ಪ್ರಿನ್ಸ್ ಆಫ್ ವೇಲ್ಸ್ :
ಪ್ರಿನ್ಸ್ ಆಫ್ ವೇಲ್ಸ್ :
ಮುಂಬೈ ನ, "ಪ್ರಿನ್ಸ್ ಆಫ್ ವೇಲ್ಸ್ ವಸ್ತುಸಂಗ್ರಹಾಲಯ" ಕ್ಕೆ ಕೆಳಗೆ ತಿಳಿಸಿದಂತೆ, ಆಗಿನ ಬ್ರಿಟಿಷ್ ರಾಜಕುಮಾರನ ಪದವಿಯ ಹೆಸರನ್ನೇ, ಇಟ್ಟಿದ್ದರು. ೧೯೦೫ ರಲ್ಲಿ ಕಟ್ಟದ ಶಂಕುಸ್ಥಾಪನೆಯನ್ನು ಪ್ರಿನ್ಸ ಆಫ್ ವೇಲ್ಸರೇ, ಮಾಡಿದ್ದರು. ಕಟ್ಟಡ ಮುಗಿದದ್ದು, ೧೯೧೪ ರಲ್ಲಿ, ಆದರೆ, ಅದನ್ನು ವಸ್ತುಪ್ರದರ್ಶನಕ್ಕೆ ಆಣಿಮಾಡಿಕೊಟ್ಟಿದ್ದು, ೧೯೨೩ ರಲ್ಲಿ.
ಇದು ಒಂದು ಅಲಂಕಾರಿಕ ಪದವಿ. ಬ್ರಿಟನ್ನಿನ ಮಹಾರಾಣಿ/ಮಹಾರಾಜ ಯ/ರ ಜೇಷ್ಟ ಪುತ್ರನಿಗೆ (ಮಗಳಿಗಲ್ಲ) ಇದು ತಾನಾಗಿಯೇ ರಾಜಮನೆತನದಲ್ಲಿ ಹುಟ್ಟಿದ ಮಾತ್ರಕ್ಕೇ ಬರುವಂತಹ ಒಂದು ಸ್ಥಾನ. ಇದಕ್ಕೆ ಯಾವ ವಿದ್ಯಾರ್ಹತೆ, ಯೋಗ್ಯತೆಗಳ ಆವಶ್ಯಕತೆಯೂ ಇಲ್ಲ. ಈಗಿನ ೨ ನೇ ಎಲಿಝಬೆತ್ ರಾಣಿಯ ಪುತ್ರ, ಚಾರ್ಲ್ಸ್ ಗೆ ಇದು ದೊರೆತಿದೆ. ಸರದಿಯಪ್ರಕಾರ ಈತ ೨೧ ನೆಯವನು. ಯಾವ ಹೇಳಿಕೊಳ್ಳುವಂತಹ ಜವಾಬ್ದಾರಿ ಕೆಲಸವೂ ಇಲ್ಲ. ಈಗಿನ ಮಹಾರಾಣಿಗಾದರೂ ಏನಾದರು ಕೆಲಸ ಇದೆಯೇ ? ಆಕೆ ದೇಶದ ಅತ್ಯಂತ ಪ್ರಮುಖವ್ಯಕ್ತಿ. ಆದರೆ, ನಮ್ಮ ರಾಷ್ಟ್ರಾಧ್ಯಕ್ಷರಿಗಿಂತಲೂ ಕಡಿಮೆ ಜವಾಬ್ದಾರಿ !
ಏನಾದರೂ ಕೆಲಸ ಇರಲಿ ಅಂತಲೇ, ಪ್ರಿನ್ಸ್ ಚಾರ್ಲ್ಸ್, ತಾವೇ ಕೆಲವು ಕೆಲಸಗಳನ್ನು ಹಾಕಿಕೊಂಡು ಚಟುವಟಿಕೆಯಿಂದ, ಓಡಾಡಿಕೊಂಡಿರುತ್ತಾರೆ. ಅವರು ಹಮ್ಮಿಕೊಂಡಿರುವ ಕೆಲಸಗಳೆಂದರೆ,
೧. ಮಹಾರಾಣಿಯ ದೈನಂದಿನ ಚಟುವಟಿಕೆಗಳಲ್ಲಿ ತಾನೂ ಭುಜಕ್ಕೆ ಭುಜ ಕೊಟ್ಟು ಸಹಕಾರನೀಡುವುದು.
೨. ಬಡಬಗ್ಗರಿಗೆ ಸಹಾಯಮಾಡುವ ಅಭಿಯಾನದಲ್ಲಿ ಮುಂದಾಳತ್ವ ವಹಿಸಿಕೊಂಡು ಚಟುವಟಿಕೆಯಿಂದಿರುವುದು.
೩. ದೇಶದ ಗೌರವ, ಸನ್ಮಾನಗಳನ್ನು ಸುಸ್ಥಿರಪಡಿಸಿ, ಎತ್ತಿಹಿಡಿಯಲು ನಿರಂತರವಾಗಿ ಶ್ರಮಿಸುವುದು, ಮತ್ತು
ಅದರಲ್ಲಿ ಸಹಭಾಗಿಯಾಗಿ ಮುನ್ನುಗ್ಗುವುದು. ಇವೇ ಮೊದಲಾದವುಗಳು.
ಆನಂತರದ ಇಂಗ್ಲೆಂಡಿನ ರಾಜಕುಮಾರರಿಗೆ ಇಂತಹ ಒಂದು ಪದವಿಯಿರುವುದು ಒಳ್ಳೆಯದೆಂದು, ಕೆಲವು ಚಕ್ರವರ್ತಿಗಳು ಅಭಿಪ್ರಾಯಪಟ್ಟರು. ವಿಕ್ಟೋರಿಯಾ ಮಹಾರಾಣಿ, ಸುಮಾರು ೬೩ ವರ್ಷಗಳಕಾಲ ಸಿಂಹಾಸನದಲ್ಲಿ ವಿರಾಜಿಸಿದ್ದು, ಬ್ರಿಟಿಷ್ ಸಾಮ್ರಾಜ್ಯವನ್ನು ನಾಗಾಲೋಟದಿಂದ ದಿಗಂತದೆಡೆಗೆ ಓಡಿಸಿಕೊಂಡು ಹೋದರು. ಸ್ವಲ್ಪದಿನ, ೫ ನೇ ಜಾರ್ಜ್ ರವರು, ಚಕ್ರವರ್ತಿಯಾಗಿದ್ದರು. ಆಮೇಲೆ, ಸುಮಾರು ೫೦ ವರ್ಷಕ್ಕಿಂತಲೂ ಹೆಚ್ಚು ಸಮಯ, ೨ ನೇ ಎಲಿಝಬೆತ್ , ಇನ್ನೂ ಸಿಂಹಸನಾರೂಢರಾಗಿರುವಾಗ, ವಯಸ್ಸಿಗೆಬಂದ ಮಕ್ಕಳಿಗೆ ಹೇಳಿಕೊಳ್ಳುವಂತಹ ಸ್ಥಾನ ಬೇಡವೇ ?
ಹಿಂದೆ ಬ್ರಿಟನ್ ನ ಪಕ್ಕದ 'ವೇಲ್ಸ್' ರಾಜ್ಯವನ್ನು ಗೆದ್ದು ಪುನಃ ಅದನ್ನು ಅಲ್ಲಿನ ಪ್ರದೇಶದ ರಾಜಕುಮಾರನಿಗೆ ವಹಿಸಿಕೊಟ್ಟುಬಂದ ಒಂದು ಸಂದರ್ಭವಿತ್ತು. ೧೩೦೧ ರಲ್ಲಿ ಈ ಪದವಿ ಮೊದಲು ಬಾರಿ ಜಾರಿಗೆಬಂತು. ಚಕ್ರವರ್ತಿ, ಎಡ್ವರ್ಡ್ -೧, ತನ್ನ ಕುಮಾರನಿಗೆ, "ಪ್ರಿನ್ಸ್ ಆಫ್ ವೇಲ್ಸ್," ಸ್ಥಾನವನ್ನು ಕೊಟ್ಟಿದ್ದರು.

- Login or register to post comments
- 218 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: