ಮುಂಬೈನ ಪ್ರತಿಷ್ಠಿತ ವಿ. ಜೆ. ಟಿ. ಐ- ಭಾರತದ ಪ್ರಪ್ರಥಮ "ಟೆ ಕ್ಸ್ ಟೈಲ್ಸ್ ಶಾಲೆ," ಪಾದಾರ್ಪಣೆ ಮಾಡಿದ್ದು ಇಲ್ಲೇ !

ಬೊಂಬಾಯಿನ ಹತ್ತಿಗಿರಣಿಗಳಲ್ಲಿ ಕೆಲಸಮಾಡಲು ಬೇಕಾದ ತಂತ್ರಜ್ಞಾನಗಳನ್ನು ಕೊಡಲೆಂದೇ ನಗರ ಹಿರಿಯನೇಕರು ಸುಮಾರು ೧೨೫ ವರ್ಷಗಳ ಹಿಂದೆಯೇ ರಾಷ್ಟ್ರದ ಪ್ರಪ್ರಥಮ ವೃತ್ತಿಶಿಕ್ಷಣ ಸಂಸ್ಥಾನವನ್ನು ಬೊಂಬಾಯಿನಲ್ಲಿ ಕಟ್ಟಿಬೆಳೆಸಿದರು. ಅದೇ ಅಂದಿನ, " ವಿಕ್ಟೋರಿಯ ಜ್ಯುಬಿಲಿ ಟೆಕ್ನಿಕಲ್ ಇನ್ಸ್ಟಿಟ್ಯೂಟ್ " ! ಶಿವಸೇನ, ಆಡಳಿತಕ್ಕೆ ಬಂದಾಗ, ತನ್ನ ಕಾರ್ಯಾವಧಿಯಲ್ಲಿ ಅದರ ಹೆಸರನ್ನು ವೀರಮಾತಾ ಜೀಜಾಬಾಯಿ ಟೆಕ್ನಿಕಲ್ ಇನ್ಸ್ಟಿಟ್ಯೂಟ್, " ಎಂದು ಬದಲಾಯಿಸಿತು.
ವಿ. ಜೆ. ಟಿ. ಐ ತನ್ನ ಹಳೆಯ-ರೂಪವನ್ನು ಬದಲಾಯಿಸಿಕೊಂಡು, ಹೊಸ ತಂತ್ರಜ್ಞಾನದ ಹಿಂದೆ ಬಿದ್ದಿದೆ. ಬದಲಾವಣೆ ಪ್ರಕೃತಿಯನಿಯಮವಲ್ಲವೇ ?
ಎಲ್ಲಿ ನೋಡಿದರೂ ಅಕ್ಕ-ಪಕ್ಕಗಳಲ್ಲಿ ಮಿಲ್ಗಳೇ ಮಿಲ್ಗಳು. ಸುಮಾರು ೭೦ ಕ್ಕಿಂತ ಹೆಚ್ಚು. ಆಮೇಲೆ ೭೦ ರ ದಶಕದಲ್ಲಿ ಸುಮಾರು ೫೮ ಗಿರಣಿಗಳಿದ್ದವು. ಕೆಲಸಗಾರರು ಸುಮಾರು, ೨.೫ ನಿಂದ ೩ ಲಕ್ಷ. ಬೊಂಬಾಯಿ- ಭಾರತದ ಮ್ಯಾಂಚೆಸ್ಟರ್ ಎಂದು ಹೆಸರುವಾಸಿಯಾಗಿದ್ದ ಮುಂಬೈ, ಇಂದು ಅದೆಲ್ಲಾ ಸುಳ್ಳೇನೋ ಅನ್ನುವಷ್ಟು ಬದಲಾಗಿದೆ. ಭಾರತದ ಪ್ರಪ್ರಥಮ ಹತ್ತಿ ಬಟ್ಟೆತಯಾರಿಸುವ ಗಿರಣಿ, ಮುಂಬೈ ನ ತಾರ್ದೇವ್ ನಲ್ಲಿ ೧೮೫೪ ರಲ್ಲಿ ರೂಪುಗೊಂಡಿತು. ನಂತರ ದಶಕಗಳಕಾಲ ಹತ್ತಿ -ಕಾರ್ಖಾನೆಗಳು ಹೆಚ್ಚುತ್ತಲೇ ಹೋದವು.
ಆದರೆ ಎಲ್ಲಕ್ಕೂ ಒಂದು ಅಂತ್ಯವಿದೆಯಲ್ಲ. ಅದನ್ನು ಆ ದೈವನಿಯಾಮಕನೇ ನಿರ್ಧರಿಸಿರಬಹುದೇ ? ಗಿರಣಿ ಕೆಲಸಗಾರರು, ಮತ್ತು ಮಿಲ್ ಮಾಲೀಕರ ಮಧ್ಯೆ ಇರುಸು-ಮುರಿಸಿ ಇದ್ದೇ ಇತ್ತು. ಮಾಲೀಕರಿಗೆ ಅತಿ ಕಡಿಮೆ ಕೂಲಿಕೊಟ್ಟು, ಅಪಾರಸಂಪತ್ತನ್ನು ದೋಚುವ ದುರಾಸೆಯಾದರೆ, ಕಮ್ಯುನಿಷ್ಟ್ ಯೂನಿಯನ್ ಗಳು ಬಲಾತ್ಕಾರ, ಹಾಗು ವಿಧ್ವಂಸಕ ಪ್ರವೃತ್ತಿಯಿಂದ ಹೆಚ್ಚಿಗೆ ಸಂಬಳ ಬೋನಸ್ ಗಿಟ್ಟಿಸುವ ಆಸೆಯನ್ನು ಹಮ್ಮಿಕೊಂಡಿದ್ದರು. ಕಾರ್ಮಿಕರ ಪರಿಶ್ರಮವೊಂದೇ ಮಾನದಂಡವಾಗಿದ್ದ ಕಾಲ ಅದು. ಅವರನ್ನು ಚೆನ್ನಾಗಿ ನೋಡಿಕೊಳ್ಳದೆ ಇದ್ದರೆ, ದಿವಾಳಿಯಾವುದು ಖಂಡಿತವೆನ್ನುವ ಮಾತೇ ಹೆಚ್ಚು ಪ್ರಚಲಿತವಾಗಿತ್ತು. ಆದರೆ ಕಾಲಬದಲಾದಂತೆ ತಂತ್ರಜ್ಞಾನ ಪ್ರಚಂಡ ವೇಗದಲ್ಲಿ ವಿಶ್ವದಾದ್ಯಂತ ಚಂಡಮಾರುತದಂತೆ ವ್ಯಾಪಿಸಿ, ಕೆಲಸಗಾರರ ಚಟುವಟಿಕೆಗಳನ್ನು ಕೊನೆಗೊಳಿಸಿತು. ಕೆಲವೇ ಯಂತ್ರಗಳು ಅತಿಚಿಕ್ಕ ಪರಿಸರದಲ್ಲಿ, ಕೆಲವೇ ಕುಷಲರಲ್ಲದ ವ್ಯಕ್ತಿಗಳಿಂದ, ಥಾನುಗಟ್ಟಲೆ ವಸ್ತ್ರದ ಉತ್ಪತ್ತಿಯಾಗುವಂತೆ ತಂತ್ರಜ್ಞಾನ ಎಲ್ಲೆಡೆ- ಭಾರತದಲ್ಲೂ ಆವರಿಸಿತು. ಟಾಟಾ ರಂತಹ ನಿಸ್ಪೃಹ ಉದ್ಯಮಿಗಳಿಗೂ ಹಲವು ಮಿಲ್ ಮಾಲೀಕರಿಗೂ ಕಾರ್ಮಿಕರ, ತರಲೆ-ತಾಪತ್ರಯಳು, ಸಮಸ್ಯೆಗಳು, ಮುಷ್ಕರದಿಂದಾಗುವ ಅಮಾಯಕ ಪರಿಸ್ಥಿಗಳಿಂದ ಬೇಸರವಾಗಿತ್ತು.
ಕೊನೆಗೂ ಒಂದು ದುರದೃಷ್ಟಗಳಿಗೆ, ೧೯೮೨ ರಲ್ಲಿ ಬಂದೇ ಬಿಟ್ಟಿತು. ಕಾಮ್ಗಾರ್ ಅಘಾಡಿ ನಾಯಕ, ಡಾ. ದತ್ತಸಾಮಂತರು, ತಮ್ಮ ಯೂನಿಯನ್ ನ ಕೆಲಸಗಾರರನ್ನು ಹುರಿದುಂಬಿಸಿ, ಅವರ ಬೇಡಿಕೆಗಳು ಈಡೇರುವವರೆಗೂ ಕೆಲ್ಸಕ್ಕೆ ಬರಬೇಡಿಯೆಂದು ಆದೇಶವಿತ್ತರು. ಮುಷ್ಕರ ಮುಂದುವರೆಯಿತು, ದಿನಗಳು , ತಿಂಗಳುಗಳು, ವರ್ಷಗಳು , ಉರುಳಿದವು. ಕಾರ್ಖಾನೆಗಳು ಬೊಂಬಾಯಿನಿಂದ ಎತ್ತಲ್ಪಟ್ಟು ಹೊರಗೆ ಹೋದವು. ಮಿಲ್ ಮಾಲೀಕರು ಕೆಲಸಗಾರರ ಮುಖ್ಯಸ್ಥರನ್ನು ಕಳ್ಳತನದಲ್ಲಿ ಒಲಿಸಿ, ತಮ್ಮ ಕಡೆಮಾಡಿಕೊಂಡರು. ಆಸ್ತಿಗಳನ್ನು ಮಾರಿದರು. ಮಾಲೀಕರು ಈ ಬಂಗಾರದ ಕ್ಷಣಗಳನ್ನು ತಮ್ಮ ಜೇಬಿಗೆ ಹಾಕಿಕೊಂಡರು !
ಪ್ರತಿಫಲ :
ಇದಾಗಿ, ೨೫ ವರ್ಷಗಳ ಮೇಲಾಗಿದೆ. ಎಲ್ಲೂ ಒಂದಾದರು ಹತ್ತಿಗಿರಣಿಯ ಹೊಗೆ ಕೊಳವೆ, ದೀಪಹಾಕಿಕೊಂಡು ಹುಡುಕಿದರೂ ಸಿಗದು. ಅದರ ಜಾಗದಲ್ಲಿ ಮಾಲ್ ಗಳು, ಸಿನಿಮಾಥಿಯೇಟರ್ಸ್ ಗಳು, ಈಜುಕೊಳಗಳು ಮನರಂಜನೆಯ ಪಾರ್ಕ್ಸ್ ಗಳು ಇತ್ಯಾದಿ ಇತ್ಯಾದಿ ಬೆಳೆದು, ಹತ್ತಿಗಿರಣಿಗಳು ಎಲ್ಲಿದ್ದವು ? ಎಂದು ಹುಬ್ಬೇರಿಸುವ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿದೆ. ಕೆಲಸಗಾರರ ಜೀವನ ಮೂರಾಬಟ್ಟೆಯಾಗಿದೆ !
ಮುಂಬೈ ನ ಹತ್ತಿಬಟ್ಟೆಯ ಪ್ರಚಂಡ ರೋಚಕ ಕಥೆಯನ್ನು ತಿಳಿಯಲು, ನಾವು ಇತಿಹಾಸದ ಪುಟಗಳನ್ನು ಹುಡುಕಿಕೊಂಡು ಹೋಗಬೇಕಾಗಿದೆ !

- Login or register to post comments
- 443 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಗಾಂಧಿಯವರನ್ನು, ಮ್ಯಾಂಚೆಸ್ಟರ್ ನ ಹತ್ತಿ-ಗಿರಣಿ ಕೆಲಸಗಾರರು ಅಭಿನಂದಿಸುತ್ತಿರುವ ದೃಶ್ಯ
- ಹಿಂದಿನ ಕಾಲದ ಮುಂಬೈ ನ, ಬಟ್ಟೆ ಗಿರಣಿಯೊಂದರ ಒಳಭಾಗದ ದೃಷ್ಯ !
- CIRCOT, Mumbai - ಭಾರತದ ಹತ್ತಿಬೆಳೆಯ ಗುಣ ಮತ್ತು ಉತ್ಪನ್ನಗಳನ್ನು, ಅಭಿವೃದ್ಧಿಪಡಿಸಿ, ಗಮನಾರ್ಹಸೇವೆಸಲ್ಲಿಸುತ್ತಿರುವ ಸಂಸ್ಥೆ
- *'ಜೆ,' ರವರ ಕನಸಿನ ಕೂಸು, ಏರ್ ಇಂಡಿಯದ, ವಿಮಾನ ಹಾರಾಟ : ಇಂದಿನಿಂದ, ಬೊಂಬಾಯಿನಿಂದ ಎಲ್ಲೂ ನಿಲ್ಲಿಸದೆ, ನೇರವಾಗಿ ನ್ಯೂಯಾರ್ಕಿಗೆ !
- ರೇನ ಸಾಲ್ವೆ, ನಮ್ಮ ಮುಂಬೈ ಹುಡುಗಿ, ಅಪಘಾತದಲ್ಲಿ ಮೃತಳಾದಳು !


RSS: