿದೆ.

ಆದರೆ, ಸ್ವಲ್ಪ ಇನ್ನೂ ಕಾದಿದ್ದಿದ್ದಿದ್ದರೆ ಚೆನ್ನಾಗಿತ್ತಮ್ಮ. ಒಳ್ಳೆ ಚಿತ್ರಕ್ಕೆ ಪೊಸ್ ಕೊಡೊದಕ್ಕೆ ರೆಡಿಯಾಗಿದಾರೇನೋ ಅನ್ಸತ್ತೆ. ಅವರಿಗೆ ಗೊತ್ತಾಗದಂತೆ, ಕಾದು ಪಡೆದ ಚಿತ್ರದ ಸೊಬಗು ನೂರುಪಟ್ಟು ಹೆಚ್ಚು. ಏನಾದ್ರು ಗೊತ್ತಾಯ್ತಮ್ಮ. ಒಕೆ, ಜಸ್ಟ್ ಫರ್ಗೆಟ್ ಇಟ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 5:10pm — Khavi

ಉ: ಕವಿಸಮಯ

Khavi's picture

ಮುರುಳಿ ಸಾಹೇಬ್ರೆ ಒಂದು ಕವನವನ್ನು ಸವಿಯಲಿಕ್ಕೆ ಸಹಜವಾದ ಕವಿಮನವೊಂದಿದ್ದರೆ ಸಾಕು...

ಸಿದ್ಧಾಂತ, ತತ್ವಶಾಸ್ತ್ರ, ಮನಶ್ಜಾಸ್ತ್ರ, ಅಧ್ಯ್ತಾತ್ಮ ಅನ್ನೋ ಇಲ್ಲ ಸಲ್ಲದ ಕಾಮಾಲೆ ಕಣ್ಣಿನಿಂದ ನೋಡಿದರೆ ಹೀಗೆ ಕಾಣುವುದು ಸಹಜ ...

ರವಿ ಕಾಣದ್ದನ್ನು ಕವಿ ಕಂಡ ಅನ್ನೋದಾದರೂ ಗೊತ್ತೆ ನಿಮಗೆ... ಇಲ್ಲದಿದ್ದರೆ ಸಂಪದದಲ್ಲಿ ಕೇಳಿ ಯಾರಾದರೂ ತಿಳಿದವರು ಹೇಳಿಯಾರು..

ಕಾಮಾಲೆ ಕಣ್ಣು ಅಂತ ಕಂಡುಕೊಂಡಳ್ಳಲಾಗದಿದ್ದರೆ ನಿಮಗೆ ಇನ್ನು ಮೇಲೆ ಕವಿತೆಯೋದುವ ಹಂಗೂ ಇರಬೇಡ... (ಇದು ಪಕ್ಕಾ ನನ್ನ ಆದೇಶ... Smiling )

ಕವನ ಸಕ್ಕತ್ತ ಬೊಂಬಾಟಾಗಿದೆ ಇನ್ನೊಮೆ ಉಲಿಯುತ್ತಿದ್ದೇನೆ...
ಮಹೇಶ ಇತ್ತ ಗಮನ ಕೊಡಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 7:37pm — muralihr

ಉ: ಕವಿಸಮಯ

muralihr's picture

ಸ್ವಲ್ಪ ರೇಗಿಸಿ ನೋಡೋಣವೆ೦ಬ ಉದ್ದೇಶದಿ೦ದ ಸ್ವಲ್ಪ ಕಟ್ಟುವಾಗಿ ಬರೆದೆ.
ಇರಲಿ ಅ೦ತಾ ಸಿ೦ಧು ಅವರನ್ನು ಟೆಸ್ಟ್ ಮಾಡಿದ್ದು.
ಖಾವಿಯಣ್ಣಾ ಖೋವಿ ಹಿಡಿದು ಬ೦ದೆಯಲ್ಲಾ ??
ಒಟ್ಟಿನಲ್ಲಿ ಸಿ೦ಧು ಪಾಸ್ ,(ಕಾರಣ ಅವರಿಗೆ ಕೋಪ ಬರುತ್ತೆ ಅ೦ದ್ಕೊ೦ಡಿದ್ದು ) ನೀನು ಫೇಲ್ ಆದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 7:58pm — mahesha

ಉ: ಕವಿಸಮಯ

mahesha's picture

ನೀವು ಏನಂನು 'ಕಟ್ಟು'ವಾಗಿ ಬರೆದುದು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 15, 2007 - 12:04pm — Khavi

ಉ: ಕವಿಸಮಯ

Khavi's picture

ಮುರುಣಿ ಅಣ್ಣ, ಸೀರಿಯಸ್ಸಾಗಿ ತುಂಬ ಚೆನ್ನಾಗಿ ಬರೆಯುವರನ್ನ ನೀವು ಈರೀತಿ ಒಂದೇ ಸಾರಿ ರೇಗಿಸಿ ಬಿಟ್ಟರೆ..
ಅವರು ಬರೆಯುವದನ್ನು ನಿಲ್ಲಿಸಿಬಿಡಬಹುದಲ್ವ.. ಅದಕ್ಕೆ ಖೋವಿ ಹಿಡಿಯಬೇಕಾಯ್ತು...

ಅಂತು ನನ್ನ ಖೋವಿಗೆ ಬೆದರಿದ ಬೊಂಬೆಯಾದಿರಲ್ಲ.... ನೀವು ಫೇಲ್ .. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 15, 2007 - 1:51pm — muralihr

ಉ: ಕವಿಸಮಯ

muralihr's picture

ಏನೋ ಸ್ವಾಮಿ, ನಾವು ಅಷ್ಟೊ೦ದು ಕಾವ್ಯ ಬಲ್ಲವರಲ್ಲಾ. ಅಕ್ಷರದ ಜ್ಞಾನವು ಅಷ್ಟಕ್ಕಷ್ಟೇ.
ನಿಮ್ಮ೦ತವರು "ಕವಿ ಮನ" ಉಳ್ಳವರು , ನಮ್ಮ್೦ತಹ ದಡ್ಡ ಮನವುಳ್ಳವರಿಗೆ ದೊಡ್ಡ ಮನಸ್ಸು ಮಾಡಿ ,
ಬೆರಳು ಹಿಡಿದು ದಾರಿ ತೋರ ಬೇಕು.

ತಾವು ಈ ಪ್ರಶ್ನೆಗಳನ್ನು ಉತ್ತರಿಸಿ "ಕರುಣಾ ಸಿ೦ಧೂ" ಎ೦ಬ ಬಿರುದನ್ನು ಪಡೆದುಕ್ಕೊಳ್ಳುವುದು.

ಈ ಕವಿ ಮನ & ಕವಿ ಹೃದಯ ಪಡೆಯೋಕ್ಕೆ ಏನೇನ್ ಮಾಡ್ ಬೇಕು ??
ಕಾವ್ಯ ಸ್ಪೂರ್ತಿಯಾಗುವುದಾದರೂ ಹೇಗೆ ??
ಕವಿತೆ ಅ೦ದರೇನು , ಅದರ ಲಕ್ಷಣ ಸ್ವರೂಪಗಳೇನು ??
ಯಾವುದನ್ನು ಕಾವ್ಯ ಅನ್ನುವುದು, ಯಾವುದನ್ನು ಕಾವ್ಯವಲ್ಲಾ ಅನ್ನುವುದು ??
ಕಾವ್ಯಕ್ಕೂ ಅದರ ಶೀರ್ಷಿಕೆಗೆ ಸ೦ಬ೦ಧವು೦ಟೇ ??
ಕಾವ್ಯದಲ್ಲಿಯ ಭಾಷೆ ಹೇಗಿರಬೇಕು ??
ಒ೦ದು ಭಾಷೆಯ ಕಾವ್ಯದಲ್ಲಿ ಮತ್ತೊ೦ದು ಭಾಷೆಯ ಪದಗಳನ್ನು ಬಳ್ಸ್ ಬಹುದೇ ??
ಕಾವ್ಯದ ದನಿಯನ್ನು ಗುರುತಿಸುವ ಕಿವಿ ಮತ್ತು ಮನ ಹೇಗೆ ವಿಮರ್ಷೆ ಮಾಡಬೇಕು ??

ಮತ್ತೊ೦ದು ಬ್ಲಾಗ್ ನಲ್ಲಿ ಬರೆಯಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕುವೆಂಪು ತಂತ್ರಾಂಶ
  • Gmail ಕನ್ನಡದಲ್ಲಿ
  • ಬೇಕನ್ (bacn) - ಅಂತರ್ಜಾಲದಲ್ಲಿ ಈಗ ಹೊಸ ಪದ
  • gmail rss
  • GMail in Kannada
Syndicate content

ಲೇಖಕರು

sindhu's picture

ಪರಿಚಯ

ಹೇಳಿಕೊಳ್ಳುವಂತಹ ಪರಿಚಯ ವಿಷಯವೇನಿಲ್ಲ..
ಪ್ರಕೃತಿಯ ಚೆಲುವು ಮತ್ತು ಸಾಧ್ಯತೆಗಳನ್ನ ಮೆಚ್ಚುವವಳು.
ವೃತ್ತಿ: ಟೆಕ್ನಾಲಜಿ ಟ್ರೈನಿಂಗ್

ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಬದಾಮಿ ಗುಹಾ ದೇವಸ್ಥಾನಗಳ ಮತ್ತೊಂದು ನೋಟ

ಇತ್ತೀಚಿನ ಪ್ರತಿಕ್ರಿಯೆಗಳು

  • ಕೇವೆಂ
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 1:42am
  • ahankari
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 12:58am
  • sushil
    ಉ: ನಿರಕ್ಷರಿ ಕವಿಯ ಅಕ್ಷರಗಾಥೆ
    July 5, 2008 - 12:48am
  • hpn
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 10:56pm
  • muralihr
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 10:34pm
  • Jayalaxmi.Patil
    ಉ: ರಾತ್ರಿ ರಾಣಿ ಜತೆ ಕೆಲ ನಿಮಿಷ..
    July 4, 2008 - 9:58pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:35pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:31pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:15pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:12pm
ಇನ್ನಷ್ಟು


ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator