ಥಟ್ಟಂಥೇಳ್ರಿಮತ್ತ !

ಥಟ್ಟಂಥೇಳ್ರಿಮತ್ತ.
ಮಗ್ಗಲ್ನಾಗ್ ಕೊಟ್ಟಿರೋ, ಚಿತ್ರದೊಳ್ಗಿನ್ ಹುಡ್ಗ, ಯಾರ್ ಅಂಥೇಳ್ರಿಮತ್ತ ?
ಛಲೊ ಸುಳ್ಹುಗಳು ೬ ಇದಾವು. ಬೇಕಾದ್ ಹಾಂಗ್ ಆರ್ಸ್ ಕೊಳ್ರಿ ; ನಡೀತದ.
೧. ಮತ್ತ, ೩, ೧೨೦ ವಾರಗ್ಳ ಹಿಂದೆ, ಈ ಭೂಮಿ ಮ್ಯಾಲೆ ಬಂದಕೂಡ್ಲೇ ರೋದ್ನಮಾಡ್ಲಿಕ್ ಹತ್ತಿದರಂತ್ರಿ !
೨. ತಾಯಿ-ತಂದಿ, ಇವ್ರ ಕೈಲಿ ಸಾಲೀಮಣಿ [ಸ್ಲೇಟ್] ಕೊಟ್ಟಾಗ, ಗೀಚಕ್ ಸುರುಮಾಡಿದ್ರಂತ್ರಿ.
೩. ಹುಟ್ಟಿದ್ ಹಳ್ಳೀನಾಗ್ರಿ, ಈಗ ಭಾರತದ್ ವಾಣಿಜ್ಯ ರಾಜ್ಧಾನೀಯಾಗ್ ವಾಸ್ತವ್ಯಂತ್ರಿ.
೪. ಈಗ್ಲೂ ಅದೇ ಹುಚ್ಚ್ ಮುಂದ್ವರ್ದೈತಿ, ಅಂತಾರ್ರಿ, ಇವ್ರುತಿರ್ಪತಿ ತಿಮ್ಮಪ್ಪನ್ ಒಂದು ಹೆಸರ್ನ ಎರ್ವುಲು ಪಡಕೊಂಡಾರಂತ್ರಿ.
೫. ಗೊತ್ತಿರ್ಲಿ ಬಿಡ್ಲಿ, ಎಲ್ಲಾ ವಿಷಯಗಳ್ಮೇಲೂ, ಯಾರಾರು ಕೇಳ್ಲಿ ಇಲ್ಲ ಬಿಡ್ಲಿ, ಏನಾರು ಒದರ್ತಾನೇ ಇರ್ತಾರಂತ್ರಿ.
೬. ಸಂಪದೀಯರೆಲ್ರಿಗು ಇವೃ ಆಪ್ತರಂತ್ರಿ. ಅವ್ರ್ ಅಂತಾರ್ರಿ. ನಮ್ಗೆ ತಿಳಿವಲ್ದು. ಅದರ್ ಖಬರ್ ಇಲ್ರಿ.
ಹೇಳ್ರಿಮತ್ತ, ಯಾರಿರ್ಬೈದು !
ಜನವರಿ, ೨೪ ರಂದು, ಇವ್ರ ಹುಟ್ಟಿಧಬ್ಬಂತ್ರಿ !

- Login or register to post comments
- 474 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail






RSS:
ಪ್ರತಿಕ್ರಿಯೆಗಳು
ಉ: ಥಟ್ಟಂಥೇಳ್ರಿಮತ್ತ !
ಸರ್ ,
ಹುಟ್ಟಿದ ಹಬ್ಬದ ಶುಭಾಶಯಗಳು
ನೀವು ಬರ್ದದ್ದೆಲ್ಲಾ ನಾವು ಓದ್ತಿರ್ತೀವ್ರೀ , ಇಷ್ಟS ಏನು ಸೊಲ್ಪ ಸೋಮಾರಿತನ ಏನ್ರಪಾ , ಛಲೋ ಇದ್ದದ್ದು ಛಲೋ ಅನ್ಲಿಕ್ಕೆ , ತಪ್ಪು ತಿಳಕೋಬ್ಯಾಡ್ರಿ , ಹೊಟ್ಟಿಗೆ ಹಾಕ್ಕೋಡ್ರಿ , ನೀವು ಈಗ ಏನು ಮಾಡ್ಲಿಕ್ಕತ್ತೀರಲಾ , ಅದನ್ನ ಮಾಡಿಕೊಂತನS ಇರ್ರಿ .
ನಾವು ( ಸುಮ್ಮಕ ) ಓದಿಕೊಂಡಿರ್ತೀವಿ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಥಟ್ಟಂಥೇಳ್ರಿಮತ್ತ !
ಥೋ , ಸಮಾ(ತ್ನಾಗಿ) ಓದ್ಲಿಲ್ಲ ;
ನಿಮ್ಮ ಷಷ್ಠ್ಯಬ್ದಿ ಗೆ ಶುಭಾಶಯಗಳು , ನೂರು ವರ್ಷ ಬಾಳಿ ,
ನಮಗೆಲ್ಲ ಹೊಸ , ಹಳೆ ವಿಷಯ , ವಿಚಾರ ತಿಳಸ್ತಾ ಇರ್ರಿ ಮತ್ತ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಥಟ್ಟಂಥೇಳ್ರಿಮತ್ತ !
ವೆಂಕಟೇಶರಿಗೆ ಮುಂಚಿತವಾಗಿ ಜನ್ಮದಿನದ ಶುಭಾಶಯಗಳು!
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಥಟ್ಟಂಥೇಳ್ರಿಮತ್ತ !
ಎಸ್. ಎಂ.ಕ್ರಿಷ್ಣ ?
ಎನ್. ಅಂಜನ್ ಕುಮಾರ್
thewiseant@yahoo.co.in
yahoo messenger ನಲ್ಲೂ ಲಭ್ಯ
ಉ: ಥಟ್ಟಂಥೇಳ್ರಿಮತ್ತ !
ತಪ್ಪು ಉತ್ತರ...ಅವರು ನಮ್ಮ ವೆಂಕ್ಟೇಶಪ್ಪ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಥಟ್ಟಂಥೇಳ್ರಿಮತ್ತ !
ದೊಗ್ನಾಳ್ ಮಂಜಪ್ಪ್ನೋರ್, ಸಿಸ್ಯರಾದ, ನಮ್ ಎಂಗಡೇಸಪ್ನೋರಿಗೆ ಉಟ್ಟು ಅಬ್ಬದ ಸುಬಾಸಯಗಳು. ವೆಂಕಟೇಶರೆ, ನಿಮ್ಮ ಉತ್ಸಾಹ ಹೀಗೆಯೇ ಮುಂದುವರಿಯುತ್ತಾ ಸಾವಿರಪಟ್ಟು ಹೆಚ್ಚಾಗಿ ನಮಗೆಲ್ಲ ಹುರುಪಿನ ಬೀಡಾಗಿರಿ.
ಅಂದಹಾಗೆ, Happy Birthdayಗೆ ಕನ್ನಡ ಪದ ಏನು ಅಂತ ಬೇಕಿದ್ರೆ, ನೋಡಿ ಇಲ್ಲಿ ಇದೆ, "ಸೌಟು" *(!#(@!*@!#* ಹೇಗೆ ಅಂತೀರಾ. ಸವಿ ಪುಟ್ಟು = ಸವಿವುಟ್ಟು = ಸವುಟ್ಟು = ಸವುಟು = ಸೌಟು&*(*@)&!#)(*@@!(*#&@!
ಸರಿ ಸರಿ, ಬೇಗ ಬೇಗ ಮತ್ತಿನ್ನೇಕೆ ತಡ, ಸೌಟು ಹಿಡಿದು ಅಡಿಗೆ ಮನೆಗೆ ನಡೆಯಿರಿ.
ಉ: ಥಟ್ಟಂಥೇಳ್ರಿಮತ್ತ !
ವೆಂಕಟೇಶರೆ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು!
ಚಿತ್ರದಲ್ಲಿ ಎಷ್ಟೊಂದು ಕ್ಲಾರಿಟಿ ಇದೆ! ಧೂಳು ಬೀಳದಂತೆ ಬಹಳ ಜೋಪಾನವಾಗಿ ಇಟ್ಟುಕೊಂಡಿರಬೇಕು ನೀವು.
ನಿಮ್ಮಿಂದ ನಾವುಗಳು ತಿಳಿದುಕೊಳ್ಳುವುದು ಬಹಳವಿದೆ. ಬರೆಯುವ ಹುಚ್ಚು ಮುಂದುವರೆಯಲಿ!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಥಟ್ಟಂಥೇಳ್ರಿಮತ್ತ !
ವೆಂಕಟೇಶರೆ,
ಹುಟ್ಟುಹಬ್ಬದ ಶುಭಾಶಯಗಳು. ಹಿರಿಯರಾದ ನಿಮ್ಮ ಹುರುಪು ನಮಗೂ ಇರಲೆಂದು, ಬರಲೆಂದು ನನ್ನ ಆಶಯ.
-ಹಂಸಾನಂದಿ
ಉ: ಥಟ್ಟಂಥೇಳ್ರಿಮತ್ತ !
ಶರಣು ವೆಂಕಟೇಶರವರಿಗೆ,
ಹುಟ್ಟು ಹಬ್ಬದ ಹಾರ್ದೀಕ ಶುಭಾಶಯಗಳು.
ಉ: ಥಟ್ಟಂಥೇಳ್ರಿಮತ್ತ !
ಶ್ರೀಕಾಂತರಿಂದ
ಶ್ರೀನಿವಾಸರವರೆಗೆ,
ನನ್ನ ಆತ್ಮೀಯ ಸಂಪದೀಯರಿಗೆಲ್ಲಾ, ನನ್ನ ಹೃದಯಪೂರ್ವಕ, ಪ್ರಣಾಮಗಳು.
ನಿಮ್ಮ ಪ್ರೀತಿ, ಸಹಕಾರಗಳೆ ನನಗೆ ಶ್ರೀರಕ್ಷೆ.
ವೆಂ.
ಉ: ಥಟ್ಟಂಥೇಳ್ರಿಮತ್ತ !
ವೆಂಕಟೇಶ ಅವರಿಗೆ,
60ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
"ಆರುಮೂರೆರಡೊಂದು ಸಾವಿರ ಮೂರೆರಡು ಶತ ಶ್ವಾಸ ಜಪಗಳ*" ಲೆಕ್ಕದಲಿ ೨೧೬೦೦*೩೧೨೦*೭ ಶ್ವಾಸ ಜಪಗಳನ್ನು ಇಲ್ಲಿಯವರಗೂ ನಿಮ್ಮಿಂದ ಮಾಡಿ ಮಾಡಿಸಿದ ದೇವ ನಿಮ್ಮನ್ನು ನೂರ್ಕಾಲ ಸುಖವಾಗಿಡಲಿ.
* ಜಗನ್ನಾಥದಾಸರ ಹರಿಕಥಾಮೃತಸಾರದ ಒಂದು ಪದ್ಯದಿಂದ.
ಅನಿಲ
ಉ: ಥಟ್ಟಂಥೇಳ್ರಿಮತ್ತ !
ನನ್ನ ಪ್ರೀತಿಯ ಎಳೆಗೆಳೆಯ ಅನಿಲ್,
ನಾನು ೬೪ ವಸಂತಗಳನ್ನು ಕಳೆದು ೬೫ ರಲ್ಲಿ ಕಾಲಿಟ್ಟಿದ್ದೇನೆ. ನಿಮ್ಮ ವಿಶ್ವಾಸಕ್ಕೆ ಚಿರಋಣಿ.
ವೆಂ.
ಉ: ಥಟ್ಟಂಥೇಳ್ರಿಮತ್ತ !
ಶುಭಾಶಯಗಳು..ನೂರ್ಕಾಲ ಬಾಳಿ ಅಂತ ಆಶಿಸುತ್ತೇನೆ.
amrith
ಉ: ಥಟ್ಟಂಥೇಳ್ರಿಮತ್ತ !
ದಿಲ್ಲಿ ವಾಸಿ ಶ್ರೀ ವೆಂಕಟೇಶ.
ನಿಮಗೆ ಹುಟ್ಟುಹಬ್ಬದ ಶುಭಾಶಯಗಳು.
-ಗಣೇಶ.
ಉ: ಥಟ್ಟಂಥೇಳ್ರಿಮತ್ತ !
ಪಾಪ ನೀವು ದಿಲ್ಲಿಗೆ ಯಾಕಪ್ಪಾ ಅವರನ್ನು ವರ್ಗಾ ಮಾಡಿಸ್ಬಿಟ್ರಿ? ಅವರು ಹೇಳಿದ್ದು ಭಾರತದ ವಾಣಿಜ್ಯ ರಾಜ್ಧಾನಿ ಅಂದ್ರೆ ಬೊಂಬಾಯಿ ಅಂತ ಅಲ್ವೇ!
ಸ್ವಲ್ಪ ತಡವಾಗಿಯಾದ್ರೂ ವೆಂಕಟೇಶರಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಬೊಂಬಾಯಲ್ಲಿ ತಾನೆ ಇರೋದು?
-ನವರತ್ನ ಸುಧೀರ್
ಉ: ಥಟ್ಟಂಥೇಳ್ರಿಮತ್ತ !
ಹೌದು. ನಾನು ಈಗ ಇರುವುದು, ಮುಂಬೈನಲ್ಲಿ. ವಾಣಿಜ್ಯ ರಾಜಧಾನಿ ಈಗಲೂ ಮುಂಬೈ ಎಂದೇ ನನ್ನ ಭಾವನೆ ! ಅದೇನೋ ಅದರ ಮಾಯೆ ಯಾವ ನಗರಕ್ಕೂ ಬರುವುದಿಲ್ಲ ಅನ್ನೊ ಮತ ನನ್ನಂತಹ ಅಲ್ಪಜ್ಞನದು !
ತಮ್ಮೆಲ್ಲರಿಗೂ ನನ್ನ ಕೃತಜ್ಞತಾಪೂರ್ವಕವಾದ ವಂದನೆಗಳು.
ವೆಂ
ಉ: ಥಟ್ಟಂಥೇಳ್ರಿಮತ್ತ !
ಛೆ.
ಕ್ರಿಷ್ಣ ಎಂದು ಓದಿ ತುಂಬಾ ನಗಾಡಿದೆ.
ಅದಕ್ಕಿಂತ ದೊಡ್ಡ ತಪ್ಪು ನಾನು ಮಾಡಿದೆ.
ವೆಂಕಟೇಶ್ ಅವರು ಮುಂಬೈಯಿಂದ ಬರೆದ ಲೇಖನಗಳನ್ನು ಓದಿದ ನಾನು ಈ ತಪ್ಪು ಮಾಡಬಾರದಿತ್ತು.
ಕ್ಷಮಿಸಿ.
ವೆಂಕಟೇಶ್ ಅವರು ಸುಖವಾಗಿ ಬಾಳಲಿ ಎಂದು ಬಯಸುವ,
ಗಣೇಶ.
ಉ: ಥಟ್ಟಂಥೇಳ್ರಿಮತ್ತ !
ಗಣೇಶ, ಸದಾಸರ್ವರಿಗೂ ವಂದ್ಯನು. ಮಹಾಭಾರತವನ್ನು ಬರೆದ ಆ ಮಹಾನುಭಾವ ತಪ್ಪುಮಾಡುವ ಸಾಧ್ಯತೆ ಇಲ್ಲವೇ ಇಲ್ಲ ! ನಿಮಗೆ ವಂದನೆಗಳು.