ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › ಜ್ಞಾನವಾಹಿನಿ ವರ್ಗದ ಚಿತ್ರಗಳು

ಕಸ್ತುರ್ ಬಾ- ಸ್ನೇಹ, ಪ್ರೀತಿ, ತ್ಯಾಗಗಳ, ಮಹಾನ್ ದೇವತೆ !

August 14, 2007 - 5:11am — venkatesh
ಕಸ್ತುರ್ ಬಾ- ಸ್ನೇಹ,  ಪ್ರೀತಿ, ತ್ಯಾಗಗಳ, ಮಹಾನ್ ದೇವತೆ  !

ಗಾಂಧಿ ನೆನಪು : ೩

ಗಾಂಧಿಯವರಿಗೆ ಕಾರ್ಯದಲ್ಲಿ ಸಿದ್ಧಿಸಿಕ್ಕಿದೆ. ೧೯೪೭ ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸಮಾಧಾನ, ಸಂತಸವಿದೆ. ಆದರೆ, ಈ ಸಂತಸದ ಸುಧೆಯನ್ನು ಹಂಚಿಕೊಳ್ಳಲು ಆ ಸಹೃದಯಿ, ಕಸ್ತುರ್ ಬಾ, ಇರಲಿಲ್ಲ ! ೨೨, ಫೆಬ್ರವರಿ, ೧೯೪೪ ರಲ್ಲೇ ಅವರು ನ್ಯೂಮೋನಿಯ ಜ್ವರದಿಂದ ಮರಣಹೊಂದಿದ್ದರು. ಆಸಮಯದಲ್ಲೂ ಬಾಪೂ ಜೈಲಿನಲ್ಲಿ ಸತ್ಯಾಗ್ರಹಮಾಡುತ್ತಿದ್ದರಂತೆ.

ದೇಶದುದ್ದಕ್ಕೂ ಅಸಹನೆ, ಅಪನಂಬಿಕೆ, ದ್ವೇಷ, ಮಾತ್ಸರ್ಯಗಳು ಒಮ್ಮೆಲೇ ಭುಗಿಲೆದ್ದು ಬಂದಿವೆ ! ಸ್ವಾತಂತ್ರ್ಯದಿನದ ಆಚರಣೆಯ ದಿನದಲ್ಲೂ ಬಾಪು, ಪಶ್ಚಿಮ ಬಂಗಾಲಕ್ಕೆ ಹೋಗಿ, ಅಲ್ಲಿನ ಜನರ ನೋವು ನಲಿವುಗಳನ್ನು ವಿಚಾರಿಸುತ್ತಾರೆ.

ಕಸ್ತುರ್ ಬಾ, ಹೃದಯದಲ್ಲಿ ಆಳವಾಗಿ ಹೆಪ್ಪುಕಟ್ಟಿ ಒಡೆಯದೇ ಹಾಗೆಯೇ ಗಟ್ಟಿಯಾಗಿರುವ ಮಾಯದ ಗಾಯದ ನೋವನ್ನು ಸತತವಾಗಿ ಅವರ ಜೀವನದುದ್ದಕ್ಕೂ ಅನುಭವಿಸುತ್ತಾರೆ. ಯಾರೊಡನೆಯೂ ಹಂಚಿಕೊಳ್ಳಲು ಸಾಧ್ಯವಾಗದ ಅವರ ಮೂಕ-ನೋವು, ತಳಮಳ, ಮೊತ್ತೊಬ್ಬ ತಾಯಿಯ ಹೃದಯಕ್ಕೆ ಮಾತ್ರ ಅರ್ಥವಾಗಬಲ್ಲದು. ಪತಿಯೋ, ಭಾರತಕ್ಕೇನು, ವಿಶ್ವಕ್ಕೇ ಪ್ರಖ್ಯಾತ ವ್ಯಕ್ತಿ. ದೇಶದ ಜವಬ್ದಾರಿಯನ್ನೆಲ್ಲಾ ತಮ್ಮ ತಲೆಯಮೇಲೇ ಹೊತ್ತಿಕೊಂಡು ಓಡಾಡುತ್ತಿದ್ದರು. ಮಲಗಿದಾಗ, ಕುಳಿತಾಗ ನಿದ್ರೆಯ ಸ್ವಪ್ನದಲ್ಲೂ ಅವರಿಗೆ ದೇಶದ್ದೇ ಚಿಂತೆ. ಮಕ್ಕಳ ಬಗ್ಗೆ, ಸಂಸಾರ, ಪರಿವಾರದ ಬಗ್ಗೆ, ತಿಳಿದುಕೊಳ್ಳಲೂ ಸಮಯವಿಲ್ಲ. ಒಬ್ಬ ಆದರ್ಶ ಪತ್ನಿಯ ಜವಾಬ್ದಾರಿಯನ್ನು ಬಾ ಕಣ್ಣುಮುಚ್ಚಿಕೊಂಡು ನಿಭಾಯಿಸಿಕೊಂಡು ಹೋಗುತ್ತಾರೆ. ಮಕ್ಕಳಿಗೆ ಸಿಗಬೇಕಾದ, ಸಾಮಾನ್ಯ ವಿದ್ಯಾಭ್ಯಾಸದಿಂದ ಅವರು ವಂಚಿತರಾಗಿದ್ದಾರೆ. ತಾಯಿ-ಕರುಳಿಗೆ ಮಾತ್ರ ಇದು ವ್ಯಕ್ತವಾಗುತ್ತಿದೆ. ಹೀಗೆ, ಬಾ ತಮ್ಮ ಸತಿಧರ್ಮ, ಮಾತೃಧರ್ಮ, ಹಾಗೂ ಸ್ತ್ರೀಧರ್ಮಗಳನ್ನು ತಮ್ಮಮನಸ್ಸಿನೊಳಗೇ ವಿವೇಚಿಸಿ ಕೊನೆಗೆ ಪತಿಯ ನೆರಳಿನಲ್ಲಿ ನಡೆಯುವುದೊಂದೇ ಸರಿಯಾದ ಮಾರ್ಗವೆಂದು ತಮ್ಮ ಜಾಡನ್ನು ಗುರುತಿಸಿಕೊಳ್ಳುತ್ತಾರೆ. ಪತಿಯ ಧರ್ಮಸಂಕಟವನ್ನು ಅರ್ಥಮಾಡಿಕೊಳ್ಳುತ್ತಾರೆ. ಅಂತಹ ಮಹಾಚೇತನವನ್ನು ನಾವು ಇಂದು ನೆನೆದು, ನಮ್ಮಗಳೆಲ್ಲರ ಗೌರವವನ್ನು ಸಲ್ಲಿಸಬೇಕಾಗಿದೆ. ಆಕೆಯ ತ್ಯಾಗ, ಬಲಿದಾನಗಳಿಲ್ಲದಿದ್ದಿದ್ದರೆ, ಗಾಂಧೀಜಿಯವರಿಗೆ ತಮ್ಮ ಧ್ಯೇಯವನ್ನು ಸಾಧಿಸುವಲ್ಲಿ ಬಹಳ ಅಡಚಣೆಯಾಗುತ್ತಿತ್ತು.

ಮೋಹನದಾಸ್ ಕರಮಚಂದ್ ಗಾಂಧಿಯವರು, ಗುಜರಾತಿನ ಪೋರ್ಬಂದರ್ (ಸುದಾಮಪುರಿ) ನಲ್ಲಿ, ೨, ಅಕ್ಟೋಬರ್, ೧೮೬೯ ರಲ್ಲಿ ಜನಿಸಿದರು. ಅವರ ತಂದೆ, ಕರಮಚಂದ್ ಗಾಂಧಿಯವರು (ಕಾಬಾ ಗಾಂಧಿ), ಮತ್ತು ತಾಯಿಯವರು, ಪುತಲೀಬಾಯಿಯವರು. ಕಾಬಾ ಗಾಂಧಿ, ತಮ್ಮ ೪೦ ನೆಯ ವಯಸ್ಸಿನಲ್ಲಿ ನಾಲ್ಕನೆಮದುವೆ ಮಾಡಿಕೊಂಡಿದ್ದರು. ೪ ನೆಯವರೇ ಪುತಲೀಬಾಯಿಯವರು. ಮೊದಲ ೧ ಮತ್ತು ೨ ನೆಯ ಮದುವೆಯಲ್ಲಿ ಒಟ್ಟು ಇಬ್ಬರು ಹೆಣ್ಣುಮಕ್ಕಳು ಜನಿಸಿದಮೇಲೆ ಹೆಂಡತಿಯರಿಬ್ಬರು ತೀರಿಕೊಂಡರು. ೩ ನೆಯಹೆಂಡತಿ ಮಕ್ಕಳಿಲ್ಲದೆ ನಿಧನರಾದರು. ಪುತಲಿಬಾಯಿಯವರಿಗೆ, ೧ ಹೆಣ್ಣು ಮತ್ತು ೩ ಗಂಡುಮಕ್ಕಳು. ಮೋಹನದಾಸರು ಕೊನೆಯವರು.
ತಂದೆ ರಾಜಾಸ್ಥಾನಿಕ ಕೋರ್ಟ್ ನ ಸದಸ್ಯರು. ದಿವಾನರಾಗಿ ನಿವೃತ್ತರಾಗಿ ನಿವೃತ್ತಿವೇತನ ಪಡೆಯುತ್ತಿದ್ದರು.

ಎಮ್. ಕೆ. ಗಾಂಧಿಯವರ ಅಜ್ಜ, ಉತ್ತಮಚಂದ್ ಅಲಿಯಾಸ್ ಓಟಗಾಂಧಿಯವರಿಗೆ, ೬ ಜನ ಮಕ್ಕಳು. ೫ ನೆಯವರು, ಕರಮಚಂದ್ ಗಾಂಧಿಯವರು, ಕಡೆಯವರು, ತುಲಸೀದಾಸ್ ಗಾಂಧಿಯವರು.

ಗಾಂಧಿ ಮನೆತನದವರು, ಬನಿಯಪಂಗಡದ ವೈಷ್ಣವ ಪಂಥದವರು. ಬಹಳ ಸಮಯದ ಹಿಂದೆ, ದಿನಸಿ ವ್ಯಾಪಾರ ಮಾಡುತ್ತಿರಲೂಬಹುದು. ಕಾಥೆಯವಾಡದ ಕೆಲವು ರಾಜ್ಯಗಳಲ್ಲಿ ಅವರು, ದಿವಾನರೆಂದು ಹೆಸರುಮಾಡಿದ್ದರು. ಪೋರ್ಬಂದರಿನಿಂದ ಜೂನಾಘಡಕ್ಕೆ ಬಂದು ನೆಲಸಿದ್ದರು. ಆದರೂ ಜೂನಾಗಢ್ ಮತ್ತು ಪೋರ್ ಬಂದರಿಗೆ ಆಗಾಗ ಬಂದು ಹೋಗುವ ಪರಿಪಾಠ ಇದ್ದೇ ಇತ್ತು.

ಕಾಬಾ ಗಾಂಧಿಯವರು, ಒಳ್ಳೆ ಧೈರ್ಯಸ್ಥರು. ತಮ್ಮ ವಂಶದ ಬಗ್ಗೆ ಅಪಾರ ಅಭಿಮಾನ. ಧಾರಾಳಿ. ಬಹಳ ಸರಳವಾದ ವ್ಯಕ್ತಿತ್ವ. ಯಾವ ಹಣ, ಆಸ್ತಿಗಳ ಬಗ್ಗೆ ವ್ಯಾಮೋಹವಿಲ್ಲ. ಆದರೆ, ಸ್ವಲ್ಪ ಮುಂಗೋಪಿ. ತಾಯಿ, ಪುತಲಿಬಾಯಿಯವರು, ಅಪಾರ ದೈವಭಕ್ತರು. ವ್ರತ, ಉಪವಾಸ, ಪೂಜೆ ಪುನಸ್ಕಾರದಲ್ಲಿ ಬಹಳ ಶ್ರದ್ಧೆ, ಮತ್ತು ಆಸಕ್ತಿ. ಹವೇಲಿಯ ವೈಷ್ಣವ ದೇವಾಲಯಕ್ಕೆ ಹೋಗಿ ದೈವದರ್ಶನವಾಗುವವರೆಗೆ ಒಂದು ಹನಿ ನೀರನ್ನೂ ಬಾಯಿಗೆ ಹಾಕಿಕೊಳ್ಳುತ್ತಿರಲಿಲ್ಲ. ಜ್ಞಾಪಕ ಶಕ್ತಿ ಅಪಾರ. ಶಾಲೆಗೆ ಹೋಗಿ ಹೆಚ್ಚು ಕಲಿಯದಿದ್ದರೂ, ಸಾಮಾನ್ಯಜ್ಞಾನ ಹೆಚ್ಚಾಗಿತ್ತು. ರಾಜ್ಯದ ವಹಿವಾಟುಗಳ ವಿವರಗಳನ್ನು ಗೆಳತಿಯರ ಹತ್ತಿರಕೇಳಿ ತಿಳಿದುಕೊಳ್ಳುತ್ತಿದ್ದರು.

ಗಂಧೀಜಿಯವರ ಬಾಲ್ಯ ಮತ್ತು ವಿದ್ಯಾಭ್ಯಾಸ :

ತಮ್ಮ ಪ್ರಾಥಮಿಕ ಶಾಲೆಯಲ್ಲಿ ಮಗ್ಗಿ ಮತ್ತು ಲೆಖ್ಕದಲ್ಲಿ, ಅವರಿಗೆ ಯಾವಾಗಲೂ ತಲೆನೋವು. ೧೩ ನೆಯ ವಯಸ್ಸಿನಲ್ಲಿ ಮದುವೆ, [೧೮೮೨] ಪೋರ್ಬಂದರ್ ನಲ್ಲಿ ೧೨೦ ಮೈಲಿ ದೂರ ಎತ್ತಿನಬಂಡಿಯಲ್ಲಿ ಹೋಗಲು ೫ ದಿನ ಆಗಿತ್ತಂತೆ. ೧೮೮೫ ರಲ್ಲಿ ಹೈಸ್ಕೂಲ್ [೧೬ ನೆ ವಯಸ್ಸು] ಎಮ್. ಕೆ. ಗಾಂಧಿಯವರು, ೧೮೮೭ ರಲ್ಲಿ, ಮೆಟ್ರಿಕ್ ನಲ್ಲಿ ಪಾಸ್ಮಾಡಿದರು. ೧೮ ನೆ ವಯಸ್ಸಿನಲ್ಲಿ ಇಂಗ್ಲೆಂಡಿಗೆ,[೧೮೮೩] ಕಾನೂನಿನಲ್ಲಿ ಪದವಿ ಪಡೆಯಲು ಹೊರಟರು.

ಗಾಂಧೀಜಿಯವರ ಮಕ್ಕಳ ವಿವರ :

(೧೮೮೮-೧೯೪೮) ಮೊದಲನೆಯ ಮಗ ಹರಿಲಾಲ್,*(ಭಾ) ಮತ್ತು ಚಂಚಲ್ ರಿಗೆ, ೪ ಜನ.
(೧೮೯೨-೧೯೫೬) ಎರಡನೆಯ ಮಗ ಮಣಿಲಾಲ್, *(ಭಾ) ಮತ್ತು ಸುಶೀಲರಿಗೆ, ೩ ಜನ.
(೧೮೯೭-೧೯೬೯) ಮೂರನೆಯ ಮಗ ರಾಮ್ದಾಸ್,*(ದ. ಆಫ್ರಿ) ಮತ್ತು ನಿರ್ಮಲ ರಿಗೆ, ೨ ಜನ.
(೧೯೦೦-೧೯೫೯) ಕೊನೆಯ ಮಗ ದೇವ್ ದಾಸ್, *(ದ. ಆಫ್ರಿ) ಮತ್ತು, ಲಕ್ಷ್ಮಿ ಗೆ, ೪ ಜನ.

ಗಾಂಧೀಜಿ ಇನ್ನೂ ಯುವಕರಾಗಿದ್ದಾಗೆ ಜನಿಸಿದ ಹರಿಲಾಲ್, ೧೯೪೮ ರಲ್ಲಿ ತಾವೂ, ತಂದೆಯ ಮರಣದ ವರ್ಷದಲ್ಲೇ ಮೃತರಾದರು. ಆದರೆ ಅವರು ಕ್ಷಯರೋಗದಿಂದ ನರಳುತ್ತಿದ್ದು, ಕ್ಷಯರೋಗದ ಆಸ್ಪತ್ರೆಯಲ್ಲೇ, ಮರಣಹೊಂದಿದರು. ಕುಡಿಯುವುದನ್ನು ಅಭ್ಯಾಸಮಾಡಿದ್ದ ಅವರಿಗೆ, ಔಷಧಿ ಒಂಟುತ್ತಿರಲಿಲ್ಲ. ೧೯೧೮ ರಲ್ಲಿ ಅವರ ಹೆಂಡತಿ ನಿಧನರಾದರು. ತದನಂತರ, ಮರು ಮದುವೆಯಾಗಲು ಬಾಪೂಜಿ ಒಪ್ಪಿಗೆನೀಡಲಿಲ್ಲ. ಇದರಿಂದ ಅವರು ಇನ್ನೂ ಇಳಿದುಹೋದರು.

* ಹುಟ್ಟಿದ ಸ್ಥಳ.

ಮೊಮ್ಮಕ್ಕಳು:

ಮಣಿಲಾಲರ ಮಗ ಅರುಣ್- Founder Dir, of M. K. Gandhi Institute, for Non-Violanse in Mempiss, Tennesse, USA. ಇವರ ಮಗ- Active in Indian Political Affairs.

ದೇವ್ ಡಾಸ್ ಮಗ ರಾಮಚಂದರ್- Acedemic.

ದೇವ್ ದಾಸರ ಮತ್ತೊಬ್ಬ ಮಗ, ರಾಜ್ ಮೋಹನ್-Activist and Author ; ಇವರಿಗೆ ಒಬ್ಬಮಗಳಿದ್ದಾಳೆ.

-ಸಂಗ್ರಹದಿಂದ.

  • ಜ್ಞಾನವಾಹಿನಿ ವರ್ಗದ ಚಿತ್ರಗಳು
~.~
  • Login or register to post comments
  • 494 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ ಅಸಮಾನ್ಯ ಬಾಲಕ, ಮೊಹನ್ ದಾಸ್ ಗೆ, ಇಂದು ೧೩೮ ನೆ ವರ್ಷದ ಹುಟ್ಟಿದ ಹಬ್ಬ !
  • ಬ್ಯಾರಿಸ್ಟರ್ ಎಮ್. ಕೆ. ಗಾಂಧಿಯವರು !
  • ಹೋರಾಟ ಮುಗಿಯಿತು, ಗಾಂಧಿಯವರು, ದೇಶಕ್ಕೆ ಪ್ರಾಣಕೊಟ್ಟು, ಅಮರರಾದರು !
  • ಗಾಂಧಿಯವರನ್ನು, ಮ್ಯಾಂಚೆಸ್ಟರ್ ನ ಹತ್ತಿ-ಗಿರಣಿ ಕೆಲಸಗಾರರು ಅಭಿನಂದಿಸುತ್ತಿರುವ ದೃಶ್ಯ
  • ಶಂಕರ್ಸ್ ವೀಕ್ಲಿಯ ಶ್ರೀ. ಶಂಕರ್ ಕೇಶವ್ ಪಿಳ್ಳೆ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಮಕ್ಕಳ ಮ್ಯೊಸಿಯ೦, ಲ೦ಡನ್

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಪೊನ್
    July 24, 2008 - 9:42am
  • kannadakanda
    ಉ: ಪೊನ್
    July 24, 2008 - 9:39am
  • roshan_netla
    ಉ: ಲೋಕಸಬೆಯಲ್ಲಿ ಹಣಗಂತೆಯ ಎಸೆದಾಟ!! ಇಂಡಿಯದೋರ ಮಾನಮರ್ಯಾದೆ ಹರಾಜು!!
    July 24, 2008 - 9:36am
  • roshan_netla
    ಉ: ಲೋಕಸಬೆಯಲ್ಲಿ ಹಣಗಂತೆಯ ಎಸೆದಾಟ!! ಇಂಡಿಯದೋರ ಮಾನಮರ್ಯಾದೆ ಹರಾಜು!!
    July 24, 2008 - 9:33am
  • ASHOKKUMAR
    ಉ: ಪೊನ್
    July 24, 2008 - 9:30am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:20am
  • Sunil Jayaprakash
    ಉ: ಕುಮಾರವ್ಯಾಸ ಭಾರತ
    July 24, 2008 - 9:08am
  • Sunil Jayaprakash
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:04am
  • ಮನಹ್ಪಠಲ
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 8:22am
  • mahesha
    ಉ: ಕನ್ನಡದ ನುಡಿದಾಟಿ ಎಂತದು?
    July 24, 2008 - 8:20am
ಇನ್ನಷ್ಟು


ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator