ಮೈಸೂರರಸರ ಸುವರ್ಣ ಸಿಂಹಾಸನದ ವೈಭವ- ದಸರಾ ಸಮಯದಲ್ಲಿ !

ಪಾರಂಪರಿಕವಾಗಿ, " ಮೈಸೂರರಮನೆಯ ದಸರಾ ಮಹೋತ್ಸವದ ಆಚರಣೆ," ವಿಶ್ವಪ್ರಸಿದ್ಧ. ಎಲ್ಲರೂ ಈ ದಿನಕ್ಕೆ ಕಾಯುತ್ತಿರುತ್ತಾರೆ. ವೊಡೆಯರೆಲ್ಲಾ ರಾಜ್ಯದ ಸರ್ವತೋಮುಖ ಏಳಿಗೆಯಲ್ಲಿ ಬಹುದೊಡ್ಡ ಪಾತ್ರವಹಿಸಿದ್ದರು. "ರಾಜನೇ ಪ್ರತ್ಯಕ್ಷ ದೇವತೆ," ಎನ್ನುವಷ್ಟು, ಜನತೆ ಅವರ ಬಗ್ಗೆ ಗೌರವಾದರಗಳನ್ನು ಇಂದಿಗೂ ಹೊಂದಿದೆ. ಈಗಿನ ಕಂಟೀರವದತ್ತ ನರಸಿಂಹರಾಜ ವೊಡಿಯರ್ , ಆಧುನಿಕ ಮಾನಸಿಕ ವ್ಯವಸ್ಥೆಯನ್ನು ಪುರಸ್ಕರಿದರೂ, ತಮ್ಮ ಪರಂಪರಾಗತ ರಾಜಮನೆತನದ ರೀತಿ-ರಿವಾಜುಗಳನ್ನೂ ಪೋಷಿಸಿಕೊಂಡು ಹೋಗುತ್ತಿದ್ದಾರೆ. ದೇವಿ ಚಾಮುಂಡೇಶ್ವರಿಯ ಪೂಜೆಯನಂತರ, ರತ್ನಖಚಿತವಾದ ಬಂಗಾರದ ಸಿಂಹಾಸನದಮೇಲೆ ವಿರಾಜಿಸುವುದು ಹಳೆಯಕಾಲದಿಂದಲೂ ನಡೆದುಕೊಂಡುಬಂದಿರುವ ಪದ್ಧತಿ. ಆಗಿನಸಮಯದಲ್ಲಿ ವಂದಿಮಾಗಧರು ರಾಜರಿಗೆ ಗೌರವಸಲ್ಲಿಸುತ್ತಾರೆ. ಈಗ, ದಸರಾ ಸಮಾರಂಭವನ್ನು ಕರ್ನಾಟಕರಾಜ್ಯ ಸರ್ಕಾರ ವಹಿಸಿಕೊಂಡು, ನಡೆಸುತ್ತಾಬಂದಿದೆ.
-ವರ್ಣಚಿತ್ರ : ಪತ್ರಿಕೆಗಳಿಂದ ಲಭ್ಯ.

- Login or register to post comments
- 330 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: