Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
ಬೇಲೂರಿನ ಪ್ರಸಿದ್ದ ಚನ್ನಕೇಶವ ದೇವಾಲಯದ ಹೊರ ನೋಟ
ಪೂರ್ಣ ಹೆಸರು ಸಿ ಸೋಮಶೇಖರಯ್ಯ
ಪರಿಚಯ
ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .
ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ | ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ || ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ | ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||
ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.
— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.