ಓ ಎಲ್ ಎನ್ ಅವರಿಗೆ ಅಭಿನಂದನೆಗೆಳು
ಸಂಪದದ ಸಕ್ರಿಯ ಸದಸ್ಯರಾಗಿರುವ ಓ ಎಲ್ ಎನ್ ಸ್ವಾಮಿ ಅವರನ್ನು ಕರ್ನಾಟಕ ಭಾಷಾಂತರ ಅಕಾದೆಮಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಸಿಗೋಣ,
ಪವನಜ

- Login or register to post comments
- 1030 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಥ್ಯಾಂಕ್ಸ್
ಅಭಿನಂದನೆಗಳಿಗೆ ಧನ್ಯವಾದಗಳು. ಚಿತ್ರದುರ್ಗದಲ್ಲಿ ನಿನ್ನೆ ಇದ್ದ ಕಾರ್ಯಕ್ರಮ ಮುಗಿಸಿಕೊಂಡು ಇಂದು ಬೆಳಗಿನ ಜಾವ ಬೆಂಗಳೂರಿಗೆ ಬಂದು ಪೇಪರಿನಲ್ಲಿ ನಾನೂ ನೋಡಿದೆ. ಇದೊಂಥರಾ ಪವಾಡ ಅನ್ನಿಸಿ ಆಶ್ಚರ್ಯ ಪಟ್ಟೆ. ನಿಮ್ಮ ಅಭಿನಂದನೆಗಳು ನೋಡಿ ಮತ್ತೂ ಸಂತೋಷಪಟ್ಟೆ ಥ್ಯಾಂಕ್ಸ್.
ಅಭಿನಂದನೆ ಹೇಳುವುದರೊಂದಿಗೆ ಈ ಹೊಸ ಅಕಾಡೆಮಿ ಏನು ಮಾಡಬಹುದು ಎಂಬ ಬಗ್ಗೆ ದುಯವಿಟ್ಟು ಸಲಹೆ ನೀಡುತ್ತೀರಾ? ಉಪಯೋಗವಾಗುತ್ತದೆ.
ವಿಜ್ಞಾನ ತಂತ್ರಜ್ಞಾನ ಕಡೆಗಣಿಸಲಾಗಿದೆ
ಈ ಸದಸ್ಯರ ಪಟ್ಟಿಯಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯದ ಕ್ಷೇತ್ರದಿಂದ ಯಾರನ್ನೂ ನೇಮಕ ಮಾಡಲಾಗಿಲ್ಲ. ಇದೊಂದು ಬಹುದೊಡ್ಡ ಕೊರತೆ. ಈಗ ಬಹುಮುಖ್ಯವಾಗಿ ಬೇಕಾಗಿರುವುದು ಪ್ರಪಂಚದ ವಿವಿಧ ವಿಷಯ ಜ್ಞಾನವನ್ನು ಕನ್ನಡಕ್ಕೆ ಆಮದು ಮಾಡಿಕೊಳ್ಳುವುದು. ವಿಜ್ಞಾನ ತಂತ್ರಜ್ಞಾನ ಅತಿ ವೇಗದಲ್ಲಿ ಬೆಳೆಯುತ್ತಿದೆ. ಈ ಬಗ್ಗೆ ಇಂಗ್ಲೀಶಿನಲ್ಲಿ ವಿಪುಲವಾಗಿ ಲೇಖನಗಳು ಬರುತ್ತಿವೆ. ಇವುಗಳನ್ನು ಅಷ್ಟೇ ವೇಗದಲ್ಲಿ ಕನ್ನಡಕ್ಕೆ ತರಬೇಕಾಗಿದೆ. ನಗರಗಳಲ್ಲಿ ವಾಸಿಸುವ, ಇಂಗ್ಲೀಶಿನಲ್ಲಿ ಪರಿಣತರಾಗಿರುವ ಮಂದಿಗೆ ಈ ಅಗತ್ಯ ಕಣ್ಣಿಗೆ ಕಾಣಿಸುವುದೇ ಇಲ್ಲ. ನೀವು ಈ ಅಗತ್ಯವನ್ನು ತೋರಿಸಿಕೊಡಬಹುದು. ವಿಜ್ಞಾನ ತಂತ್ರಜ್ಞಾನ ಸಾಹಿತ್ಯವನ್ನು ಕನ್ನಡದಲ್ಲಿ ರಚಿಸಿರುವವರಲ್ಲಿ ಯಾರನ್ನಾದರೂ ಈ ಅಕಾದೆಮಿಗೆ ನೀವು co-opt ಮಾಡಬಹುದು.
ಸಾಹಿತ್ಯ ಕ್ಷೇತ್ರಕ್ಕೆ ಬಂದರೆ -ವಿಶ್ವದ, ಯಾಕೆ, ಭಾರತದ ಬಹುಮಂದಿಗೆ, ಕನ್ನಡದಲ್ಲಿ ಎಷ್ಟು ವಿಪುಲ ಸಾಹಿತ್ಯ ಇದೆ ಎಂಬ ಅರಿವೇ ಇಲ್ಲ. ಇದಕ್ಕಾಗಿ ಮಾಡಬೇಕಾಗಿರುವುದೇನೆಂದರೆ, ಕನ್ನಡದ ಸಾಹಿತ್ಯವನ್ನು ಇತರೆ ಭಾಷೆಗಳಿಗೆ ಅನುವಾದ ಮಾಡುವುದು ಮತ್ತು ಅವುಗಳನ್ನು ಅಂತರಜಾಲದಲ್ಲಿ ಸೇರಿಸುವುದು.
ಇನ್ನೇನಾದರೂ ನೆನಪಾದರೆ ಬರೆಯುತ್ತೇನೆ.
ಸಿಗೋಣ,
ಪವನಜ
-----------
Think globally, Act locally
ಅಭಿನಂದನೆಗಳು
ಅಭಿನಂದನೆಗಳು.
ಇನ್ನೊಂದು ಥ್ರೆಡ್ಡಿನಲ್ಲಿ ಬಹಳಷ್ಟು ಮಾತುಕತೆ ನಡೆಯುತ್ತಿರೋದ್ರಿಂದ ನಿಮ್ಮನ್ನು ಅಭಿನಂದಿಸಲು ಈ ಥ್ರೆಡ್ಡಿಗೆ ದೌಡಾಯಿಸಿದೆ.
ನಿನ್ನೆ ನಾನೂ ಚಿತ್ರದುರ್ಗದಲ್ಲೇ ಇದ್ದೆ. ಆದರೆ ಸ್ವಲ್ಪ ಹೊತ್ತು ಮಾತ್ರ
--
"ಹೊಸ ಚಿಗುರು, ಹಳೆ ಬೇರು"
ಅಭಿನಂದನೆ
ಸಂತೋಷದ ಸುದ್ದಿ.
ಸ್ವಾಮಿಯವರಿಗೆ ಅಭಿನಂದನೆಗಳು
ವಂದನೆಗಳೊಂದಿಗೆ
---
ತವಿಶ್ರೀನಿವಾಸ