ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ರಾತ್ರಿ ರಾಣಿ ಜತೆ ಕೆಲ ನಿಮಿಷ..

December 7, 2007 - 12:34am — ಗಣೇಶ
ರಾತ್ರಿ ರಾಣಿ ಜತೆ ಕೆಲ ನಿಮಿಷ..

ರಾತ್ರಿ ಎಂದಿನಂತೆ ತಡವಾಗಿ ಮನೆಗೆ ಬರುವಾಗ ‘ನನ್ನ ರಾಣಿ’ ಜತೆ ಅಕ್ಕಪಕ್ಕದ ಮನೆ ಹೆಂಗಸರು ಟೆರೇಸ್‌ನಲ್ಲಿ ನಿಂತಿರುವುದು ಕಾಣಿಸಿತು. ಮೇಲೆ ಹೋಗಿ ನೋಡಿದರೆ ಚಟ್ಟಿಯಲ್ಲಿ ಬೆಳೆಸಿದ ರಾತ್ರಿ ರಾಣಿ ಗಿಡದಲ್ಲಿ ೨ ಹೂಗಳು ಅರಳಿದ್ದವು. ಅರಳಿದ ೩ ಹೂಗಳಲ್ಲಿ ಒಂದು ಹೂವನ್ನು ಆಗಲೇ ಒಬ್ಬರು ಪೂಜೆಗೆಂದು ಕತ್ತರಿಸಿ ತೆಗೆದುಕೊಂಡು ಹೋಗಿದ್ದರು.

ಇಷ್ಟು ಸುಂದರ ಮತ್ತು ಸುವಾಸನೆಯಿಂದ ಕೂಡಿದ ಹೂ ರಾತ್ರಿ ಹೊತ್ತು ಮಾತ್ರ ಕೆಲವೇ ಕ್ಷಣಗಳು ಕಾಣಿಸಿ ಮರೆಯಾಗುವುದು.ರಾಣಿಯಂತೆ ಈ ಹೂವಿನ ದರ್ಶನ ಭಾಗ್ಯ ಅಪರೂಪವಾದುದರಿಂದ ಈ ಹೆಸರು ಬಂದಿರಬೇಕು.
ಕಾಂಡವೇ ಎಲೆಯಾದಂತೆ,ಎಲೆಯೇ ಹೂವಾದಂತೆ ಕಾಣಿಸುವ ಇದಕ್ಕೆ ‘ಬ್ರಹ್ಮಕಮಲ’ಎಂಬ ಇನ್ನೊಂದು ಹೆಸರೂ ಇದೆ. ಕಮಲ ಕೆಸರಲ್ಲಿರುವುದು, ಅದನ್ನಾಗಲೇ ಲಕ್ಷ್ಮಿ ತನ್ನ ವಶಕ್ಕೆ ತೆಗೆದುಕೊಂಡುದಕ್ಕೋ ಏನೋ,ಬ್ರಹ್ಮ ಅದಕ್ಕೂ ಸುಂದರವಾದ ಈ ಹೂವನ್ನು ಸೃಷ್ಠಿಸಿ ತನ್ನ ಹೆಸರನ್ನು ಜೋಡಿಸಿಕೊಂಡಿರಬೇಕು.
ಎಲ್ಲೇ ಗಿಡ, ಮರ ಕಾಣಲಿ ಅದರ ಹೂ,ಹಣ್ಣು, ಕಾಂಡ,ಬೇರು,ಕಡೆಗೆ ಅದರ ಸುತ್ತಲಿನ ಮಣ್ಣನ್ನೂ ಬಿಡದೇ ಉಪಯೋಗಿಸುವ ಆಯುರ್ವೇದ ವೈದ್ಯರು, ಇದರ ಸೌಂದರ್ಯಕ್ಕೆ ಮರುಳಾಗಿ ಔಷಧಿಯಾಗಿ ಉಪಯೋಗಿಸಿಲ್ಲ ಎಂದು ತಿಳಿದಿದ್ದೆ.
’..ಜಗತ್ಯೇವಂ ಅನೌಷಧಂ’ಎಂದು ಎನೋ ಒಂದು ಶ್ಲೋಕ ಹೇಳಿ,ಪರಿಚಿತ ವೈದ್ಯರೊಬ್ಬರು ಇದರ ಬಗ್ಗೆ ಹೇಳಿದ್ದು-
Latin name- -Saussurea obavallata
೨-೩ ಅಡಿ ಬೆಳೆಯುವ ಕ್ಷುಪ.ಉದ್ದನೆಯ ಎಲೆ,ಸುಗಂಧಿತ.
ಉಗ್ರ ಸುಗಂಧಯುಕ್ತ,ಅತಿ ಸುಂದರ ಪುಷ್ಪ.ಇದರ ಪುಷ್ಪದ ಭಸ್ಮ(ಅಯ್ಯೋ ರಾಮ)ವನ್ನು
ಪ್ಲೀಹಾವೃದ್ಧಿಯಲ್ಲಿ ಜೇನಿನ ಜತೆ ಕೊಡುವರು.ಅಪಸ್ಮಾರ ಮತ್ತು ಮಾನಸಿಕ ರೋಗದಲ್ಲಿ ಇದರ ಪುಷ್ಪದಿಂದ ಸಿದ್ಧಪಡಿಸಿದ
ತೈಲ ದಿಂದ ತಲೆಗೆ ಮಾಲೀಶ್ ಮಾಡುವರು.ಬೇರನ್ನೂ ಗಾಯ ಇತ್ಯಾದಿಗೆ ಲೇಪನಕ್ಕೆ ಉಪಯೋಗಿಸುವರು.ಹಿಮಾಲಯ ಆಸು ಪಾಸಿನಲ್ಲಿ ಹೆಚ್ಚು ಬೆಳೆಯುವುದು. ..

ಕೊನೇ ಮಾತು- ನಿಮ್ಮಂತೆ ನನಗೂ ಅನಿಸುತಿದೆ-ವಸಂತ ಕಜೆಯವರ ಕೈ(ಕ್ಯಾಮರಾ)ಗೆ ಈ ಹೂವು ಸಿಗಬೇಕಿತ್ತು.ನಾನು ನನ್ನ ಮೊಬೈಲಲ್ಲಿ ತೆಗೆದ ಫೊಟೋಗಳು.ಚೆನ್ನಾಗಿ ಬಂದಿಲ್ಲವಾದರೆ ಆ ಹೂವಿನ ಕ್ಷಮೆ ಕೇಳುವೆ.ಫೊಟೋವೇ ಬರಲಿಲ್ಲವಾದರೆ ಕ್ಷಮಿಸಿ.ಪುನಃ ನಾಳೆ ಪ್ರಯತ್ನಿಸುವೆ.

~.~
  • Login or register to post comments
  • 869 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 2, 2008 - 7:59pm — Jayalaxmi.Patil

ಉ: ರಾತ್ರಿ ರಾಣಿ ಜತೆ ಕೆಲ ನಿಮಿಷ..

Jayalaxmi.Patil's picture

ಮಹೇಶ್ ನನ್ನಲ್ಲಿ ನಮ್ಮ ಮನೆಯಲ್ಲಿ ಅರಳಿದ ಬ್ರಹ್ಮ ಕಮಲದ ಕೆಲವು ಫೋಟೋಸ್ ಇವೆ. ಅವನ್ನು ಇಲ್ಲಿ ಸಂಪದದಲ್ಲಿ ಹೇಗೆ ಹಾಕಬೇಕೆಂದು ನನಗೆ ತಿಳಿಯದು. ನನಗೆ ಗೊತ್ತಿದ್ದ ಮಟ್ಟಿಗೆ ಬ್ರಹ್ಮ ಕಮಲಕ್ಕೆ ರಾತ್ರಿ ರಾಣಿ ಎನ್ನುವುದಿಲ್ಲ. ರಾತ್ರಿ ರಾಣಿ ಹೂವು ಪುಟ್ಟದಾಗಿ (ಪಾರಿಜಾತದ ಗಾತ್ರ) ಗಾಢ ಸುವಾಸನೆವುಳ್ಳದ್ದು.
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 11:18pm — ಗಣೇಶ

ಉ: ರಾತ್ರಿ ರಾಣಿ ಜತೆ ಕೆಲ ನಿಮಿಷ..

ಗಣೇಶ's picture

ಸರಿಯಾದವರನ್ನೇ ಕೇಳಿದ್ದೀರಿ.

ಬ್ರಹ್ಮಕಮಲದ ಕೆಲವು ಫೋಟೋಗಳನ್ನು ಹೇಗೆ ಸೇರಿಸುವುದು-ನನಗೆ ಗೊತ್ತಿಲ್ಲ.(ಮಹೇಶ್, ಈ ಪ್ರತಿಕ್ರಿಯೆ ಓದಿದರೆ ಹೇಗೆ ಸೇರಿಸುವುದೆಂದು ಹೇಳಿಬಿಡಿ)
ಒಂದು ಫೋಟೋವಾದರೆ -ನಿಮ್ಮಹೆಸರಿನ ಕೆಳಗೆ ಬರುವ,ಹೊಸ ಬರಹ ಸೇರಿಸಿಯಲ್ಲಿ-ಚಿತ್ರಕ್ಕೆ ಕ್ಲಿಕ್ ಮಾಡಿ-ಅಲ್ಲಿ ಹೇಳಿದ ಪ್ರಕಾರ ಮಾಡಿ.

ಹಾಗೇ ರಾತ್ರಿ ರಾಣಿ ಹೂವಿನ ಚಿತ್ರ ಸಿಕ್ಕಿದರೂ ಹಾಕಿ. ಅದನ್ನು ನೋಡಿದ ಮೇಲೆ ಈ ಚಿತ್ರದ ಹೆಡ್ಡಿಂಗ್‌ನ್ನು,ಬರಹವನ್ನೂ ಬದಲಾಯಿಸುತ್ತೇನೆ.

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 9:58pm — Jayalaxmi.Patil

ಉ: ರಾತ್ರಿ ರಾಣಿ ಜತೆ ಕೆಲ ನಿಮಿಷ..

Jayalaxmi.Patil's picture

ನಮ್ಮ ಮನೆಯ ಹತ್ತಿರದಲೆಲ್ಲು ರಾತ್ರಿ ರಾಣಿಯ ಗಿಡವನ್ನು ಕಂಡಿಲ್ಲ ನಾನು. ಬೇರೆಲ್ಲಾದರು ಕಂಡಲ್ಲಿ ಖಂಡಿತ ಅದರ ಫೋಟೊ ಸಂಪದದಲ್ಲಿ ಹಾಕುತ್ತೇನೆ.
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 8:01pm — Jayalaxmi.Patil

ಉ: ರಾತ್ರಿ ರಾಣಿ ಜತೆ ಕೆಲ ನಿಮಿಷ..

Jayalaxmi.Patil's picture

ಕ್ಷಮಿಸಿ ಗಣೇಶ್ ನಿಮ್ಮನ್ನು ಮಹೇಶ್ ಅಂತ ತಪ್ಪಾಗಿ ಕರೆದುದಕೆ.
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 11:25pm — ಗಣೇಶ

ಉ: ರಾತ್ರಿ ರಾಣಿ ಜತೆ ಕೆಲ ನಿಮಿಷ..

ಗಣೇಶ's picture

ಅಯ್ಯೋ ಕ್ಷಮೆ ಯಾಕೆ ಕೇಳಬೇಕು.

ಈಗ ಮಹೇಶಂದೇ ಕಾಲ.

ಅಲ್ಲಿ ಬ್ಲಾಗಲ್ಲಿ ಮಹೇಶ, ಇಲ್ಲಿ ಪ್ರತಿಕ್ರಿಯೆಯಲ್ಲೂ ಮಹೇಶ,
ಎಲ್ಲೆಲ್ಲೂ ಮಹೇಶನೇ ಮಹೇಶ..

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜ್ಯೇಷ್ಟ ಮಾಸದ ಶ್ರೇಷ್ಟ ಪುಷ್ಪ - ಬ್ರಹ್ಮಕಮಲ
  • ಬ್ರಹ್ಮ ಕಮಲ.
  • ಬ್ರಹ್ಮ ಕಮಲಕ್ಕೆ ಜೊತೆ ನೀಡುತ್ತಿರುವ ಇನ್ನೊಂದು ಸುಂದರ ಪುಷ್ಪ - ಸೌಗಂಧಿಕಾ
  • ಬದಲಾದ ಘಳಿಗೆಗಳು?
  • ಹಲ್ಲುಜ್ಜಿದಿರಿ ಸರಿ,ಫ್ಲಾಸಿಂಗ್ ಮಾಡಿದಿರಾ?
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರ ಒಂದು ಭಾವಪೂರ್ಣ ಹಾಡುವ ಭಂಗಿ. ಚಿತ್ರ: ಜೆ.ಜಿ.ರಾಜ್.

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
  • makrumanju
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 12, 2008 - 10:57am
  • makrumanju
    ಉ: ಮರಳಿ ಬರಲಿ ಬಾಲ್ಯ
    October 12, 2008 - 10:42am
  • ಪ್ರವೀಣ್
    ಉ: ಕನ್ನಡದ ಯುವ ಗಾನ ಕೋಗಿಲೆ, ಭಾರತದ ಭರವಸೆಯ ಗಾಯಕಿ 'ರಿತೀಶಾ'
    October 12, 2008 - 9:54am
  • Sunil Jayaprakash
    ಉ: ಪರ್ಯಟಕ ಮಿತ್ರರ ಜೊತೆಯಲ್ಲಿ !
    October 12, 2008 - 9:53am
  • ASHOKKUMAR
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 12, 2008 - 9:25am
  • shaamala
    ಉ: ಹನ್ನೊಂದು ಅಡಿ ಎತ್ತರದ ತಂಬೂರಿ!
    October 12, 2008 - 8:53am
ಇನ್ನಷ್ಟು


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator