19
June
2013

ದೊಡ್ಡವರ ದಾರಿ

September 23, 2012 - 9:15pm
Prakash Narasimhaiya
ಒಮ್ಮೆ ಬಿಲ್ ಗೇಟ್ಸ್ ಊಟಕೆಂದು ಒಂದು ಸುಪ್ರಸಿದ್ದ ಹೋಟೆಲ್ಲಿಗೆ ಹೋಗಿದ್ದ. ಊಟ ಮುಗಿಸಿದ ನಂತರ ಹಣ ಪಾವತಿಸುವ ಮುನ್ನ ವೆಟೆರಿಗೆ ಐದು ಡಾಲರ್ ಟಿಪ್ಸ್ ಕೊಟ್ಟ. ವೇಟರ್ ಗೇಟ್ಸ್ ನನ್ನು ಆಶ್ಚರ್ಯದಿಂದ ನೋಡಿದ. ಗೇಟ್ಸ್ ಆತನನ್ನು ನೋಡಿ " ಏಕೆ ? ಹೀಗೆ ಆಶ್ಚರ್ಯದಿಂದ ನೋಡುವೆ ? " ಎಂದು ವಿಚಾರಿಸಿದ. " ಏನಿಲ್ಲ, ನಿನ್ನೆ ನಿಮ್ಮ ಮಗ ಈ ಹೋಟೆಲ್ಲಿಗೆ ಬಂದಿದ್ದರು. ಅವರೂ ಊಟದ ನಂತರ ನನಗೆ ಐದುನೂರು ಡಾಲರ್ ಟಿಪ್ಸ್ ಕೊಟ್ಟರು. ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯ ಮಗನೆ ನನಗೆ ಐದುನೂರು ಡಾಲರ್ ಕೊಟ್ಟಿರಬೇಕಾದರೆ, ಇನ್ನು ಈ ಜಗತ್ತಿನ ಶ್ರೀಮಂತ ವ್ಯಕ್ತಿಯೇ ಇಲ್ಲಿ ಬಂದು ಕೇವಲ ಐದು ಡಾಲರ್ ಟಿಪ್ಸ್ ಕೊಟ್ಟರೆ ಆಶ್ಚರ್ಯವಾಗುವುದಿಲ್ಲವೇ?" ಎಂದು ಸಮಾಧಾನಗಾಗಿ ಹೇಳಿದ. ಅಷ್ಟೇ ಸಮಾಧಾನವಾಗಿ ಕೇಳಿಸಿಕೊಂಡ ಗೇಟ್ಸ್ " ನನ್ನ ಮಗ ಈ ಜಗತ್ತಿನ ಅತ್ಯಂತ ಶ್ರೀಮಂತನ ಮಗ. ಅವನಿಗೆ ಐದುನೂರು ಡಾಲರ್ ಕೊಡಲು ಆಗುತ್ತದೆ. ಆದರೆ ನಾನು ಒಬ್ಬ ಬಡ ಸೌದೆ ಒಡೆಯುವವನ ಮಗ. ನನ್ನ ಕೈಲಿ ಅಷ್ಟೊಂದು ಟಿಪ್ಸ್ ಕೊಡಲು ಹೇಗೆ ಸಾಧ್ಯ? " ಎಂದು ಉತ್ತರಿಸಿದ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by kavinagaraj on

ನಾನು ಎಷ್ಟು ಕಷ್ಟಪಟ್ಟೆ ಎಂದು ಮಕ್ಕಳಿಗೆ ಹೇಳ ಹೋದರೆ ಅವರು ಹೇಳುವುದೂ ಈ ರೀತಿಯ ಉತ್ತರವನ್ನೇ!! "ನಿಮ್ಮಪ್ಪನಿಗೆ ಅನುಕೂಲವಿರಲಿಲ್ಲ, ನಮ್ಮಪ್ಪನಿಗೆ ಅನುಕೂಲವಿದೆ" ಅಂತ!! ಧನ್ಯವಾದ, ಪ್ರಕಾಶರೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prakash Narasimhaiya on

ಆತ್ಮಿಯ‌ ನಾಗರಾಜರೆ,
ನಿಮ್ಮ ಮಾತು ನಿಜ‌, ತನ್ನ ಗಳಿಕೆಗೆ ಮಾತ್ರ ಬೆಲೆ ಇರುತ್ತದೆ. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.