‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
July 23, 2008 - 3:42pm — harshavardhan v...ನಮ್ಮ ಧಾರವಾಡ ಎರಡು ಸಂಗತಿಗಳಿಗಾಗಿ ತುಂಬ ಪ್ರಸಿದ್ಧ. ಒಂದು ಧಾರವಾಡದ ಲೈನ್ ಬಜಾರದ ಬಾಬುಸಿಂಗ ಠಾಕೂರ್ ಅವರ ಪೇಢ ರುಚಿಗಾಗಿ. ಮತ್ತೊಂದು ಬೆಳಗಾವಿ ರಸ್ತೆಯ..ಹುಚ್ಚರ ಆಸ್ಪತ್ರೆಗಾಗಿ!
ಆಕಾಶವಾಣಿಯ ಅಧಿಕಾರಿಯಾಗಿದ್ದ ಹಿರಿಯ ಸಾಹಿತಿ, ಹರಟೆಗಾರ ಹಾಗು ಬೇಂದ್ರೆ ಅವರ ‘ಗೆಳೆಯರ ಗುಂಪಿ’ನ ಪ್ರಮುಖ ಸದಸ್ಯರಾಗಿದ್ದ ದಿವಂಗತ ಎನ್ಕೆ ಒಂದು ಮಾತನ್ನು ಸದಾ ಹೇಳುತ್ತಿದ್ದರು. ಅದು ವರಕವಿ ಬೇಂದ್ರೆ ಅವರ ಹಾಸ್ಯಪ್ರಜ್ನೆ ಬಿಂಬಿಸುತ್ತಿತ್ತು.
‘ಧಾರವಾಡದಾಗ ಯಾರರೆ ನಿಂತು ಕಲ್ಲು ಒಗದರ(ಹೂವಿನ ಬದಲಾಗಿ!) ಅದು, ಕವಿ ಮನೆ (ಅಥವಾ ತಲೆ!), ಸಾಹಿತಿ, ನಾಟಕಕಾರ ಮತ್ತು ಸಂಗೀತಗಾರನ ಮೇಲೆ ಬೀಳುವುದು ಗ್ಯಾರಂಟಿ’ ..ಕವಿ ಮಾತಿಗೆ ವಿರಾಮ ಕೊಡುವ ಮೊದಲೇ ಯಾರು ಅಡ್ಡ ಪ್ರಶ್ನೆ ಕೇಳಿದರು. ‘ಸರ್..ಹುಚ್ಚರ ಮ್ಯಾಲೂ..?’ ಮುಂದೆ ಓದಿ »

- 2 ಪ್ರತಿಕ್ರಿಯೆಗಳು
- 160 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಸಿಟಿಯ ಮೇಲಣ ಗುಳ್ಳೆ
July 23, 2008 - 2:25pm — anivaasi
ಸಿಡ್ನಿಯಲ್ಲಿ ಹಾಡುತ್ತಲೋ, ಯಾವುದಾದರೂ ವಾದ್ಯ ನುಡಿಸುತ್ತಲೋ, ಅಥವಾ ವೇಷ ಹಾಕಿಕೊಂಡೋ, ಸರ್ಕಸ್ ಮಾಡುತ್ತಲೋ ಬಸ್ಕ್ ಮಾಡುವುದು ಸದಾ ನೋಡುತ್ತೇವೆ. ಮುಂದೆ ಓದಿ »

ಜಯಂತ್ ಕಾಯ್ಕಿಣಿಯವರ ಕಥಾಲೋಕ - ಬಣ್ಣದ ಕಾಲು
July 22, 2008 - 10:53pm — narendra`ಚಂದ್ರಶಾಲೆ' ಕತೆ ಈ ಸಂಕಲನದ ಮೊದಲ ಕತೆ. ತೇರಿನ ದಿನ ಬಳೆಯಂಗಡಿಯ ಬಸವಣ್ಣಿಯ ಜತೆಗೆ ಕುಂಕುಮದಂಗಡಿಯ ವಿಶ್ವೇಶ್ವರಯ್ಯ ನಡೆಸುವ ಪ್ರೇಮ, ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಾಬಲನ ಮನಸ್ಸು ತುಂಬಿಕೊಂಡ ಸರಸ್ವತಿ, ತೇರು ಎಳೆಯುವ ಸಂಭ್ರಮದ ಗದ್ದಲ, ಗಡಿಬಿಡಿಗಳು, ತೇರನ್ನೆ ಮನೆ, ಗಂಡ ಎಲ್ಲವೂ ಮಾಡಿಕೊಂಡಿರುವ ಕಾಯಕ್ಕನ ವಿಪರೀತಗಳು ಎಲ್ಲ ಸೇರಿ ನೀಡುವ ಚಿತ್ರ ಗಾಢವಾಗಿ ಕಾಡುವಂತಿದ್ದರೂ ಕತೆಯಾಗಿ ಈ ಎಲ್ಲ ನೋಟಗಳು ಕೂಡಿಕೊಳ್ಳುವ ಏಕಸೂತ್ರದ ಪ್ರತಿಮೆ ತೇರು. ತೇರು ಹಬ್ಬದ ಸಂಭ್ರಮವನ್ನು ತರುವುದರ ಜೊತೆಗೇ, ಊರಿನ ಜನರ ಸುಪ್ತ ಅಥವಾ ಅದುಮಿ ಹಿಡಿಯಲ್ಪಟ್ಟ ಉನ್ಮಾದ, ಹುಚ್ಚು, ಸುಖದ, ಸಂಭ್ರಮದ ಅಪೇಕ್ಷೆ, ಕಳ್ಳ ಪ್ರೇಮದ ನಿರೀಕ್ಷೆ ಎಲ್ಲಕ್ಕೂ ಕಾರಣವಾಗುತ್ತಿರುತ್ತದೆ. ಕರ್ತವ್ಯದ ನೊಗವನ್ನು ಸ್ವಲ್ಪ ಸಡಿಲಿಸಿ ನಗಲು ಕಾರಣ ಹುಡುಕುತ್ತಿರುವ ಮನುಷ್ಯನಿಗೆ ತೇರು ಒದಗಿಬರುವುದು ಹೀಗೆ. ಚಂದ್ರಶಾಲೆಯ ಚಿತ್ರ ಮತ್ತು ತೇರಿನೊಂದಿಗಿನ ಕಾಯಕ್ಕನ ಸಂಬಂಧ ಸೂಕ್ಷ್ಮವಾಗಿ ಇಣುಕಿ ನೋಡುವ ಅಂಶಗಳು ಅಮೂರ್ತವಾಗಿಯೇ ಉಳಿಯುವುದು ಈ ಕತೆಯ ವಿಶೇಷ. ಮುಂದೆ ಓದಿ »

- 2 ಪ್ರತಿಕ್ರಿಯೆಗಳು
- 130 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?
July 22, 2008 - 2:57pm — hpnರಾಜ್ಯ ಸರಕಾರ ಈ ಸಾಲಿನ ಬಜೆಟ್ಟಿನಲ್ಲಿ ರೈತರಿಗೆ ಉಚಿತ ವಿದ್ಯುತ್ ಘೋಷಿಸಿದೆ. ರೈತರಿಗೆ ಇದು ಸರಕಾರದ ಬಹುದೊಡ್ಡ ಬಳುವಳಿ ಎನ್ನಲಾಗುತ್ತಿದೆ. ಎಷ್ಟು ದೂರದೃಷ್ಟಿಯುಳ್ಳ ಬಳುವಳಿ ಇದು? ನಿಜವಾಗಲೂ ಕಾಳಜಿಯ ಬಳುವಳಿಯೇ? ಎಂದು ಈ ಲೇಖನದಲ್ಲಿ ಪ್ರಶ್ನಿಸುತ್ತಾರೆ ಸುಗ್ಗಿ. ಮುಂದೆ ಓದಿ »


- 4 ಪ್ರತಿಕ್ರಿಯೆಗಳು
- 194 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ದಿನ(ಕರ)ಚರಿ
July 21, 2008 - 5:24pm — Jayalaxmi.Patilಮಿಸುಗುತಿರುವಾಗ ಹಾಸಿಗೆಯಲಿ ಸೂರ್ಯ
ಎಚ್ಚರಗೊಂಡ ನಿಶೆ ಸೂರ್ಯನ ಮೈಯಾವರಿಸಿದ್ದ
ಸೆರಗನ್ನು ಮೆಲ್ಲನೆ ಬಿಡಿಸಿಕೊಂಡು ಅಲ್ಲಿಂದ
ಸರಿದು ಒಳ ನೆಡೆದಳು.
ಕಣ್ಣು ಹೊಸಕಿ, ಎರಡೂ ಕೈ ಮೇಲೆತ್ತಿ
ಕಾಲು ನಿಡಿದಾಗಿಸಿ ಲಟ ಲಟ ಎನಿಸಿ
ಎದ್ದು ಕುಳಿತು ಮೈ ಮುರಿದ ಸೂರ್ಯ
ಪಕ್ಕಕ್ಕೆ ತಿರುಗಿದ.
ನಿಶೆ ಇಲ್ಲ! "ಓ ನನಗಾಗಿ ತಿಂಡಿಯ
ಸಿದ್ಧತೆಯಲ್ಲಿದ್ದಾಳೆ.ಸಮಯ ಪ್ರಜ್ಞೆ ಮುಂದೆ ಓದಿ »

- Login or register to post comments
- 64 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: