ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.

— ಚೀನೀ ಗಾದೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

Mac ಉಪಯೋಗಿಸುವ ಕನ್ನಡದ ಬರಹಗಾರರು?

ಇತ್ತೀಚೆಗಷ್ಟೆ ವಿಂಡೋಸ್ ನಿಂದ Mac ಗೆ ವಲಸೆ ಬಂದಿರುವ ನನಗೆ ಯಾರಾದರು 'ಬರಹ'ದಂತೆ (ಉಚಿತ) ಕನ್ನಡ transliteration ಸಾಫ್ಟವೇರ್, Mac ಗಾಗಿ ಇದ್ದಲ್ಲಿ ತಿಳಿಸುವಿರೋ?

ಧನ್ಯವಾದಗಳು,

ಪ್ರದೀಪ

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಬ್ರಾಹ್ಮಿ ತಂತ್ರಾಂಶ

Sunil Jayaprakash's picture

ನಿಮ್ಮ ಓ.ಎಸ್ ನಲ್ಲಿ ಜೆಆರ್ಇ ಅನುಸ್ಧಾಪಿಸಿದ್ದಲ್ಲಿ, ಅಥವಾ ಅನುಸ್ಧಾಪಿಸುವ ಅನುಮತಿ ಇದ್ದಲ್ಲಿ, ಬ್ರಾಹ್ಮಿ ತಂತ್ರಾಂಶ ಉಪಯೋಗಿಸಿ.

http://brahmi.sourceforge.net/

ಆದರೆ ನೀವು ಕರ್ನಾಟಕ ಸರ್ಕಾರದ ಅಧಿಕೃತ ಮನ್ನಣೆ ಪಡೆದಿರುವ ಇನ್ಸ್ಕ್ರಿಪ್ಟ್ ಬಳಸಬೇಕಾಗಬಹುದು. ಇದು ಕಷ್ಟವೇನಲ್ಲ. ಟ್ರಾನ್ಸ್ಲಿಟರೇಷನ್ ಗಿಂತ ಅತ್ಯಂತ(??) ಸುಲಭ. ಅಭ್ಯಾಸವಾಗಬೇಕಷ್ಟೆ.

ಅಥವಾ ಈ ಎಳೆಯನ್ನು ಓದಿ, ನೀವೇ ಒಂದು ಸಣ್ಣ ಸ್ವಿಂಗ್ ಅಪ್ಲಿಕೇಷನ್ ಬರೆದು ಅದನ್ನು ಓಡಿಸಬಹುದು.

http://java.sun.com/products/jfc/tsc/articles/InputMethod/inputmethod.html

ಒಟ್ಟಿನಲ್ಲಿ ಹೇಳಬೇಕೆಂದರೆ ಎಲ್ಲೆಲ್ಲಿ ಜೆಆರ್ಇ ಓಡಿಸಬಹುದೋ ಅಲ್ಲೆಲ್ಲ ಕನ್ನಡ ಟೈಪಿಸಬಹುದು(ಅಚ್ಚಿಸಬಹುದು).(??)

ಅಬ್ಬಾ!

tvsrinivas41's picture

ಇದೇನು ಬರೆದಿದ್ದೀರಿ ಅಂತ ಸ್ವಲ್ಪವೂ ಅರ್ಥ ಆಗ್ತಿಲ್ಲ. ನನಗಂತೂ ಬರಹ ಡೈರೆಕ್ಟ್ ಆನ್ ಮಾಡಿ ಕುಟ್ಟೋದೊಂದೇ ಗೊತ್ತಿರೋದು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

ಯೋಚನೆ ಬೇಡ

Sunil Jayaprakash's picture

ಬರಹ ವಿಂಡೋಸ್ನಲ್ಲಿ ಮಾತ್ರ ಓಡುತ್ತಲ್ಲಾ. ಆದ್ದರಿಂದ ವಿಂಡೋಸ್ನಿಂದ ಬೇರೆ ಕಾರ್ಯ ವಿಧಾನಕ್ಕೆ ವಲಸೆ ಹೋದರೆ ಸ್ವಲ್ಪ ಟೈಪಿಸುವುದಕ್ಕೆ ಕಸಿವಿಸಿಯಾಗಬಹುದು. ಆದರೆ ವಿಂಡೋಸ್ನಂತೆ ಬೇರೆ ಯಾವ ಓ.ಎಸ್ ನಲ್ಲಿ ಬೇಕಾದರೂ ಸುಲಭವಾಗಿ(??) ಕನ್ನಡದಲ್ಲಿ ಟೈಪಿಸಬಹುದು. ಜಾವಾ ಅನುಸ್ಥಾಪಿಸಬೇಕಷ್ಟೆ. ಬ್ರಾಹ್ಮಿ ತಂತ್ರಾಂಶ ಬಹಳ ಸಹಾಯಕವಾಗುತ್ತದೆ. ನೀವೂ ಒಮ್ಮೆ ಪ್ರಯತ್ನಸಿ. ಸಹಾಯಕ್ಕೆ ನಾವಿದ್ದೇವೆ.

Inscript ಅಥವಾ KGP

bhatpp's picture

ನೀವು ತಿಳಿಸಿದ sites ಗಳನ್ನು ಪರಿಷೀಲಿಸಿದೆ (thanks!). ಬಾ್ರಹ್ಮಿ ಮತ್ತು ಪ್ರಸ್ತುತ ನಿಕೊಲಾಸ್ ಶ್ಯಾಂಕ್ಸ್ ನ ಕೀಬೋರ್ಡ್ ಲೇಔಟ್ ಗಳ (ಮೇಲಿನ ಲೇಖನವನ್ನು ಗಮನಸಿ) ನಡುವಿರುವ ಅಂತರವೆಂದರೆ ಒಂದು INSCRIPT layoutನ್ನು ಉಪಯೋಗಿಸಿದರೆ ಮತ್ತೊಂದು KGP layoutನ್ನು ಉಪಯೋಗಿಸುತ್ತದೆ, ಹಾಗಾಗಿ ಪ್ರಾರಂಭಿಕ ಪ್ರಯತ್ನದ ವಿಷಯದಲ್ಲಿ ಈ ಎರಡು ವಿಧಾನಗಳೂ ಒಂದೇ. ಸಧ್ಕಕ್ಕೆ INSCRIPTನ್ನು ಅಭ್ಯಾಸ ಮಾಡ್ತಾ ಇದ್ದೀನಿ, ಮುಂದೊಮ್ಮೆ ಬ್ರಾಹ್ಮಿಯನ್ನು ಪ್ರಯತ್ನಿಸುತ್ತೇನೆ!

ಕಗಪ

ಸ್ಮಿತಾ's picture

ನಾನು ಕಂಡುಕೊಂಡ ಮಟ್ಟಿಗೆ inscript ಗಿಂತ KGPಯ/ಅಶ್ವಿನ್ ರವರ ಲೇಒೌಟ್ ಭಾಷಾಧ್ವನಿ ನಿರೂಪಕ (phonetic) ವಾದುದರಿಂದ  ಸುಲಭ . ಇದು "ನುಡಿ" ಲೇಒೌಟ್ ನಂತಯೇ ಕೆಲಸ ಮಾಡುತ್ತದೆ.

ಬರಹದ transliteration scheme on Mac

hpn's picture

ನಿಕೊಲಾಸ್ ಶ್ಯಾಂಕ್ಸ್ ಗೆ ಕೇಳಿ ನೋಡಿ. ಕೆಲ ದಿನಗಳ ಹಿಂದೆ ನಾನೂ ಅವನೂ ಕೂಡಿ ಮ್ಯಾಕ್ ಗೆ ಫಾಂಟು ಮತ್ತು ಕೀಬೋರ್ಡ್ ಲೇಔಟ್ ಮಾಡಿದೆವು (ನನ್ನ ಬಳಿ ಮ್ಯಾಕ್ ಇಲ್ಲವಾದ್ದರಿಂದ ನನ್ನ ಪಾತ್ರ ಭಾಷೆಯ ಬಗ್ಗೆ, ಅಕ್ಷರಗಳ ಬಳಕೆಯ ಬಗ್ಗೆ, ಅವನಿಗೆ ತಿಳಿಸುವುದು ಮಾತ್ರ ಆಗಿತ್ತು)

ಅವನಿಗೆ ಬರಹದ transliteration scheme ಬಗ್ಗೆ ತಿಳಿಸಿ (ಅವನಿಗೆ ಸಂಪೂರ್ಣವಾಗಿ ಅರ್ಥಮಾಡಿಸುವ ಜವಾಬ್ದಾರಿ ಹೊತ್ತುಕೊಳ್ಳಿ), ಮಾಡಿಕೊಡುವನು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

ನಿಕೊಲಾಸ್ ಶ್ಯಾಂಕ್ಸನ ಕೀಬೋರ್ಡ್ ಲೇಔಟ್

bhatpp's picture

ಸದ್ಯಕ್ಕೆ ನಾನು ಅದನ್ನೇ ಉಪಯೋಗಿಸುತ್ತಾ ಇದ್ದೇನೆ. ಆದರೆ ಅದರಲ್ಲಿ ಟೈಪಿಸುವುದು, ನಾನು ಕಂಡುಕೊಂಡಂತೆ, ಸ್ವಲ್ಪ ಕಷ್ಟದಾಯಕ ... ಹಾಗಾಗಿ transliteration ಸುಲಭ ಅಂತ ನನ್ನ ಅನಿಸಿಕೆ!

ಅಂದ ಹಾಗೆ ಯಾರು ಈ ನಿಕೊಲಾಸ್ ಶ್ಯಾಂಕ್ಸ್?

X11 server (on Mac OS) ಉಪಯೋಗಿಸಿದಲ್ಲಿ ಕೂಡ ಈಗಿದ್ದಂತೆಯೆ ಮತ್ತೊಂದು (INSCRIPT based) ಕೀಬೋರ್ಡ್ ಲೇಔಟ್ ಉಪಯೋಗಿಸ ಬೇಕಾಗುತ್ತೆ, ಅಲ್ಲವೆ?

Re: ನಿಕೊಲಾಸ್ ಶ್ಯಾಂಕ್ಸನ ಕೀಬೋರ್ಡ್ ಲೇಔಟ್

hpn's picture

bhatpp wrote:
ಅಂದ ಹಾಗೆ ಯಾರು ಈ ನಿಕೊಲಾಸ್ ಶ್ಯಾಂಕ್ಸ್

ನನ್ನಂತೆ ಒಬ್ಬ wikipedian :-)
ಸುಮಾರು ಒಂದೂವರೆ ವರ್ಷಗಳಿಂದ ನನಗೆ ಅವನ ಪರಿಚಯ ಉಂಟು. ಲ್ಯಾಟಿನ್ ಮತ್ತು ಇಂಗ್ಲಿಷ್ ವಿಕಿಗಳಲ್ಲಿ ನಿರ್ವಾಹಕನಾಗಿದ್ದಾನೆ. appleನ ಡೆವಲಪರ್ಸ್ ಪ್ರೋಗ್ರಾಮ್ ನಲ್ಲಿ ಇವನೂ ಇದ್ದನಂತೆ, apple ಮೇಲೆ ವಿಡಿಯೋ ಗೇಮ್ಸ್ ಬರೆಯುತ್ತಿದ್ದ, ಈಗೇನು ಮಾಡುತಿದ್ದಾನೋ ಗೊತ್ತಿಲ್ಲ ;-)

bhatpp wrote:
X11 server (on Mac OS) ಉಪಯೋಗಿಸಿದಲ್ಲಿ ಕೂಡ ಈಗಿದ್ದಂತೆಯೆ ಮತ್ತೊಂದು (INSCRIPT based) ಕೀಬೋರ್ಡ್ ಲೇಔಟ್ ಉಪಯೋಗಿಸ ಬೇಕಾಗುತ್ತೆ, ಅಲ್ಲವೆ?

ಹೌದು. ಆದರೆ ನಿಮ್ಮ Xserverನಲ್ಲಿ SCIM install ಮಾಡೋ ಸೌಲಭ್ಯ ಇದೆಯೋ ನೋಡಿ ತಿಳಿಸಿ. ನಾನು Mac ಉಪಯೋಗಿಸಿಲ್ಲವಾದ್ದರಿಂದ ಇದರ ಬಗ್ಗೆ ನನಗೆ ಐಡಿಯ ಇಲ್ಲ.