೨೫ ನೆಯ ಕರ್ನಾಟಕದ ಮುಖ್ಯಮಂತ್ರಿಯಾಗಿ, ಬಿ. ಜೆ. ಪಿ ಯ ಮಾನ್ಯ ಯಡಿಯೂರಪ್ಪನವರು ಪ್ರಮಾಣವಚನ, ಸ್ವೀಕಾರಮಾಡಿದರು !

ಇತ್ತೀಚಿನ ದಿನಗಳಲ್ಲಿ ಪೂರ್ಣಬಹುಮತವನ್ನು ಅಪೇಕ್ಷಿಸುವುದು ಬಹಳ ಕಷ್ಟಸಾಧ್ಯವಾದ ಕೆಲಸವಾಗಿತ್ತು. ಅಂತಹದರಲ್ಲಿ ಮಾನ್ಯ ’ಯೆಡ್ಡಿ” ಯವರು, ಪ್ರಚಂಡ ಜನಮಾನ್ಯತೆಯನ್ನು ಗಳಿಸಿ, ಅದರ ಸಾಧ್ಯತೆಯನ್ನು ಎಲ್ಲರಿಗೂ ಮನವರಿಕೆಮಾಡಿ ತೋರಿಸಿದ್ದಾರೆ.
ಈ ಬೆಳವಣಿಗೆಯಿಂದ ಅಸ್ಥಿರತೆಯನಾಶವಾದಂತಾಗಿದೆ. ಮುಂದೆ ಸರ್ಕಾರಕ್ಕಿರುವ ಚುನೌತಿ ಹೆಚ್ಚಾಗಿದೆ. ಪ್ರಥಮ ಬಿ.ಜೆ.ಪಿ ಸರ್ಕಾರವೆಂದು ಹೆಮ್ಮೆಪಡುತ್ತಿದ್ದಂತೆಯೇ, ಕೇಂದ್ರದಿಂದ ಎಷ್ಟು ಆರ್ಥಿಕನೆರವು ದೊರೆಯುತ್ತದೆ ಎನ್ನುವುದರಮೇಲೆ ಎಲ್ಲಾ ಸಮೀಕರಣಗಳೂ ನಿಂತಿವೆ. ಯಡಿಯೂರಪ್ಪನವರು, ತಮ್ಮ ಐದುವರ್ಷಗಳ ಸುವರ್ಣ ಕ್ಷಣಗಳನ್ನು ಹೇಗೆ ತಮ್ಮ ಕನಸುಗಳನ್ನು ನನಸುಮಾಡಲು ಬಳಸುತ್ತಾರೆ ಎನ್ನುವುದರಮೇಲೆ ಅವರ ವ್ಯಕ್ತಿತ್ವ ನಮಗೆ ತಿಳಿಯುತ್ತದೆ. ಜೆ.ಡಿ.ಎಸ್. ಜೊತೆ ಸುಮ್ಮನೆ ವೃಥಾ ಮಾತಿನ ಸೆಣಸಾಟವನ್ನು ಮೊದಲು ಕೊನೆಗೊಳಿಸಬೇಕು. ಎಲ್ಲರೊಡನೆ ಸಾಮರಸ್ಯದ ವಾತಾವರಣವನ್ನು ಸ್ಥಾಪಿಸಿ, ತಮ್ಮ ಜೊತೆಗಾರರನ್ನೆಲ್ಲಾ ಸರಿಯಾಗಿ ನೋಡಿಕೊಳ್ಳಬೇಕು. ಚಿತ್ರದುರ್ಗದ ನೀರಿನ ಬವಣೆಗೆ ಪರಿಹಾರವನ್ನು ಅತಿ ಶೀಘ್ರವಾಗಿ ತೋರಿಸುವ ಅಗತ್ಯವಿದೆ. ಇನ್ನೂ ಬೇರೆಬೇರೆ ಸಮಸ್ಯೆಗಳಿವೆ. ಇವನ್ನೆಲ್ಲಾ ಯೆಡ್ಡಿಯವರು ಸಮಾಧಾನಚಿತ್ತದಿಂದ ಎಲ್ಲರ ಅಭಿಪ್ರಾಯಗಳನ್ನು ತೆಗೆದುಕೊಂಡು, ಸರ್ಕಾರವನ್ನು ನಡೆಸಿಕೊಂಡು ಹೋಗಬೇಕಾಗಿದೆ.
-ಚಿತ್ರ, ಪ್ರಜಾವಾಣಿ ಫೊಟೊ ಗ್ಯಾಲರಿಯಿಂದ.

- Login or register to post comments
- 287 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail






- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಮಾನ್ಯ ಶ್ರೀ. ಯಡಿಯೂರಪ್ಪನವರು, ಇಂದಿನ ಕರ್ನಾಟಕರಾಜ್ಯದ ಮುಖ್ಯ ಮಂತ್ರಿಗಳು.
- ಒಂದು ರಾಜ್ಯದ ಮುಖ್ಯ-ಮಂತ್ರಿ, ಮಹಾತ್ಮಗಾಂಧಿಯವರ ಸ್ಮಾರಕಕ್ಕೆ ನಮನ ಸಲ್ಲಿಸಲೋಸುಗವೇ, ದೆಹಲಿಗೆ ಹೋಗಬೇಕೆ ?
- ಹೊಸ ಬಿ.ಜೆ.ಪಿ ಸರ್ಕಾರ ಎದುರಿಸುತ್ತಿರುವ ಇಂದಿನ ಪರಿಸ್ಥಿತಿಯನ್ನು ರೂಪಿಸಿದ ಚಿನಕುರಳಿ ಮೊಹ್ಮದ್ ರ ಪ್ರಥಮ ವ್ಯಂಗ್ಯ-ಚಿತ್ರ !
- ಯಾವುದೇ ಹೊಸಸರ್ಕಾರಕ್ಕೆ, ಗತಿರೋಧಕಗಳಂತಿದ್ದ ದೇವೇಗೌಡರು, ಹಾಗೂ ಮಕ್ಕಳ ಶರತ್ತುಗಳಿಗೆ ತೆರೆಬಿದ್ದದ್ದು, ಡೆಮೋ(Crazy) ಯ ಪುಣ್ಯ !!
- ಮಾನ್ಯ ಯಡಿಯೂರಪ್ಪನವರಿಗೆ, ಹೋಮ್ ವರ್ಕ್ !


RSS: