ಯೂರೋಕಪ್ -೨೦೦೮ ನಲ್ಲಿ, ಒಂದೇ ನಿರ್ಧಾರಿತಗೋಲಿನ ನೆರವಿನಿಂದ ಜಯಭೇರಿಹೊಡೆದ ಸ್ಪೇನ್, ತನ್ನ ೪೪ ವರ್ಷಗಳ ಕನಸನ್ನು ನನಸುಮಾಡಿಕೊಂಡಿದೆ !

ಸ್ಪೇನ್ ದೇಶದ ಕಪ್ತಾನ್ ಐಕರ್ ಕ್ಯಾಸಿಲಾಸ್, ತಮ್ಮದೇಶಕ್ಕೆ ಸುಮಾರು ೪೪ ವರ್ಷಗಳ ನಂತರ ದೊರಕಿದ ಯೂರೋ ಫುಟ್ಬಾಲ್ ಕಪ್, ವಿಜಯೋತ್ಸವವನ್ನು ತಮ್ಮ ಗಳೆಯರೊಡನೆ ಹಂಚಿಕೊಂಡ ಮಧುರ ಕ್ಷಣಗಳು !
ಫರ್ನೆಂಡೊ ಟೊರಿಸ್ ರವರ ಏಕೈಕ ಗೋಲಿನ ನೆರವಿನಿಂದ ಸ್ಪೇನ್, ಜರ್ಮನಿಯನ್ನು ಪರಾಜಯಗೊಳಿಸಿ, ವರ್ಷ-೨೦೦೮ ರ ಯೂರೋಕಪ್ ನ್ನು ತನ್ನದಾಗಿರಿಸಿಕೊಂಡಿದೆ. ಫರ್ನೆಂಡೊ ಟೊರಿಸ್ ರವರು ಪಂದ್ಯದ ಮೊದಲಾರ್ಧದ ೩೩ ನೆ ನಿಮಿಷದಲ್ಲೇ ಮೊದಲ ಗೋಲ್ ಬಾರಿಸಿದರು. ಇದೇ ಗೋಲು ಸ್ಪೇನ್ ದೇಶದ ವಿಜಯಕ್ಕೆ ನಾಂದಿಯಾಯಿತು. ಜರ್ಮನ್ ಸತತ ಮೂರು ಬಾರಿ ಯುರೋ ಕಪ್ ಜಯಿಸಿದ ಸೂಪರ್ ತಂಡವಾಗಿತ್ತು, ಈ ಬಾರಿಯೂ ಯುರೋ ಚಾಂಪಿಯನ್‌ಷಿಪ್ ಜರ್ಮನ್ ತಂಡದ ಮಡಿಲಿಗೇರುವ ಸಾಧ್ಯತೆ ಇರುವ ಲೆಕ್ಕಚಾರ ಇದ್ದಿತ್ತು, ಆದರೆ, ಸ್ಪೇನ್ ನ ಕಪ್ತಾನ್, ಐಕರ್ ಕೆಸಿಲಾಸ್, ತಮ್ಮ ನೇತೃತ್ವದಲ್ಲಿ ಜರ್ಮನಿಯ ಕಪ್ತಾನ್ ಮೈಕೆಲ್ ಬಲಾಕ್, ಲುಕಾಸ್ ಪಡೊಲ್ ಸ್ಕಿ, ಮತ್ತು ಮಿರೊಸ್ಲೋವ್ ಕ್ಲೋಸ್ ರಂತಹ ತಂಡದ ವೀರಾಗ್ರಣಿಗಳನ್ನು ಮಣಿಸಿ, ತಮ್ಮತಂಡವನ್ನು ವಿಜಯದೆಡೆಗೆ ಕೊಂಡೊಯ್ದರು. ವಿಯೆನ್ನದ ಅರ್ನೆಸ್ಟ್ ಹ್ಯಾಪೆಲ್ ಕ್ರೀಡಾಂಗಣದಲ್ಲಿ, ವಿಜಯದ ಗೋಲನ್ನು ಟೋರಿಸ್, ಬಾರಿಸಿ ಸ್ಪೇನ್ ನ ಗೆಲುವಿಗೆ ಕಾರಣರಾದರು. ಆಟದ ಮೊದಲಿಂದ ಕೊನೆಯ ತನಕ, ಸತತವಾಗಿ ಚೆಂಡು ಸ್ಪೇನ್ ನ ಹಿಡಿತದಲ್ಲೆ ಇತ್ತು. ಯಾಕೋ ಜರ್ಮನ್ ತಂಡ ಸ್ವಲ್ಪ ಧೃತಿಗೆಟ್ಟಂತೆ ತೋರುತ್ತಿತ್ತು. ಅವರ ಕಪ್ತಾನ್ ಕೂಡ ಹಿಂದಿನ ಪಂದ್ಯದಲ್ಲಾದ ಗಾಯದಿಂದ ಪೂರ್ತಿಯಾಗಿ ಚೇತರಿಸಿಕೊಂಡಿರಲಿಲ್ಲ. ಅವರ ಗೋಲ್ ಮಾಡುವ ಪ್ರಯತ್ನಗಳು ವಿಫಲವಾದವು. ಫಿಲಿಪ್ ಲಹಾಮ್ ರವರ ಬಲಿಷ್ಟಕಾಲಿನ ಹಿಡಿತದಿಂದ ಸ್ಪೇನ್ ಆಟಾಗಾರರು ಚಾಣಾಕ್ಷತನದಿಂದ ಪಂದ್ಯದ ಮೇಲಿನ ನಿಯಂತ್ರಣವನ್ನು ಕಾದಿರಿಸಿಕೊಂಡು ಮುನ್ನಡೆದರು.
ಆಟ ಪ್ರಾರಂಭವಾಗುವುದಕ್ಕೆ ಮೊದಲು, ಸ್ಪೆನ್ ನ ಗಾಯಕ ಎನ್ರಿಕ್ ಇಗ್ಲೇಸಿಯಸ್, ಅದ್ಭುತವಾಗಿಹಾಡಿ, ನೆರೆದಿದ್ದ ಆಟದಅಭಿಮಾನಿಗಳೆಲ್ಲರ ಮನವನ್ನು ರಂಜಿಸಿದರು. ಮನೋರಂಜನೆಯ ಕಾರ್ಯಕ್ರಮ ಸೊಗಸಾಗಿತ್ತು. ಜರ್ಮನಿಯ ಛಾನ್ಸಲರ್ ಎಂಜಲ ಮರ್ಕೆಲ್, ಅಧ್ಯಕ್ಷ ಹರ್ಸ್ಟ್ ಕೊಹ್ಲರ್, ಸ್ಪೇನ್ ರಾಣಿ ಸೋಫಿಯ, ರಾಜ, ಜುವಾನ್ ಕಾರ್ಲೋಸ್, ಯು.ಇ.ಎಫ್ ಎ. ನ ಅಧ್ಯಕ್ಷ, ಮೈಕಲ್ ಪ್ಲಾಟಿನಿ, ಪಂದ್ಯದಸಮಯದಲ್ಲಿ ಹಾಜರಿದ್ದು ಆನಂದಿಸಿದರು. ಎರಡೂ ತಂಡಗಳ ಬೆಂಬಲಿಗರ ಕೂಗುವಿಕೆಯಿಂದ ಸಂಪೂರ್ಣ ಕ್ರೀಡಾಂಗಣದಲ್ಲಿ ಹಬ್ಬದ ಸಂಭ್ರಮ ಎದ್ದು ಕಾಣುತ್ತಿತ್ತು. ಜರ್ಮನ್ ಗೋಲಿ, ಜೆನ್ಸ್ ಲೆಹ್ಮನ್ ವಿಫಲರಾದರು. .
ಇಟಲಿಯ ರೆಫ್ರಿ, ರೊಬರ್ಟೊ ರೊಸೆಟ್ಟಿ ಯವರು ಅಂತಿಮ ಶಿಳ್ಳು ಹಾಕುತ್ತಿದ್ದಂತೆಯೇ, ಕ್ರೀಡಾಂಗಣದಲ್ಲಿದ್ದ "ವೀಕ್ಷಕರ ವಿಜಯೋತ್ಸವದ ಸಂಭ್ರಮ, ” ಮುಗಿಲನ್ನು ತಲುಪಿತು. ಜೇನುನೊಣಗಳು ಗೂಡಿನಿಂದ ಹೊರಗೆ ದಾಳಿಯಿಟ್ಟಾಗ ಆಗುವ ಅನುಭವವನ್ನು ಸಭಾಂಗಣದಲ್ಲಿದ್ದವರೆಲ್ಲಾ ಅನುಭವಿಸಿದರು.
ಯುರೋ ಚಾಂಪಿಯನ್‌ಷಿಪ್ ವಿಜೇತ ತಂಡಗಳ ವಿವರ :
* ಪ್ರಥಮ ಬಾರಿಗೆ, 1960ರಲ್ಲಿ ಆರಂಭಗೊಂಡ ಯುರೋ ಚಾಂಪಿಯನ್‌ಷಿಪ್ ಫುಟ್‌ಬಾಲ್ ಪಂದ್ಯಾಟದಲ್ಲಿ, ರಶ್ಯ - ಯುಗೋಸ್ಲೋವಿಯಾ ವಿರುದ್ಧ ನಡೆದ ಹಣಾಹಣಿಯಲ್ಲಿ, ರಶ್ಯ ಜಯಶಾಲಿಯಾಗಿತ್ತು.
* 1964 ರಲ್ಲಿ ಸೋವಿಯತ್ ಯೂನಿಯನ್ ಅನ್ನು ಅಂತಿಮ ಹಣಾಹಣಿಯಲ್ಲಿ 2-1ರ ಅಂತರದಲ್ಲಿ ಸ್ಪೇನ್ ಮಣಿಸಿತ್ತು.
* 1968 ರಲ್ಲಿ ಇಟಲಿ, ಯುಗೋಸ್ಲೋವಿಯಾ ವಿರುದ್ಧ ಗೆಲುವು ಸಾಧಿಸಿತ್ತು.
* 1972 ರಲ್ಲಿ ಸೋವಿಯತ್ ಯೂನಿಯನ್ ವಿರುದ್ಧ ಪಶ್ಚಿಮ ಜರ್ಮನ್ ಗೆ ಜಯ.
* 1976 ರಲ್ಲಿ ಪಶ್ಚಿಮ ಜರ್ಮನ್ ವಿರುದ್ಧ ಜೆಕೋಸ್ಲೋವಿಕಿಯಾ ಕ್ಕೆ ಗೆಲುವು.
* 1980 ರಲ್ಲಿ ಬೆಲ್ಜಿಜಿಯಂ ವಿರುದ್ಧ ಪಶ್ಚಿಮ ಜರ್ಮನ್‌ಗೆ ಜಯ.
* 1984 ರಲ್ಲಿ ಸ್ಪೇನ್ ವಿರುದ್ಧ ಯುಇಎಫ್ಎ ಗೆ ಗೆಲುವು.
* 1988 ರಲ್ಲಿ ರಶ್ಯ ವಿರುದ್ಧ ಹಾಲೆಂಡ್ ತಂಡಕ್ಕೆ ಜಯ.
* 1992 ರಲ್ಲಿ ಜರ್ಮನ್ ವಿರುದ್ಧ ಹಾಲೆಂಡ್‌ಗೆ ಗೆಲುವು.
* 1996 ರಲ್ಲಿ ಜೆಕ್ ರಿಪಬ್ಲಿಕ್ ವಿರುದ್ಧ ಜರ್ಮನ್‌ಗೆ ಜಯ.
* 2000 ರಲ್ಲಿ ಫ್ರಾನ್ಸ್ ಗೆ ಗೆಲುವು.
* 2004 ರಲ್ಲಿ ಪೋರ್ಚುಗಲ್ ವಿರುದ್ಧ ಗ್ರೀಕ್‌ಗೆ ಜಯ.
* 2008 ರಲ್ಲಿ ಜರ್ಮನ್ ವಿರುದ್ಧ ಸ್ಪೇನ್‌ಗೆ ಗೆಲುವು.
ವಿವರಗಳು, ಎಮ್. ಎಸ್. ಎನ್ ನ ಸೌಜನ್ಯದಿಂದ.
-ರೆಡಿಫ್ ಮೇಲ್ ನ ಸೌಜನ್ಯದಿಂದ.

- Login or register to post comments
- 97 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಸ್ಪೇನ್ ದೇಶದ ಪರಮ ಫುಟ್ಬಾಲ್ ಪ್ರೇಮಿ, ಅಂದ್ಮೇಲೆ ಹೀಗೇ ಇರ್ಬೇಕಲ್ವಾ ? ಅದ್ರಲ್ಲೂ ಸ್ಪೇನ್ ೨-೧ ರಿಂದ ಗೆದ್ದಿದೆ !
- ಯೂರೋ ಫುಟ್ಬಾಲ್ ಕಪ್-೦೮ ನ ಎರಡನೆ ಸೆಮಿಫೈನಲ್ ನಲ್ಲಿ ಸ್ಪೇನ್, ರಶ್ಯದ ಫೈನಲ್ ಗೆ ಸಾಗುವ ಕನಸನ್ನು (೩-೦) ಭಗ್ನಗೊಳಿಸಿತು !
- ಯೂರೋಚಾಂಪಿಯನ್ , ಸ್ಪೇನ್ ನಲ್ಲಿ ಒಬ್ಬ ಫುಟ್ಬಾಲ್ ಅಭಿಮಾನಿ, ಸಾವನ್ನಪ್ಪಿರುವುದು ದುರದೃಷ್ಟಕರ !
- ಯೂರೋಕಪ್ ಫುಟ್ಬಾಲ್ -೨೦೦೮ ರ ಗ್ರೂಪ್ ಮಟ್ಟದಲ್ಲಿನ (ನಾಕ್ ಔಟ್ ) ಪಂದ್ಯಗಳ ಫಲಿತಾಂಶಗಳು, ಹಾಗೂ ಮುಂದೆ ನಡೆಯಲಿರುವ ಸೆಮಿ-ಫೈನಲ್, ಮತ್ತು ಫೈನಲ್ !
- ಸೋಮವಾರ, ಜೂನ್, ೧೨, ೨೦೦೬ - ಇಂದು ಫಿಫಾ ವಿಶ್ವಕಪ್ಪಿನಲ್ಲಿ ಕಾದಲಿರುವ ಪಡೆಗಳು !


RSS: