' Blitz Weely,’ ಇಂಗ್ಲೀಷ್, ಪತ್ರಿಕೆಯ ಸಂಪಾದಕ, ರುಸ್ಸಿ ಕಾರಂಜಿಯ ಇನ್ನಿಲ್ಲ !

ರುಸ್ಸಿ ಕಾರಂಜಿಯ, ಮತ್ತೆ ಸುದ್ದಿಯಲ್ಲಿದಾರೆ. ಈಬಾರಿ ಅವರು ಸತ್ತು ಮತ್ತೆ ಸುದ್ದಿಯಲ್ಲಿ ಗೋಚರಿಸಿ, ಪತ್ರಿಕೋದ್ಯಮದ ವಲಯದಲ್ಲಿ ಅಮರರಾಗಿದ್ದಾರೆ. ಮೊದಲು ಅವರೊಬ್ಬ ಪಾರ್ಸಿ. ಎರಡನೆಯದು, ೭೦ ರ ದಶಕದಲ್ಲಿ ಅತ್ಯಂತ ಜನಪ್ರಿಯರಾಗಿದ್ದವರು. ಪಾರ್ಸಿ ಅಂದಕೂಡಲೇ, ಅವರು ಏನನ್ನಾದರು ಪ್ರಪ್ರಥಮವಾಗಿ ಸಾಧಿಸಿರಲೇಬೇಕು. ಇನ್ನೊಂದು, ಆ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ಕೊಟ್ಟಿರಬೇಕು. ಹೌದು. ಎರಡನ್ನೂ ಅವರು ಸೊಗಸಾಗಿಮಾಡಿದ್ದಾರೆ. Blitz Weely ಪತ್ರಿಕೆಯನ್ನು ಅವರು ೧೯೪೦ ರಲ್ಲಿ ಪ್ರಾರಂಭಿಸಿದರು. ಆಗ ದಿನನಿತ್ಯದ ಹತ್ಯೆ, ಕೊಲೆಮೊಕದ್ದಮೆಯಂತಹ ಸುದ್ದಿಗಳನ್ನು ಖಾರ-ಹುಳಿ, ಸೀ ಬೆರೆಸಿ ಮಾರುವ ಪತ್ರಿಕೆಯಿರಲಿಲ್ಲ. ’ರುಸ್ಸಿ” ಅದನ್ನು ಪ್ರಥಮವಾಗಿ ಮಾಡಿತೋರಿಸಿದರು. ಪತ್ರಿಕೋದ್ಯಮ ಇನ್ನೂ ಅಷ್ಟೇನೂ ಪ್ರವರ್ಧಮಾನಸ್ಥಿಥಿಯಲ್ಲಿರಲಿಲ್ಲ.
Cine Blitz ನ್ನು ಅವರ ಮಗಳು, ’ ರೀಟ” ಹೊರತಂದರು. ರುಸ್ಸಿಯವರ ಮೊಮ್ಮಗಳು "ಫ್ಯಾಶನ್ ಹಿಪ್ ಜರ್ನಲ್ " ನ್ನು ತರುವುದರಲ್ಲಿ ಯಶಸ್ವಿಯಾದರು. ಮೊದಲು, ಬೊಂಬಾಯಿನ ಪ್ರಮುಖ ಇಂಗ್ಲೀಷ್ ದಿನಪತ್ರಿಕೆ, Times of India ದಲ್ಲಿ ಸೇರಿ ಕೆಲಕಾಲ ಕೆಲಸಮಾಡಿದರು. Blitz ನ ಹೆಗ್ಗಳಿಕೆಯೆಂದರೆ ಗೊಂದಲಮಯ ವಾರ್ತೆಗಳನ್ನು ಅವರು ಹೆಣೆದು, ಜನರಿಗೆ ಕೊಡುತ್ತಿದ್ದ ರೀತಿ. ಉದಾಹರಣೆಗೆ, ಪ್ರೊತಿಮಾಬೇದಿ, ಬೆತ್ತಲೆಯಾಗಿ " ಫ್ಲೋರಾ ಫೌಂಟೆನ್ "ಬಳಿ, ನಂತರ, ಜುಹುವಿನಲ್ಲಿ ಓಡಿದ ಪ್ರತ್ಯಕ್ಷ ಚಿತ್ರಗಳನ್ನು ಅಚ್ಚುಹಾಕಿದ್ದು, ಅಂದಿನದಿನಗಳಲ್ಲಿ ಬಹುಸುದ್ದಿಮಾಡಿತ್ತು. ನೇವಿ ಆಫೀಸರ್, ನಾನಾವತಿ, ತಮ್ಮ ಪತ್ನಿಯ ಪ್ರಿಯಕರನ ಕೊಲೆಮೊಕದ್ದಮೆಯನ್ನು ಅತ್ಯಂತ ಸಚಿತ್ರರೂಪದಲ್ಲಿ ಅವರು ತಮ್ಮ ಪತ್ರಿಕೆಯಲ್ಲಿ ಬರೆದಿದ್ದರು. ನಾನಾವತಿಯವರಿಗೆ ಮರುಗಿದ್ದರು. ತಪ್ಪುಮಾಡಿದರೂ ರಾಷ್ತ್ರಪತಿಗಳಿಂದ ಅವರಿಗೆ, ಮರುಕದೊರೆಯಿತು. ಜನಗಳು ಮುಂದಿನ ಪ್ರತಿಗೆ ಎದುರುನೋಡುತ್ತಿದ್ದರು. ಸತ್ಯಸಾಯಿಬಾಬ, ವಿಷಯದಲ್ಲಿ ಅವರಿಗೆ ಸಹನೆಯಿತ್ತು. ವಿಮಲ್ ಸೂಟಿಂಗ್ ಜಾಹಿರಾತಿಗೆ, ತಮ್ಮ ಭಂಗಿಯನ್ನು ಕೊಟ್ಟು ಚಿತ್ರತೆಗೆಸಿಕೊಂಡಿದ್ದರು. ಸೂಟ್-ಬೂಟ್ ಉಡುಪಿನಲ್ಲಿ ಅವರು ಆಕರ್ಷಕವಾಗಿ ಕಾಣಿಸುತ್ತಿದ್ದರು. ಅವರ ಸಮಕಾಲೀನ ಪತ್ರಿಕಾಕರ್ತರು, ಶ್ರೀ. ಖುಷ್ವಂತ್ ಸಿಂಗ್, ಶ್ರೀ. ಎಮ್. ವಿ. ಕಾಮತ್, ಶ್ರೀ. ಕುಲ್ದೀಪ್ ನಯ್ಯಾರ್, ಮತ್ತು ಇತರರು.
ಎಳೆಯ ಪತ್ರಿಕಾಕರ್ತರಿಗೆ ಸಹಾಯಮಾಡುತ್ತಿದ್ದರು. ಅವರು ಬರೆದ ಪತ್ರಗಳಿಗೆ ಉತ್ತರಿಸುತ್ತಿದರು. ಮೆರಿನ್ ಡ್ರೈವ್ ಮನೆಗೆ, ಊಟಕ್ಕೆ ಆಹ್ವಾನಿಸುತ್ತಿದ್ದರು. ಚಿಕ್ಕವಯಸ್ಸಿನ ಸುಂದರ ತರುಣಿಯರ ಜೊತೆ ಓಡಾಟ, ಅವರಜೊತೆ ಹರಟೆ, ಅವರಿಗೆ ಬಲು ಪ್ರಿಯ. ತಮ್ಮ ಚಹರೆಯಮೇಲೆ ಯಾವಾಗಲೂ ಮಂದಹಾಸವನ್ನು ತರುತ್ತಿದ್ದರು. ಎರಡು ಹೃದಯಾಘಾತವಾಗಿದ್ದು, ’ಇಂಟೆಂಸಿವ್ ಕೇರ್ ’ ಘಟಕದಲ್ಲಿ ಬಹಳದಿನವಿದ್ದರು. ೯೨ ವರ್ಷವಯಸ್ಸಿನ ರುಸ್ಸಿಯವರು, ನಮ್ಮೆಲ್ಲರನ್ನೂ ಅಗಲಿದರು. ನಿಜ. ಆದರೆ, ಅವರ ಮಧುರ ನೆನಪುಗಳ ಸುಧೆಯನ್ನು ಧಾರೆಯೆರೆದಿದ್ದಾರೆi. ನಮ್ಮ ಹೃದಯದಲ್ಲಿ ಅವರು ಅವಿಸ್ಮರಣೀಯರು !
-ರುಸ್ಸಿ ಕಾರಂಜಿಯ ಹಾಗೂ ಅವರ ಪ್ರೀಯ ಪುತ್ರಿ ರೀಟ ಮೆಹ್ತ.

- Login or register to post comments
- 156 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS: