ವಿಖ್ಯಾತ ಉದ್ಯಮಿ, ಡಾ. ನಾರಾಯಣ ಮೂರ್ತಿಗಳಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಶ್ರೀಮತಿ. ಪ್ರತಿಭಾ ಪಾಟೀಲ್, ಸೋಮವಾರ ಪ್ರದಾನಮಾಡಿದರು !

ಮಧ್ಯಮ ವರ್ಗದ ಜನರ ಆಶೋತ್ತರಗಳಿಗೆ ನೀರೆರೆದು, ಒಂದು ದಿನ ಅವರೂ ಮಾಲೀಕರಾಗಿ, ಉತ್ತಮಮಟ್ಟದ ಉದ್ಯೋಗಗಳನ್ನು ನಿರ್ಮಿಸಿ, ದೇಶಕ್ಕೆ ಸಂಪತ್ತನ್ನು ತಂದು ಕೊಡುವ ದಾರಿಯನ್ನು ತೋರಿಸಿಕೊಟ್ಟ ಮಹಾಚೇತನ. ಡಾ. ನಾರಾಯಣಮೂರ್ತಿಯವರಿಗೆ ಹಾಗೂ ಅವರ ಇನ್ಫೋಸಿಸ್ ಕಂಪೆನಿಯ ಸಹಕಾರ್ಯಕರ್ತರಿಗೂ ಮತ್ತು ಅವರ ಕುಟುಂಬದವರಿಗೂ, ಎಲ್ಲಾ ಸಂಪದೀಯರ ಪರವಾಗಿ ಹಾರ್ದಿಕ ಅಭಿನಂದನೆಗಳು.
ಕನ್ನಡದವರೇ ಆದ ಮೂರ್ತಿ, ಭಾರತದ ಔದ್ಯೋಗೀಕರಣದ ನಕ್ಷೆಯಲ್ಲಿ ತಮ್ಮ ಅಮೋಘವಾದ ಮೌಲ್ಯಗಳ ಛಾಪನ್ನು ಒತ್ತಿ ಯುವಜನರಿಗೆ ಮಾದರಿಯಾಗಿದ್ದಾರೆ. ಇಂತಹ ಕೆಟ್ಟಕಾಲದಲ್ಲೂ ಇಂತಹ ಮನೋಧರ್ಮಕ್ಕೆ ನೀರೆದು ಉತ್ತಮ ಮಟ್ಟದ ಮೌಲ್ಯಾಧಾರಿತ ಕಾರ್ಯಗಳನ್ನು ಮಾಡಲು ಮನಸ್ಸು ಹಾಗೂ ದೃಢನಿರ್ಧಾರವನ್ನು ಕೈಕೊಳ್ಳುವುದು ಹೇಗೆ, ಮನಸ್ಸನ್ನು ಹದಗೊಳಿಸುವುದು ಹೇಗೆ ಎನ್ನುವ ತಾತ್ವಿಕ ಸಿದ್ಧಾಂತಗಳಿಗೆ ಒಬ್ಬ ಉದಾಹರಣೆಯ ರೂಪದಲ್ಲಿ ನಮ್ಮಮಧ್ಯೆಇರುವುದು, ನಮ್ಮ ಸೌಭಾಗ್ಯ !
-ಪ್ರಜಾವಾಣಿಯ ಫೊಟೊ ಆಲ್ಬಬ್ ನಿಂದ.

- Login or register to post comments
- 643 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail





RSS:
ಪ್ರತಿಕ್ರಿಯೆಗಳು
ಉ: ವಿಖ್ಯಾತ ಉದ್ಯಮಿ, ಡಾ. ನಾರಾಯಣ ಮೂರ್ತಿಗಳಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಶ್ರೀಮತಿ. ಪ್ರತಿಭಾ ಪಾಟೀಲ್, ಸೋಮವಾರ ಪ್ರದಾನಮಾಡಿದರು !
ನಾರಾಯಣ ಮೂರ್ತಿಯವರಿಗೆ ಅಭಿನಂದನೆಗಳು.
ಹಾಗೇ ಪತ್ರಿಕೆಗಳಲ್ಲಿ ಬಹಳ ದಿನಗಳ ನಂತರ ಒಳ್ಳೆ ಸುದ್ದಿಯೊಂದಿಗೆ ಫೋಟೋ ಬಂದಿದ್ದಕ್ಕಾಗಿ ಶ್ರೀಮತಿ ಪ್ರತಿಭಾ ಪಾಟೀಲರಿಗೂ
ಅಭಿನಂದನೆಗಳು.
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ವಿಖ್ಯಾತ ಉದ್ಯಮಿ, ಡಾ. ನಾರಾಯಣ ಮೂರ್ತಿಗಳಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಶ್ರೀಮತಿ. ಪ್ರತಿಭಾ ಪಾಟೀಲ್, ಸೋಮವಾರ ಪ್ರದಾನಮಾಡಿದರು !
"ಹಾಗೇ ಪತ್ರಿಕೆಗಳಲ್ಲಿ ಬಹಳ ದಿನಗಳ ನಂತರ ಒಳ್ಳೆ ಸುದ್ದಿಯೊಂದಿಗೆ ಫೋಟೋ ಬಂದಿದ್ದಕ್ಕಾಗಿ ಶ್ರೀಮತಿ ಪ್ರತಿಭಾ ಪಾಟೀಲರಿಗೂ ಅಭಿನಂದನೆಗಳು."
ಸರಿಯಾದ ಮಾತು.
ಕರ್ನಾಟಕದ ಬಗ್ಗೆ ಒಂದು ಒಳ್ಳೆಮಾತನ್ನು ಕೇಳುವ ಭಾಗ್ಯ ಬಂತಲ್ಲ.
ಈ ಕಡೆ ತಮಿಳ್ನೋರು, ಕೇರಳ್ದೊರು,
ಆ ಕಡೆ ಆಂಧ್ರದೋರು,
ಮರಾಠಿಜನ ಒಂದ್ಕಡೆ,
ಎಲ್ಲಾರು ಕರ್ನಾಟಕದ ಹಸುನ ಕಿತ್ತು ತಿನ್ನೊರೆ. ಆಗಿದಾರೆ.
ಇನ್ನು ನಮ್ಮ ಜನಾನೊ ಅವರವ್ರೆ ಕಿತ್ತಾಡಿ, ಗುದ್ದಾಡಿ, ಹೊಡ್ದಾಡಿ, ಒಂದ್ ವಿಕ್ರಮನೇ ಸಾಧಿಸಿದಾರೆ. ಕನ್ನಡದ್ ಪೇಪರ್ ತಿರ್ವ್ ಹಾಕಿ. ಪ್ರತಿಭಟನೆ, ಆಂದೋಳನ, ಘೆರಾವ್, ಇವೆ ತುಂಬ್ಕೊಂಡಿವೆ.
ಕರ್ನಾಟಕ ಅಂದ್ರೆ ಅನಾಮಧೇಯರ ನಾಡೆ, ಗೊತ್ತಿಲ್ಲ.
ನಿಜಕ್ಕೂ ಮೂರ್ತಿಗಳು ಇದಕ್ಕೆ ಅಪವಾದವೇನೊ. ಅವರ್ನ್ನ ಸರಿಯಾಗಿ ತಿಳ್ದೊರು ಯಾರಾದ್ರು ಇದಾರ ಅಲ್ಲಿ . ದೇವ್ರೆಗೇ ಗೊತ್ತು.