ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › ಪ್ರಚಲಿತ ಲೇಖನ ವರ್ಗದ ಚಿತ್ರಗಳು

ಮುಂಬೈನ, ಮೈಸೂರ್ ಅಸೋಸಿಯೇಶನ್ ಸ್ವರ್ಣಗೌರಿ, ಹಾಗೂ ಮಹಾಗಣಪತಿಯ ವಿಸರ್ಜನೆ, ರವಿವಾರದಂದು, ವಿಜೃಂಭಣೆಯಿಂದ, ನೆರೆವೇರಿತು !

September 23, 2007 - 7:49pm — venkatesh
ಮುಂಬೈನ, ಮೈಸೂರ್ ಅಸೋಸಿಯೇಶನ್ ಸ್ವರ್ಣಗೌರಿ, ಹಾಗೂ ಮಹಾಗಣಪತಿಯ ವಿಸರ್ಜನೆ,  ರವಿವಾರದಂದು, ವಿಜೃಂಭಣೆಯಿಂದ,  ನೆರೆವೇರಿತು !

ಶ್ರೀ ಸ್ವರ್ಣಗೌರಿ ಮತ್ತು ಶ್ರೀ ಮಹಾಗಣಪತಿ ಪೂಜಾಮಹೋತ್ಸವ. ಸರ್ವಜಿನ್ನಾಮ ಸಂವತ್ಸರದ ಶಾಲಿವಾಹನಶಕೆ ೧೯೨೯, ಭಾದ್ರಪದ ಮಾಸ ಶುಕ್ಲ ಚತುರ್ಥೀ, ಶುಕ್ರವಾರದ ದಿನ,( ೧೪-೦೯-೨೦೦೭) ವಿಜೃಂಭಣೆಯಿಂದ ಗೌರಿ ಮತ್ತು ಗಣೇಶನ ಉತ್ಸವವನ್ನು, ಮುಂಬೈನ, ಮೈಸೂರು ಅಸೋಸಿಯೇಶನ್ನಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ, ನಡೆಸಲಾಯಿತು.

ಕಾರ್ಯಕ್ರಮಗಳ ಸ್ಥೂಲ ಪರಿಚಯ :

೧. ೧೪, ನೆಯ ಶುಕ್ರವಾರ, ಸೆಪ್ಟೆಂಬರ್ ೨೦೦೭ ರಂದು, ಬೆಳಿಗ್ಯೆ, ಶ್ರೀ ಸ್ವರ್ಣಗೌರಿ ಪ್ರತಿಷ್ಥಾಪನಾಪೂಜೆಯನ್ನು,
ಮಾಡಲಾಯಿತು. ಅಂದಿನ ಸೇವಾರ್ಥಿಗಳು, ಶ್ರೀಮತಿ/ಶ್ರೀ ಸುಮಿತ್ರ ಚಂಪಕನಾಥ್, ಶ್ರೀ ಪಿ. ಎನ್
ರಾಮರಾವ್, ಶ್ರೀಮತಿ/ಶ್ರೀ ನಾರಾಯಣ ಜಾಗೀರ್ದಾರ್, [ದಿವಂಗತ] ಶ್ರೀ ನರಸಿಂಹಯ್ಯ, ಶ್ರೀಮತಿ.
ವಿಶಾಲಾಕ್ಷಿ ಎಸ್. ರಾವ್, ಶ್ರೀಮತಿ ವೆಂಕಟಲಕ್ಷ್ಮೀರಾವ್, (ದಿವಂಗತ), ಡಾ. ಕೆ. ಶಂಕರ್, (ದಿವಂಗತ),
ಶ್ರೀಮತಿ ಸೀತಮ್ಮ ರಾವ್.

೨. ಶನಿವಾರ, ೧೫-೦೯-೨೦೦೭ ರಂದು, ಶ್ರೀ ಮಹಾಗಣಪತಿ ಪ್ರತಿಷ್ಠಾಪನಾಪೂಜೆ ಮತ್ತು ಆರತಿ.

೩. ರವಿವಾರದಂದು, ೧೬-೦೯-೨೦೦೭ ಪೂಜೆ ಮತ್ತು ಮಹಾಮಂಗಳಾರತಿ ಬೆಳಿಗ್ಯೆ ೯ ಮತ್ತು ರಾತ್ರಿ ೯ ಗಂಟೆ.

೪. ಸೋಮವಾರ, ೧೭-೦೯-೨೦೦೭ ರಂದು, ಸಾಯಂಕಾಲ, ೭ ರಿಂದ ೯ ರವರೆಗೆ, ಕಿರಿಯ ಹಾಡುಗಾರರಿಗಾಗಿ
ಕರ್ನಾಟಕ ಸಂಗೀತದ ಸ್ಪರ್ಧೆ ಇತ್ತು.

೫. ಮಂಗಳವಾರ, ೧೮-೦೯-೨೦೦೭ ರಂದು, ಕಿರಿಯ ಹಾಡುಗಾರರಿಗಾಗಿ ಕರ್ನಾಟಕಶೈಲಿಯ ಸಂಗೀತಸ್ಪರ್ಧೆ
ಇತ್ತು.

೬. ೧೯-೦೯-೨೦೦೭, ಬುಧವಾರದಂದು, ಬೆಳಿಗ್ಯೆ ೯ ಗಂಟೆಗೆ, ಪೂಜೆ ಮತ್ತು ಮಹಾಮಂಗಳಾರತಿ.

೧೯-೦೯-೨೦೦೭, ಬುಧವಾರದಂದು, ಕುಮಾರಿ ನಳಿನಿ ದಿನೇಶ್, ಮತ್ತು ಸಂಗಡಿಗರಿಂದ ಕರ್ನಾಟಕಶೈಲಿಯ
ಸಂಗೀತದ ಹಾಡುಗಾರಿಕೆ.

೭. ೨೦-೦೯-೨೦೦೭, ಗುರುವಾರದಂದು, ಕುಮಾರಿ ವಿದ್ಯಾನಂದಿ ಐಯರ್, ರವರಿಂದ ಕರ್ನಾಟಕ
ಹಾಡುಗಾರಿಕೆ.

೮. ೨೧-೦೯-೨೦೦೭, ಶುಕ್ರವಾರದಂದು, ಸಾಯಂಕಾಲ, ೬-ರಿಂದ ೭ ಗಂಟೆಗೆ ಅರಿಶಿನ -ಕುಂಕುಮದ
ಕಾರ್ಯಕ್ರಮ, ಅಸೋಸಿಯೇಶನ್ ನ ಮಹಿಳಾಸದಸ್ಯೆಯರಿಂದ. ೭ ಗಂಟೆಯಿಂದ ೯ ರವರೆಗೆ, ಶ್ರೀಮತಿ
ವೀಣಾ ಶಾಸ್ತ್ರೀ ಮತ್ತು ವೃಂದದವರಿಂದ, ಕರ್ನಾಟಕಶೈಲಿಯ ಸಂಗೀತ ಕಛೇರಿ ಇತ್ತು.

೯. ೨೨-೦೯-೨೦೦೭, ಶನಿವಾರದಂದು, ಮಾಸ್ಟರ್ ಕೃಷ್ಣ ಪವನ್ ಕುಮಾರ್, ರವರಿಂದ, ಕರ್ನಾಟಕಶೈಲಿಯ
ಕೊಳಲುವಾದನವಿತ್ತು.

೧೦. ಭಾನುವಾರ, ೨೩-೦೯-೨೦೦೭ ರಂದು, "ಶಂಕರಮಠದ ವೈದಿಕರಿಂದ ವೇದಘೋಷ". ಕರ್ನಾಟಕ ಸಂಗೀತ
ಸ್ಪರ್ಧೆಯಲ್ಲಿ ವಿಜೇತರಿಗೆ, ಬಹುಮಾನ ವಿತರಣಾಸಮಾರಂಭ. ಬೆಳಿಗ್ಯೆ ೧೧ ಗಂಟೆಗೆ.

೧೨ ಗಂಟೆಗೆ, ಪೂಜೆ ಮತ್ತು ಮಹಾಮಂಗಳಾರತಿ. ಶ್ರೀ ಸ್ವರ್ಣಗೌರಿ ಮತ್ತು ಶ್ರೀ ಗಣಪತಿಯನ್ನು
ಮೆರವಣಿಗೆಯಲ್ಲಿ ದಾದರ್ ಬೀಚಿಗೆ ಮೆರವಣಿಗೆಯಲ್ಲಿ ಕರೆದೊಯ್ದು, ಸಮುದ್ರದಲ್ಲಿ ಮೂರ್ತಿ ವಿಸರ್ಜನೆ.
ಕೊನೆಯದಾಗಿ, ಇದಾದ ಕೆಲವೇ ನಿಮಿಷದಲ್ಲಿ ಪ್ರಸಾದವಿಯೋಗದ ಕಾರ್ಯಕ್ರಮದೊಂದಿಗೆ ಗಣಪತಿ
ಪೂಜಾಮಹೋತ್ಸವ ಸಂಪನ್ನವಾಯಿತು.

ಮೇಲೆ ತಿಳಿಸಿದ, ಶ್ರೀ ಸ್ವರ್ಣಗೌರಿ ಮತ್ತು ಶ್ರೀ ಮಹಾಗಣಪತಿ ಪೂಜಾಮಹೋತ್ಸವ ಕಾರ್ಯಕ್ರಮಗಳನ್ನು ನಿಯೋಜಿಸಿದವರು : ಡಾ. ಬಿ. ಆರ್. ಮಂಜುನಾಥ್, ಶ್ರೀ ಕೆ. ಮಂಜುನಾಥಯ್ಯ, ಶ್ರೀಮತಿ ಮತ್ತು ಶ್ರೀ ಕೆ. ಎನ್. ಶ್ರೀನಿವಾಸರಾವ್ ಮತ್ತು ಶ್ರೀಮತಿ ರಾಮಬಿಹಾರಿ, ಶ್ರೀ ಸಾಯಿಸಮರ್ಥ ವಿದ್ಯನ್ ಪ್ರಬೋಧಿನಿ.

ಎಲ್ಲಾ ಕಾರ್ಯಕ್ರಮಗಳೂ ಮುದ್ರಿಸಿ ಹಂಚಲಾಗಿರುವ ಕಾರ್ಯಕ್ರಮ-ವೇಳಾಪಟ್ಟಿಯ ಪ್ರಕಾರ ಇದ್ದವು. ರವಿವಾರ ಗಣಪತಿ ವಿಸರ್ಜನೆಯ ಸಮಯದಲ್ಲಿ, ನೂರಾರು ಜನ ಸದಸ್ಯರುಗಳೆಲ್ಲಾ ಬಂದು ಭಾಗವಹಿಸಿದ್ದರು. ವೀಣಾ ವೈನಿಕ, ಶ್ರೀ ಶಂಕಾನಾರಾಯಣರಾಯರು, ಮತ್ತು ಅನೇಕ ಹಳೆಯ ಸದಸ್ಯರು ಬಂದಿದ್ದರು. ಶ್ರೀ ಮಂಜುನಾಥ ದ್ವಯರು, ಬೆಂಗಳೂರಿನಲ್ಲಿ ನೆಲಸಿದಾಗ್ಯೂ, ಅಸೋಸಿಯೇಷನ್ ಮೇಲಿನ ಪ್ರೀತಿ-ವಿಶ್ವಾಸಗಳಿಂದಾಗಿ ಬಿಡುವುಮಾಡಿಕೊಂಡು ಸಮಾರಂಭದಲ್ಲಿ ಭಾಗವಹಿಸಿ, ಅದರ ಶೃಂಗಾರವನ್ನು ಹೆಚ್ಚಿಸಿದರು. ಮೈಸೂರ್ ಅಸೋಸಿಯೇಷನ್ ನ ಅಧ್ಯಕ್ಷರಾದ, ಶ್ರೀ ದೊರೈಸ್ವಾಮಿಯವರು, ಮತ್ತು ಅವರ ಧರ್ಮಪತ್ನಿಯವರು ಹಾಜರಿದ್ದು, ಎಲ್ಲ ಭಕ್ತರನ್ನೂ ಸ್ವಾಗತಿಸಿದರು. ಅಸೋಸಿಯೇಷನ್ ನ ಕಾರ್ಯಕಾರೀಸಮಿತಿಯ ಸದಸ್ಯರೆಲ್ಲಾ ಹಾಜರಿದ್ದು, ಸಮಾರಂಭದ ಯಶಸ್ಸಿಗೆ ಕಾರಣರಾದರು. ಶ್ರೀಮತಿ ಲಕ್ಷ್ಮೀಸೀತಾರಾಂ, ಶ್ರೀಮತಿ ಶ್ಯಾಮಲಮ್ಮ, ಭವಾನಿ, ಮಧು, ರಾಘವೇಂದ್ರ, ಜನಾರ್ಧನ, ಮಂಜು, ಶಾಂತೇಶ್ , ಶ್ರೀಧರ, ಉದಯ, ಮತ್ತು ಆಫೀಸಿನಲ್ಲಿ ಕೆಲಸಮಾಡುವ ತರುಣಿಯರು, ಪಾದರಸದಂತೆ ಓಡಾಡಿ, ಕಾರ್ಯಕ್ರಮವನ್ನು ಸಕ್ರಿಯಗೊಳಿಸುವಲ್ಲಿ ನೆರವಾದರು.

ಮಾಜಿ, ಕಾರ್ಯದರ್ಶಿ, ಶ್ರೀ. ಎಮ್. ಎ. ಎನ್. ಪ್ರಸಾದ್ ಮತ್ತು ಅವರ ಶ್ರೀಮತಿಯವರಾದ, ಭಾರತೀಪ್ರಸಾದರ ಅನುಪಸ್ಥಿತಿ, ಈ ಎಲ್ಲ ಅತ್ಯುತ್ತಮ ಏರ್ಪಾಟಿನ ಮಧ್ಯೆಯೂ ಎದ್ದು ಕಾಣುತ್ತಿತ್ತು.

  • ಪ್ರಚಲಿತ ಲೇಖನ ವರ್ಗದ ಚಿತ್ರಗಳು
~.~
  • Login or register to post comments
  • 460 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • " ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !
  • "ಮೈಸೂರ್ ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ," ಮೈಸೂರ್ ಅಸೋಸಿಯೇಷನ್ ಮುಂಬೈನಲ್ಲಿ !
  • ನಾಟಕ ಅಕಾಡೆಮಿ ಪ್ರಶಸ್ತಿಗಳು
  • 'ಮೈಸೂರು ಸಂಗೀತ ವಿದ್ಯಾಲಯ', ಡೊಂಬಿವಲಿ, ಮುಂಬೈ - ಬೆಳ್ಳಿ ಹಬ್ಬ ಆಚರಿಸುತ್ತಿದೆ !
  • ಮುಂಬೈ ನಗರದ ಕನ್ನಡನಾಟಕರಂಗದ ಕಲಾವಂತ ದಂಪತಿಗಳಿಗೆ, " ಅಭಿನಂದನಾಸಮಾರಂಭ." !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಗಣಪತಿ

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 1:37pm
  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
ಇನ್ನಷ್ಟು


ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator