ಬೆಳವಾಡಿಯ ಶ್ರೀ ಕಲ್ಲೇಶ್ವರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ನಂತರದ ಚಿತ್ರ
ದೇವಸ್ಥಾನವನ್ನು ತಿಪ್ಪೆಗುಂಡಿ ಮಾಡುವ ಬಗ್ಗೆ ಬೆಳವಾಡಿ ಶ್ರೀ ಕಲ್ಲೇಶ್ವರಸ್ವಾಮಿ ದೇವಸ್ಥಾನದ ವಿವರ ನೀಡಿರುವ ನನ್ನ ಲೇಖನಕ್ಕೆ ಪೂರಕವಾಗಿ, ಜೀರ್ಣೋದ್ಧಾರದ ನಂತರ ತೆಗೆದ ದೇವಾಲಯದ ಚಿತ್ರವನ್ನು ಇಲ್ಲಿ ಕಾಣಬಹುದು. ದೇವಸ್ಥಾನವನ್ನು ಒಳಹೊಕ್ಕರೆ ಪುರಾತನ ದೇವಾಲಯವನ್ನೇ ಹೊಕ್ಕ ಅನುಭವವಾಗುವಂತೆ ಒಳಾಂಗಣವನ್ನು ಆದಷ್ಟೂ ಹಾಗೆಯೇ ಉಳಿಸಿಕೊಂಡು ಸಂಪೂರ್ಣ ಹಾಳಾಗಿ ಹೋಗಿದ್ದ ಹೊರಭಾಗವನ್ನು ಆಧುನಿಕವಾಗಿ ಕಟ್ಟಿಸಿ, ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಹೋಗಿದ್ದ ನಾಗರ ಕಲ್ಲುಗಳು, ವೀರಗಲ್ಲುಗಳನ್ನು ಸೂಕ್ತರೀತಿಯಲ್ಲಿ ಆಸಕ್ತರ ಗಮನಕ್ಕೆ ಬರುವಂತೆ ದೇವಾಲಯದ ಹೊರಗೋಡೆಗೆ ಆನಿಸಿ ಸ್ಥಾಪಿಸಿರುವುದು ಇಲ್ಲಿನ ವಿಶೇಷ. ಪೂರ್ವ ಸೂಚನೆಯಿಲ್ಲದೆ ಪರೀಕ್ಷಣೆಗೆಂದು ಬಂದಿದ್ದ ಭಾರತ ಸರಕಾರದ ಪುರಾತತ್ವ ಇಲಾಖೆಯವರು ನವೀಕರಣವನ್ನು ಮುಕ್ತ ಕಂಠದಿಂದ ಹೊಗಳಿದ್ದು ನಮ್ಮ ಹೆಗ್ಗಳಿಕೆ.

- Login or register to post comments
- 119 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ



RSS: