ಕ್ರಿಕೆಟ್ ಆಟದ ಹುಚ್ಚಿನಿಂದ ಮೈಮರೆತ ಫ್ಯಾನ್ ಗಳು, ದೋನಿ ಮತ್ತು ಬಳಗದವರಿಗೆ, ಭವ್ಯ ಸ್ವಾಗತ ನೀಡಿದರು !

ವಿಶೇಷ : ಟೀ-೨೦ ಯಲ್ಲಿ ಪಾಕೀಸ್ತಾನವನ್ನು ಮಣಿಸಿ ಜಯಭೇರಿಗಳಿಸಿ, ವಪಸ್ಸಾಗುತ್ತಿರುವ ಬಾರತ ಕ್ರಿಕೆಟ್
ಪಡೆಯನ್ನು ಸ್ವಾಗತಿಸುವ,ಮತ್ತು ಅವರನ್ನು ಸುರಕ್ಷಿತವಾಗಿ ವಾಂಖಡೆ ಸ್ಟೇಡಿಯಂಗೆ ಕರೆದೊಯ್ಯಲು
ಸಿದ್ಧತೆ.
ದಿನ : ೨೬-೦೯-೨೦೦೭ :
ಸ್ಥಳ : ಛತ್ರಪತಿ ಅಂತರರಾಷ್ಟ್ರೀಯ ವಿಮಾನ ತಾಣ.
ಇದೆಲ್ಲಾ ಪ್ರಪ್ರಥಮವಾಗಿ ನಡೆದದ್ದು, Airport Authority of India , ದ ಛತ್ರಪತಿ ಅಂತರರಾಷ್ಟ್ರೀಯ ವಿಮಾನ ತಾಣದಲ್ಲಿ ! ಇದು, ಅಲ್ಲಿ ನೆರೆದಿದ್ದ ೫,೦೦೦ ನ ಫ್ಯಾನ್ಗಳಿಗೆ, ೧೦೦ ಜನ ನೇತಾಗಣಕ್ಕೆ, ಮತ್ತು ೩೦೦ ಕಮ್ಯಾಂಡೋಗಳಿಗೆ, ೫೦೦ ಕಾರ್ಗಳಿಗೆ, ಹಾಗೂ ೩ ದೊಡ್ಡಬಸ್ಸುಗಳಿಗೆ ( ನಮ್ಮ ಹೀರೋಗಳನ್ನು ಕರೆದೊಯ್ಯಲು ಬಂದಿದ್ದ ೩ ದೊಡ್ಡ ಬಸ್ಸುಗಳಿಗೆ ) ಆತಿಥ್ಯ ನೀಡಲು ಪ್ರಾಧಿಕಾರ, ತಿಣಕಾಡಬೇಕಾಯಿತು. ಇದರ ನಡುವೆ ಮೀಡಿಯಾದವರ ಪಡೆ ಬೇರೆ !
ಬೀ.ಸಿ.ಸಿ ಐ. ನ ಅಧ್ಯಕ್ಷ, ಶ್ರೀ. ಶರದ್ ಪವಾರ್, ಎಲ್ಲ ಖಿಲಾಡಿಗಳನ್ನೂ ಸ್ವಾಗತಿಸಿದರು. ಸುಮಾರು ೫೦,೦೦೦ ಜನ ಕ್ರಿಕೆಟ್ ಪ್ರೇಮಿಗಳು , ಕೆಲಸದ ದಿನವಾದಾಗ್ಯೂ ಸ್ಟೇಡಿಯಂ ನಲ್ಲಿ ಹಾಜರಿದ್ದು, ಜಯಘೋಷ ಮಾಡಿದರು.
ಪ್ರತಿ ಆಟಾಗಾರನಿಗೂ ೮೦ ಲಕ್ಷ ರೂ ಗಳ ಬಳುವಳಿ ! ಯುವರಾಜ್ ಸಿಂಗ್ ಗೆ, ಇದರ ಮೇಲೆ ೧ ಕೋಟಿರೂಗಳ ಬಕ್ಷೀಸ್, ಹಾಗೂ ಅತ್ಯುತ್ತಮ ಸ್ಪೋರ್ಟ್ಸ್ ಕಾರ್ ! ( ಸತತವಾಗಿ ೬ ಸಿಕ್ಸ್ ಹೊಡೆದದ್ದಕ್ಕೆ). ವಿಜಯದ ಟೀಮಿಗೆ”ಮಹಾರಾಷ್ಟ್ರದ ಟ್ರೋಫಿ,’ ಕೂಡ ಸಿಕ್ಕಿದೆ. ಕ್ರಿಕೆಟ್ ಆಟದ ಮೋಡಿಯೇ ಹಾಗೆ !
ಪಾಪ, ನಮ್ಮ ಟೆನ್ನಿಸ್ ಆಟಗಾರರು ಪ್ರಾಣ ಒಪ್ಪಿಸಿದರೂ, ಯಾರಿಗೂ ಕನಿಕರವಿಲ್ಲ. ಅವರೆಲ್ಲಾ ಈಗ ’ಸತ್ಯಾಗ್ರಹ”ವನ್ನು ಆಚರಿಸುತ್ತಿದ್ದಾರೆ. ಇದು ನ್ಯಾಯತಾನೇ ? ಒಲಂಪಿಕ್ಸ್ ನಲ್ಲಿ ಪದಕ ಪಡೆದ ಕೆಲವರು, ರಸ್ತೆಗಳಲ್ಲಿ ತರಕಾರಿ ಮಾರುತ್ತಿದ್ದಾರೆ. ತಮ್ಮ ಪದಕವನ್ನು" ಆಡ "ಇಟ್ಟು, ಜೀವನ ನಿರ್ವಹಣೆಗೆ ಬೇಕಾದ ರೊಕ್ಕ ಪಡೆದವರೇನು ಕಡಿಮೆಯೇ ?

- Login or register to post comments
- 766 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಬಂಗಾರದಂತಹ ನಮ್ಮ ಕನ್ನಡಿಗ, ಅನಿಲ್ ಕುಂಬ್ಳೆಯವರಿಗೆ ಬಂಗಾರದ ವಜ್ರಲೇಪಿತ ಕ್ರಿಕೆಟ್ ಚೆಂಡಿನ ಉಡುಗೊರೆ !
- ಇಗೋ ಬಂತು ಕ್ರಿಕೆಟ್ ಸಮಯ
- ತುಂತುರು ಮಳೆಯಲ್ಲೂ ಆಟದ ಸೊಗಸಿಗೆ ಕಡಿಮೆಯೇನೂ ಇರಲಿಲ್ಲ ; ಆಸ್ಟ್ರೇಲಿಯ, ಶ್ರೀ ಲಂಕಾ ವನ್ನು ೫೩ ರನ್ನುಗಳಿಂದ ಮಣಿಸಿ ವಿಶ್ವಕ್ರಿಕೆಟ್ ಗೆದ್ದಿದೆ.
- ವಿಶ್ವಕಪ್ ಕ್ರಿಕೆಟ್ ಜ್ವರ:ಇಳಿದೀತೇ?
- ಅಪಾರ ಕೀರ್ತಿ ಗಳಿಸಿ ಮೆರೆವ ಕ್ರಿಕೆಟ್ ಪಡೆಯಿದು.....


RSS:
ಪ್ರತಿಕ್ರಿಯೆಗಳು
ಉ: ಕ್ರಿಕೆಟ್ ಆಟದ ಹುಚ್ಚಿನಿಂದ ಮೈಮರೆತ ಫ್ಯಾನ್ ಗಳು, ದೋನಿ ಮತ್ತು ಬಳಗದವರಿಗೆ, ಭವ್ಯ ಸ್ವಾಗತ ನೀಡಿದರು !
ಕ್ರಿಕೇಟ್ ಸೆ೦ಟಿಮೆ೦ಟಲ್ ಗೇಮ್ ! ಆದರೆ ನೀವು ರಾಜಕೀಯ ನಾಯಕತ್ತ್ವದ ಬಗ್ಗೆ ಯೋಚನೆ ಮಾಡಿ ಎಷ್ಟು ಗಬ್ಬಾಗಿದೆ.
http://www.hindu.com/2007/09/26/stories/2007092656251000.htm
Leadership calls, at Durban and Bhopal statecraft
ತು೦ಬಾ ಚೆನ್ನಾಗಿ ಹೋಲಿಕೆಯನ್ನು ಕೊಟ್ಟಿದ್ದಾನೆ.
ಆದೆರೆ ನಮ್ಮ ರೈತ ಸ೦ಘದವರು ಸರ್ಕಾರದ ವರ್ತನೆಯನ್ನು ಖ೦ಡಿಸಿದ್ದಾರೆ.
http://www.daijiworld.com/news/news_disp.asp?n_id=38480&n_tit=Bangalore%...
ಅಲ್ಲಾ ನಮ್ಮ ವ್ಯವಸಾಯ ಮತ್ತು ಕೄಶ್ಃಇ ಮ೦ತ್ರಿಗಳು ಕ್ರಿಕೇಟ್ ಆಟದಲ್ಲಿ ತೊಡಗಿರುವಾಗ , ರೈತರಿಗೆ ಯಾರು ದಿಕ್ಕು ?
ಉ: ಕ್ರಿಕೆಟ್ ಆಟದ ಹುಚ್ಚಿನಿಂದ ಮೈಮರೆತ ಫ್ಯಾನ್ ಗಳು, ದೋನಿ ಮತ್ತು ಬಳಗದವರಿಗೆ, ಭವ್ಯ ಸ್ವಾಗತ ನೀಡಿದರು !
ಹೌದು. ಹೊಲಸಾಗಿ ನಾರುತ್ತಿದೆಯಲ್ಲ. ಈ ಹಾಳು ರಾಜಕೀಯ.
ಗೋಧಿಯನ್ನು ಹೆಚ್ಚು ಬೆಲೆಗೆ ಕೊಂಡು, ನಮ್ಮ ರೈತರ ಬೆಳೆಯನ್ನು ಅತ್ಯಂತ ಕಡಿಮೆ ಬೆಲೆಗೆ ಕೋಟ್ ಮಾಡಿದ್ದನ್ನು ಸಮರ್ಥಿಕೊಳ್ಳುವ ಕೃಷಿ ಮಂತ್ರಿಗೆ, ರೈತರ ಬಗ್ಗೆ ಕಾಳಜಿ ಎಲ್ಲಿ ?
ಉ: ಕ್ರಿಕೆಟ್ ಆಟದ ಹುಚ್ಚಿನಿಂದ ಮೈಮರೆತ ಫ್ಯಾನ್ ಗಳು, ದೋನಿ ಮತ್ತು ಬಳಗದವರಿಗೆ, ಭವ್ಯ ಸ್ವಾಗತ ನೀಡಿದರು !
ಪ್ರೊಸೆಶನ್ ಎಲ್ಲ ಬೇಡವಿತ್ತೇನೋ ಅನ್ಸತ್ತೆ. ಜೊತೆಗೆ ವಾಂಕೆಡೆಯಲ್ಲಿ ನಡೆದ ಸಮಾರಂಭದ ಪೋಡಿಯಮ್ ಬರೇ ಪುಢಾರಿಗಳಿಂದ ತುಂಬಿತ್ತು. ಕ್ರಿಕೆಟಿಗರನ್ನೆಲ್ಲ ಹಿಂದೆ ದಬ್ಬಿ ತಾವೇ ಹೀರೋಗಳಂತೆ ರಾಜಾರೋಷವಾಗಿ ಕೂತಿದ್ರು.
ಕೃಷಿ ಮಂತ್ರಿಯ ಸೌಭಾಗ್ಯ ನೋಡಿ - ಕ್ರಿಕೆಟ್ಟಿಂದ ದುಡ್ಡು, ಕೇಂದ್ರ ಸರಕಾರದಲ್ಲಿ ಖುರ್ಚಿ ಬೇರೆ. ಕ್ರಿಕೆಟ್ಟಿನ ಹಗರಣಗಳೇ ಸಮಯ ತೆಗೆದುಕೊಳ್ಳುತ್ತಿದ್ದರೆ ಪಾಪ ಬಡ ರೈತರ ಕಡೆ ಗಮನ ತಾನೆ ಹೇಗೆ ಹೋಗುವುದು?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಕ್ರಿಕೆಟ್ ಆಟದ ಹುಚ್ಚಿನಿಂದ ಮೈಮರೆತ ಫ್ಯಾನ್ ಗಳು, ದೋನಿ ಮತ್ತು ಬಳಗದವರಿಗೆ, ಭವ್ಯ ಸ್ವಾಗತ ನೀಡಿದರು !
ಮಾದ್ಯಮದವರು ನಡೆದುಕೊ೦ಡ ರೀತಿಯೂ ತೀರ ಅಸಹ್ಯವಾಗಿತ್ತು. ಉತ್ತರ ಕರ್ನಾಟಕದ ಜನತೆ ಪ್ರವಾಹದಲ್ಲಿ ಮುಳುಗಿ ಸ೦ಕಷ್ಟ ಅನುಬವಿಸುತ್ತಿದ್ದರೂ, ದೃಶ್ಯ ಮತ್ತು ಪತ್ರಿಕೆಗಳು ಬಾರತದ ಜಯವನ್ನ ಸತತವಾಗಿ ೩ ದಿವಸ ಹಾಡಿ ಒಗಳಿ ಕೊ೦ಡಾಡಲು ಮುಡಿಪಾಗಿಟ್ಟವು.
ಇನ್ನು ನಮ್ಮ ರಾಜ್ಯ ಸರ್ಕಾರದವರು ನಡೆದುಕೊ೦ಡಿದ್ದನ್ನೇ ನೋಡಿ. ಉತ್ತರ ಕರ್ನಾಟಕದ ಜನತೆ ಪ್ರವಾಹದಿ೦ದಾಗಿ ಒ೦ದು ಒತ್ತು ಕೂಳಿಗಾಗಿ ಪರದಾಡುತ್ತಿದ್ದಾಗ ೧೦ ಲಕ್ಷ ಬಹಮಾನ ಘೋಷಿಸುವ ಔಚಿತ್ಯವಿತ್ತೆ? ಈ ಕ್ರಿಕೆಟರಿಗೆ ಸಾಕಷ್ಟು ಹಣ ಹರಿದು ಬ೦ದಿರಲಿಲ್ಲವೇ? ಈ ಹಣದಿ೦ದ ಅದೆಷ್ಟೋ ಜನರ ಹೊಟ್ಟೆ ತು೦ಬಿಸಬಹುದಾಗಿತ್ತು!.
ಇದೆಲ್ಲ ಸಮೂಹ ಸನ್ನಿ ಎನ್ನೋಣವೇ!
ಉ: ಕ್ರಿಕೆಟ್ ಆಟದ ಹುಚ್ಚಿನಿಂದ ಮೈಮರೆತ ಫ್ಯಾನ್ ಗಳು, ದೋನಿ ಮತ್ತು ಬಳಗದವರಿಗೆ, ಭವ್ಯ ಸ್ವಾಗತ ನೀಡಿದರು !
ಇದು ಬೇಕೊಬೆಡವೊ ಗೊತ್ತಿಲ್ಲ. ಆದರೆ ಅವರಿಗೆ ಪ್ರೊತ್ಸಹ ಕೊಟ್ಟದ್ದು ತಪ್ಪಲ್ಲ. ನೆರೆ ಬರ ಅಂತ ನಮ್ಮ ಪುಡಾರಿಗಳು ನುಂಗಿದ್ದರ ಬಗ್ಗೆ ನಿವ್ಯಾಕೆ ಮತಾಡೊಲ್ಲ. ಕ್ರಿಕೆಟಿಗರು ವಿಶ್ವದೆಲ್ಲೆಲ್ಲಾ ನಾವು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅದು ನಿಮಗೆ ಇನ್ನು ಅರ್ಥ ಆಗಬೆಕಾದರೆ ಪಕಿಸ್ತಾನದ ಕೆಲವರ ಪ್ರತಿಕ್ರಿಯೆಗಳಾನ್ನು ಗಮನಿಸಬೇಕು. ಇತರ ಆಟಗಳಿಗೂ ಪ್ರೊತ್ಸಾಹ ದೊರಕ ಬೆಕು ನಿಜ ಆದಕ್ಕಿಣ್ತ ಹೆಚ್ಹಾಗಿ ನಮ್ಮ ಮಕ್ಕಳಿಗೆ ಇತರ ಆಟಗಳ ಪರಿಚಯ ಹಾಗು ಸವಲತ್ತು ಸಿಗಬೇಕು. ಸಾನಿಯ ಮಿರ್ಜಾ, ವಿಶ್ವನಾಥ್ ಆನಂದ್ ಯೆಲ್ಲಾ ನಮ್ಮವರಲ್ಲವೆ?
ಉ: ಕ್ರಿಕೆಟ್ ಆಟದ ಹುಚ್ಚಿನಿಂದ ಮೈಮರೆತ ಫ್ಯಾನ್ ಗಳು, ದೋನಿ ಮತ್ತು ಬಳಗದವರಿಗೆ, ಭವ್ಯ ಸ್ವಾಗತ ನೀಡಿದರು !
ಹೌದು ಸ್ವಾಮಿ,
ನಾವೆಲ್ಲಿ ಬೇಡ ಅಂದ್ವಿ. ನನ್ನ ಕಸಿನ್ ಒಬ್ನೂ ಕ್ರಿಕೆಟ್ ಚೆನ್ನಾಗೇ ಆಡ್ತಿದಾನೆ. ವೇಗದ ಬೊಲರ್. ಆದ್ರೆ, ಒಂದೇ ಒಂದು ಸರಣಿನಲ್ಲಿ ಅಳಕ್ ಪಳಕ್ ಅಂತವ ಗೆದ್ರು ಸರಿ. ಅದಕ್ಕೆ ೮೦ ಲಕ್ಷ, ಕೊಟಿಗಟ್ಲೆ ಬಹುಮಾನ. ಇವೆಲ್ಲಾ ಅತಿ ಅಲ್ವ. ನೀವನ್ನೋದೇನು ? ಪಾರಿತೋಷಕದ್ ಹಣ ಬಂತು. ಕೊಟ್ವಿ. ನಮ್ಜೇಬ್ಗೂ ಸ್ವಲ್ಪ ಆಕ್ಕಂಡ್ವಿ- ಅಂತವ.
ಆದ್ರೆ, ನಮ್ಮವ್ರೆ ಆದ ಟಿನ್ನಿಸ್ ನೋರ್ನ ನೀವ್ ಮಾತ್ಕೂಡಾ ಆಡ್ಸಲ್ವಲ್ಲಾ ? ಅದನ್ನೇ ನಾವ್ಕೇಳ್ತಿರೋತು !
ಪಾಕೀಸ್ತಾನಾನ್ನ ಮಣಿಸಿದ್ದು ಮಾತ್ರ ನನ್ಗೆ ಭಾಳಾ ಸಂತೊಸ ಆತ್ ನೋಡ್ರಿ !
ಗೆಲ್ದೆ ಕೆಟ್ಮಕ ಆಕ್ಕಂಡ್ ಬಂದಿದ್ರೆ ಯೇನು ? ಅದೊಂದ್ ರಾಮಾಣ್ಯ ಅಲ್ ವ್ರಾ ? ಏನು, ನೀವೇ ಯೇಳಿ ?
ಸರಿ. ಓಗ್ಲಿ ಬಿಡ್ರಿ.
ಉ: ಕ್ರಿಕೆಟ್ ಆಟದ ಹುಚ್ಚಿನಿಂದ ಮೈಮರೆತ ಫ್ಯಾನ್ ಗಳು, ದೋನಿ ಮತ್ತು ಬಳಗದವರಿಗೆ, ಭವ್ಯ ಸ್ವಾಗತ ನೀಡಿದರು !
ಯಾರು ಹೆಳಿದ್ದು ಸಾರ್ ಮಾತಾಡ್ಸಲ್ಲ ಅಂತ ನಮ್ಮ ಮಾಮು ದರ್ಮಣ್ಣ ಸಾನಿಯಾಳನ್ನು ಕರೆದು ಸನ್ಮಾನ ಮಾಡಿದ್ದು ಮರ್ತ್ರೆನು? ಈಗ ಕ್ರಿಕ್ಕೆಟ್ಟು ಆಡುತಿರುವ ಹುಡುಗರು ನ್ಯಾಶನಲ್ ಲೆವೆಲ್ಗೆ ಬರ್‍ಒದಕ್ಕೆ ಯೆಷ್ಟು ಕಷ್ಟ ಪಟ್ಟಿರುತ್ತಾರೆ ಯೊಚನೆ ಮಾಡಿ. ಅದು ಅಲ್ಲದೆ ಹಾಕಿ ನವರು ಈಗ ಬೊಬ್ಬೆ ಹೊಡಿತಾರೆ ಅವರು ಸೊತ ಮ್ಯಾಚ್ ಯೆಸ್ಟು? ಆಗ ಅವರ ಮನೆಗೆ ಯಾರು ಕಲ್ಲು ಹೋಡೆದ್ದಿಲ್ಲ ಅಲ್ವೆ? ಆದರೆ ಪಾಪ ಕ್ರಿಕ್ಕೆಟು ಹುಡಗರು ಸೊತ ಕೋಡಲೆ ಅವರ ಮನೆ ಮೇಲೆ ಕಲ್ಲೂ ಹೋಡಿತಾರೆ ನಮ್ ಜನ!!