ಗಣಪತಿ ಬಪ್ಪನಿಗೆ ಭಾವಪೂರ್ಣ ವಿದಾಯ !

ಅನಂತ ಚತುರ್ದಶಿಯ ಶುಭದಿನದಂದು, ೧೦ ದಿನಗಳ ಹಬ್ಬದ ಸಡಗರದಲ್ಲಿ ಪಾಲ್ಗೊಂಡು ಮಿಲಿಯಗಟ್ಟಲೆ ಭಕ್ತರನ್ನು ಹರಸಿ, ಮತ್ತೆ ಅವರಿಂದ ಬೀಳ್ಕೊಡಿಗೆ ಪಡೆಯುತ್ತಿದ್ದಾನೆ- ಈ ಮಂಗಳಮುರ್ತಿ. ಸಕಲ ಕಾರ್ಯಗಳಿಗೂ ಪ್ರಥಮವಂದ್ಯನಾದ ಈ ಮಹಾಪ್ರಭುವು, ಸರ್ವರಿಗೂ ಒಳ್ಳೆಯ ಬುದ್ಧಿಯನ್ನು ಕರುಣಿಸಲಿ.
ಜೈ, ಗಣಪತಿ ಬಪ್ಪಾ ಮೋರ್ಯಾ, ಪುಡ್ಚಾ ವರ್ಷೀ ಲೌಕರ್ ಯಾ !
ಸಾವಿರಾರು ಗಣಪತಿ ಮೂರ್ತಿಗಳನ್ನು ಕೆಲವು ಬೀಚ್ಗಳಲ್ಲಿ ರಾತ್ರಿ ೯-೩೦ ವರೆಗೆ, ವಿಸರ್ಜನೆ ಮಾಡಲಾಯಿತು. ಆದರೆ, ಗಿರ್ಗಾಂ ಚೌಪಾತಿ ಬೀಚಿನಲ್ಲಿ, ೧,೨೫೮ ಪುಟ್ಟಗಣಪತಿಗಳನ್ನೂ, ಮತ್ತು ೧೯,೫೯೪ ಗಣಪತಿ ಮಂಡಲಗಳ ಭಾರಿಮೂರ್ತಿಗಳನ್ನೂ ಕಳಿಸಿಕೊಡಲಾಯಿತು. ಹೀಗೆ, ಬುಧವಾರದ ಬೆಳಗಿನಜಾವದ ವರೆವಿಗೂ ಇನ್ನೂ ಸಹಸ್ರಾರು ಗಣಪತಿಗಳನ್ನು ವಿಸರ್ಜಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ.

- Login or register to post comments
- 502 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ


RSS: