ನಾರಾಯಣಮೂರ್ತಿಗಳಿಗೆ ಅಭಿನಂದನೆಗಳು !

ನವದೆಹಲಿ, ಜ.27: ಐಟಿ ವಲಯದ ಸಾಧಕ, ಕನ್ನಡಿಗ ಇನ್ಫೋಸಿಸ್ ನ ಎನ್ .ಆರ್. ನಾರಾಯಣಮೂರ್ತಿ ಅವರಿಗೆ ಫ್ರಾನ್ಸ್ ದೇಶದ ಅತ್ಯುತ್ತಮ ನಾಗರಿಕ ಗೌರವವಾದ "ಆಫೀಸರ್ ಆಫ್ ದಿ ಲೇಜಸ್ ಆಫ್ ಹಾನರ್' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಶನಿವಾರ(ಜ.26)ಇಲ್ಲಿ ನಡೆದ ಸಮಾರಂಭದಲ್ಲಿ ಫ್ರಾನ್ಸ್ ದೇಶದ ಉನ್ನತ ಶಿಕ್ಷಣ ಹಾಗೂ ಸಂಶೋಧನೆ ಖಾತೆ ಸಚಿವ ವಲೆರಿ ಪೆಕ್ರೆಸ್ಸೆ ಅವರಿಂದ, ನಾರಾಯಣಮೂರ್ತಿಯವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಸುಮಾರು 82,000 ಉದ್ಯೋಗಿಗಳನ್ನು ಹೊಂದಿರುವ ಇನ್ಫೋಸಿಸ್ ಬೆಳೆದು ಬಂದ ಹಾದಿ ಎಲ್ಲರಿಗೂ ಮಾದರಿಯಾಗಿದೆ ಎಂದು ಫ್ರಾನ್ಸ್ ನ ಸಚಿವರು ಈ ಸಂದರ್ಭದಲ್ಲಿ ಹೇಳಿದರು.
1802 ರಲ್ಲಿ ನಪೊಲಿಯನ್ ಬೋನಾಪರ್ಟೆ ಸ್ಥಾಪಿಸಿದ Legion of Honour ಪ್ರಶಸ್ತಿ, ಫ್ರೆಂಚ್ ರಿಪಬ್ಲಿಕ್ ನ ಅತ್ಯುತ್ತಮ ನಾಗರೀಕ ಪ್ರಶಸ್ತಿಯಾಗಿದೆ. ಫ್ರಾನ್ಸ್ ದೇಶದವರಲ್ಲದೆ, ವಿದೇಶದ ಅನೇಕ ಜನರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.ಭಾರತದಿಂದ ಸತ್ಯಜೀತ್ ರೇ, ಪಂಡಿತ್ ರವಿಶಂಕರ್, ಅಮಿತಾಬ್ ಬಚ್ಚನ್, ಶಾರುಖ್ ಖಾನ್ ಗೆ ಈ ಪ್ರಶಸ್ತಿಯ ಗೌರವ ಲಭಿಸಿದೆ.
ಸಮಸ್ತ ಕನ್ನಡಿಗರ ಪರವಾಗಿ, ಹಾಗೂ ಸಂಪದೀಯರ ಪರವಾಗಿ, ನಾರಾಯಣ ಮೂರ್ತಿಯವರಿಗೆ, ಅಭಿನಂದನೆ ಸಲ್ಲಿಸೋಣ !
-ದಟ್ಸ್ ಕನ್ನಡ ಇ -ಪತ್ರಿಗೆಯ ಪ್ರತಿರೂಪ.

- Login or register to post comments
- 214 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ವಿಖ್ಯಾತ ಉದ್ಯಮಿ, ಡಾ. ನಾರಾಯಣ ಮೂರ್ತಿಗಳಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಶ್ರೀಮತಿ. ಪ್ರತಿಭಾ ಪಾಟೀಲ್, ಸೋಮವಾರ ಪ್ರದಾನಮಾಡಿದರು !
- ಡಾ. ನಿಸ್ಸಾರ್ ಅಹ್ಮದ್ ರವರಿಗೆ, ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು !
- ಹಿರಿಯ ಗೌರವಾನ್ವಿತ ನಟ, ದಿಲೀಪ್ ಕುಮಾರ್ ರವರಿಗೆ ೨೦೦೭ ರ, " ದಾದಾಸಾಹೇಬ್ ಫಾಲ್ಕೆ ರತ್ನ ಪ್ರಶಸ್ತಿ".
- *'ಜೆ,' ರವರ ಕನಸಿನ ಕೂಸು, ಏರ್ ಇಂಡಿಯದ, ವಿಮಾನ ಹಾರಾಟ : ಇಂದಿನಿಂದ, ಬೊಂಬಾಯಿನಿಂದ ಎಲ್ಲೂ ನಿಲ್ಲಿಸದೆ, ನೇರವಾಗಿ ನ್ಯೂಯಾರ್ಕಿಗೆ !
- ಕನ್ನಡತಿ, ಪ್ರೊ. ಮಾಲತಿರಾವ್ ರವರಿಗೆ ಅಭಿನಂದನೆಗಳು.



RSS: