ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ?
ರೆಸಿಡೆನ್ಸಿ ರೋಡಿನಲ್ಲಿ ಈ ಥರದ್ದು ಮಸ್ತಾಗಿ ಕಾಣ್ಸುತ್ತೆ.
ಕೆಲವು ದಿನಗಳ ಹಿಂದೆ ಈ ಸಿಟಿ ಟ್ಯಾಕ್ಸಿ ಕಣ್ಣಿಗೆ ಬಿತ್ತು, ಹಿಂದೆ ಹೆಸ್ರು ಬರ್ಕೊಂಡಿದ್ದ. ಅದೇನು ಹೆಸ್ರೋ ನಂಗಂತೂ ಗೊತ್ತಾಗ್ತಾ ಇಲ್ಲಾ, ನೀವಾದ್ರೂ ಹೇಳ್ತೀರಾ ?
-----------------------------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ನಮ್ಮ ಸೋಮಾರಿ ಕಟ್ಟೆಗೊಮ್ಮೆ ಭೇಟಿ ಕೊಡಿ : http://somari-katte.blogspot.com

- Login or register to post comments
- 427 hits
- Email this image
- Original
- Thumbnail





RSS:
ಪ್ರತಿಕ್ರಿಯೆಗಳು
ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ?
ಶಂಕರ್,
ನಾನೂ ಎಲ್ಲಿ ಕೇಳಿಲ್ಲ, ಆದರೂ ಹೀಗೊಂದು ತಲೆಹರಟೆ ಊಹೆ, ಬಹುಷಃ ಚಾರ್ಮುಡಿ ಘಾಟಿಯ ಆಸುಪಾಸಿನಲ್ಲಿ ಸ್ಥಾಪಿತಗೊಂಡಿರಬಹುದಾದ ಈಶ್ವರನ ಹೆಸರು ಇರಬಹುದೆ!!?
ನಿಮ್ಮವ,
ಶಂಕರ್
http://bhaavajeevi.blogspot.com/
ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ?
ತಮಾಶೆಗೆ,
)
ಸುರ(ಸಂಸ್ಕೃತ) + ಈಶ(ಸಂಸ್ಕೃತ) -> ಸುರೇಶ
ಬಸವ(ಕನ್ನಡ) + ಈಶ್ವರ(ಸಂಸ್ಕೃತ) -> ಬಸವೇಶ್ವರ
ಹಾಗೆಯೇ,
ಚಾರ್ಮ(ಇಂಗ್ಲೀಷ್) + ಈಶ -> ಚಾರ್ಮೇಶ (ಯಾವಾಗಲೂ ಚಾರ್ಮಿಂಗ್ ಆಗಿ ಇರೋ ಈಶ
ಚಾರ್ಮೇಶ ಎಂಬುವನು ಬರಿ ಈಶನಲ್ಲ ನೋಡಾ,
ಕನ್ನಡ, ಇಂಗ್ಲೀಷ್, ಸಕ್ಕದದ ಸಾರ ಸಾರಿದವ ಕಾಣಾ.
ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ?
ಹಾಗೆಯೇ ಚಾರ್ಮ್ ( ಇಂಗ್ಲೀಷಿನ) ನಿಂದ ಕೂಡಿದವ!
ಸವಿತೃ
ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ?
ಸುನೀಲರೆ,
charm=+ ಈಶ= ಚಾರ್ಮೀಶ ಆಗಬೇಕಿತ್ತಲ್ಲ??!!
ನೀವು ಚಾರ್ಮ ಎಂದು ಧಾರವಾಡ ಕನ್ನಡವಾಗಿ ಪರಿವರ್ತನೆ ಮಾಡಿಬಿಟ್ಟಿದೀರಲ್ಲ?
ಅಥವಾ ಮಾಲತೀಶ ಎಂದಿರಬೇಕಾದ ಹೆಸರನ್ನು ಕೆಲವರೆ ಮಾಲತೇಶ ಅಂದಹಾಗೆ ಹೇಳಿದ್ದೀರೋ?
ನಿಮಗೆ ಸಂಸ್ಕೃತ ವ್ಯಾಕರಣ ಗೊತ್ತಿದೆ ಅಂತ ನನಗೂ ಗೊತ್ತು. ಎಷ್ಟಾದ್ರೂ ತಮಷೆ ಮಾಡ್ತಿದೀರಿ ಅಲ್ವಾ?
ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ?
ಏನಾದರೂ ಕನ್ನಡದಲ್ಲಿದೆಯಲ್ಲ , ಅದೇ ದೊಡ್ಡ ವಿಷ್ಯ
ಅರ್ಥ ಹೀಗಿರಬಹುದೋ :
ಚಾರು + ಉಮೇಶ್ = ಚಾರೂಮೇಶ್ -> ಬಳಕೆಯಲ್ಲಿ ಅಪಭ್ರಂಶವಾಗಿ ಚಾರ್ಮೇಶ್ !!
ಚಾರು = ಮನೋಹರವಾದದ್ದು ( ಚಾರು ಮಜುಂದಾರ್, ಚಾರುದತ್ತ, ಚಾರುಲತಾ ಇತ್ಯಾದಿ)
ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ?
ಚಾರ್ಮ್->ಚಾರ್ಮು + ಈಶ -> ಚಾರ್ಮೀಶ (ಕನ್ನಡದ ಲೋಪ ಸಂಧಿ) - ಉ ಸೇರಿಸಿದರೆ ಕನ್ನಡ ಆಗತ್ತಂತೆ ಅದಕ್ಕೆ
ಚಾರ್ಮ್->ಚಾರ್ಮ + ಈಶ -> ಚಾರ್ಮೇಶ(ಸಂಸ್ಕೃತದ ಗುಣ ಸಂಧಿ) - ಉ ಸೇರಿಸದೆ, 'ಅ' ಸೇರಿಸಿದರೆ
ಕಲ್ಲೇಶ, ಮಲ್ಲೇಶ ರೀತಿ