ನೆನೆಮನ, ನೆನೆ, ಆ ಸುದಿನವ !

ಗಾಂಧಿ ನೆನಪು-೪
ಸ್ವಾತಂತ್ರ್ಯ ಭಾರತದ ಹೊಸಾಧ್ಯಾಯದ, ಶುಭಾರಂಭ !
೧೯೪೭, ನೆ ಇಸವಿ, ಆಗಸ್ಟ್, ೧೫ ರ, ಮಧ್ಯರಾತ್ರಿ, ನಮ್ಮ ಮೊಟ್ಟ ಮೊದಲ ಪ್ರಧಾನಿ, ಜವಹರ್ಲಾಲರು ಮಾಡಿದ ಚಾರಿತ್ರ್ಯಿಕ ಭಾಷಣದ ಕೆಲವು ಸಾಲುಗಳು :
" ಶತಮಾನಗಳಿಂದ ನಮ್ಮ ದೇಶದ ಭವಿಷ್ಯದ ಬಗ್ಗೆ, ರಾಜಿಮಾಡಿಕೊಂಡು ಕಾಯುತ್ತಲೇ ಇದ್ದೆವು ನಾವು. ಅದು ನನಸಾಗುವ ಕಾಲ ಇಂದು ಬಂದಿದೆ. ನಮ್ಮ ದೇಶದ ದಾಸ್ಯದ -ಸಂಕೋಲೆಗಳನ್ನು ಕಳಚಿ ಬಿಸಾಡಲು ಮಾಡಿದ ಹಲವಾರು ಪ್ರತಿಜ್ಞೆಗಳು, ಸಾಕಾರವಾಗುವ ಕಾಲ ಒದಗಿ ಬಂದಿದೆ. ಪೂರ್ತಿಯಾಗಿ ನಾವು ಕಳೆದುಕೊಂಡದ್ದನ್ನೆಲ್ಲಾ ವಾಪಸ್ ಪಡೆಯಲು ಸಾಧ್ಯವಾಗದಿದ್ದರೂ, ನಮ್ಮ ಬಹಳಷ್ಟು ಕನಸುಗಳು ನನಸಾಗಲಿವೆ. ಈಗ ಹೊಡೆದ ಈ ಮಧ್ಯರಾತ್ರಿಯ ೧೨ ಗಂಟೆಯ "ಧಣಾರ್" ನಾದದೊಂದಿಗೆ, ನಮ್ಮ ಭಾರತ ಎಚ್ಚೆತ್ತು ಕಾದು ಕೂತಿದೆ ; ತನ್ನ ಮುಂದಿನ ಜೀವಿತದ ಭವಿತವ್ಯದ ಆಸೆ, ಆಕಾಂಕ್ಷೆಗಳನ್ನು ಕಾರ್ಯಗತಗೊಳಿಸಲು ; ಇಂತಹ ಭರವಸೆಯ ಕ್ಷಣಗಳು ಯಾವಾಗಲೋ ಚರಿತ್ರೆಯಲ್ಲಿ, ಕೆಲವೊಮ್ಮೆ ಬರುತ್ತವೆ, ಆದರೆ ಬಹಳ ಅಪರೂಪವಾಗಿ ; ಹಾಗೆ ಬಂದಾಗ ನಾವು, ಹಳೆಯ ಜಡ್ಡುಗಟ್ಟಿದ ಸಂಪ್ರದಾಯದಿಂದ ಮೇಲೆದ್ದು, ಹೊಸದನ್ನು ಅಪ್ಪಿಕೊಳ್ಳುತ್ತೇವೆ. ಒಂದು ವ್ಯವಸ್ಥೆಯಿಂದ ಇನ್ನೊಂದು ಉತ್ತಮ ವ್ಯವಸ್ಥೆಯಕಡೆಗೆ, ಚಿಮ್ಮುತ್ತೇವೆ. ಬಹುಕಾಲ, ನಮ್ಮ ಹೃದಯಾತ್ಮಗಳನ್ನು ಹಿಡಿದಿಟ್ಟಿದ್ದ ವೇದನೆಯ ಪೊರೆ ಕಳೆದು, ಎಲ್ಲೆಡೆ ಸ್ವಾತಂತ್ರ್ಯದಕೂಗು, ಪ್ರತಿಧ್ವನಿಸುತ್ತಿದೆ. ಭೂತಕಾಲದ ಅನಿಷ್ಟಗಳನ್ನು ಮರೆತು, ಹೊಸ ಸಂಭ್ರಮದ-ನಾಳೆಗಳನ್ನು ಕಂಡುಕೊಳ್ಳಲು ಹೊರಟಿದ್ದೇವೆ, ನಾವು. " !
"Long years ago we made a tryst with destiny, and now the time comes when we will redeem our pledge, not wholly or in full measure, but very substantially. At the stroke of the midnight hour, when the world sleeps, India will awake to life and freedom. A moment comes, which comes but rarely in history, when we step out from the old to the new, when an age ends and when the soul of a nation, long suppressed, finds utterance.... We end today a period of ill fortune, and India discovers herself again."
- Jawaharlal Nehru (Speech on Indian Independence Day, 1947)
ಇಂತಹ ಸುಂದರ ರಾತ್ರಿಯ ಶುಭಸನ್ನಿವೇಷದಲ್ಲೂ ನಮ್ಮ ಮಹಾತ್ಮ ಗಾಂಧಿಯವರು, ಭಾರತದೇಶದ ಭಾವೈಕ್ಯತೆಗಾಗಿ, ಉಪವಾಸವನ್ನು ಕಲ್ಕತ್ತಾದಲ್ಲಿ ಮಾಡುತ್ತ, ತಮ್ಮ ದೇಹವನ್ನು ದಂಡಿಸುತ್ತಿದ್ದರು. ಬೇರೆ ಇಂದಿನ ನಮ್ಮ ರಾಜಕಾರಿಣಿಗಳಾಗಿದ್ದಿದ್ದರೆ, ಮನೆ-ಮಂದಿಯನ್ನೇಲ್ಲಾ ವೇದಿಕೆಗೆ ಕರೆತಂದು, ದೊಡ್ಡ ಹಂಗಾಮವನ್ನೇ ಮಾಡುತ್ತಿದ್ದರು.
-ಜವಹರ್ ಲಾಲ್ ನೆಹ್ರು, ೧೫, ಆಗಸ್ಟ್, ೧೯೪೭. ಮಧ್ಯ ರಾತ್ರಿ, ೧೨ ಘಂಟೆ. ಲಾಲ್ ಕಿಲ, ಹೊಸ ದೆಹಲಿ.
-ಸಂಗ್ರಹದಿಂದ.

- Login or register to post comments
- 725 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ


RSS: