ತೆರೆಯೋ ಬ್ರೌಸರ್ರು - ( 'ತಾರಕ್ಕ ಬಿಂದಿಗೆ' ಮಾದರಿಯಲ್ಲಿ)
ತೆರೆಯೋ ಬ್ರೌಸರ್ರು, ಜಾಲ ಜಾಲಾಡುವೆ, ತೆರೆಯೋ ಬ್ರೌಸರನು |
ಬ್ರಾಡ್‍ಬ್ಯಾಂಡು ಸಂಪರ್ಕ ಕಡಿಮೇ ಕಾಸು! ತೆರೆಯೋ ಬ್ರೌಸರನು ||
ಮಜಾವಾಣಿ ಓದಿ ಮಜವನ್ನು ಪಡೆವೆ , ತೆರೆಯೋ ಬ್ರೌಸರನು |
ಸಂಪದಕೆ ಹೋಗಿ ಸಂತೋಷ ಪಟ್ಟೇನು , ತೆರೆಯೋ ಬ್ರೌಸರನು ||
ಉಧ್ಭವದಲ್ಲಿ ಸಿರಿಸ್ವರವ ಕೇಳೇನು , ತೆರೆಯೋ ಬ್ರೌಸರನು |
'ನೂರು ವರ್ಷದ ಏಕಾಂತ ' ಓದೇನು , ತೆರೆಯೋ ಬ್ರೌಸರನು ||
ಮುದ್ದಾದ ಬರಹ ಮುದದಿಂದ ಬರೆದೇನು , ತೆರೆಯೋ ಬ್ರೌಸರನು |
ಅಳಿಲಿನ ಸೇವೆ ಕನ್ನಡಕೆ ಮಾಡೇನು , ತೆರೆಯೋ ಬ್ರೌಸರನು ||

- Login or register to post comments
- 758 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಸಡ್ಡು
ತಾರಕ್ಕ ಬಿಂದಿಗೆ - ಮೂಲ ಗೀತೆಯ ಕತೃಗಳಿಗೆ ಸಡ್ಡು ಹೊಡೆದಿದ್ದೀರ. ಬಹಳ ಚೆನ್ನಾಗಿ ಮೂಡಿದೆ. ಇಂತಹ ಮನ ತಣಿಸುವ ಕವನಗಳನ್ನು ಇನ್ನೂ ಹೆಚ್ಚು ಹೆಚ್ಚಾಗಿ ಹೆಣೆಯಿರಿ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಸಡ್ಡು ?
ಅಯ್ಯೋ, ಶ್ರೀ ಪುರಂದರದಾಸರೆಲ್ಲಿ , ನಾನೆಲ್ಲಿ , ಪುರಂದರದಾಸರ , ಹಾಗೂ ಇನ್ನು ಕೆಲವರ ಕೃತಿಗಳನ್ನು ಬಹಳವಾಗಿ ಮೆಚ್ಚುತ್ತೇನೆ. ಅದೇ ಮಾದರಿಯಲ್ಲಿ ತಮಾಷೆಗೆ ಕೆಲವು ಶಬ್ದ ಜೋಡಿಸಿದ್ದೇನೆ. ಅಷ್ಟೇ ನನಗೆ ಸಂತೋಷವಾಯಿತು, ಇತರರರಿಗೂ ಸಂತೋಷವಾಗಬಹುದೆಂದು ಇಲ್ಲಿ ಹಾಕಿದ್ದೇನೆ. ಓದಿದವರಿಗೆ ಸಂತೋಷವಾದರೆ ನನಗೆ ಹೆಚ್ಚು ಸಂತೋಷ.
ಕವನ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ.
ಕವನ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ. ಪುರಂದರದಾಸರು ಹಲವು ಶತಮಾನದ ಹಿಂದೆ ಇದೇ ಧಾಟಿಯಲ್ಲಿ ಬರೆದಿರುವುದು ನಿಜಕ್ಕೂ ಕಾಕತಾಳೀಯ.
ಮಜಾವಾಣಿ ಪತ್ರಿಕೆಯ ಮೂಲಕ ಸತ್ಯದ ವಿರುದ್ಧ ಸಮರ ಹೂಡಿ ವೀರ ಸ್ವರ್ಗದ ಆಲೋಚನೆಯಲ್ಲಿ ನಾವಿರುವಾಗ, ನೀವು "ಮಜಾ ಪಡೆವೆ" ಎನ್ನುವುದು ಸೋಜಿಗದ ಸಂಗತಿ - ಧನ್ಯವಾದಗಳು.
ನಿಮ್ಮ ಟಿಪ್ಪಣಿಯಲ್ಲಿ ಇರುವ "ಶ್ರೀ ಪುರಂದರದಾಸರೆಲ್ಲಿ" ಎನ್ನುವ ಪ್ರಶ್ನೆಗೆ ಉತ್ತರಿಸಲು ನಮ್ಮ ಪತ್ರಿಕೆಯ ವರದಿಗಾರರನ್ನು ಅವರ ಬಳಿಗೆ ಅಟ್ಟುವ ಆಲೋಚನೆ ಇದೆಯಾದರೂ, "ನಾನೆಲ್ಲಿ" ಎಂಬ ನಿಮ್ಮ ಪ್ರಶ್ನೆ ನಮಗೆ ಅತ್ಯಂತ ಮಾರ್ಮಿಕವಾಗಿ ಕಂಡುಬಂತು. ಈ ಅಗಾಧ ಅನಂತದಲ್ಲಿ "ನಾನೆಲ್ಲಿ" ಎಂದು ಕಂಡುಕೊಳ್ಳುವ ನಿಮ್ಮ ತವಕ ಅತ್ಯಂತ ಅರ್ಥಗರ್ಭಿತವಾಗಿದೆ.
ವಂದನೆಗಳೊಂದಿಗೆ,
ವಿ.ವಿ.
ನನ್ನ ಬ್ಲಾಗ್: ಮಜಾವಾಣಿ
ನಕ್ಕೂ ನಕ್ಕೂ ಸುಸ್ತಾಯಿತು
ನಕ್ಕೂ ನಕ್ಕೂ ಸುಸ್ತಾಯಿತು;
ಧನ್ಯವಾದಗಳು- ಈ ಟಿಪ್ಪಣಿಗಾಗಿ ಮತ್ತು ನಿಮ್ಮ ಮಜಾವಾಣಿ ಲೇಖನಗಳಿಗಾಗಿ .
ನಗೆ:ತೆರೆಯೋ
ಸದ್ಯ ಇವರು ಜಾಲ-ವೀಕ್ಷಕವನ್ನು(ಬ್ರೌಸರನ್ನು) ತೆರೆಯದು ಸಂಪದ, ಸಿರಿಗನ್ನಡ, ಮಜಾವಾಣಿ ಮುಂತಾದ ಒಳ್ಳೆಯ ಜಾಲತಾಣಗಳಿಗೆ(ಸೈಟುಗಳಿಗೆ) ಮಾತ್ರ ಹೋದರು...!!!!!
ಚೆನ್ನಾಗಿದೆ
ಹ್ಹಹ್ಹಹ್ಹಾ .. ಚೆನ್ನಾಗಿದೆ ನಿಮ್ಮ ಕವನ!
Re: ತೆರೆಯೋ ಬ್ರೌಸರ್ರು - ( 'ತಾರಕ್ಕ ಬಿಂದಿಗೆ' ಮಾದರಿಯಲ್ಲಿ)
ವಿಂಡೋ ಇರಲಿ ಲಿನಕ್ಸ್್ ಇರಲಿ, ತೆರೆಯೋ ಬ್ರೌಸರನು |
ವೈರಾಣು ಬರಲಿ, ಸ್ನೇಹಿತ ಸಿಗಲಿ, ತೆರೆಯೋ ಬ್ರೌಸರನು ||