ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚಿತ್ರ ಪುಟಗಳು › ಜ್ಞಾನವಾಹಿನಿ ವರ್ಗದ ಚಿತ್ರಗಳು

ಹೋರಾಟ ಮುಗಿಯಿತು, ಗಾಂಧಿಯವರು, ದೇಶಕ್ಕೆ ಪ್ರಾಣಕೊಟ್ಟು, ಅಮರರಾದರು !

August 16, 2007 - 4:52am — venkatesh
ಹೋರಾಟ ಮುಗಿಯಿತು, ಗಾಂಧಿಯವರು, ದೇಶಕ್ಕೆ ಪ್ರಾಣಕೊಟ್ಟು,  ಅಮರರಾದರು !

ಗಾಂಧಿ ನೆನಪು : ೫

ಸ್ವರಾಜ್ಯ ಸಿಗುವವರೆಗೂ ಭಾರತದಜನ ಅತ್ಯಂತ ಸಂಯಮದಿಂದ ನಡೆದುಕೊಂಡಿದ್ದರು. ಗಾಂಧೀಜಿಯವರಜೊತೆಗೆ ಸೊಂಟಕ್ಕೆ ಸೊಂಟಕೊಟ್ಟು, ಬ್ರಿಟಿಷರ ವಿರುದ್ಧ ಪ್ರತಿಭಟಿಸಿದ್ದರು. ಆದರೆ, ಸ್ವತಂತ್ರ್ಯಬಂದ ಕೆಲವೇ ತಿಂಗಳುಗಳಲ್ಲಿ ಅವರು ತೋರಿಸಿದ ಮುಖವಾಡವೇ ಬೇರೆಯದಾಗಿತ್ತು. ಇಲ್ಲಿ ದ್ವೆಷ, ಅಸೂಯೆ, ಅಸಮಧಾನ, ಅಪನಂಬಿಕೆ, ಅನಾದರ, ಅವಿಶ್ವಾಸಗಳ ಮಹಾಪೂರವೇ ಹರಿದುಬರುವಂತೆ ಭಾಸವಾಗುತ್ತಿತ್ತು. ಒಮ್ಮೆ ನಿಧಾನವಾಗಿ ಯೋಚಿಸಿದಾಗ, ಇದೇ ಜನರೇ ಈಗ ಹೀಗೆ ವರ್ತಿಸುತ್ತಿರುವುದು, ಎನ್ನುವಷ್ಟು ಅವರು ಬದಲಾಯಿಸಿದ್ದರು. ಎಲ್ಲರ ಮೇಲು ಅಪನಂಬಿಕೆ. ಶಾಂತಿ, ಸೌಹಾರ್ದತೆಗಳು ಕೇವಲ ಕಾಗದದ ತುಂಡಿನಮೇಲೆ ಇರುವಂತೆ ಭಾಸವಾಗುತ್ತಿತ್ತು. ಈಗ ಯಾರಿಗೂ ಗಾಂಧೀಜಿಯವರು ಬೇಡ. ಅವರ ತತ್ವಗಳೂ ಆಷ್ಟೆ.

ಮಹಾತ್ಮಾ ಗಾಂಧಿಯವರೂ ಇದನ್ನು, ಕಣ್ಣಾರೆಕಂಡರು. ಅವರ ಆಪ್ತ ಸ್ವಾತಂತ್ರ್ಯ ಚಳುವಳಿಯ ಹಿಂಬಾಲಕ, ಕೊಂಡವೆಂಕಪ್ಪಯ್ಯ, ಎಂಬ ೮೦ ವರ್ಷದ ಹಿರಿಯ ಕಾಂಗ್ರೆಸ್ ಕೆಲಸಗಾರ, ೧೯೦೦ ರಲ್ಲಿ ಕಾಂಗ್ರೆಸ್ ಸದಸ್ಯತ್ವವನ್ನು ಪಡೆದಿದ್ದ. ಆತ, ಗಾಂಧೀಜಿಯವರಿಗೆ ಪತ್ರಬರೆದು, ದೇಶದಲ್ಲಿ ಬೆಳೆಯುತ್ತಿರುವ, ಸಾಮಾಜಿಕ ವಲಯಗಳಲ್ಲಿನ ಅಸ್ಥಿರತೆಯನ್ನು ಕುರಿತು ಬರೆದ ಪತ್ರ, ಹೀಗಿದೆ.

" ಸ್ವತಂತ್ರ್ಯ ಸರ್ಕಾರ ಬಂದ ೫ ತಿಂಗಳಲ್ಲಿ ಭಾರತದೇಶದ ಜನ ಧೃತಿಗೆಟ್ಟಿದ್ದಾರೆ. ಲಂಚ, ರಿಷ್ವತ್ತುಗಳು ಹೆಚ್ಚಾಗಿವೆ. ಕಾಂಗ್ರೆಸ್ ಸರ್ಕಾರಕ್ಕಿಂತ ಫಿರಂಗಿಯವರ ಸರ್ಕಾರವೇ ಚೆನ್ನಾಗಿತ್ತೇನೋ, ಎನ್ನುವ ಸಂಶಯ ಬರಹತ್ತಿದೆ. "ಏಕೆಂದರೆ ಶಿಸ್ತು, ವ್ಯವಸ್ಥೆ, ಮತ್ತು ಕಾರ್ಯತತ್ಪರತೆ, ಎಲ್ಲೋಮಾಯವಾದಂತಿದೆ," ಎನ್ನುತ್ತಿದ್ದಾರೆ ಜನರು. ಈ ಮಾತುಗಳು ಕೇವಲವೆಂಕಪ್ಪಯ್ಯನವರದಾಗಿರಲಿಲ್ಲ. ಬದಲಾಗಿ ಅದು, ಬದಲಾಗುತ್ತಿದ್ದ ಭಾರತದ ನಾಗರಿಕರೆಲ್ಲರ ಸಾಮೂಹಿಕ ಕೂಗಾಗಿತ್ತು.

ಹಿಂದೂ-ಮುಸಲ್ಮಾನರು ಆಣ್ಣ-ತಮ್ಮಂದಿರಂತೆ ಬಾಳಲಿ, ಎನ್ನುವ ಬಾಪುವಾಣಿಯನ್ನು ಯಾರೂಪಾಲಿಸುತ್ತಿಲ್ಲ. ಇದನ್ನೆಲ್ಲಾ ಬಾಪೂ ಗಮನಿಸುತ್ತಲೇ ಇದ್ದರು. ಅವರಿಗೆ ಏನನ್ನು ಹೇಳಲೂ ಸಾಧ್ಯವಾಗಲಿಲ್ಲ. ಇನ್ನು ಮುಂದೆ ಹೋರಾಟಮಾಡುವಷ್ಟು ದೇಹಧಾರಢ್ಯ, ಅವರಲ್ಲಿರಲಿಲ್ಲ. ೭೯ ವರ್ಷ ವಯಸ್ಸಾಗಿದ್ದ ಗಾಂಧಿಯವರು, ಜೀವನದ ಸಮರದಲ್ಲಿ ಸ್ವಲ್ಪ ಸೋತಂತೆ ಭಾಸಾವಾಗುತ್ತಿತ್ತು. ಮನೆಯಲ್ಲಿ ಮಕ್ಕಳಿಗೆ ಸರಿಯಾದ ವಿಧ್ಯಾಸವಿಲ್ಲದೆ ಅವರು ಪರಿತಪಿಸುತ್ತಿದ್ದರು. ಕಸ್ತುರ್ ಬಾ ಅವರನ್ನು ಅಗಲಿ, ಆಗಲೇ ೪ ವರ್ಷಗಳಾಗಿತ್ತು. ವಯಸ್ಸು ಅವರಮೇಲೆ ಮೋಡಿಮಾಡಿತ್ತು.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸನ್ನು ವಜಮಾಡಲು, ಅವರು ಪದೇ ಪದೇ ರಾಜಕೀಯ ಮುಖಂಡರಿಗೆಲ್ಲಾ, ಮನವಿಮಾಡಿಕೊಂಡರು. ಆದರೆ, ಮುಂದೆ ಸರ್ಕಾರದ ಆಡಳಿತದ ಚುಕ್ಕಾಣಿಯನ್ನು ಹಿಡಿದು ನಡೆಸಲು, ಕಾಂಗ್ರೆಸ್ಸಿನ ಪಾತ್ರವೇ ಬಿರುಸಾಗಿತ್ತು. ಅಷ್ಟರಲ್ಲೆ, ಅವರು ೧೯೪೮ ರಲ್ಲಿ ಆಗುಂತಕನೊಬ್ಬನ ಗುಂಡಿನೇಟಿಗೆ ಶಿಕಾರಿಯಾದರು. ದೀಪ ನಂದಿಹೋಯಿತು. ದೀಪದ ಆಕಡೆ ಕತ್ತಲಿರುವಂತೆ, ಮಹಾತ್ಮರ ೩೩ ವರ್ಷಗಳ ಒಡಾನಾಟದ ಪ್ರಭಾವದ ಕ್ಷಣಗಳು ತಮ್ಮ ಕಾಂತಿಯನ್ನು ಕಳೆದುಕೊಂಡಿದ್ದವು.

ಆದರೆ ಇವೆಲ್ಲದರ ಮಧ್ಯೆಯೂ ಆಶಾಕಿರಣ, ಅಂಧಕಾರದ ನಡುವೆ, ತೂರಿಬರುತ್ತಿತ್ತು. ಹೊಸ ದೇಶ, ಸ್ವಛ್ಛಂದ ವತಾವರಣ. ಒಳ್ಳೆಯದು ಕೆಟ್ಟದ್ದು ಮಾಡುವವರು ನಾವೇ, ನಮ್ಮ ಜನರೇ, ಎನ್ನುವ ಭಾವನೆ ಯುವಜನರನ್ನೂ, ದೇಶವಾಸಿಗಳನ್ನೂ, ಹುಚ್ಚೆಬ್ಬಿಸಿತ್ತು. ಹೊಸ ನಾಳೆಗಳು ತೆರೆಯುತ್ತಾ ಹೋಗುತ್ತಿದ್ದಂತೆ, ಹೊಸ ಹೊಸ ಪ್ರತಿಭೆಗಳು ಭಾರತದ ದಿಗಂತದಲ್ಲಿ, ಪ್ರಜ್ವಲಿಸಲಾರಂಭಿಸಿದವು.

೬೦ ಪ್ರಾಯೋಗಿಕ ವರ್ಷಗಳು ಉರುಳಿವೆ. ಹಳೆಯ ತಪ್ಪುಗಳನ್ನು ಮರೆತು, ಹೊಸದಾಗಿ ಕಾರ್ಯದಲ್ಲಿ ತೊಡಗೋಣ. ಇದರಲ್ಲಿ ತಪ್ಪಾದರೆ ಏನು ? ನಾವೇ, ನಮ್ಮವರಿಂದ ತಾನೇ ? ಸರಿಪಡಿಸಿಕೊಂಡು ಒಂದು ಭವ್ಯ ರಾಷ್ಟ್ರವನ್ನು ನಿರ್ಮಿಸೋಣ !

-ಸಂಗ್ರಹದಿಂದ.

  • ಜ್ಞಾನವಾಹಿನಿ ವರ್ಗದ ಚಿತ್ರಗಳು
~.~
  • Login or register to post comments
  • 597 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಸ್ತುರ್ ಬಾ- ಸ್ನೇಹ, ಪ್ರೀತಿ, ತ್ಯಾಗಗಳ, ಮಹಾನ್ ದೇವತೆ !
  • ಕಾಂguess ಸತ್ಯಾಗ್ರಹದ ವಿರುದ್ಧ ಬಿಜೆಪಿ ಸತ್ಯಾಗ್ರಹ !
  • ಗಾಂಧಿ ನೆನಪು -೧
  • ಬ್ಯಾರಿಸ್ಟರ್ ಎಮ್. ಕೆ. ಗಾಂಧಿಯವರು !
  • ಮಹಾತ್ಮಾ ಗಾಂಧಿ ಅಂತರ್ಜಾಲವನ್ನು ಹೇಗೆ ಬಳಸುತ್ತಿದ್ದರು?
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ತಕ್ಕಳಪ್ಪ,  (ಸ) ಗೌಡ್ರು (?) ಸುರುಮಾಡೇಬಿಟ್ರು,  ಆ ದರ್ಮೇಂದ್ರಪ್ಪನ್  ಡೈಲಾಗ್ನ !

ಇತ್ತೀಚಿನ ಪ್ರತಿಕ್ರಿಯೆಗಳು

  • summer_glau
    ಉ: ಇಂಟರನೆಟ್ ಎಕ್ಸಪ್ಲೊರರ್ ೬ ರೇ ಗ್ರೇಟು!
    October 7, 2008 - 7:36pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    October 7, 2008 - 7:21pm
  • ASHOKKUMAR
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 7:15pm
  • omshivaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    October 7, 2008 - 7:14pm
  • ASHOKKUMAR
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 7:14pm
  • omshivaprakash
    ಉ: ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?
    October 7, 2008 - 7:07pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:45pm
  • apr
    ಉ: ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?
    October 7, 2008 - 6:43pm
  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
ಇನ್ನಷ್ಟು


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator