ಎಂ.ಎಸ್.ಎನ್ ನಿಂದ ಕನ್ನಡಕ್ಕಾಗಿ ಒಂದು ಪೋರ್ಟಲ್
ಗೆಳೆಯರೆ,
ಕನ್ನಡ ಅಂತರ್ಜಾಲ ಮಾಧ್ಯಮದ ತೋಟದಲ್ಲಿ ಮತ್ತೊಂದು ಸಸಿಯು ಚಿಗುರೊಡೆದಿದೆ.
ಸಂಪದ, ಧಟ್ಸ್ ಕನ್ನಡ.ಕಾಂ, ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ, ವಿಜಯ ಕರ್ನಾಟಕ, ಸಂಜೆ ವಾಣಿ,
ವಿಶ್ವಕನ್ನಡ, ಕನ್ನಡ ಸಾಹಿತ್ಯ.ಕಾಂ...ಮುಂತಾದವುಗಳಂತೆ ಎಂ.ಎಸ್.ಎನ್ ಕೂಡ ಕನ್ನಡಕ್ಕಾಗಿ ಒಂದು ಪೋರ್ಟಲ್ ಮೀಸಲಿಟ್ಟಿದೆ. ಸದ್ಯಕ್ಕೆ ಇದು ಸುದ್ಧಿ ಮಾಧ್ಯಮದ ಪೋರ್ಟಲ್ ರೀತಿಯಲ್ಲಿ ಕಾಣುತ್ತಿದೆ.
ಮೊದಲ ನೋಟದಲ್ಲಿ ನನಗೆ ಇಷ್ಟವಾದ ವಿಷಯಗಳೆಂದರೆ
೧. ಎಂ.ಎಸ್.ಎನ್ ಪೂರ್ತಿಯಾಗಿ ಯುನಿಕೋಡ್ನಲ್ಲಿದೆ. ಹಾಗಾಗಿ ಫಾಂಟುಗಳ ತೊಂದರೆಯಿಲ್ಲ.
೨. ಎಂ.ಎಸ್.ಎನ್, ಎಕ್ಸ.ಎಮ್.ಎಲ್(XML) ಫೀಡುಗಳನ್ನು ನೀಡುತ್ತಿದೆ. ಹಾಗಾಗಿ ನಾವುಗಳು ಅವರ ಸೈಟಿಗೆ ಹೋಗದೆಯೂ ಸುದ್ಧಿಗಳನ್ನು ನಮ್ಮ ನೆಚ್ಚಿನ ಫೀಡ್ ರೀಡರ್ ಗಳನ್ನು ಉಪಯೋಗಿಸಿ ಸುದ್ಧಿಗಳನ್ನು ಓದಬಹುದು. ಉದಾ. ಗೂಗಲ್, ಯಾಹೂ, ಥಂಡರ್ ಬರ್ಡ್ ಹೀಗೆ.
ಮತ್ತೆ ಇನ್ನೇಕೆ ತಡ, ಕ್ಲಿಕ್ ಮಾಡಿ ಎಂ.ಎಸ್.ಎನ್ ಕನ್ನಡ ಅಥವಾ http://msn.co.in/Kannada
ಈಗಲಾದರೂ ನಮ್ಮ ನೆಚ್ಚಿನ ದಿನಪತ್ರಿಕೆಗಳು ಯೂನಿಕೋಡ್ನಲ್ಲಿ ಸುದ್ಧಿಗಳನ್ನು ನೀಡಿ XML ಫೀಡುಗಳನ್ನು ನೀಡುವ ವಿಚಾರವನ್ನು ಕೈಗೆತ್ತಿಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ನಮ್ಮವರು ಎಷ್ಟೋ ಮಂದಿ ಓದುಗರನ್ನು ಕಳೆದುಕೊಳ್ಳಲಿದ್ದಾರೆ.
ಸವಿಯೊದಗು.

- Login or register to post comments
- 1247 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಧನ್ಯವಾದಗಳು
ಸುನಿಲ್ ರವರೇ,
ನಿಮ್ಮ ಲೇಖನ ತುಂಬಾ ಚೆನ್ನಾಗಿತ್ತು. ಎಂ.ಎಸ್.ಎನ್. ತಾಣವನ್ನು ನೋಡಿ ಬಂದೆ. ಚೆನ್ನಾಗಿದ. ಇದನ್ನು ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ ಬಹಳ ಧನ್ಯವಾದಗಳು.
ಇತೀ ನಿಮ್ಮವ,
ಪ್ರದೀಪ ಅಡಿಗ
ಚೆಂದವಾಗಿದ
ಚೆಂದವಾಗಿದೆ. ವೆಬ್ ದುನಿಯಾದವರೊಂದಿಗೆ ಕಂಟೆಂಟ್ ಒಪ್ಪಂದ ಮಾಡಿಕೊಂಡಿದ್ದಾರೆ ಅಂತ ಕಾಣುತ್ತೆ. ಅಲ್ಲಿನಿಂದ ಅನುವಾದಗೊಂಡ ಲೇಖನಗಳು ಪ್ರಕಟವಾಗುತ್ತಿರುವಂತಿದೆ. ಅನುವಾದದ ಗುಣಮಟ್ಟ ಬಹಳಷ್ಟು ಕಡೆ ಚೆನ್ನಾಗಿದೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಸಿಕ್ಕಾಪಟ್ಟೆ ತಪ್ಪುಗಳು
ಇಲ್ಲಿ ಒತ್ತಿ ಹೇಳಲೇ ಬೇಕಾದ ವಿಷಯವೆ೦ದರೆ, ಆ ತಾಣದಲ್ಲಿ ಒತ್ತಕ್ಷರದ ತಪ್ಪುಗಳು ಅಧಿಕವಾಗಿವೆ.
ಬರವಣಿಗೆಯ ಮಟ್ಟ ಅಷ್ಟಕ್ಕೆ ಅಷ್ಟೇ.
ಅಡಿಗೆ ಮನೆ ಓಕೆ. ಅಡಿಗೆ ಮಾಡುವವರೆಗೂ ಹೇಳೋ...ಕ್ಕೆ ಆಗೋಲ್ಲಾ.
ಯಾರಾದರೂ ಅಡಿಗೆ ಮಾಡಿ...ದರೆ ದಯವಿಟ್ಟು ಕರೆಯಲು ಮರೆಯದಿರಿ.
:P
ನನ್ನ ಗಮನಕ್ಕೂ ಬರದೇ ಇರಲಿಲ್ಲ. ಯಾರೋ ಅಡಾಉಡಿ ಮಾಡಿಕೊಂಡು ಅನುವಾದ ಮಾಡುತ್ತಿರುವ ಹಾಗಿದೆ (ದಿ ಟ್ರೇಡ್ ಮಾರ್ಕ್ ಮೈಕ್ರೊಸಾಫ್ಟ್ ಪ್ರೆಶರ್!)
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಯಾಹೂ ಕನ್ನಡ
ಗೆಳೆಯರೆ,
ಬಳಸಿ ನೋಡಿ. ಇನ್ನೂ ಬೀಟಾ ಅವಸ್ಥೆಯಲ್ಲಿದೆ.ನೀವು ಯಾಹೂ ಬಳಸುವಿರಾದರೆ, http://in.kannada.yahoo.com ಯಾಹೂ ಕನ್ನಡವನ್ನು" target="_blank">http://in.kannada.yahoo.com ಯಾಹೂ ಕನ್ನಡವನ್ನು
ಉ: ಯಾಹೂ ಕನ್ನಡ
ಒಳ್ಳೇ ತಂಗಳು ಬಡಿಸಿರೋ ತರಾ ಇದೆ
ಇವೆಲ್ಲಾ ನಮಗೆ ಬೇಕಾ? ನಮಗೆ ಬೇಕಾಗಿರೋದು ಕರ್ನಾಟಕದಲ್ಲೇನಾಗುತ್ತಿದೆ, ಕನ್ನಡದಲ್ಲೇನಾಗುತ್ತಿದೆ ಎಂಬೋದು. ವಿದ್ಯಾ ಬಾಲನ್ ಯಾರ ಜೊತೆ ಜಗಳವಾಡಿಕೊಂಡರೆ ನಮಗೇನು? ವಿಕ್ರಮ್ ಭಟ್ ಎಷ್ಟು ಸಿನಿಮಾ ಹೊರತಂದರೆ ನಮಗೇನು?
ದಟ್ಸ್ ಕನ್ನಡವೇ ಎಷ್ಟೊ better.
MSN ಹೊರ ತಂದಿರುವ ಕನ್ನಡ ಸೈಟು ಕೂಡ ಇದಕ್ಕೆ ಹೊರತಲ್ಲ.
ಯಾಹೂ, MSN ಬಳಿ ಇರುವ ದುಡ್ಡಿಗೆ ಇನ್ನೂ ಏಷ್ಟೋ ಚೆಂದವಾದ ಸೈಟುಗಳನ್ನು ಹೊರತರಬಹುದು, ಅವರುಗಳು. ಅತ್ತ audience ಕಳೆದುಕೊಳ್ಳಲೂ ಇಷ್ಟವಿಲ್ಲ - ಇತ್ತ ದುಡ್ಡು ಸುರಿಯಲೂ ಮನಸ್ಸಿಲ್ಲ - ಹೀಗಾಗಿ ತಂಗಳು ಬಡೆಸುತ್ತಿದ್ದಾರೆ.

ಅದೇ ಸಾಕು ಎನ್ನುವವರು ದಿನನಿತ್ಯ ಯಾಹೂ ಮತ್ತು MSN ಎರಡಕ್ಕೂ ಭೇಟಿ ಕೊಡಬಹುದು
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"