ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › ಚಿತ್ರ ಪುಟಗಳು › ಪ್ರಚಲಿತ ಲೇಖನ ವರ್ಗದ ಚಿತ್ರಗಳು

ಅರರೆ, ಹೌದು. ಇವತ್ತು ಲತಕ್ಕಂಗೆ ೮೧ ತುಂಬ್ತಲ್ವಾ !

September 28, 2007 - 5:34pm — venkatesh
ಅರರೆ,  ಹೌದು.  ಇವತ್ತು ಲತಕ್ಕಂಗೆ ೮೧ ತುಂಬ್ತಲ್ವಾ !

ಭಾರತೀಯ ಚಲನಚಿತ್ರರಂಗ, ಲತಾಮಂಗೇಶ್ಕರ್ ರವರ ಜೊತೆ-ಜೊತೆಯಾಗಿಯೇ ಬೆಳೆಯುತ್ತಾಬಂತು. ಅದರ ಉತ್ಕರ್ಷಕ್ಕೆ ಬಹುಶಃ, ಲತಾಮಂಗೇಶ್ಕರ್ ರಷ್ಟು ಸಹಕಾರ, ಬೇರೆ-ಯಾರೂ ಕೊಟ್ಟಿರಲಾರರು ! ಲತಾರವರ ಹಾಡುಗಳೇ ಚಿತ್ರರಂಗದ ಬೆನ್ನೆಲುಬು, ಎನ್ನುವವರಿಗೇನೂ ಕಡಿಮೆಯಿಲ್ಲ. ಸುಶ್ರಾವ್ಯವಾಗಿ, ನಟಿಯರ ಕಂಠಕ್ಕೆ ಅನುಗುಣವಾಗಿ, ಅತ್ಯಂತ ಸರಾಗವಾಗಿ ಹಾಡಿ, ಚಿತ್ರದ ಸನ್ನಿವೇಶಗಳನ್ನು ಜೀವಂತವಾಗಿಟ್ಟಿರುವ ಲತಾ, ಒಬ್ಬ ವ್ಯಕ್ತಿಯಲ್ಲ ; ಒಂದು ಸಂಸ್ಥೆ ಎನ್ನಬಹುದು !

ಹಾಡುಗಳಿಲ್ಲದೇ, ಭಾರತೀಯ ಚಲನ ಚಿತ್ರಗಳನ್ನು, ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಮಧುಬಾಲ ರಿಂದ, ಇಂದಿನ ಯುವಪೀಳಿಗೆಯ ನಟಿ, ಕಾಜುಲ್ ವರೆಗೆ ಲತಾ, ತಮ್ಮ ಕಂಠದಾನ ಮಾಡಿ, ಒಂದು ವಿಕ್ರಮವನ್ನೇ ಸ್ಥಾಪಿಸಿದ್ದಾರೆ !

ಹಿಂದಿ, ಮತ್ತು ಮರಾಠಿ ಚಿತ್ರಗಳಲ್ಲಿ ಹಾಡಲು ಲತಾ ಪಾದಾರ್ಪಣೆಮಾಡಿದ ಕಾಲದಲ್ಲಿ, ಅವರಿಗೆ ಸಿಗುತ್ತಿದ್ದ ಸಂಭಾವನೆ ತೀರಾ ಕಡಿಮೆ. ೧೯೪೨ ರಲ್ಲಿ, 'ನವ್ ಯುಗ್,' ಎಂಬ ಮರಾಠಿ ಚಿತ್ರಪಟದಲ್ಲಿ, ಅವರು, "ಪಹಿಲಿ ಮಂಗಲಗೌರ್", ಎಂಬ ಮರಾಠಿ ಚಲನ ಚಿತ್ರದಲ್ಲಿ ನಾಯಕಿಯಾಗಿಯೂ ನಟಿಸಿದ್ದರು.

'ಗಜಭಾವು,' ಎನ್ನುವ ಮರಾಠಿ ಚಲನ ಚಿತ್ರದಲ್ಲಿ ಪ್ರಥಮವಾಗಿ ಹಾಡನ್ನು ಹಾಡಿದ್ದರು. ' ಮಾತ ಎಕ್ ಸಪೂತ್ ಎಕ್ ದುನಿಯ ಬದಲ್ ದೆ ತು.'

೧೯೪೬ ರಲ್ಲಿ ತಯಾರಾದ ಹಿಂದಿ ಚಿತ್ರ, " ಆಪ್ ಕಿ ಸೇವಾ ಮೆ " ಮೊದಲನೆಯದು. ವಸಂತ್ ಜೋಗ್ಲೇಕರ್ ರ ಚಿತ್ರ. ಸಂಗೀತ ದತ್ತ ಡಾವ್ಜೇಕರ್, ಪಾ ಲಗೂಒನ್ ಕರ್ ಜೊರಿ.

೧೯೫೫ ರಲ್ಲಿ ತಾವೇ ಪ್ರಥಮವಾಗಿ ' ರಾಮ್ ರಾಮ್ ಪರ್ವಾನೆ', ಚಿತ್ರಕ್ಕೆ, ಸಂಗೀತವನ್ನು ನಿರ್ದೇಶಿಸಿದರು.

'ಆನಂದ್ ಗ್ಯಾನ್,' ಎಂಬ ಹೆಸರಿನಲ್ಲಿ ಸಂಗೀತವನ್ನು ಕೊಡುತ್ತಿದ್ದರು. 'ಸಾಧು ಮಾನ್ಸೆ,' ಎಂಬ ಚಿತ್ರಕ್ಕೆ ಮಹಾರಾಷ್ತ್ರ ರಾಜ್ಯಸರ್ಕಾರದ ಉತ್ತಮ ಸಂಗೀತ ನಿರ್ದೇಶಿಕಾ ಪುರಸ್ಕಾರ ಪಡೆದರು. ೪ ಚಿತ್ರಗಳ ನಿರ್ಮಾಪಕಿ.

೧. ೧೯೫೩ -ವಾಡಲ್, [ಮರಾಠಿ]
೨. ೧೯೫೩ -ಝಂಜರ್, [ಮರಾಠಿ ]
೩. ೧೯೫೫ -ಕಾಂಚನ್, [ಹಿಂದಿ ]
೪. ೧೯೯೦ -ಲೆಕಿನ್, [ಹಿಂದಿ ]

ಲತಾರವರು ನಟಿಸಿದ ಕೆಲವು ಹಿಂದಿ ಚಲನಚಿತ್ರಗಳು :

೧. ೧೯೪೫- ಬಡಿ ಮಾ.
೨. ೧೯೪೬- ಜೀವನ್ ಯಾತ್ರ.
೩. ೧೯೪೮- ಮಂದಿರ್.
೪. ೨೦೦೦- ಪುಕಾರ್, ಚಿತ್ರದಲ್ಲಿ ಹಾಡಿನ ಸನ್ನಿವೇಷದಲ್ಲಿ, ಅತಿಥಿ ನಟಿಯಾಗಿ,

೧೯೫೦ ರಲ್ಲಿ, ಅವರಿಗೆ ಬಹುಮೆಚ್ಚುಗೆಯ ಸಂಗೀತ ನಿರ್ದೇಶಕ, ಸಲೀಲ್ ಚೌಧುರಿ ಯವರ ಜೊತೆಗೂಡಿ, ಹಾಡುತ್ತಿದ್ದ ಲತಾಮಂಗೇಶ್ ಕರರಿಗೆ, ೧೯೫೮ ರಲ್ಲಿ, ತಯಾರಿಸಿದ, 'ಮಧುಮತಿ', ಚಿತ್ರಕ್ಕೆ ಪ್ರಪ್ರಥಮವಾಗಿ, 'ಫಿಲ್ಮ್ ಫೇರ್ ಪ್ರಶಸ್ತಿ,' ದೊರೆಯಿತು. ಅವರು ಹಾಡಿದ ಹಾಡು, "ಆಜಾರೆ ಪರದೇಸಿ."

ಶ್ರೀಮತಿ. ಡಾ. ಎಮ್. ಎಸ್. ಸುಬ್ಬುಲಕ್ಷ್ಮಿಯವರ ನಂತರ, ಮಹಿಳಾ "ಭಾರತರತ್ನ ಪ್ರಶಸ್ತಿವಿಜೇತ"ರಲ್ಲಿ ಲತಾದೀದಿ, ಎರಡನೆಯವರು.

೧೯೬೦ ರಲ್ಲಿ, ತಯಾರುಮಾಡಿದ ,ಕೆ.ಯೆ. ಅಸಿಫ್ ರವರ, "ಮೊಘಲ್ -ಎ- ಅಝಮ್", " ಚಿತ್ರಕ್ಕೆ " ಪ್ಯಾರ್ ಕಿಯಾ ತೊ ಡರ್ನಾ ಕ್ಯಾ", ಎನ್ನುವ ಗೀತೆಯನ್ನು ಹಾಡಿದ್ದರು. ಮೇರುನಟಿ, ಮಧುಬಾಲ ರವರು ಈ ಹಾಡಿಗೆ ಅತ್ಯುತ್ತಮವಾಗಿ ನಟಿಸಿದ್ದರು. ಈ ಚಿತ್ರದ ಸಂಗೀತ ನಿರ್ದೇಶಕರು ನೌಶಾದ್.

"ದಿಲ್ ಅಪ್ನಾ ಔರ್ ಪ್ರೀತ್ ಪರಾಯಿ," ಚಿತ್ರದ, "ಅಜೀಬ್ ದಾಸ್ತಾನ್ ಹೈ, ಯೆಹ್", ಗೀತೆಯನ್ನು ಲತಾರವರು ಹೃದಯಂಗಮವಾಗಿ ಹಾಡಿದ್ದರು. ಮೀನಾಕುಮಾರಿ, ನಟಿಸಿದ್ದರು. ಸಂಗೀತವನ್ನು ಒದಗಿಸಿದವರು- ಶಂಕರ್ ಜೈಕಿಶನ್,

'ಯೆಹ್ ಮೆರೆ ವತನ್ ಕೆ ಲೊಗೊ', ಜೂನ್ ೨೭, ೧೯೬೩, ಯಲ್ಲಿ ಜವಹರ್ ಲಾಲ್ ನೆಹ್ರು ರವರ ಸಮ್ಮುಖದಲ್ಲಿ ಹಾಡಿದ ಹಾಡು, ಮರಯಲಾರದ ಅನುಭವವನ್ನು ಕೊಟ್ಟಿತ್ತು. ನೆಹರೂ ರವರ ಕಂಠ ಗದ್ಗದವಾಯಿತು. ತಮ್ಮ ಕರವಸ್ತ್ರದಿಂದ ಕಣ್ಣೀರನ್ನು ತಡೆಯಲಾರದೆ ಪದೇ ಪದೇ ಒರಸಿಕೊಂಡರಂತೆ !

ಸಂಗ್ರಹ : ಚಂದ್ರೀ, ಮುಂಬೈ ಮಿರರ್, ಶುಕ್ರವಾರ, ಸೆಪ್ಟೆಂಬರ್, ೨೮, ೨೦೦೭.

  • ಪ್ರಚಲಿತ ಲೇಖನ ವರ್ಗದ ಚಿತ್ರಗಳು
~.~
  • Login or register to post comments
  • 464 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶಂಕರ್ಸ್ ವೀಕ್ಲಿಯ ಶ್ರೀ. ಶಂಕರ್ ಕೇಶವ್ ಪಿಳ್ಳೆ !
  • ಉತ್ತರ ಕರ್ನಾಟಕದಲ್ಲಿ ಕನ್ನಡ-೪
  • ಶ್ರಿ. ಕಮಲೇಶ್ವರ್ - ಒಬ್ಬ ಶ್ರೇಷ್ಟ ಸಾಹಿತಿ, ಅಂದಿನ, ದೂರದರ್ಶನದ ಪಾದಾರ್ಪಣೆಯ ಸಮಯದ, ಶ್ರೇಷ್ಟ ಮಾತುಗಾರ, ಇನ್ನಿಲ್ಲ !
  • ಸಿಂಧು ಭೈರವಿ
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

IMG_2069.jpg

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:01pm
  • D.S.NAGABHUSHANA
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 8:37pm
  • D.S.NAGABHUSHANA
    ಉ: ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೨)
    August 29, 2008 - 8:35pm
ಇನ್ನಷ್ಟು


ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ.

— ಕನ್‌ಫ್ಯೂಷಿಯಸ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator