'ಕರ್ಣಾಟಕ ಭಾಗವತ’ ದ ’ವಿಶ್ವಾರ್ಪಣಾ ಸಮಾರಂಭ,” ಮೈಸೂರು ನಗರದಲ್ಲಿ. ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ !

ಈಗಾಗಲೇ ಅಮೆರಿಕದ ಹೂಸ್ಟನ್ ನಗರದಲ್ಲಿರುವ ಕನ್ನಡ ವೃಂದದವರ ಯುಗಾದಿ ಹಬ್ಬದ ಸಮಾರಂಭದ ಸಂದರ್ಭದಲ್ಲಿ (ಆದಿನ ”ಕನ್ನಡ ವೃಂದ’ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿತ್ತು) ಅಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ, ಎರಡು ಸಂಪುಟಗಳ ’ ಕರ್ಣಾಟಕ ಭಾಗವತ,’ ಗ್ರಂಥದಬಿಡುಗಡೆಯಾಗಿದೆ. ಈಗ ಭಾರತದ ಮೈಸೂರು, ಬೆಂಗಳೂರು, ಧಾರವಾಡ, ಶಿವಮೊಗ್ಗ ನಗರಗಳಲ್ಲೂ ಇದರ ವಿಶ್ವಾರ್ಪಣಾ ಸಮಾರಂಭವನ್ನು ಸಹೃದಯಿಗಳ, ಕಾವ್ಯಾರಾಧಕರ, ನಮ್ಮ ಪರಂಪರೆಯನ್ನು ಗೌರವಿಸುವ ಸಜ್ಜನರ ಸಮ್ಮುಖದಲ್ಲಿ ನೆರೆವೇರಿಸಲು ಏರ್ಪಾಡುಮಾಡಲಾಗಿದೆ. ಕನ್ನಡದ ಅಭಿಮಾನಿಗಳು ಈ ಸತ್ಕಾರ್ಯವನ್ನು ಗೌರವಿಸಿ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಲಾಭಹೊಂದಬೇಕೆಂಬುದೇ, ಇದರ ಸಂಪಾದಕ, ಲಿಪಿಕಾರ, ಸಂಶೋಧಕ, ಡಾ.’ಚಂದ್ರಾ’ ರವರ ಕಳಕಳಿಯ ವಿನಂತಿ. ಅವರು, ಈ ಕಾರ್ಯಕ್ಕಾಗಿಯೇ ದೂರದ ಅಮೆರಿಕೆಯಿಂದ ಭಾರತಕ್ಕೆ ಬಂದಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಸಂಗೀತಗಳನ್ನು ತೀವ್ರವಾಗಿ ಪ್ರೀತಿಸುವ, ಗೌರವಿಸುವ, ಹಾಗೂ ಅದಕ್ಕಾಗಿ ತಮ್ಮ ಜೀವನದ ಅತ್ಯಮೂಲ್ಯ ಸಮಯವನ್ನು ಕೊಟ್ಟಿರುವ ಡಾ. ಚಂದ್ರಶೇಖರ್ ರವರನ್ನು ಎಷ್ಟು ಅಭಿನಂದಿಸಿದರೂ ಸಾಲದು. ಇದೇ ಭಾಷಾಭಿಮಾನ, ಮೌಲ್ಯಾಧಾರಿತ ಸಂಗತಿಗಳನ್ನು ಗುರುತಿಸುವ, ಅರಿಯುವ, ಪರಂಪರೆಯನ್ನು ಹೆಚ್ಚಿಸುವ ಕಾರ್ಯ, ಇಂದು ನಮಗೆ ಬೇಕಾದ ಅತಿ ಪ್ರಮುಖವಾದ ಸಂಗತಿಗಳಲ್ಲಿ ಒಂದು.
"ಕನ್ನಡ ಭಾಗವತ ಸಂಶೋಧನೆ ಮತ್ತು ಪ್ರಕಟಣಾ ಪ್ರತಿಷ್ಠಾನ ಅರ್ಪಿಸುವ ’ ಕರ್ಣಾಟಕ ಭಾಗವತ ಗ್ರಂಥದ ’ವಿಶ್ವಾರ್ಪಣಾ ಸಮಾರೋಹ’, ಮೊದಲನೆಯದಾಗಿ, ಮೈಸೂರು ನಗರದಲ್ಲಿ ನಡೆಯಲಿದೆ. ಕರ್ಣಾಟಕದ ನಾಲ್ಕು ಪ್ರಮುಖ ಸಾಂಸ್ಕೃತಿಕ ನಗರಗಳಲ್ಲಿ ಈ ಸಮಾರಂಭಗಳನ್ನು ಹಮ್ಮಿಕೊಳ್ಳಲಾಗಿದೆ.
1. ಮೈಸೂರಿನಲ್ಲಿ ಮೊಟ್ಟಮೊದಲ ಸಮಾರಂಭ. 'ರಾಜೆಂದ್ರವಿಲಾಸ್ ಸಭಾಂಗಣ. (೨೭ ನೆಯ ಜೂನ್ ೨೦೦೮, ಶುಕ್ರವಾರ ಸಾಯಂಕಾಲ ೬ ಘಂಟೆಗೆ)
ಅಧ್ಯಕ್ಷರು : ಶ್ರೀ. ಶ್ರೀ. ಸುತ್ತೂರು ಶಿವರಾತ್ರೀಶ್ವರ ಸ್ವಾಮೀಜಿಯವರು.
ಪುಸ್ತಕವನ್ನು ಬಿಡುಗಡೆಮಾಡುವವರು : ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ, ಡಾ.ವಿವೇಕ್ ರೈ ರವರು.
ಪರಿಚಯ ಭಾಷಣ : ಡಾ. ಹೊಳಲ್ಕೆರೆ ಚಂದ್ರಶೇಖರ್ .
ಭಾಗವತ ಪುಸ್ತದ ಬಗ್ಗೆ : ಡಾ. ಕೆ. ವಿ. ವೆಂಕಟಾಚಲಶಾಸ್ತ್ರಿ
ಗ್ರಂಥದಿಂದ ವಾಚನಮಾಡುವವರು : ಶ್ರೀಮತಿ. ಡಾ.ಸುಕನ್ಯಾ ಪ್ರಭಾಕರ್.
2. ಬೆಂಗಳೂರಿನಲ್ಲಿನ ಕಾರ್ಯಕ್ರಮ : ಡಾ. ಎಚ್.ಎನ್.ಕಲಾಕ್ಷೇತ್ರ, ನ್ಯಾಷನಲ್ ಕಾಲೇಜ್, ಜಯನಗರ್,
(೦೬ ನೆಯ ಜುಲೈ, ೨೦೦೮ ರ ಬೆಳಿಗ್ಯೆ ೧೦ ಘಂಟೆಗೆ).
ಅಧ್ಯಕ್ಷರು : ಪ್ರೊ. ಜಿ. ವೆಂಕಟಸುಬ್ಬಯ್ಯನವರು
ಪುಸ್ತಕವನ್ನು ಬಿಡುಗಡೆಮಾಡುವವರು : ಶ್ರಿ. ಎ. ಆರ್. ಸೇತುರಾಮರಾವ್ ರವರು,
ಪರಿಚಯ : ಡಾ. ಹೊಳಲ್ಕೆರೆ ಚಂದ್ರಶೇಖರ್
ಭಾಗವತ ಪುಸ್ತದ ಬಗ್ಗೆ : ಡಾ ಎಚ್.ಎನ್.ಮುರುಳೀಧರ್.
ಗ್ರಂಥದಿಂದ ವಾಚನಮಾಡುವವರು : ಶ್ರೀ. ಎಮ್.ಆರ್.ಸತ್ಯನಾರಾರಾಯಣ
3. ಧಾರವಾಡ : (೧೧ ನೆಯ ಜುಲೈ, ೨೦೦೮)
ಡಾ. ಕಲಬುರ್ಗಿ ಮತ್ತು ಡಾ. ಚನ್ನವೀರ ಕಣವಿ ವಿಶೇಷ ಅತಿಥಿಗಳು.
೪. ಶಿವಮೊಗ್ಗೆ : (೧೯ನೆಯ ಜುಲೈ)
ಶಿವಮೊಗ್ಗೆಯಲ್ಲಿನ ಅತಿಥಿಗಳನ್ನು ಇನ್ನೂ ಕೊನೆಯದಾಗಿ ನಿರ್ಧರಿಸುವುದಿದೆ.
ಮೇಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಪೇಕ್ಷಿಸುವವರು ತಮ್ಮ ಮನೆಯ ವಿಳಾಸಗಳನ್ನು ಒದಗಿಸಿದರೆ, ಅವರವರ ಮನೆಗಳಿಗೆ ಆಹ್ವಾನಪತ್ರಿಕೆಗಳನ್ನು ಅಂಚೆಯಮುಖಾಂತರ ಕಳಿಸಲಾಗುವುದು.
ಸ್ನೇಹದಲ್ಲಿ,
ಚಂದ್ರ
(ಡಾ. ಎಚ್. ಆರ್. ಚಂದ್ರಶೇಖರ್)
ಇದರ ಬಗ್ಗೆ ಇನ್ನೂ ಹೆಚ್ಚು ಮಾಹಿತಿಯನ್ನು ಅಪೇಕ್ಷಿಸುವವರು, ಕೆಳಗಿನ ವಿಳಾಸಕ್ಕೆ ಫೋನ್ ಮುಖಾಂತರ ಸಂಪರ್ಕಿಸಬಹುದು.
Prof. H. R. Ramakrishna Rao,
801, West of Kanakapura Road,
15th Cross, Jayanagar, 7th Block,
BengaLUru.
Phone : 080-26712450
,

- Login or register to post comments
- 328 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- 'ಕರ್ಣಾಟಕ ಭಾಗವತ’ ಗ್ರಂಥದ ಬಿಡುಗಡೆ ಸಮಾರಂಭ -ಮೊದಲು ಮೈಸೂರು, ಬೆಂಗಳೂರು, ಧಾರವಾಡ, ಕೊನೆಗೆ ಶಿವಮೊಗ್ಗೆಯಲ್ಲಿ !
- ಮುಂಬೈ ನ 'ಗೀತಗೋವಿಂದ ಹಾಲ್,' ನಲ್ಲಿ "ಕರ್ಣಾಟಕ ಭಾಗವತ," ದ 'ಕೃಷ್ಣಾರ್ಪಣಾ ಸಮಾರಂಭ' !
- "ಕರ್ಣಾಟಕ ಭಾಗವತ "- ಅಮೆರಿಕೆಯಲ್ಲಿ ಬಿಡುಗಡೆಯಾಗಿದೆ !
- " ಸಂಶೋಧನೆ, ವಿದ್ವತ್ತು, ಸಂಪಾದನೆ, ಬೃಹತ್ ಅವತಾರವಾಗಿ ಕೃತಿರೂಪು ತಳೆದಿದೆ. ಇದು ಒಂದು ಶ್ಲಾಘನೀಯವಾದ ಸಂಗತಿ,"-ಡಾ. ಬಿ. ಎ. ವಿವೇಕ್ ರೈ !
- ’ ಕರ್ಣಾಟಕ ಭಾಗವತ,” ಒಂದು ಅಪರೂಪದ ಕೃತಿ !


RSS: