ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › ಪ್ರಚಲಿತ ಲೇಖನ ವರ್ಗದ ಚಿತ್ರಗಳು

‘ಜೈಪುರ ಕೃತಕ ಕಾಲಿ"ನ ಜನಕ, ಮೂಳೆ ತಜ್ಞ, ಡಾ.ಪ್ರಮೋದ್ ಕರಣ್ ಸೇಥಿ, ವಿಧಿವಶರಾದರು !

January 8, 2008 - 5:25am — venkatesh
‘ಜೈಪುರ ಕೃತಕ ಕಾಲಿ"ನ ಜನಕ, ಮೂಳೆ ತಜ್ಞ,  ಡಾ.ಪ್ರಮೋದ್ ಕರಣ್ ಸೇಥಿ,  ವಿಧಿವಶರಾದರು !

ವಿಕಲಚೇತನರಿಗೆ ಬದುಕು ಕೊಟ್ಟ ಡಾ.ಸೇಥಿ ಇನ್ನಿಲ್ಲಸೋಮವಾರ, 7 ಜನವರಿ 2008, 13:4 Hrs (IST)

ಜೈಪುರ, ಜ.7: ಕಾಲು ಕಳೆದುಕೊಂಡವರೂ ನಡೆದಾಡುವಂತೆ ಮಾಡಿದ ‘ಜೈಪುರ ಕೃತಕ ಕಾಲಿ"ನ ಜನಕ, ಮೂಳೆ ತಜ್ಞ ಡಾ.ಪ್ರಮೋದ್ ಕರಣ್ ಸೇಥಿ (80) ಭಾನುವಾರ(ಜ.6) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಯುದ್ಧದಲ್ಲಿ ಕಾಲು ಕಳೆದುಕೊಂಡವರು, ಪೋಲಿಯೊ ಹಾಗೂ ನೆಲಬಾಂಬ್ ಸ್ಪೋಟದಿಂದ ಕಾಲು ಕಳೆದುಕೊಂಡವರಿಗಾಗಿ ಹಗುರವಾದ, ದೀರ್ಘ ಬಾಳಿಕೆಯ, ಜಲನಿರೋಧಕ ಗುಣಗಳನ್ನು ಹೊಂದಿದ್ದ ಕಡಿಮೆ ವೆಚ್ಚದ ಕೃತಕ ಕಾಲುಗಳನ್ನು ಸೃಷ್ಟಿಸಿದ್ದರು ಡಾ. ಸೇಥಿ. ಇದಕ್ಕೆ ಶೂ ಹಾಕಿ ಅಥವಾ ಹಾಕದೆಯೂ ಬಳಸಬಹುದಾಗಿತ್ತು. 1986ರಲ್ಲಿ ಇದರ ಅಂತಿಮ ರೂಪವನ್ನು ಬೆಳಕಿಗೆ ತರಲಾಯಿತು. ಬಳಿಕ ಇದು ಜೈಪುರ ಕಾಲು ಎಂದೇ ಜನಪ್ರಿಯವಾಯಿತು.

ವಾರಣಾಸಿಯಲ್ಲಿ 1927ರಲ್ಲಿ ಹುಟ್ಟಿದ ಸೇಥಿ ವೈದ್ಯವಿಜ್ಞಾನವನ್ನು ಅಭ್ಯಸಿಸಿದ್ದು ಭಾರತ ಮತ್ತು ಸ್ಕಾಟ್ಲೆಂಡಿನಲ್ಲಿ. ಜೈಪುರದ ಕೀಲು ಕೇಂದ್ರಗಳನ್ನು ಶ್ರೀಲಂಕಾ, ಕಾಂಬೋಡಿಯಾ, ವಿಯಟ್ನಾಂ, ನಿಕಾರಗುವ ಹಾಗೂ ಬಾಂಗ್ಲಾದೇಶಗಳಲ್ಲಿ ಸ್ಥಾಪಿಸಿದ್ದಾರೆ. ಇವರು ಸೃಷ್ಟಿಯ ಜೈಪುರ ಕಾಲುಗಳು ಈಗ ಜಗತ್ತಿನ ಎಲ್ಲೆಡೆ ಇರುವ ವಿಕಲಚೇತನರಿಗೆ ಕಾಲುಕೊಟ್ಟಿವೆ. ನಟಿ, ನರ್ತಕಿ ಸುಧಾ ಚಂದ್ರನ್‌ಗೆ ಈ ಜೈಪುರ ಕಾಲುಗಳು ಅಕ್ಷರಶಃ ಮರುಹುಟ್ಟನ್ನೇ ನೀಡಿದವು. ಕೃತಕ ಕಾಲಿನ ವೈಜ್ಞಾನಿಕ ಅನ್ವೇಷಣೆಗೆ ಗಿನ್ನಿಸ್ ಪ್ರಶಸ್ತಿ ಸೇರಿದಂತೆ 1981ರಲ್ಲಿ ಪದ್ಮಶ್ರೀ, ಏಷ್ಯಾದ ಪ್ರತಿಷ್ಠಿತ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
ನಮ್ಮೆಲ್ಲ ಸಂಪದೀಯರಪರವಾಗಿ, ಮೃತರ ಆತ್ಮಕ್ಕೆ ಶಾಂತಿಯನ್ನು ದಯಪಾಲಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

-ದಟ್ಸ್ ಕನ್ನಡ ಇ-ಪತ್ರಿಕೆಯ ಪ್ರತಿ.

  • ಪ್ರಚಲಿತ ಲೇಖನ ವರ್ಗದ ಚಿತ್ರಗಳು
~.~
  • Login or register to post comments
  • 257 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೃತಕ ಬುದ್ಧಿಮತ್ತೆ ಬಳಸಿ ಸೈಬರ್ ಅವಳಿ
  • ಸೂರ್ಯ ಕಾಲು
  • ಪ್ರೊ. ಶ್ರೀನಿವಾಸ ರಾಜು, ತೀರ್ಥಹಳ್ಳಿಯಲ್ಲಿ, ಅಸ್ತಂಗತರಾದರು !
  • ಐಟಿ ಬಾಳು
  • ದೆಹಲಿಯ ’ ಅಕ್ಷರ್ ಧಾಮ್ ’ ಮಂದಿರ, " ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್," ನಲ್ಲಿ ಸೇರ್ಪಡೆ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಇನ್ನೆಷ್ಟು ದಿನ ನನ್ನ ಆಯಸ್ಸು?

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 1:37pm
  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
ಇನ್ನಷ್ಟು


ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator