ನಾಕು ತಂತಿ
ನಾನು ಕಳೆದ ಮೂರು ವಾರಗಳಿಂದ ಬೇಂದ್ರೆಯವರ, ಅಂದರೆ ನಮ್ಮ ಅಂಬಿಕಾತನಯದತ್ತನ, ನಾಕು ತಂತಿ ಕವನ ಸಂಕಲನವನ್ನು ಓದುತ್ತಿದ್ದೇನೆ, ಅಲ್ಲ ಕ್ಷಮಿಸಿ ಓದಲು ಜತುನಗೈಯುತ್ತಿದ್ದೇನೆ.
ಬೇಂದ್ರೆ ಅಜ್ಜ, ತಮ್ಮ ೬೮ನೇ ವಯಸ್ಸಿನಲ್ಲಿ ಬರೆದ ಈ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಜ್ಞಾನಪೀಠ ಪಶಸ್ತಿ ಪಡೆದ ಕನ್ನಡಿಗರಲ್ಲಿ ಎರಡನೆಯವರು, ಈ ನಮ್ಮ ಬೇಂದ್ರೆ. ಇದನ್ನು ಓದಿ ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ.
ಅದರಲ್ಲಿ ಅಡಕವಾಗಿರುವ ವಿಷಯಗಳನ್ನು ಗವನವಿಟ್ಟು ತಿಳಿಯಬೇಕು. ಇದೇ ಕಾರಣಕ್ಕಾಗಿಯೇ ನಾನು ಕಳೆದ ಭಾನುವಾರ "ನಾದಲೀಲೆ, ಬೇಂದ್ರೆ ಕಾವ್ಯ ವಾಚನ" ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತುದಿಗಾಲಲ್ಲಿ, ಪುಸ್ತಕ ಪೆನ್ನಗಳನ್ನೂ ತೆಗೆದುಕೊಂಡು ಹೋಗಿದ್ದೆ. ನನ್ನ ಓದಿಗೆ ಪೂರಕವಾಗುವಂತಹ ವಿಚಾರಗಳನ್ನು ಯಾರಾದರು ಅಲ್ಲಿ ಮಂಡಿಸುವರೇನೋ ಎಂದು. ಆದರೆ ನನ್ನ ದುರಾದೃಷ್ಟ ಅಲ್ಲಿ, ಕುಳಿತುಕೊಳ್ಳುವುದಿರಲಿ, ನಿಂತುಕೊಳ್ಳಲೂ ಜಾಗ ಸಿಗಲಿಲ್ಲ. ೧೦:೫೦ರ ಸುಮಾರಿಗೆ, ಯವನಿಕಾದಲ್ಲಿ, ಬಿ.ಜಯಶ್ರೀರವರು ಚಳಿಬಿಟ್ಟು ಸೂರ್ಯನ ಹೊಳಿಯಲ್ಲಿ ಈಜಿ ಬರುವಷ್ಟರಲ್ಲಿ ಕಾಲಿಗೆ ಬುದ್ಧಿ ಹೇಳಿದ್ದೆ.
ನಾನು ನೀನು ಆನು ತಾನು, ನಾಕೇ ನಾಕು ತಂತಿ ಎಂಬುದೇ ನಾಕು ತಂತಿಯ ತಿರುಳು.
ಈ ಸಾಲನ್ನು, ನಾನು ಸದ್ಯಕ್ಕೆ ಈ ರೀತಿ ಅರ್ಥ ಮಾಡಿಕೊಂಡಿದ್ದೇನೆ.
ನಾನು - ಒಬ್ಬ
ನೀನು - ಮತ್ತೊಬ್ಬ
ಆನು - ಕನ್ನಡದಲ್ಲಿ ಆನು ಎಂದರೆ,
ಹೆಗಲು ನೀಡು, ಸಹಾಯ ಮಾಡು, ನಂಬಿಕೆಯಿಡು, ಸಹಿಸು, ಸಹಕರಿಸು, ಒತ್ತು ನೀಡು, ಎಂಥಹ ಕಷ್ಟಕಾಲದಲ್ಲಿಯೂ ಕೂಡ ಒಟ್ಟಾಗಿ ನಡೆಯುವುದು..ಎಂಬುದಾಗಿ.
Ka. ān, ānu to be upheld, rest on, lean against, recline on, lean, bend, support (as the head), bear, endure, suffer;
--------------------------------------------------------
Source taken from Dravidian Etymological Dictionary, OxFord Press
ತಾನು - ತನ್ನ ಇರುವಿಕೆ, ಸ್ವಂತಿಕೆಯನ್ನು ಕಾಪಾಡಿಕೊಳ್ಳುವುದು.
ಅಂದರೆ, ಜೀವನದ ನಾಕೇ ನಾಕು ತಂತಿಯೆಂದರೆ, ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಮತ್ತೊಬ್ಬರ ನೋವು ನಲಿವುಗಳಲ್ಲಿ ಭಾಗಿಯಾಗುತ್ತಲೇ ತನ್ನತನವನ್ನು ರೂಢಿಸಿಕೊಂಡು ಕಾಪಾಡಿಕೊಳ್ಳಬೇಕು ಎಂತಲೇ ?.
ಉತ್ತರ - ನನಗೆ ನಿಜವಾಗಿಯೂ ತಿಳಿಯದು. ಸದ್ಯಕ್ಕೆ ನಾನು ಅರ್ಥಮಾಡಿಕೊಂಡಿರುವ ರೀತಿಯಿದು.
ಯಾರಿಗಾದರು ಈ ನಾಕು ತಂತಿಯ ಬಗ್ಗೆ ಹೆಚ್ಚು ತಿಳಿದಿದ್ದಲ್ಲಿ, ನಿಮ್ಮ ಅನುಭವವನ್ನು ಮತ್ತು ಅನಿಸಿಕೆಗಳನ್ನು ಎಲ್ಲರೊಡನೆ ಹಂಚಿಕೊಳ್ಳಿ. ಹಾಗೆಯೇ ಯಾರಿಗಾದರು, ಈ ನಾಕು ತಂತಿ ಸಂಕಲನವನ್ನು ವಿವರಿಸುವ ಪುಸ್ತಕ, ಸಿ.ಡಿ., ಕ್ಹೆಸೆಟ್ ಯಾವುದಾದರು ಇದ್ದರೆ, ಅದರ ವಿವರಗಳನ್ನು ಎಲ್ಲರಿಗೂ ತಿಳಿಸಿಕೊಡಿ.

- Sunil Jayaprakash ರವರ ಬ್ಲಾಗ್
- Login or register to post comments
- 701 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
Re: ನಾಕು ತಂತಿ- ನಾನು ಕೇಳಿದ ಒಂದರ್ಥ
ಸೌಂದರ್ಯದ ಅನುಭವದ ನೆಲೆಗಳನ್ನು ಇವು ಹೇಳುತ್ತದೆ ಎಂದು ಒಂದರ್ಥ.
ನಾನು- ಕೆಲವು ನನಗೆ ವೈಯುಕ್ತಿಕವಾಗಿ ರುಚಿಸುತ್ತದೆ.
ನೀನು- ಹಾಗೆಯೇ ನಿಮಗೆ.
ವೈಯುಕ್ತಿಕ ನೆಲೆಯಲ್ಲಿ ನಮ್ಮ ರುಚಿಗಳು ಬೇರೆ.
ಆನು - ಇಲ್ಲಿ ನಾನು ನೀನು ಎಂಬುದಿಲ್ಲ . ಎಲ್ಲರೂ ಒಪ್ಪುವಂಥ ಸೌಂದರ್ಯ ಇದೆ.
ತಾನು - ಎಲ್ಲರದಿರಲಿ , ಯಾರ ಮರ್ಜಿಯನ್ನೂ ಕಾಯದ ತಾನೇ ತಾನಾಗಿ ಸುಂದರವಾಗಿರುವ ವಸ್ತುಗಳೂ ಇವೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ದನಿ: ನಾಕು ತಂತಿ- ನಾನು ಕೇಳಿದ ಒಂದರ್ಥ
ತಾನು - ಎಲ್ಲರದಿರಲಿ , ಯಾರ ಮರ್ಜಿಯನ್ನೂ ಕಾಯದ ತಾನೇ ತಾನಾಗಿ ಸುಂದರವಾಗಿರುವ ವಸ್ತುಗಳೂ ಇವೆ.
ಒಪ್ಪತಕ್ಕಂತ ಮಾತು. ನಾನು ಎಂಬುದು ಅಹಂಕಾರವಾದರೆ, ತಾನು ಎಂಬುದು ಸೌಮ್ಯ ತಿರಸ್ಕಾರ ಸೂಚಿಸುತ್ತದೆಯೇ ?