ಲಂಡನ್ ಪರೇಡ್‌ನಲ್ಲಿ ಯಕ್ಷಗಾನ ಪ್ರದರ್ಶನ. ಯಕ್ಷಗಾನದ ಇತಿಹಾಸದಲ್ಲಿ ಅಚ್ಚಳಿಯದ ಒಂದು ಹೊಸ ಪುಟ !

ಲಂಡನ್, ಜ. 3 : ನಮ್ಮ ಕನ್ನಡ ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾದ ಯಕ್ಷಗಾನವನ್ನು ಪ್ರಪಂಚಕ್ಕೆಲ್ಲ ಹರಡುವ ಉದ್ದೇಶದಿಂದ ಇಂಗ್ಲೆಂಡಿನ www.yakshaland.com ಸದಸ್ಯರು ಜನವರಿ 1ರ ಐತಿಪಾಸಿಕ ಲಂಡನ್ ಪರೇಡ್‌ನಲ್ಲಿ ಯಕ್ಷಗಾನ ಪ್ರದರ್ಶಿಸಿದರು. ಸುಮಾರು 5 ಲಕ್ಷ ಲಂಡನ್ ಜನರು ಈ ಪ್ರದರ್ಶನವನ್ನು ವೀಕ್ಷಿಸಿ ಹರ್ಷೊದ್ಗಾರ ಮಾಡಿದರು. ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಸುಮರು 2 ಕೋಟಿ ಜನರು ಪ್ರಪಂಚದಾದ್ಯಂತ ಟಿವಿಯಲ್ಲಿ ನೋಡಿ ಅನಂದಿಸಿದರು. ನಮ್ಮ ಕನ್ನಡ ಮನಸ್ಸುಗಳು ಹಿರಿಹಿರಿ ಹಿಗ್ಗಿ ಹೀರೇಕಾಯಿ ಆಯಿತು.
BBC, CNN, SKY ನೆಟ್‌ವರ್ಕ್‌ಗಳು, ಇಂಗ್ಲೆಂಡ್ ಮತ್ತು ಯುರೋಪಿನ ಎಲ್ಲಾ ಪ್ರಮುಖ ನ್ಯೂಸ್ ಚಾನೆಲ್ ಮತ್ತು ಸುದ್ದಿ ಪತ್ರಿಕೆಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಕ್ಷ ಕಲಾವಿದರಿಗೆ ಲಂಡನ್ ಮೇಯರ್ ಅವರು ಪ್ರಶಸ್ತಿ ಫಲಕಗಳನ್ನು ಇತ್ತು ಗೌರವಿಸಿದರು.
ಮಕ್ಕಳಿಂದ ಹಿಡಿದು ಮುದುಕರವರೆಗೆ "ಯಕ್ಷ-ದ ಕಿಂಗ್" ವೇಷಧಾರಿಯೊಂದಿಗೆ(ಕುಂಟಿಕಾನಮಠ ಕುಮಾರ್) ಭಾವಚಿತ್ರಗಳನ್ನು ತೆಗಿಸಿಕೊಂಡರು. ಹಿಮ್ಮೇಳದಲ್ಲಿ ಆರುಣ್ ರಾಘವೇಂದ್ರ ಚೆಂಡೆಯನ್ನು ಬಾರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು, ಚಕ್ರತಾಳದಲ್ಲಿ ಸರಿತಾ ಆರುಣ್ ಕುಮಾರ್ ಸಹಕರಿಸಿ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು. ದೀಪಿಕಾ ಕುಂಟಿಕಾನಮಠ ಅವರು ವೀಡಿಯೊಗ್ರಾಫರ್ ಆಗಿ ಯಕ್ಷಗಾನವನ್ನು ಸೆರೆಹಿಡಿದರು. ಅಂತೂ ಯಕ್ಷ-ದ ಕಿಂಗ್ ತನ್ನ ಸದಸ್ಯರೊಂದಿಗೆ ಲಂಡನಿನ ಪ್ರಮುಖ ಸ್ಥಳಗಳಾದ ಬಿಗ್ ಬೆನ್, ಟ್ರಫಾಗಲ್ ರಸ್ತೆ, ಪಿಕಾಡಲಿ ಸರ್ಕಸ್, ಪಾರ್ಲಿಮೆಂಟ್ ಹೌಸ್ ಇವೆಲ್ಲದರ ಸಮೀಪದಿಂದ ಸಾಗಿ ಯಕ್ಷಗಾನದ ಇತಿಹಾಸದಲ್ಲಿ ಅಚ್ಚಳಿಯದ ಒಂದು ಹೊಸ ಪುಟವನ್ನು ಬರೆದರು.
-ದಟ್ಸ್ ಕನ್ನಡ ಇ- ಪತ್ರಿಕೆ ಯ ಪ್ರತಿರೂಪ.

- Login or register to post comments
- 264 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: