ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚಿತ್ರ ಪುಟಗಳು › ಪ್ರಚಲಿತ ಲೇಖನ ವರ್ಗದ ಚಿತ್ರಗಳು

"ಕರ್ಣಾಟಕ ಭಾಗವತ "- ಅಮೆರಿಕೆಯಲ್ಲಿ ಬಿಡುಗಡೆಯಾಗಿದೆ !

March 30, 2008 - 9:17am — venkatesh
"ಕರ್ಣಾಟಕ ಭಾಗವತ "- ಅಮೆರಿಕೆಯಲ್ಲಿ ಬಿಡುಗಡೆಯಾಗಿದೆ !

ಎರಡು ಸಂಪುಟಗಳ ಬೃಹತ್ ಗಾತ್ರದ " ಕರ್ಣಾಟಕ ಭಾಗವತ ", ವಿಶ್ವದ ಜನತೆಗೆ ಲಭ್ಯವಾಗಲಿದೆ. ರಾಮಾಯಣ- ಮಹಾಭಾರತಗಳನ್ನು ಬಿಟ್ಟರೆ, ಭಾಗವತಪುರಾಣವು ಅತಿ ಶ್ರೇಷ್ಠವೂ, ಸುಪ್ರಸಿದ್ಧವೂ ಆದ ಗ್ರಂಥ. ಶ್ರೀಕೃಷ್ಣಚರಿತ್ರೆಯ ಪೂರ್ಣವಿಸ್ತಾರಕ್ಕೆ ಇದೇ ಆಧಾರ ಕೃತಿ. ವಿಷ್ಣುವಿನ ೨೨ ಅವತಾರದ ಕಥೆಗಳು, ಭಾರತವರ್ಷದ ಸುಪ್ರಸಿದ್ಧ ರಾಜರ ವಂಶಾವಳಿಗಳ ವರ್ಣನೆ, ವಿರಾಟ್ ವಿಶ್ವದ ಸೃಷ್ಟಿಪ್ರಳಯಗಳ ವಿವರಗಳು, ಮುಂತಾದ ಮನೋಲ್ಲಾಸಪೂರ್ವಕ ಸಂಗತಿಗಳು, ಈ ಗ್ರಂಥದ ಪುಟಗಳಲ್ಲಿ ತುಂಬಿವೆ. ಭಕ್ತಿಮಾರ್ಗದ ಅಮೂಲ್ಯತೆಯನ್ನೂ ಗೋಪಿಯರ ಪ್ರೇಮೋನ್ಮಾದದಲ್ಲಿಯೂ, ರಾಕ್ಷಸರ ಕ್ರೋಧದಲ್ಲಿಯೂ, ಸಂತರಭಕ್ತಿಯಲ್ಲೂ, ಯೋಗಿಗಳಬೋಧನೆಯಲ್ಲೂ ಹಿಡಿದು ತೋರಿಸಿದೆ. ೧೬ ನೆಯ ಶತಮಾನದಲ್ಲಿ ಆರಂಭವಾದ ಈ ಮಹಾಕಾವ್ಯದ ರಚನೆ, ತಾಳೆಗರಿಗಳ ಹಸ್ತಪ್ರತಿಗಳಿಂದ ಪ್ರಸಾರಗೊಂಡಿತ್ತು. ೧೯೧೧ ರ ಮುದ್ರಣದ ನಂತರ ಸಮಗ್ರ ಭಾಗವತದ ಪ್ರಕಟಣೆಯಾಗಿರಲಿಲ್ಲ. ಸಮಗ್ರವೂ, ಪರಿಷ್ಕೃತವೂ ಆದ ಕನ್ನಡ ಭಾಗವತದ ಜನಪ್ರಿಯ ಆವೃತ್ತಿಯನ್ನು ಕನ್ನಡ ಸಹೃದಯರಿಗೆ, ಅಮೆರಿಕದ ಹೂಸ್ಟನ್ ನಗರದಲ್ಲಿರುವ, " ಹೂಸ್ಟನ್ ಕನ್ನಡ ವೃಂದ," ದ ಬೆಳ್ಳಿ-ಹಬ್ಬದ ಸವಿನೆನಪಿನ ಆಚರಣೆಯ ಸಂದರ್ಭದಲ್ಲಿ ೧೨, ಏಪ್ರಿಲ್, ೨೦೦೮ ರಂದು, ಆಹ್ವಾನಿತ ಸಭಿಕರ ಸಮ್ಮುಖದಲ್ಲಿ ಬಿಡುಗಡೆಮಾಡಲಾಗುವುದು.

ಎರಡು ಸಂಪುಟಗಳ "ಕರ್ಣಾಟಕ ಭಾಗವತ" ದ ಆವೃತ್ತಿಯಲ್ಲಿ, ೧೨, ೮೮೪ ಪದ್ಯಗಳಿವೆ. ೧೨ ಸ್ಕಂದಗಳಿವೆ. ಮೂಲ ತಾಳೆಗರಿಗಳ ಬಣ್ಣದ ಚಿತ್ರಗಳಿವೆ. ಇಂಗ್ಲೀಷ್ ನಲ್ಲಿ ಸಂಕ್ಷಿಪ್ತ ಕಥಾಸಾರವಿರುವುದಲ್ಲದೆ, ಪುಸ್ತಕದ ಕೊನೆಯಲ್ಲಿ 'ಕ್ಲಿಷ್ಟಪದಗಳ ಅರ್ಥಕೋಶ,' ಸಹಿತ ಇದೆ.

-ಡಾ. ಹೊಳಲ್ಕೆರೆ, ರಂಗರಾವ್ ಚಂದ್ರಶೇಖರ್, ಲಿಪಿಕಾರ, ಸಂಪಾದಕ, ಕೊಲಂಬಿಯ, ಅಮೆರಿಕ ಸಂಯುಕ್ತ ಸಂಸ್ಥಾನ.

ಶತಮಾನಗಳಿಂದ ಸಂಗ್ರಹಿಸಿಟ್ಟಿದ್ದ, ತಾಳೆಗರಿಗಳಿಂದ ಹೆಕ್ಕಿಹೊರಹೊಮ್ಮಿದ, ಅಪರೂಪದ ಭಾಮಿನಿ ಷಟ್ಪದಿಯ ಪದ್ಯಗಳ ಜೊತೆಗೆ, ಆಂಗ್ಲಭಾಷೆಯ ಕಥಾಸಾರಗಳಿಂದ ಕನ್ನಡ ಭಾಷಾಪ್ರೇಮಿಗಳಿಗೆ, ಸಂಶೋಧಕರಿಗೆ, ಹಾಗೂ ಕಾವ್ಯಾಸಕ್ತರಿಗೆ, ರಸದೌತಣವಾಗಿ ಲಭ್ಯವಾಗುವ ದಿನಗಳು ಹತ್ತಿರವಾಗುತ್ತಿವೆ. ಸುಪ್ರಸಿದ್ಧ ಸಂಸ್ಕೃತ ವಿದ್ವಾಂಸರ ಹಾಗೂ ಶಿಕ್ಷಣತಜ್ಞರಿಂದ ಪೋಶಿಸಲ್ಪಟ್ಟು ಸುಮಾರು, ೧೩ ವರ್ಷಗಳ ಸಾಧನೆಯ ನಂತರ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ.

ಹೊಸಸುದ್ದಿ :

ಹೌದು. ಇತ್ತೀಚಿನ ವರದಿಗಳು ಬಂದಾಗ, ಪೂರ್ವಸಿದ್ಧತೆಯಂತೆ, ಪುಸ್ತಕದ ಬಿಡುಗಡೆ ಸಮಾರಂಭ ಹೂಸ್ಟನ್ ಕನ್ನಡ ಸಂಘದ ಸದಸ್ಯರ ಸಮ್ಮುಖದಲ್ಲಿ ನಡೆದು, ಆ ನಗರದ ವಾಸಿಗಳು, ಹಾಗೂ ಕನ್ನಡಸಾಹಿತ್ಯಾಭಿಮಾನಿಗಳು, ಇದನ್ನು ಮನಃಪೂರ್ವಕವಾಗಿ , ಅತ್ಯಂತ ಹರ್ಷದಿಂದ ಸ್ವಾಗತಿಸಿದರು. ಅಂದು, ಮಕ್ಕಳಿಂದ ನಡೆಸಿಕೊಡಲ್ಪಟ್ಟ ಮನರಂಜನೆಯ ಕಾರ್ಯಕ್ರಮಗಳು, ಎಲ್ಲರಿಗೂ ಮುದನೀಡಿದವು.

-ವರದಿಗಾರರು, ಚಿ. ಪ್ರಕಾಶ್

http://www.kannadavrinda.org/htmls/HoustonBrochure.pdf

  • ಪ್ರಚಲಿತ ಲೇಖನ ವರ್ಗದ ಚಿತ್ರಗಳು
~.~
  • Login or register to post comments
  • 311 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ಕರ್ಣಾಟಕ ಭಾಗವತ’ ದ ’ವಿಶ್ವಾರ್ಪಣಾ ಸಮಾರಂಭ,” ಮೈಸೂರು ನಗರದಲ್ಲಿ. ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ !
  • ’ ಕರ್ಣಾಟಕ ಭಾಗವತ,” ಒಂದು ಅಪರೂಪದ ಕೃತಿ !
  • " ಸಂಶೋಧನೆ, ವಿದ್ವತ್ತು, ಸಂಪಾದನೆ, ಬೃಹತ್ ಅವತಾರವಾಗಿ ಕೃತಿರೂಪು ತಳೆದಿದೆ. ಇದು ಒಂದು ಶ್ಲಾಘನೀಯವಾದ ಸಂಗತಿ,"-ಡಾ. ಬಿ. ಎ. ವಿವೇಕ್ ರೈ !
  • " ಕರ್ಣಾಟಕ ಭಾಗವತ " ದ ವಿಶ್ವಾರ್ಪಣಾ ಸಮಾರಂಭದ ’ಯೂ ಟ್ಯೂಬ್,’ ಲಭ್ಯವಿದೆ. ನೋಡಿ ಆನಂದಿಸಿ !
  • ಅಮೆರಿಕೆಯ, "ಹೂಸ್ಟನ್ ಕನ್ನಡ ವೃಂದ ", ತಮ್ಮ ಬೆಳ್ಳಿಹಬ್ಬದ ಸಮಾರಂಭದ ಸಂಭ್ರಮದಲ್ಲಿ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಕೊರೆತ

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator