ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಈ ಅಸಮಾನ್ಯ ಬಾಲಕ, ಮೊಹನ್ ದಾಸ್ ಗೆ, ಇಂದು ೧೩೮ ನೆ ವರ್ಷದ ಹುಟ್ಟಿದ ಹಬ್ಬ !

ಈ ಮಗು ನಮಗೆ , ತೊರಿಕೆಗೆ ಅತಿ ಸಾಮಾನ್ಯ ಮಗುವಿನಂತೆ ಕಂಡರೂ, ಅಸಮಾನ್ಯ ವ್ಯಕ್ತಿತ್ವವನ್ನು ತನ್ನಲ್ಲಿ ಅಳವಡಿಸಿಕೊಂಡು, ಮುಗಿಲೆತ್ತರಕ್ಕೆ ಬೆಳೆದು, ಭಾರತೀಯರನ್ನಲ್ಲಾ ಸಂಘಟಿಸಿ, ತನ್ನ ಜೀವಾವಧಿಯಲ್ಲೇ ಭಾರತದ ಜನರಿಗೆ ಕೊಟ್ಟ ಕೊಡುಗೆ, ಅಮೋಘ !

ನಮ್ಮ ಭಾರತಾಂಬೆಯ, ಶತ-ಶತಮಾನಗಳ ದಾಸ್ಯದ ಸಂಕೋಲೆಗಳನ್ನು ಹರಿದುಬಿಸಾಡಲು, ತಮ್ಮ ತನು, ಮನ, ಧನಗಳನ್ನು ಸಂಪೂರ್ಣವಾಗಿ ಸಮರ್ಪಿಸಿದ, ಯುಗಪುರುಷ, ಮೋಹನದಾಸ್ ಕರಮಚಂದ್ ಗಾಂಧಿ ! ಇವನೇ ಮುಂದೆ ಭಾರತದ ಒಬ್ಬ ಅವಿಸ್ಮರಣೀಯವ್ಯಕ್ತಿಯಾಗಿ ತನ್ನ ದೈತ್ಯಪ್ರತಿಭೆಗಳ ಮೂಲಕ, ನಮ್ಮದೇಶದ ಪ್ರಗತಿಗೆ ಮೂಲಕಾರಣರಾಗಿದ್ದು , ಒಂದು ಚಾರಿತ್ರ್ಯಿಕ ಘಟನೆ. ವಿಶ್ವದ ಚರಿತ್ರೆಯಲ್ಲಿ ಅಮರವಾಗಿ ಎಂದೆಂದಿಗೂ ಮಾದರಿಯಾಗಿ ನಿಲ್ಲುವ ಕಾರ್ಯವನ್ನು ರಚಿಸಿ ಅಸ್ತಂಗತರಾಗಿದ್ದಾರೆ.

ಮೋಹನದಾಸ್, ಜನಿಸಿದ್ದು ಇಂದಿಗೆ ಸುಮಾರು ೧೩೮ ವರ್ಷಗಳ ಹಿಂದೆ, ೨, ಅಕ್ಟೋಬರ್, ೧೮೬೯ ರಲ್ಲಿ, ಗುಜರಾತಿನ ಪುಟ್ಟಗ್ರಾಮ, ಪೋರ್ಬಂದರಿನಲ್ಲಿ.[ಸುದಾಮಪುರುವೆಂದು ಅದಕ್ಕೆ ಮೊದಲಿನ ಹೆಸರು.] ತಂದೆ, ಕಾಬಾ ಗಾಂಧಿ.(ಕರಮಚಂದ್ ಗಾಂಧಿ) ಅವರ ಅಜ್ಜನ ಹೆಸರು, ಉತ್ತಮ ಚಂದ್ ಗಾಂಧಿ ಅಥವಾ ಓಟಾ ಗಾಂಧಿ. ಇವರೆಲ್ಲಾ ಪೋರ್ಬಂದರ್, ರಾಜ್ಕೋಟ್ , ಮತ್ತು ಹತ್ತಿರದ ನವಾಬರ ಬಳಿ ದಿವಾನರಾಗಿ ಹೆಸರು ಮಾಡಿದವರು.

ಗಾಂಧಿ, ಮೆಟ್ರಿಕ್ ಪರೀಕ್ಷೆ ಪಾಸ್ ಮಾಡಿದರು. ಆಗಲೆ ಮದುವೆ, ಕಸ್ತೂರಿ ಬಾ ರವರ ಜೊತೆಗೆ. ಇಂಗೆಂಡಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋದರು. ಲಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ೧೮೯೧ ರಲ್ಲಿ ಭಾರತಕ್ಕೆ ವಾಪಸ್ಸಾದರು. ಅಲ್ಲಿಂದ ದಕ್ಷಿಣ ಆಫ್ರಿಕಾಕ್ಕೆ ನೌಕರಿಗೆಂದು ಹೋದರು. ಅಲ್ಲಿ ಅವರಿಗೆ ಬ್ರಿಟಿಷ್ ಜನರ ದಬ್ಬಾಳಿಕೆ ಕ್ರೌರ್ಯ, ಮತ್ತು ಅಮಾನುಷವರ್ತನೆಗಳು ಅಸಹನೀಯವಾಗಿ ಕಂಡವು. ಅದನ್ನುಮೊದಲು ಅವರು ಪ್ರತಿಭಟಿಸಿದರು. ತಮ್ಮ ಪುಟ್ಟ ಪತ್ರಿಕೆಗಳ ಮೂಲಕ. ಅಲ್ಲಿ ನೆಲಸಿದ್ದ ಭಾರತೀಯ ಸ್ನೇಹಿತರನ್ನು ಸಂಘಟಿಸಿದರು. ಭಾರತೀಯರಿಗೆ ತಮ್ಮ ದೇಶದ ಬಗ್ಗೆ ಪ್ರೀತಿ, ಗೌರವಗಳನ್ನು ಸರಿಯಾದ ರೀತಿಯಲ್ಲಿ ತಿಳಿಸಿಕೊಟ್ಟರು.

ಬೊಂಬಾಯಿಗೆ, ಅವರು, ವಾಪಸ್ಸಾದರು. ಫಿರಂಗಿಯವರನ್ನು ದೇಶಬಿಟ್ಟು ತೊಲಗಿಸಲು ಅವಿಶ್ರಾಂತವಾಗಿ ದುಡಿದರು. ಭಾರದ ಪ್ರಚಂಡ ಜನಸ್ತೋಮದ ಮನ್ನಣೆ, ಸಹಕಾರ ಅವರಿಗೆ ಸಿಕ್ಕಿತು. ಮುಂದೆ ಆದದ್ದು ಒಂದು ಮರೆಯಲಾರದ, ಹಿಂದೆಂದು ವಿಶ್ವದಲ್ಲಿ ಘಟಿಸದ, ಚಾರಿತ್ರ್ಯಿಕ ಘಟನೆ- ನಮಗೆ ಕೊಡಿಸಿದ ಸ್ವಾತಂತ್ರ್ಯ !

ಇಂದು ನಾವು, ಮಹಾತ್ಮಗಾಂಧಿಯವರಿಗೆ ಸಲ್ಲಿಸಬೇಕಾದ ಕಾರ್ಯವೆಂದರೆ, ಅವರ ಜೀವನಚರಿತ್ರ್ಯೆಯನ್ನು ಸ್ಮರಿಸಿ, ನಮ್ಮ-ನಮ್ಮ ಮನೆಗಳಲ್ಲಿ ನಮ್ಮ ಮಕ್ಕಳಿಗೆ ದೇಶಪ್ರೇಮದ ಬೀಜವನ್ನು ಬಿತ್ತಿ, ಅವರ ಮನಸ್ಸನ್ನು ಸರಿಯಾದ ದಿಕ್ಕಿನಲ್ಲಿ ಮುಂದುವರೆಯಲು ಪ್ರೇರೇಪಿಸುವುದು. ಇದೇ ನಾವು ಆ ಮಹಾತ್ಮರಿಗೆ, ಕೊಡುವ ಶ್ರದ್ಧಾಂಜಲಿ !
ಜೈ ಭಾರತ್, ಜೈ ಮಹಾತ್ಮಗಾಂಧಿ, ಜೈ ಸ್ವಾತಂತ್ರ್ಯವೀರರೆ.

ಈ ಅಸಮಾನ್ಯ ಬಾಲಕ, ಮೊಹನ್ ದಾಸ್ ಗೆ,  ಇಂದು ೧೩೮ ನೆ ವರ್ಷದ ಹುಟ್ಟಿದ ಹಬ್ಬ !
No votes yet