ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › ಪ್ರಚಲಿತ ಲೇಖನ ವರ್ಗದ ಚಿತ್ರಗಳು

ನಮ್ಮ "ಪಾಚಿ," ಯವರಿಗೆ ನೋಬೆಲ್ ಶಾಂತಿ ಪುರಸ್ಕಾರ !

October 14, 2007 - 4:59am — venkatesh
ನಮ್ಮ "ಪಾಚಿ," ಯವರಿಗೆ ನೋಬೆಲ್ ಶಾಂತಿ ಪುರಸ್ಕಾರ !

ಹೌದು. ಡಾ. ರಾಜೇಂದ್ರಕುಮಾರ್ ಪಚೌರಿ, ಯವರನ್ನು ಅವರ ಆಪ್ತ ಗೆಳೆಯರು, ಸಂಬೋಧಿಸುವುದೇ ಹಾಗೆ !

ನಮ್ಮ ಭಾರತದೇಶದ, ಡಾ. ರಾಜೇಂದ್ರ ಕುಮಾರ್ ಪಚೌರಿ, ಹಾಗೂ ಅಮೆರಿಕದ ಮಾಜೀ ಉಪರಾಷ್ಟ್ರಪತಿ, ಆಲ್ ಗೋರ್, ರವರಿಗೆ "ನೋಬೆಲ್ ಶಾಂತಿ ಪ್ರಶಸ್ತಿ," ಬಂದಿದೆ. ಆಲ್ ಗೋರ್ ಹವ ಬದಲಾವಣೆಯ ಬಗ್ಗೆ. "An Inconvenient Truth, on Climate change ", ಎಂಬ ವೃತ್ತ-ಚಿತ್ರ ತಯಾರಿಸಿದ್ದರು- ಈ ಚಿತ್ರಕ್ಕೆ 'ಆಸ್ಕರ್ ಪ್ರಶಸ್ತಿ,' ದೊರಕಿತ್ತು. ಅವರು, " ಪರಿಸರಸಂರಕ್ಷಣೆಯವಾದವನ್ನು," ನಿರಂತರವಾಗಿ ಚಾಲನೆಯಲ್ಲಿಟ್ಟಿದ್ದಾರೆ.

೨೦೦೭ ರ ಈ ಪ್ರತಿಷ್ಠಿತ ಶಾಂತಿ ಪ್ರಶಸ್ತಿಯನ್ನು, ಡಿಸೆಂಬರ್ ತಿಂಗಳ ೧೦ ನೆ ತಾರೀಖು ಓಸ್ಲೋನಗರದಲ್ಲಿ ದಯಪಾಲಿಸಲಾಗುವುದು. ರಾಜೇಂದ್ರಕುಮಾರ್ ಪಚೌರಿಯವರು ನೈನಿತಾಲ್ ನಲ್ಲಿ ಆಗಸ್ಟ್, ೧೯೪೦ ರಲ್ಲಿ ಜನಿಸಿದರು, ಲಕ್ನೋ ನಲ್ಲಿ, ಲ ಮಾರ್ಟಿನೇರ್ ಹೈಸ್ಕೂಲು ಮತ್ತು ಕಾಲೇಜ್ ನಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸ, ನಡೆಯಿತು. M. S ; ಇಂಡಸ್ಟ್ರಿಯಲ್ ಎಂಜಿನೀರಿಂಗ್ ನಲ್ಲಿ Ph.D - ೧೯೭೨ ರಲ್ಲಿ, ಅಮೆರಿಕದ, "North Carolina State Univarsity, " ಯಲ್ಲಿ Ph. D ; Economics subject ನಲ್ಲಿ, ಮಾಡಿದರು.

ಜಾಗತಿಕ ಹವಮಾನ ಬದಲಾವಣೆ, ಹಾಗೂ ಉಷ್ಣತೆಯ ವೃದ್ಧಿಯ ಸಮಸ್ಯೆಗೆ ಪರಿಹಾರವನ್ನು ಸೂಚಿಸಿ, ಅದರಬಗ್ಗೆ ವಿಶ್ವದಲ್ಲಿ ಜಾಗರೂಕತೆ ಮೂಡಿಸುತ್ತಿದ್ದಾರೆ. ವಿಶ್ವಸಂಸ್ಥೆ ಯ ಅಂತರ್ ಸರಕಾರಿ ಮಂಡಲಿ [ಐ.ಪಿ.ಸಿ.ಸಿ] ಮುಖ್ಯಸ್ಥ, ಹಾಗೂ ಪರಿಸರವಾದಿ, ರಾಜೇಂದ್ರಕುಮಾರ್ ಪಚೌರಿ, ಮತ್ತು ಅಮೆರಿಕದ ಮಾಜಿ ಉಪಾಧ್ಯಕ್ಷ, ಆಲ್ ಗೋರ್, ೧.೫ ಮಿಲಿಯ ಡಾಲರ್ ಗಳ ಮೊತ್ತದ ಈ ನೋಬೆಲ್ ಶಾಂತಿ ಪುರಸ್ಕಾರವನ್ನು ಈರ್ವರೂ ಹಂಚಿಕೊಂಡಿದ್ದಾರೆ.

ಜಾಗತಿಕ ತಾಪಮಾನವೃದ್ಧಿಯ ಸಮಸ್ಯೆಗೆ ತುರ್ತುಕ್ರಮ ವಹಿಸಬೇಕೆಂಬ ಅಂತರರಾಷ್ಟ್ರೀಯ ಅಭಿಯಾನಕ್ಕೆ, ಉತ್ತೇಜನದೊರಕಿದಂತಾಗಿದೆ. ’ಟಾಟಾ ಇಂಥನ ಸಂಶೋಧನ ಸಂಸ್ಥೆ ” ಯ ಮಹಾನಿರ್ದೇಶಕ, ೬೭ ವರ್ಷದ ಹರೆಯದ ಪಚೌರಿಯವರು, ತಮ್ಮ ಸಂಸ್ಥೆಯ ಎಲ್ಲರೂ ಕ್ರಿಯಾಶೀಲರಾಗಿ ದುಡಿದಿದ್ದರ ಫಲವೆಂದು ಅಬಿಪ್ರಾಯಪಟ್ಟು, ಅದರ ಶ್ರೇಯಸ್ಸಿನಲ್ಲಿ ಎಲ್ಲರೂ ಭಾಗೀದಾರರೆಂದು ನುಡಿದರು. ನೋಬೆಲ್ ಶಾಂತಿಪುರಸ್ಕಾರವನ್ನು ಪಡೆಯಲು, ೧೮೧ ಅಭ್ಯರ್ಥಿಗಳು ವಿಶ್ವದಾದ್ಯಂತ ಅರ್ಜಿ ಸಲ್ಲಿಸಿದ್ದರು. ೫೯ ವರ್ಷವಯಸ್ಸಿನ ಹರೆಯದ ಆಲ್ ಗೋರ್ ರು, ವಿಶ್ವದ ಹವಾಬದಲಾವಣೆ, ಅಂದರೆ, ಹವಾಮಾನದಲ್ಲಿ ಏರುತ್ತಿರುವ ಉಷ್ಣತೆ, ಹಾಗೂ ಅದರ ದುಷ್ಪರಿಣಾಮಗಳ ವಿರುದ್ಧ ಹೋರಾಟವನ್ನು ಜಂಟಿಯಾಗಿ ಮುಂದುವರೆಸುವ ಅನಿವಾರ್ಯದ ಮಹತ್ವವನ್ನು ಪಚೌರಿಯವರ ಜೊತೆಗೆ ಹಂಚಿಕೊಂಡರು.

ಭಾರತದ ನೋಬೆಲ್ ಪುರಸ್ಕೃತರ ವಿವರಗಳು ಹೀಗಿವೆ :

೧. ರವೀಂದ್ರನಾಥ್ ಟ್ಯಾಗೋರ್, ೧೯೧೩ ರಲ್ಲಿ ಸಾಹಿತ್ಯಕ್ಕೆ.

೨. ಸಿ ವಿ ರಾಮನ್, ೧೯೩೦ ರಲ್ಲಿ ವಿಜ್ಞಾನ ಕ್ಕೆ.

೩. ಹರಗೋವಿಂದ್ ಖುರನ, ೧೯೬೮, ಫಿಸಿಯೊಲಜಿ ಮತ್ತು ಮೆಡಿಸಿನ್.

೪. ಎಸ್. ಚಂದ್ರಶೇಖರ್, ೧೯೮೩,ಭೌತಶಾಸ್ತ್ರಕ್ಕೆ.

೫. ಮದರ್ ಟೆರೇಸ, ೧೯೭೯-ಶಾಂತಿ.

೬. ಅಮಾರ್ತ್ಯಸೇನ್, ೧೯೯೮, ಎಕೊನೊಮಿಕ್ಸ್.

೭. ರಾಜೇಂದ್ರಸಿಂಗ್ ಕುಮಾರ್ ಪಚೌರಿ, ಶಾಂತಿ.

ಭಾರತ ಈಗಾಗಲೇ ಒಟ್ಟಾರೆ, ೬ ನೋಬೆಲ್ ಪ್ರಶಸ್ತಿಗಳನ್ನು ಹೆಗಲಿಗೇರಿಸಿದ್ದು, ಈಗದೊರಕಿದ ೨೦೦೭ ರ ಪ್ರಶಸ್ತಿ, ೭ ನೆಯದು. ಶಾಂತಿ ಪ್ರಶಸ್ತಿಯ ಸಾಲಿನಲ್ಲಿ ೨ ನೆಯದು.

-ಹಲವು ಮೂಲಗಳಿಂದ.

  • ಪ್ರಚಲಿತ ಲೇಖನ ವರ್ಗದ ಚಿತ್ರಗಳು
~.~
  • Login or register to post comments
  • 401 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶಾಂತಿ
  • ಮಹೇಶ್ ಯೋಗಿಯವರ ನಿಧನ !
  • ಹಿರಿಯ ಗೌರವಾನ್ವಿತ ನಟ, ದಿಲೀಪ್ ಕುಮಾರ್ ರವರಿಗೆ ೨೦೦೭ ರ, " ದಾದಾಸಾಹೇಬ್ ಫಾಲ್ಕೆ ರತ್ನ ಪ್ರಶಸ್ತಿ".
  • ಡಾ. ಜೀ. ವಿ. ಲೋಗನಾಥನ್ ಮತ್ತು ಮಿನಾಲ್ ಪಾಂಚಾಲ್ ರವರಿಗೆ ನಮ್ಮ ಭಾವ ಪೂರ್ಣ ಶ್ರದ್ಧಾಂಜಲಿಗಳು !
  • ಇಂಗ್ಲಿಷ್ ಕಾದಂಬರಿಕಾರ, ಕನ್ನಡದ ಎಚ್. ರಾಜಾರಾವ್ ಇನ್ನಿಲ್ಲ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಇದು ಉತ್ತರ ಪ್ರದೇಶದಲ್ಲಿ ಮಾತ್ರ ಸಾಧ್ಯ!!

ಇತ್ತೀಚಿನ ಪ್ರತಿಕ್ರಿಯೆಗಳು

  • ಕೇವೆಂ
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 1:42am
  • ahankari
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 12:58am
  • sushil
    ಉ: ನಿರಕ್ಷರಿ ಕವಿಯ ಅಕ್ಷರಗಾಥೆ
    July 5, 2008 - 12:48am
  • hpn
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 10:56pm
  • muralihr
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 10:34pm
  • Jayalaxmi.Patil
    ಉ: ರಾತ್ರಿ ರಾಣಿ ಜತೆ ಕೆಲ ನಿಮಿಷ..
    July 4, 2008 - 9:58pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:35pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:31pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:15pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:12pm
ಇನ್ನಷ್ಟು


ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು

— ಮಹಾತ್ಮಾ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator