ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › ಪ್ರವಾಸ ಕಥನ ಚಿತ್ರಗಳು

ಬನ್ನಿ ನಂಜತೆ, ಮುಂಬೈ ನೋಡ್ರಿ -೨ !

February 25, 2008 - 5:06am — venkatesh
ಬನ್ನಿ ನಂಜತೆ, ಮುಂಬೈ ನೋಡ್ರಿ -೨ !

ಇದೇ ಮುಂಬೈ ನ ಸುಪ್ರಸಿದ್ಧ ರಾಜಾಬಾಯಿ ಗಡಿಯಾರದ ಗೋಪುರ. ಎಷ್ಟು ಎತ್ತರ ಇದೆ ನೋಡಿ. ನನಗೆ ಇದರ ಚಿತ್ರತೆಗೆಯಲು ಲಾನ್ ಮೇಲೆ ಬಿದ್ದುಕೊಂಡು ತೆಗೆಯಬೇಕಾಯಿತು. ದಕ್ಷಿಣ ಮುಂಬೈ ಕೋಟೆ ಪ್ರದೇಶದಲ್ಲಿರುವ ಇದನ್ನು, ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ ತಗುಲಿದಂತೆ ಕಟ್ಟಲಾಗಿದೆ. ಟವರ್ ಎತ್ತರ, ೮೫ ಮೀಟರ್ (೨೮೦ ಅಡಿ).

ಬೊಂಬಾಯಿನ, 'ಸ್ಟಾಕ್ ಎಕ್ಸ್ ಚೇಂಜ್,' ಸ್ಥಾಪಕ, 'ಪ್ರೇಮ್ ಚಂದ್ ರಾಯ್ ಚಂದ್', ತಮ್ಮ ತಾಯಿಯವರ ಹೆಸರನ್ನು ಗಡಿಯಾರದ ಗೋಪುರಕ್ಕೆ ಇಟ್ಟರು ರಾಜಾಬಾಯಿಯವರು, ಆಗಿನ ಕಾಲದ ಬೊಂಬಾಯಿನ ಅತ್ಯಂತ ಪ್ರಖ್ಯಾತ ಶ್ರೀಮಂತ ಹತ್ತಿ ವರ್ತಕ, ಮತ್ತು ದಲಾಲ್ ಪ್ರೇಮ್ ಚಂದ್ ರವರ ತಾಯಿಯವರು. ಅವರ ಹೆಸರಿನಲ್ಲಿ ರಾಜಾಬಾಯಿ ಗಡಿಯಾರದ ಟವರ್ ನ್ನು ನಿರ್ಮಾಣ ಮಾಡುವುದು, 'ಪ್ರೇಮ್ ಚಂದ್ ರಾಯ್ ಚಂದ್ ' ರವರ ಉದ್ದೇಶ್ಯವಾಗಿತ್ತು. ಅಂದಿನ ಬ್ರಿಟಿಷ್ ಸರ್ಕಾರವನ್ನು ಸಂಪರ್ಕಿಸಿ. ತಮ್ಮ ಆಸೆಯನ್ನು ತಿಳಿಸಿದರು. ಆಗ ತಾನೆ ಬೊಂಬಾಯಿನ ವಿಶ್ವವಿದ್ಯಾಲಯ 'ಫೋರ್ಟ್' ವಲಯದಲ್ಲಿ ಸ್ಥಾಪನೆಯಾಗಿತ್ತು. "ಪದವಿದಾನ ಸಮಾರಂಭದ ಭವ್ಯ ಕಟ್ಟಡ', ದ ಪಕ್ಕದಲ್ಲೇ ಇದನ್ನು ಕಟ್ಟಲು ಅನುಮತಿದೊರೆಯಿತು. 'ರಾಯ್ ಚಂದ್, ' ಇಂಗ್ಲೆಂಡ್ ನ 'ಪಾರ್ಲಿಮೆಂಟ್ ಹೌಸ್,' ನ 'ಬಿಗ್ ಬೆನ್ ಗಡಿಯಾರಗೋಪುರ', ವನ್ನು ಕಂಡು ಪ್ರಭಾವಿತರಾಗಿದ್ದರು. ಅಂತಹದೇ ಭವ್ಯ ಕಟ್ಟಡದವನ್ನು ಬೊಂಬಾಯಿನ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ನಿರ್ಮಿಸುವುದು, ಅವರ ಆಸೆ. ಈ ಕಾರ್ಯ, ಅವರಿಗೆ, ಅತ್ಯಂತ ಪ್ರತಿಶ್ಠೆಯಸಂಕೇತವೂ ಆಗಿತ್ತು. ಪ್ರೇಮ್ ಚಂದ್ ರಾಯ್ ಚಂದ್ ರವರ ತಾಯಿಯವರಿಗೆ, ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲ. ಆಕೆ ಜೈನ ಮತಸ್ಥರು. ಹೊತ್ತು ಮುಳುಗುವುದರೊಳಗೆ ಊಟವನ್ನು ಮಾಡುವ ಪರಿಕ್ರಮವಿತ್ತು. ಸಾಯಂಕಾಲ, ಗಡಿಯಾರದ ಗಂಟೆ ಹೊಡೆದಾಗ ಅವರಿಗೆ ಸಮಯದ ಅರಿವಾಗುತ್ತಿತ್ತು. ಸಾಮಾನ್ಯವಾಗಿ, ಅಂದಿನ ದಿನಗಳಲ್ಲಿ ಯಾರ ಬಳಿಯೂ ಗಡಿಯಾರವಿರುತ್ತಿರಲಿಲ್ಲ. ಕೈಗಡಿಯಾರ ಕೇವಲ ಅತ್ಯಂತ ಶ್ರೀಮಂತರು ಮಾತ್ರ ಬಳಸುತ್ತಿದ್ದರು. 'ರಾಜಾಬಾಯಿ ಗೋಪುರ ಗಡಿಯಾರ,' ದ ಘಂಟೆಯನಾದ, ಸುಮಾರು ಒಂದು ಮೈಲಿಯವರೆಗೆ ಕೇಳಿಸುತ್ತಿತ್ತು. ಈಗ, ಯಾರ ಸಹಾಯವೂ ಇಲ್ಲದೆ ಅವರು ತಮ್ಮ ದಿನನಿತ್ಯದ ಕೆಲಸಗಳನ್ನು ಮಾಡಿಕೊಳ್ಳಲು ನೆರವಾಯಿತು. ರಾಜಾಬಾಯಿ ಕ್ಲಾಕ್ ಟವರ್, ನಿರ್ಮಾಣಕಾರ್ಯ, ೧೮೭೮ ರಲ್ಲಿ ಮುಗಿಯಿತು.

ರಾಜಾಬಾಯಿ ಗಡಿಯಾರದ ಗೋಪುರದ ಅತಿಹ್ಯ ;

'ರಾಜಾಬಾಯಿ ಟವರ್,' ನ್ನು ಆಗಿನಕಾಲದ ವಿಖ್ಯಾತ ಬ್ರಿಟಿಷ್ ಕಟ್ಟಡ ನಿರ್ಮಾಪಕ, 'ಸರ್ ಜಾರ್ಜ್ ಗಿಲ್ಬರ್ಟ್ ಸ್ಕಾಟ್,' ರವರು, ಕಟ್ಟಿದರು.
ಇದರ ವಿನ್ಯಾಸ, ಲಂಡನ್ ನಗರದ, 'ಬಿಗ್ ಬೆನ್ ಗಡಿಯಾರ ಗೋಪುರ,' ವನ್ನು ಹೋಲುತ್ತದೆ. ಈ ಕಟ್ಟಡದಲ್ಲಿ ಲಂಡನ್ ಪಾರ್ಲಿಮೆಂಟ್ ಕ್ಕೆ ತನ್ನ ಕಟ್ಟಾಡದ ಶಂಕುಸ್ಥಾಪನೆಯನ್ನು ಮಾರ್ಚ್ ೧, ೧೮೬೯ ರಲ್ಲಿ ಮಾಡಲಾಯಿತು. ನವೆಂಬರ್, ೧೮೭೮. ರಲ್ಲಿ ಕೆಲಸ ಮುಗಿಯಿತು. ಇದಕ್ಕೆ ತಗುಲಿದ ಒಟ್ಟು ಖರ್ಚು ೨ ಲಕ್ಷ ರೂಪಾಯಿಗಳು. ' Premchand Roychand', Bombay Stock Exchange,’ ನ ಸ್ಥಾಪಕಮಹಾಶಯರು. ಅವರು ಒಬ್ಬ ದಳಾಳಿಯಾಗಿ, ಕಾರ್ಯನಿರ್ವಹಿಸುತ್ತಿದ್ದರು. ಸಾರ್ವಜನಿಕರು ಈ ಗೋಪುರದೆ ಮೇಲ್ಭಾಗದ ವರೆವಿಗೂ ಹೋಗಿ ಅಲ್ಲಿಂದ ಬೊಂಬಾಯಿ ನಗರದ ನಸರ್ಗಿಕ ಸೌಂದರ್ಯವನ್ನು ಕಂಡು ಆನಂದಿಸುತ್ತಿದ್ದರು. ಇಂತಹ 'ಪ್ರಖ್ಯಾತ ಗಡಿಯಾರದ ಗೋಪುರ', ಎಲ್ಲರ ಮನಸೆಳೆದಾಗ್ಯೂ, ಭಗ್ನ-ಪ್ರೇಮಿಗಳು, ಅಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಪ್ರಸಂಗ ಬೇಸರವನ್ನು ತಂದಿತು. ಆದ್ದರಿಂದ ಈ ಪ್ರಸಂಗದ ತರುವಾಯ, ಸಾರ್ವಜನಿಕ ವೀಕ್ಷಣೆಯನ್ನು ಬಂದ್ ಮಾಡಲಾಯಿತು. ರಾಜಾಬಾಯಿ ಟವರ್ ಕಟ್ಟಡದ ವಿನ್ಯಾಸ ವೆನಿಟಿಯನ್ ಮತ್ತು ಗೋಥಿಕ್ ಶೈಲಿಯಲ್ಲಿ ಕಟ್ಟಲಾಗಿದೆ. ಬೊಂಬಾಯಿನ ಹತ್ತಿರ ಸಿಗುವ 'ಕುರ್ಲ ಸ್ಟೋನ್' ನ್ನೆ ಬಳಸಿಕೊಂಡು ಕಟ್ಟಿದ್ದಾರೆ. ಬೊಂಬಾಯಿನಗರದಲ್ಲೇ ವಿಶೇಷವಾಗಿದ್ದ, 'ಸ್ಟೇನ್ಡ್ ಗ್ಲಾಸ್ ಕಿಟಕಿ' ಗಳ ಉಪಯೋಗವನ್ನು ಮಾಡಿದ್ದಾರೆ. ಕೆಳಗಿನ ಮಹಡಿಯಲ್ಲಿ ಎರಡು ಅಕ್ಕ-ಪಕ್ಕದ ಕೊಠಡಿಗಳಿವೆ. ಇವುಗಳ ಅಳತೆ, (56 x 27.5 ಅಡಿ (17 x 8.5 ಮೀ) ಇದೆ. ಟವರ್ ಗೆ ಒಂದು ೨.೪ ಚದರ ಮೀಟರ್ (೨೬ ಚದರ ಗಜ), ಕ್ಯಾರಿಯೇಜ್ ಪೋರ್ಚ್, ಮತ್ತು ವೃತ್ತಾಕಾರವಾಗಿ ಮೇಲಕ್ಕೆ ಹೋಗುವ 'ಸ್ಟೇರ್ ಕೇಸ್,' ಇದೆ. ೨.೬ ಚದರ ಮೀಟರ್ಗಳ ಅಳತೆಯ ವಿಶಾಲವಾದ 'ದಿವಾನಖಾನೆ,' ಇಮಾರತ್ತಿನ ಸೌಂದರ್ಯವನ್ನು ಇಮ್ಮಡಿಸುತ್ತದೆ. (೨೮ ಚದರ ಗಜ) ಅಳತೆಯ 'ಕ್ಯಾರಿಯೇಜ್', 'ಚೌಕಾರದ ರೂಪದ ಪೊರ್ಚ್', ಮೇಲಿನ ಗ್ಯಾಲರಿವರೆಗೆ ಹಮ್ಮಿಕೊಂಡಿದೆ. ಮೊದಲ ಮಹಡಿಯ ಎತ್ತರ. ೬೮ ಅಡಿ (೨೦.೭ ಮೀಟರ್) ಕೆಳಗಿನ ನೆಲದಿಂದ ಚೌಕಾಕಾರದಿಂದ ಅಷ್ಟಚತುರ್ಭುಜದ ಆಕಾರವಾಗಿದೆ. ಈಗ್ಯಾಲರಿಯಿಂದ ಟವರ್ ಮೇಲಿನವರೆಗೆ, ೧೧೮ ಅಡಿ ಇದೆ. (೩೬ ಮೀಟರ್) ಮತ್ತು ೩ ನೆಯ ಹಂತದಿಂದ ಕೊನೆಯವರೆಗೆ, ಸಿಂಗಾರಕ್ಕಾಗಿ ನಿರ್ಮಿಸಿದ್ದಾರೆ. ಕಟ್ಟಿದ ವರೆಗೆ, ೯೪ ಅಡಿ (೨೮.೭ ಮೀಟರ್), ಒಟ್ಟು ಎತ್ತರ ೨೮೦ ಅಡಿ. ಈ ಕಟ್ಟಡ ನಿರ್ಮಾಣವಾದ ಸಮಯದಲ್ಲಿ, ಬೊಂಬಾಯಿನ ಅತ್ಯಂತ ಎತ್ತರದ ಕಟ್ಟಡವಾಗಿತ್ತು. ನಂತರದ ದಿನಗಳಲ್ಲಿ ಹಲವಾರು ಭಾರಿ ಕಟ್ಟಡಗಳು ಬೊಂಬಾಯಿನ ಪರಿಸರದಲ್ಲಿ ಕಾಣಿಸಿಕೊಳ್ಳಲಾರಂಭಿಸಿದವು.

ಗೋಪುರದ ಗಡಿಯಾರದ 'ಘಂಟಾನಾದ' :

ಬ್ರಿಟಿಷ್ ರಾಜ್ಯಾಡಳಿತದ ಸಮಯದಲ್ಲಿ ""Rule Britannia", " God Save the King" and "A Handel Symphony", ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಲಾಗುತ್ತಿತ್ತು. ಮೊದಲು ೧೬ ಟ್ಯೂನ್ಸ್ ಇತ್ತು. ಇದು, ದಿನದಲ್ಲಿ ೪ ಬಾರಿ ಬದಲಾಗುತ್ತಿತ್ತು. ಈಗ ಒಂದು ರಾಗವನ್ನು, ಪ್ರತಿ ೧೫ ನಿಮಿಷಗಳಿಗೊಮ್ಮೆಯಂತೆ ಬಾರಿಸಲು, ವ್ಯವಸ್ಥೆ ಮಾಡಲಾಗಿದೆ.

- ’ಮುಂಬೈ ನ ಪ್ರೇಕ್ಷಣೀಯ ಸ್ಥಳಗಳು'

  • ಪ್ರವಾಸ ಕಥನ ಚಿತ್ರಗಳು
~.~
  • Login or register to post comments
  • 229 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಂಬೈವಿಶ್ವವಿದ್ಯಾಲಯದಲ್ಲಿ ವಸ್ತುಪ್ರದರ್ಶನ- ಪ್ರೆಸಿಡೆನ್ಸಿ ವಿಶ್ವವಿದ್ಯಾಲಯಗಳ ೧೫೦ ವರ್ಷಗಳ ಸುಮಧುರ ಕ್ಷಣಗಳ ಸವಿನೆನಪು !
  • ಪ್ರಿನ್ಸ್ ಆಫ್ ವೇಲ್ಸ್ :
  • ಬಲಿದಾನ.........................."
  • CIRCOT, Mumbai - ಭಾರತದ ಹತ್ತಿಬೆಳೆಯ ಗುಣ ಮತ್ತು ಉತ್ಪನ್ನಗಳನ್ನು, ಅಭಿವೃದ್ಧಿಪಡಿಸಿ, ಗಮನಾರ್ಹಸೇವೆಸಲ್ಲಿಸುತ್ತಿರುವ ಸಂಸ್ಥೆ
  • ಮುಂಬೈ ಬಳಿಯ ಮ್ಯಾಥೆರಾನ್ ತಂಪು -ಗಿರಿಧಾಮದ ಮಿನಿ ಟ್ರೈನ್, ಮತ್ತೆ ಓಡಲು ಪ್ರಾರಂಭಿಸಿದೆ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಸ್ವಲ್ಪ ತಾಳ್ಕಳ್ಳಿ ಎಂಗಾರು ಆಗ್ಲಿ,  ಒಂದ್ಸಲ,  ಡಿಲ್ಲಿಗೋಗ್ ಬಂದ್ಬಿಡ್ತಿನಿ.  ಆಮೆಕ್ ನೊಡ್ವ !

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 7:09am
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 5:52am
  • ಕೇವೆಂ
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 1:42am
  • ahankari
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 12:58am
  • sushil
    ಉ: ನಿರಕ್ಷರಿ ಕವಿಯ ಅಕ್ಷರಗಾಥೆ
    July 5, 2008 - 12:48am
  • hpn
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 10:56pm
  • muralihr
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 10:34pm
  • Jayalaxmi.Patil
    ಉ: ರಾತ್ರಿ ರಾಣಿ ಜತೆ ಕೆಲ ನಿಮಿಷ..
    July 4, 2008 - 9:58pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:35pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:31pm
ಇನ್ನಷ್ಟು


ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator