ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕನ್ನಡ-ತೆಲುಗು ಒಂದೇ ಲಿಪಿ

ಕೆಳ ದಿನಗಳ ಹಿಂದೆ(೩-೪ ದಿನಗಳ ಹಿಂದೆ)ಡೆಕ್ಕನ್ ಹೆರಾಲ್ದ್ ನಲ್ಲಿ ಬಂದಿತ್ತು.
ಕನ್ನಡ ಹಾಗೂ ತೆಲುಗು ಭಾಷೆಗಳಿಗೆ ಒಂದೆ ಲಿಪಿಯನ್ನು ಅಳವಡಿಸುವ ಪ್ರಯತ್ನ ನಡಿಯಲಿದೆ. ಣೀಟ್ ವಾರನ್ಗಲ್ ನವರು ಈ ದಿಸೆಯಲ್ಲಿ ಕೆಲಸ ಮಾಡಬಹುದು.
ಎರಡು ಭಾಷೆಗಳಿಗೆ ಒಂದೆ ಲಿಪಿ ಅಳವಡಿಸುವ ಬಗ್ಗೆ ಸಂಪದದವರು ಏನು ಹೇಳ ಬಯಸುತ್ತೀರಿ.

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ವಿನ್ ವಿನ್ ಓರಿಯೆಂಟೇಷನ್

Sunil Jayaprakash's picture

ಇದೊಂದು ಉತ್ತಮ ಹೆಜ್ಜೆ ಎನ್ನಬಹುದು. ಕನ್ನಡ ಹಾಗು ತೆಲುಗು ಮಿತ್ರರ ನಡುವೆ ಉತ್ತಮವಾದ ಬಾಂಧವ್ಯವಿದೆ. ಅನೇಕ ಕಡೆ ಕನ್ನಡ ಹಾಗು ತೆಲುಗರ ನಡುವೆ ಮದುವೆಗಳೇರ್ಪಡುತ್ತವೆ. ಅಂದರೆ ಕನ್ನಡಿಗರ ಮತ್ತು ತೆಲುಗರ ನಡುವೆ ಅಹಂ ಅಡ್ಡಬರುವುದಿಲ್ಲ ಎಂದಾಯಿತು. ಆದರೆ, ಇಂಥಹ ಸೂಕ್ಷ್ಮಗಳನ್ನ ಲಾಭಕ್ಕೆ ಬಳಸಿಕೊಳ್ಳುವ ಕ್ಷೇತ್ರವೊಂದಿದೆ. ಅದೇ ರಾಜಕಾರಣ. ರಾಜಕಾರಣದ ಬಗ್ಗೆ ಯಾರೂ ಅಸಹನೆ ವ್ಯಕ್ತಪಡಿಸಬೇಕಾಗಿಲ್ಲ. ಯಾವುದೇ ಕಾಲಘಟ್ಟದಲ್ಲಿ, ಯಾವುದೇ ಪ್ರಾಂತ್ಯದಲ್ಲಿ ರಾಜಕಾರಣ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.
ನನ್ನನ್ನೊಂದು ಭಯ ಕಾಡುತ್ತಿದೆ. ಆದೆಂದರೆ ಕನ್ನಡಕ್ಕಾಗಿ ಹೋರಾಡುವಾಗ ರಾಜಕೀಯ ಇಚ್ಛಾಶಕ್ತಿ ಸಣ್ಣದಾಗಿರುತ್ತದೆ. ಭಾಷೆಗಳ ವಿಷಯದಲ್ಲಿ ಕನ್ನಡದ ರಾಜಕಾರಣಿಗಳು ಮಂದಮತಿಗಳು ಎಂದರೆ ತಪ್ಪಾಗಲಾರದೇನೊ(ಪ್ರಶ್ನಾರ್ಥಕ). ಹೀಗಾಗಿ ಈ ಲಿಪಿಯ ವಿಷಯ ಬಂದಾಗ ಕನ್ನಡಕ್ಕೆ ಲಾಭಕ್ಕಿಂತ ನಷ್ಚವೇ ಹೆಚ್ಚಾಗಬಹುದು. ಇದು ವಿನ್ ವಿನ್ ಓರಿಯೆಂಟೇಷನ್ ಆಗುವ ಸಾಧ್ಯತೆ ಕಡಿಮೆ.
ಬೇರೆಯವರ ಅಭಿಪ್ರಾಯವೇನು.

ಮತ್ತಷ್ಟು ಕಳವಳಗಳು,

Sunil Jayaprakash's picture

Sunil Jayaprakash wrote:
ಇದು ವಿನ್ ವಿನ್ ಓರಿಯೆಂಟೇಷನ್ ಆಗುವ ಸಾಧ್ಯತೆ ಕಡಿಮೆ.

ಉದಾಹರಣೆಗೆ ಇಂತಹ ಯೋಜನೆಯನ್ನು ಪ್ರಾಯೋಗಿಕವಾಗಿ ಕರ್ಣಾಟಾಂಧ್ರ ಗಡಿಪ್ರದೇಶದಲ್ಲಿ ಅನುಷ್ಠಾನಗೊಳಿಸಿದರು ಎಂದಿಟ್ಟುಕೊಳ್ಳಿ. ಆಗ ಏನಾದೀತು. ಕರ್ಣಾಟಾಂಧ್ರ ಲಿಪಿಯನ್ನು ಕವಿಗಳು, ಕಥೆಗಾರರು ಉಪಯೋಗಿಸಲಾರಂಭಿಸುತ್ತಾರೆ. ಅಕಸ್ಮಾತ್ ಇಂತಹ ಒಂದು ಕೃತಿ ಅತ್ಯುತ್ತಮವಾಗಿದ್ದು ಯಾವುದಾದರು ಪ್ರಶಸ್ತಿಗೆ ಅರ್ಹವಾದದ್ದು ಎಂದಿಟ್ಟುಕೊಳ್ಳೋಣ. ಆಗ ಆ ಕೃತಿಗೆ ಸರಿಯಾದ ಸ್ಥಾನಮಾನ ಸಿಗುತ್ತದೆಯೇ. ಏಕೆ ಈ ಪ್ರಶ್ನೆಯಂದರೆ, ಎಲ್ಲೋ ಓದಿದ ನೆನಪು, ದೇವನಾಗರಿ ಲಿಪಿಯಲ್ಲಿ ಬರೆದ ಕೊಂಕಣಿ ಕೃತಿಗಳನ್ನು ಮಾತ್ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪರಿಗಣಿಸಲಾಗುವುದಂತೆ. ಕನ್ನಡದಲ್ಲಿ ಬರೆದರೆ ಪರಿಗಣಿಸಲಾಗುವುದಿಲ್ಲ. ಈ ಸಂಗತಿ ಎಷ್ಟು ನಿಜ ಎಂದು ತಿಳಿದಿಲ್ಲ. ಇದೇ ಧಾಟಿಯಲ್ಲಿ ಆಂಧ್ರ ಸರಕಾರ ತೆಲುಗು ಲಿಪಿಯಲ್ಲಿದ್ದರೆ ಮಾತ್ರ ಪ್ರಶಸ್ತಿಗೆ ಅರ್ಹ ಎಂಬ ಸುತ್ತೋಲೆ ಹೊರಡಿಸಿದರೆ(ಇದು ಅಸಂಭವವೇನಲ್ಲ. ಸರಕಾರಗಳು ಏನು ಬೇಕಾದರೂ ಮಾಡಬಹುದು. ಇದು ಅನಾದಿಕಾಲದಿಂದಲೂ ನಡೆದುಬಂದಿದೆ) ಆಗ ಉತ್ಸಾಹಭರಿತರಾಗಿ ಲಿಪಿಯನ್ನು ಸ್ವಾಗತಿಸಿದ ಜನರ ಸ್ಥೈರ್ಯ ಏನಾಗಬಹುದು. ಆಗ ಅವರ ನೆರವಿಗೆ (???) ಉದಾರಿ ಕರ್ನಾಟಕದ ಜನತೆ (ಕರ್ನಾಟಕ ಉದಾರಿ ಎಂಬುದಕ್ಕೆ ಪುರಾವೆ. ಮಹಾರಾಷ್ಟ್ರ ಸರಕಾರ ಕೊಂಕಣಿ ಕಾರ್ಯಕ್ರಮಗಳಿಗೆ ಉತ್ತೇಜನ ನೀಡದಿದ್ದಾಗ, ಕೊಂಕಣಿ ಕಾರ್ಯಕ್ರಮಗಳನ್ನು ಕರ್ನಾಟಕ ಸರಕಾರ ಧಾರವಾಡದ ಬಾನುಲಿ ಕೇಂದ್ರದಿಂದ ಪ್ರಸಾರ ಮಾಡಿದರು ಎಂದು ಈಚೆಗೆ ಪತ್ರಿಕೆಯಲ್ಲಿ ಓದಿದ್ದೆ.) ಬರುತ್ತಾರೆಯೆಂದಿಟ್ಟು ಕೊಳ್ಳೋಣ. ಅವರಿಗೆ ಶೋಷಿತರ ಸ್ಧಾನಮಾನ ನೀಡಿ ಅನಾದಿಕಾಲದಿಂದ ಇವರನ್ನು ತುಳಿಯಲಾಗಿದೆ ಎಂಬ ನಾಮ ಅಂಟಿಸಿ, ಎಲ್ಲೆಲ್ಲೂ ಅವರಿಗೆ ಮೀಸಲಾತಿ ಕೊಡಬಹುದು. ಕಾಲೇಜು, ಕೃಪಾಂಕಗಳು, ಶುಲ್ಕ ಇವೆಲ್ಲ ಆಗ ಚರ್ಚೆಗೆ ಬರುತ್ತವೆ.

ತೆಲುಗನ್ನು ಕರ್ನಾಟಕದಲ್ಲಿ ಎರಡನೆ ನುಡಿ

ಮಹೇಶ ಭೋಗಾದಿ's picture

ಆದರೆ ಸುದ್ದಿ ಪತ್ರಿಕೆಗಳು ಈ ಕೆಲಸವನ್ನು, ತೆಲುಗನ್ನು ಕರ್ನಾಟಕದಲ್ಲಿ ಎರಡನೆ ನುಡಿಯಾಗಿ ಮಾಡುವ ಯತ್ನವೆಂದು ಬಿಂಬಿಸಿದಂತೆ ಭಾಸವಾಯಿತು.

http://www.hindu.com/2004/12/27/stories/2004122702880500.htm

ಸಿರಿಗನ್ನಡ ಚಿರಗನ್ನಡ
ಮಹೇಶ

ಕನ್ನಡ -ತೆಲುಗು ಒಂದೇ ಲಿಪಿ

shreekant.mishrikoti's picture

೧. ಮೊದಲು ಎರಡು ಭಾಷೆಗಳು ಒಂದೇ ಲಿಪಿ ಹೊಂದಿದ್ದವು . ನಂತರ ಲಿಪಿಗಳು ಬೇರೆ ಬೇರೆ ಆದವು . ಏಕೆ ? ಮತ್ತು ಹೇಗೆ ? ಅಧ್ಯಯನ ಮಾಡಬೇಕು .

೨. ಹಿಂದೆ ಇಂಥ ಚರ್ಚೆ ಆಗಿರಬಹುದು . ಹಾಗಿದ್ದಲ್ಲಿ ಆ ಎಲ್ಲ ವಿವರ ಬಲ್ಲವರು ತಿಳಿಸಬೇಕು .

ಮತ್ತೆ ಮತ್ತೆ ಪ್ರಾರಂಭದಿಂದ ಪ್ರಾರಂಭಿಸುವದನ್ನು ತಪ್ಪಿಸಿ ಈ ಸಂಬಂಧದ ಇಲ್ಲಿಯವರೆಗಿನ ಮಾಹಿತಿ ಪಡೆದು ಅಲ್ಲಿಂದ ನಮ್ಮ ಚರ್ಚೆ ಮುಂದುವರಿಸಬೇಕು.

ಶ್ರೀಕಾಂತ ಮಿಶ್ರಿಕೋಟಿ.

ಉ: ಕನ್ನಡ -ತೆಲುಗು ಒಂದೇ ಲಿಪಿ

kannadakanda's picture

ಸದ್ಯದ ತೆಲುಗಿನಲ್ಲಿ ’ೞ’ ಗೆ ಸಂಕೇತವಿಲ್ಲದಿರುವುದಱಿಂದ ಹೊಸಲಿಪಿಯಲ್ಲಿ ’ೞ’ ಅೞಿಸಿಹೋಗುವ ಭಯವಿದೆ. ’ೞ’ ಈಗಾಗಲೇ ಕನ್ನಡದಲ್ಲಿ ಕೆಲವು ಪಂಗಡಗಳಲ್ಲಿ ಬಿಟ್ಟರೆ ನಶಿಸಿರುವುದಱಿಂದ ಇದು ನಮಗೆ ಇನ್ನೊಂದು ನಷ್ಟ ತರಬಹುದು.

ಉ: ಕನ್ನಡ -ತೆಲುಗು ಒಂದೇ ಲಿಪಿ

mahesha's picture

ಹಳೆತಲುಗಲ್ಲೂ ಹಳಗನ್ನಡದ ಹಾಗೆ ಇತ್ತು..

ಇಂದು ವಸಗನ್ನಡ ಮತ್ತು ವಸದೆಲುಗಲ್ಲಿ ಇಲ್ಲ...

ಕನ್ನಡ ಮತ್ತು ತೆಲುಗಿಗೇ ಈಗಾಗಲೇ ಒಂದೇ ಲಿಪಿಮೂಲ ಇರೋದು..

ಕನ್ನಡದ ಲಿಪಿಯಲ್ಲೇ ಬದಲಾವಣೆಯಾಗಿರೋದು.. ತೆಲುಗು ಲಿಪಿ ಇನ್ನೂ ಹಳೆಯ ಲಿಪಿಯಲ್ಲೇ ಇದೆ.

ಕನ್ನಡದ ಲಿಪಿಯನ್ನ ಅಚ್ಚಾಕಲು ಚಂದಗೊಳಿಸಿ.. ಅಚ್ಚಿಗೆ ತೊಡರಾಗಿದ್ದ ಗುರುತುಗಳನ್ನು ಸರಿಪಡಿಸಿದ್ದೀವಿ..

ಮಾದರಿ : యే/ಯೇ, ದೀರ್ಗವನ್ನು ತೆಲುಗಲ್ಲಿ ಏತ್ವದ ಮೇಲೆ ಒಂದು c ತರದ ಗುರುತು ಕೊಟ್ಟ ತೋರಿದರೆ, ನಾವು ಕನ್ನಡದಲ್ಲಿ ದೀರ್ಗ ಎಂಬ ವಸಗುರುತು ವುಟ್ಟಿಸಿಕೊಂಡೆವು.. ಇದು ಅಚ್ಚಾಕಲು ನೆರವಾಯ್ತು.

ಹಂಗೆ యొ/ಯೊ , యో/ಯೋ ಇಲ್ಲೂ ತೆಲುಗು ಲಿಪಿಗಿಂತ ಕನ್ನಡದಲ್ಲಿ ಒತ್ವ ಚನ್ನಾಗಿ ಕಾಣುವುದು ಅಲ್ವೇ?

ಒಂದೇ ಲಿಪಿ

hpn's picture

ಮೊದಲಾಗಿ, ಸಂಪದದಲ್ಲಿ ಕನ್ನಡ ಲಿಪಿ ಬಳಸಿ ಬರೆಯಿರಿ.

ನೀವು ಉದ್ದೇಶಿಸಿರುವ ಪತ್ರಿಕಾ ಪ್ರಕಟಣೆ ಇಲ್ಲಿದೆ.

ಕನ್ನಡ - ತೆಲುಗು ಭಾಷೆಗಳಿಗೆ ಒಂದೇ ಲಿಪಿ ಮಾಡಹೊರಟಿರುವವರಿಗೆ ನಾವು "ಮಾಡಬೇಡಿ" ಎಂದು ಹೇಳಲಾಗುವುದಿಲ್ಲ. ಅದು ಸರಿಯೋ, ತಪ್ಪೋ, progressiveಓ ಅಲ್ಲವೋ ಅದೂ ಕೂಡ ಕಾಲವೇ ತಿಳಿಸಬೇಕಾದ ಸಂಗತಿ. ನಮ್ಮ ಅಭಿಪ್ರಾಯಗಳನ್ನು ದಾಖಲು ಮಾಡಬಹುದಷ್ಟೇ ಆಗಬಹುದಾದ್ದರಿಂದ ನಿಮ್ಮೆಲ್ಲರೊಂದಿಗೆ ನನ್ನ ಅಭಿಪ್ರಾಯವನ್ನೂ ಸೇರಿಸುತ್ತೇನೆ.

ನಾವೀಗ ಬಳಸುತ್ತಿರುವ ಲಿಪಿಗಳು ಹೇಗೆ ಉಗಮವಾದುವೆಂಬ ಸಂಗತಿ ಇಲ್ಲಿ ಗಮನಿಸಬೇಕಾದ ಅಂಶ. ಕನ್ನಡ - ತೆಲುಗುಗೆ ಒಂದೇ ಲಿಪಿ ಬೇಕೆಂದರೆ ಹೊಸದೊಂದು ಲಿಪಿ ತಯಾರಿಸುವ ಅವಶ್ಯಕತೆ ಬಹುಶಃ ಇರದು. ಹಳೆಗನ್ನಡವನ್ನೇ ಬಳಸಬಹುದು. ಆದರೆ ಅದು ನಿಜವಾಗಲೂ ಬೇಕೆ? ಕಾಲಚಕ್ರದಲ್ಲಿ ಹಿಂದಕ್ಕೆ ತಿರುಗಿದಂತಾಗುತ್ತದೆ ಅಲ್ವೆ?

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

ಜನ ಒಂದಾಗಬೇಕು ನಿಜ...

ಶ್ಯಾಮ ಕಶ್ಯಪ's picture

ಜನ ಒಂದಾಗಬೇಕು ನಿಜ. ಆದರೆ ಭಾಷೆಗಳು ಬೇರೆಬೇರೆಯಾಗಿದ್ರೆ ಒಂದೇ ಲಿಪಿಯಿಂದ ಪ್ರಯೋಜನವಾದರೂ ಏನು? ಲಿಪಿ ಒಂದೇ ಆದ್ರೆ ಜನ ಒಂದಾಗೋಕ್ಕೆ ಹೇಗೆ ಸಾಧ್ಯ? ಸಾಂಕೇತಿಕವಾಗಿ ಬರೆಯುವ ಲಿಪಿಯಲ್ಲಿ homogenity ತಂದುಕೊಂಡು ಏನು ಸಾಧಿಸಬೇಕಾಗಿಲ್ಲ.ಇರುವ ಐಡೆಂಟಿಟಿ ಮತ್ತು ವೈವಿಧ್ಯತೆಯನ್ನು ಏಕೆ ಕಳೆದುಕೊಳ್ಳಬೇಕು?
"The first day of the conference will feature a seminar on trade, industry and commerce, the second day with a seminar on women and youth"
ಇವು ಈ ಲಿಪಿಯ ವಿಷಯಕ್ಕಿಂತ ಹೆಚ್ಚು ಅವಶ್ಯಕತೆಯ ವಿಷಯಗಳು ಅನ್ನಿಸುತ್ತದೆ.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

lipigalu ondhagabaradhu

raghushivram's picture

nanna prakara ivaga yavasthiyalli idheyo adhe sthiyalli lipigalannu biduvudu sooktha.
namma bashe/lipi nammage doddadhu, hage telagu navara bashe/lipi avarige hechu priya, yake NIT avarige e tharahada yochane banto gothilla.
ondhu paksha eradu bashegu seri ondhe lipi thandharu jana eshtara mattige oppuvaru annuvudhu prashne.
NIT andhare National Institute of Technology allave?, nanna prakara allina vidhyarthigalu project maduva utsahadalli etarahadha prayathnakke chalene kottirabahudhu.
-Raghuram

ಒಳ್ಳೆಯ

ಮಹೇಶ ಭೋಗಾದಿ's picture

ಒಳ್ಳೆಯ ಪ್ರಯತ್ನ.

ಆದರೆ, ನನ್ನ ಅಭಿಪ್ರಾಯದಲ್ಲಿ ಕನ್ನಡದ ಈಗಿನ ಲಿಪಿ, ತೆಲುಗು ಲಿಪಿಗಿಂತ ಸುಂದರವಾಗಿ ಮತ್ತು ಚೊಕ್ಕಟವಾಗಿದೆ.

ಸಿರಿಗನ್ನಡ ಚಿರಗನ್ನಡ
ಮಹೇಶ

ಏಕತೆಯನ್ನು ತರುವುದೇ!

sinchanabhat's picture

ನಾನು ಕನ್ನಡದವಳಾಗಿ ಅನ್ನುವುದಕಿಂತ ಭಾರತೀಯಳಾಗಿ ಹೇಳುವುದಾದರೆ,ಇಂದು ನಾವು ಅದೆಸ್ಟೋ ಕ್ಶೇತ್ರಗಳಲ್ಲಿ ಬದಲಾವಣೆ ಕಾಣಬೇಕಾಗಿದೆ,ಆದರೆ ತರಲು ಕೈಜೋಡಿಸುವವರಿಲ್ಲ.ಭಾಶೆ ಎಂಬುದು ಸಂದೇಶರವಾನೆಯನ್ನು ಸಲೀಸು ಮಾಡುವ ಮಾಧ್ಯಮ,ಅಂದರೆ ಅದು ನಮ್ಮ ಅನುಕೂಲ. ಬದಲಾವಣೆ ಎಲ್ಲಿ ಬೇಕೊ ಅಲ್ಲಿ ಬದಲಾವಣೆ ತರುವವರು ಯಾರೂ ಇಲ್ಲಾ!ಬೆಳಗಾವಿಯ ವಿಶಯದಲ್ಲಿ ಭಾಶೆಯನ್ನೇ ಕಾರಣವಾಗಿಸಿಕೊಂಡು ಅದೆಸ್ಟೋ ಹಿರಿಯರು(!) ಕಿರಿಯರು ಕಚ್ಹಾಡಿದ್ದಾರೆ.ನನಗೆ ಈ ಲಿಪಿ ಬದಲಾವಣೆ ಅದೇನು ಮಹತ್ತರವಾದದ್ದನ್ನು ಸಾದಿಸಬಹುದೆಂದು ತೊಚುತ್ತಿಲ್ಲಾ.ಅದೊಂದು ಏಕತೆಯತ್ತಪಯಣವಾದರೆ ಬದಲಾವಣೆಗೆ ಸ್ವಾಗತಿಸಬಹುದಲ್ಲವೆ? ಬದಲಾವಣೆ ಜಗದ ನಿಯಮ,ನಮಗೆ ಕಾಣುವ ಜಗತ್ತೆಂಬುದು ನಮ್ಮ ಕೈಯ್ಯಲ್ಲಿದೆ, ಒಳಿತು ಕೆಡುಕುಗಳನರಿತು ಪಯಣಿಸಬೇಕಸ್ಟೆ.